ಜೀವಹಾಲೆಬಳ್ಳಿ
ಗೋಚರ
ಜೀವಹಾಲೆಬಳ್ಳಿ
[ಬದಲಾಯಿಸಿ]ವೈಜ್ಞಾನಿಕ ಹೆಸರು: ಲೆಪ್ಟಡೇನಿಯ ರೆಟ್ಟಿಕ್ಯುಲೇಟ.
ಸಸ್ಯದ ಕುಟುಂಬ: ಅಸ್ಲಿಪಿಯಡೇಸಿ.
ಕನ್ನಡದ ಇತರ ಹೆಸರುಗಳು
[ಬದಲಾಯಿಸಿ]- ಜೀವಂತಿ
- ಪಲತೀಗೆಬಳ್ಳಿ
- ಬಗುಡಿಹೂವಿನ ಗೆಡ್ಡೆ
- ಸೀಗುಂಟು ಸೀಹಾಲೆ
- ಹಿರಂದೋಡಿ
ಇತರ ಭಾಷೆಯ ಹೆಸರುಗಳು
[ಬದಲಾಯಿಸಿ]- ಸಂಸ್ಕೃತ-ಜೀವಂತಿ,ಶಾಕಶ್ರೇಷ್ಟ,ಸ್ವರ್ಣಜೀವಂತಿ.
- ಹಿಂದಿ-ಡಿಡೀಶಾಕ,ದೊರಿ,ಜೀವಂತಿ.
- ತಮಿಳು-ಪಾಲುಕುಡೈ.
- ತೆಲುಗು-ಪಾಲತಿಗೆ,ಕಲಾಸ,ಮುಕ್ಕುತುಮ್ಮುಡು.
ಪರಿಚಯ
[ಬದಲಾಯಿಸಿ]ಇದು ಸಾಮಾನ್ಯವಾಗಿ ಪೊದೆಗಳ ಮೇಲೆ ಮತ್ತು ಬೇಲಿಗಳ ಮೇಲೆ ಹಬ್ಬಿ ಬೆಳೆಯುವ ಬಳ್ಳಿಗಿಡ.ಗಿಡದಲ್ಲಿ ತಿಳಿ ಹಳದಿ ಬಣ್ಣದ ಸಸ್ಯಕ್ಷೀರವಿರುತ್ತದೆ.ಬಲಿತ ಬಳ್ಳಿಕಾಂಡದ ತೊಗಟೆ ಒರಟಾಗಿದ್ದು ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ.ಅಂಡ-ಹೃದಯಾಕಾರದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ ಎಲೆಯ ಬುಡ ಸಮಾನಾಂತರವಾಗಿರುತ್ತದೆ.ಎಲೆಯ ಕಂಕುಳಲ್ಲಿರುವ ಛತ್ರಿಯಂತಹ ಮಧ್ಯಾರಂಭಿ ಹೂಗೊಂಚಲಿನಲ್ಲಿ ಹಸಿರು ಮಿಶ್ರಿತ ಹಳದಿ ಹೂಗಳಿರುತ್ತವೆ.ಒಂದೇ ತೊಟ್ಟಿನಲ್ಲಿ ಅಭಿಮುಖವಾಗಿರುವ ಜೋಡಿಕಾಯಿಗಳಿರುತ್ತವೆ.ಬೀಜಗಳು ರೇಷ್ಮೆನೂಲಿನಂತಹ ರೋಮ ಗುಚ್ಫವನ್ನು ಹೊಂದಿರುತ್ತವೆ.ಇವು ರೋಮಗಳ ಸಹಾಯದಿಂದ ಗಾಳಿಯಲ್ಲಿ ಪ್ಯಾರಚೂಟಿನಂತೆ ಸುಲಭವಾಗಿ ಪ್ರಸಾರವಾಗುತ್ತವೆ.ಜೀವಹಾಲೆ ಬಳ್ಳಿಯು ಆಯುರ್ವೇದದಲ್ಲಿ 'ಜೀವಂತಿ' ಎಂಬ ಹೆಸರಿನಿಂದ ಪ್ರಚಲಿತವಾಗಿದೆ.
ಉಪಯೋಗಗಳು
[ಬದಲಾಯಿಸಿ]- ಬೇರನ್ನು ಅರೆದು ಮೈಗೆ ಲೀಪಿಸುವುದರಿಂದ ಪಿತ್ತದ ಗಂಧೆ ಕಡಿಮೆಯಾಗುತ್ತದೆ.
- ಬೇರಿನ ಚೂರ್ಣ ಅಥವಾ ಕಷಾಯ ಸೇವನೆಯಿಂದ ಮಲಬದ್ಧತೆ,ಹೃದಯದೌರ್ಬಲ್ಯ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.[೧]
ಉಲ್ಲೇಖ
[ಬದಲಾಯಿಸಿ]- ↑ ಕರ್ನಾಟಕದ ಔಷಧಿಯ ಸಸ್ಯಗಳು ಡಾ. ಮಾಗಡಿ ಆರ್. ಗುರುದೇವ. ಪ್ರಕಾಶಕರು:ದಿವ್ಯಚಂದ್ರ ಪ್ರಕಾಶನ.ಮುದ್ರಣ:೨೦೧೦. ಪುಟ ೧೪೫