ಜೀವನ್ಮುಕ್ತ

ವಿಕಿಪೀಡಿಯ ಇಂದ
Jump to navigation Jump to search

ಹಿಂದೂ ಧರ್ಮಅದ್ವೈತ ತತ್ವದಲ್ಲಿ, ಜೀವನ್ಮುಕ್ತ (ಜೀವನ್ಮುಕ್ತಿ ಶಬ್ದದಿಂದ, ಸಂಸ್ಕೃತ ಶಬ್ದಗಳಾದ ಜೀವ ಮತ್ತು ಮುಕ್ತಿಯ ಸಂಯೋಗದಿಂದ, ಜನ್ಯವಾಗಿದೆ) ಆತ್ಮದ ದೃಢವಾಗಿ ಮೈಗೂಡಿಕೊಂಡ ಜ್ಞಾನ, ದೃಢನಿಷ್ಠವನ್ನು ಪಡೆದ, ಮತ್ತು ಮಾನವ ಶರೀರದಲ್ಲಿ ಇದ್ದುಕೊಂಡು, ಪುನರ್ಜನ್ಮದಿಂದ ಸ್ವತಂತ್ರವಾದ, ವಿಮೋಚನೆ ಹೊಂದಿದ ಯಾವುದೇ ವ್ಯಕ್ತಿ. ಈ ವಿಮೋಚನೆಯನ್ನು ತಾಂತ್ರಿಕವಾಗಿ ಮೋಕ್ಷವೆಂದು ಕರೆಯಲಾಗುತ್ತದೆ. ಅದ್ವೈತದ ಹೊರತು ಹಿಂದೂ ಸಿದ್ಧಾಂತದ ಎಲ್ಲ ಪರಂಪರೆಗಳಲ್ಲಿ, ವಿಮೋಚನೆಯು ಅಗತ್ಯವಾಗಿ ಮನುಷ್ಯರ ಅನುಭವಕ್ಕೆ ಮೀರಿದ ಘಟನೆ.