ವಿಷಯಕ್ಕೆ ಹೋಗು

ಜೀನ್ ಪಿಯಾಗೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀನ್ ಪಿಯಾಗೆಟ್ ಒಬ್ಬ ಮನೋವಿಜ್ಞಾನಿ. ಜೀನ್ ಪಿಯಾಗೆಟ್ ಅವರು ಆಗಸ್ಟ್ ೯, ೧೮೯೬ ರಂದು ಸ್ವಿಟ್ಜರ್ಲೆಂಡ್ನಲ್ಲಿ ಜನಿಸಿದರು. ಇವರು ಬಹಳ ಚಿಕ್ಕ ವಯಸ್ಸಿನಲ್ಲಿ ನೈಸರ್ಗಿಕ ವಿಜ್ಞಾನದಲ್ಲಿ ಆಸಕ್ತಿ ತೋರಿಸಿದರು. ೧೧ ನೇ ವಯಸ್ಸಿನ ಹೊತ್ತಿಗೆ, ಅವರು ಅಲ್ಬಿನೋ ಸ್ಪ್ಯಾರೋ ಮೇಲೆ ಸಣ್ಣ ಕಾಗದವನ್ನು ಬರೆದು ಸಂಶೋಧಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅವರು ನೈಸರ್ಗಿಕ ವಿಜ್ಞಾನಗಳ ಅಧ್ಯಯನವನ್ನು ಮುಂದುವರೆಸಿದರು ಮತ್ತು ಅವರು ಪಿಎಚ್ಡಿ ಪಡೆದರು.[೧]

ಜೀವನ[ಬದಲಾಯಿಸಿ]

ಪಿಯಾಗೆಟ್ ಅವರು ನ್ಯೂಚಾಟೆಲ್ ಅಲ್ಲಿ ಆರ್ಥುರ್ ಪಿಯಾಗೆಟ್ ಹಾಗು ರೆಬೆಕ್ಕಾ ಜಾಕ್ಸ್ಂ ರಿಗೆ ಹುಟ್ಟಿದರು. ಜೀನ್ ಪಿಯಾಗೆಟ್ ಅವರು ಒಬ್ಬ ಪ್ರಮುಖ ಸ್ವಿಟ್ಜರ್ಲ್ಯಾಂಡ್‌ನ ವೈದ್ಯಕೀಯ ಮನೋಶಾಸ್ತ್ರಜ್ನ. ಅವರು ಮಕ್ಕಳ ಅರಿವಿನ ಬೆಳವಣಿಗೆಯನ್ನು ಕುರಿತು ಸಿದ್ಧಾಂತವನ್ನು ಪ್ರಸ್ತಾಪಿಸಿದ್ದಾರೆ. ಪಿಯಾಗೆಟ್ ಅವರು ಮಕ್ಕಳ ವಿದ್ಯಾಭ್ಯಾಸದಲ್ಲಿ ಬಹಳ ಆಸಕ್ತಿಯನ್ನು ತೋರಿಸಿದ್ದರು. ಅವರು ಅಂತರ ರಾಷ್ತ್ರೀಯ ಬ್ಯೂರೊದ ಶಿಕ್ಷಣ ವಿಭಾಗದ ನಿರ್ದೇಶಕರಾಗಿದ್ದರು. ಇವರು ತಮ್ಮ ಸಂಶೋಧನೆಯಿಂದ ಹಲವು ವಿದ್ಯಾಭ್ಯಾಸರನ್ನು ಪ್ರಭಾವಿಸಿದ್ದರು. ಇವರು ೧೯೫೫ರಲ್ಲಿ, ಜಿನಿವಾ ವಿಶ್ವವಿದ್ಯಾನಿಲಯದ ಭಾಗವಾಗಿದ್ದಾಗ ಅವರು ಜೆನೆಟಿಕ್ ಜ್ನಾನಮೀಮಾಂಸೆ ಇಂಟರ್ನ್ಯಾಷನಲ್ ಸೆಂಟ್ರ್ ಅನ್ನು ರಚಿಸಿದರು. ಇವರ ರಚನೆಗಳು ಮನೋಶಾಸ್ತ್ರದಲ್ಲಿ ಎತ್ತಿದ ಕೈ ಆಗಿತ್ತು. ಅವರಿಗೆ ಜೀವಶಾಸ್ತ್ರ, ಪ್ರಾಣಿಶಾಸ್ತ್ರದಲ್ಲಿ ಬಹಳ ಆಸಕ್ತಿ ಇತ್ತು.

ಅವರು ಸ್ಟಾನ್ ಫ಼ೋರ್ಡ್ - ಬಿನೆಟ್ ಇಂಟೆಲಿಗೆನ್ಚೆ ಪರೀಕ್ಷೆಯ ಪಾತ್ರರಾಗಿದ್ದರು. ಬಿನೆಟ್ ಅವರು ಮಕ್ಕಳ ಮೇಲೆ ಈ ಪರೀಕ್ಷೆಯನ್ನ್ಯ್ ನೆಡೆಸಿದಾಗ, ಪಿಯಾಗೆಟ್ ಅವರು ಮಕ್ಕಳು ಹಾಗು ದೊಡ್ಡವರ ನಡುವಿನ ಅಂತರವನ್ನು ಗಮನಿಸಿದರು. ಒಂದೇ ವಯಸ್ಸಿನ ಹುಡುಗರ ಬುದ್ದಿಯಲ್ಲಿ ಇರುವ ಸಮಾನತೆಯನ್ನು ಪಿಯಾಗೆಟ್ ಕಂಡರು. ಇದರಿಂದಾಗಿ ಅವರು ಅರಿವಿನ ಬೆಳವಣಿಗೆಯಲ್ಲಿ ಹಂತಗಳನ್ನು ಕುರಿತು ಸಿದ್ಧಾಂತವನ್ನು ರಚಿಸಿದರು. ಇದಾದ ಮೇಲೆ ಅವರು ೧೯೨೩ರಲ್ಲಿ ವ್ಯಾಲೆಟೈನ್ ಚಟೆನಿಯನ್ನು ವಿವಾಹಿಸಿದರು. ಅವರಿಗೆ ಮೂರು ಮಕ್ಕಳು.ಅವರು, ಅವರದೇ ಆದ ಮಕ್ಕಳ ಅರಿವನ್ನು ಗಮನಿಸಿದರು. ಅವರು ಜಿನೆವ ವಿಶ್ವವಿದ್ಯಾನಿಲಯದ್ದಲ್ಲಿ ಪ್ರಾಧ್ಯಾಪಕರಾಗಿದ್ದ ಕಾರಣದಿಂದ ಅವರನ್ನು ನ್ಯೂ ಯಾರ್ಕ್ ನ್ ಕಾರ್ನೆಲ್ ವಿಶ್ವವಿದ್ಯಾನಿಲಯ ಹಾಗು ಕ್ಯಾಲಿಫೊರ್ನಿಯ ವಿಶ್ವವಿದ್ಯಾಲಯದಲ್ಲಿ ನೆಡೆದ ಸಮ್ಮೇಳನದಲ್ಲಿ ಇವರನ್ನು ಮುಖ್ಯ ಸಲಹೆಗಾರರೆಂದು ಕರೆದಿದ್ದರು. ಇವರಿಗೆ ೧೯೭೯ರಲ್ಲಿ ಬಲ್ಜಾನ್ ಪ್ರಿಜ಼್ ದೊರಕಿತು.

ಸಿದ್ಧಾಂತ[ಬದಲಾಯಿಸಿ]

ಇವರ ಸಿದ್ಧಾಂತ ಮನೋಶಾಸ್ತ್ರದಲ್ಲಿ ಬಹಳ ಹೆಸರುವಾಸಿಯಾಗಿತ್ತು. ಅವರ ಪ್ರಕಾರ ಅರಿವಿನ ಬೆಳವಣಿಗೆಯಲ್ಲಿ ನಾಲ್ಕು ಹಂತಗಳು ಇದೆ. ಅವರು ಮಕ್ಕಳನ್ನು ತೀಕ್ಷ್ಣವಾಗಿ ಗಮನಿಸಿ ಸಂಶೋಧನೆಯನ್ನು ಮಾಡಿದರು. ಶಿಶು, ತರುಣರ ಮಧ್ಯೆ ಇರುವ ಅಂತರವನ್ನು ಗಮನಿಸಿದರು. ಅವರು ವಿಜ್ಞಾನದ ಮೂಲಕ ಮನೋಶಾಸ್ತ್ರವನ್ನು ವಿವರಿಸಲು ಪ್ರಯತ್ನಿಸಿದರು.[೨][೩]

ಹಂತಗಳು :

ಮೊದಲನೇ ಹಂತ : ಸೆಂಸರಿ ಮೊಟಾರ್ ಹಂತ

ಈ ಹಂತವನ್ನು ನಾವು ಹುಟ್ಟಿನಿಂದ ಎರಡು ವರ್ಷಗಳ ತನಕ ಕಾಣಬಹುದು. ಆ ವಯಸ್ಸಿನಲ್ಲಿ ಶಿಶು ಜಗತ್ತನ್ನು ಅವರ ಕಣ್ಣಿನಿಂದ ನೋಡುತ್ತಾರೆ. ಅವರು ಸ್ವಕೇಂದ್ರಿತರಾಗಿರುತ್ತಾರೆ. ಈ ಹಂತವನ್ನು ಮುಂದೆ ಆರು ಹಂತಗಳಿಗೆ ವಿಂಗಡಿಸಲಾಗಿದೆ. ಅವು:

೧) ಪ್ರಾಥಮಿಕ ಪ್ರತಿವರ್ತನ : ಈ ಹಂತವು ಹುಟ್ಟಿನಿಂದ ಆರು ತಿಂಗಳ ತನಕ ಗಮನಿಸಬಹುದು. ಈ ಹಂತದಲ್ಲಿ ಶಿಶುಗಳು ಹೀರುತ್ತವೆ ಹಾಗು ಬೇರೂರಿಸುತ್ತವೆ.

೨) ಮೊದಲ ಅಭ್ಯಾಸ ಹಾಗು ಪ್ರಾಥಮಿಕ ವೃತ್ತಕಾಲದ ಪ್ರತಿಕ್ರಿಯೆಗಳು : ಈ ಹಂತವನ್ನು ಎರಡರಿಂದ ನಾಲ್ಕು ತಿಂಗಳವರೆಗೆ ಕಾಣಬಹುದು. ಈ ಹಂತದಲ್ಲಿ ಅವರು ಸಂವೇದನೆಯನ್ನು ಸಂಘಟಿಸಲು ಕಲಿಯತ್ತಾರೆ. ಆಕಸ್ಮಿಕವಾಗಿ ಆದ ಪ್ರತಿಬಿಂಬವನ್ನು ಮತ್ತೆ ಮತ್ತೆ ಮಾಡುಲು ಪ್ರಯತ್ನಿಸುತ್ತಾರೆ.

೩) ದ್ವಿತೀಯ ವೃತ್ತಕಾಲದ ಪ್ರತಿಕ್ರಿಯೆಗಳು : ಈ ಹಂತವು ನಾಲ್ಕರಿಂದ ಎಂಟು ತಿಂಗಳ ತನಕ ನಾವು ಶಿಶುವಿನಲ್ಲಿ ಕಾಣಬಹುದು. ಅವರು ಅವರ ದೇಹವನ್ನು ಬಿಟ್ಟು ಜಗತ್ತಿನ ಬಗ್ಗೆ ತಿಳಿದುಕೊಳ್ಳುತ್ತಾರೆ. ಅವರು ಈಗ ವಸ್ತು ಆಧಾರಿತರಾಗುತ್ತಾರೆ.

೪) ದ್ವಿತೀಯ ವೃತ್ತಕಾಲದ ಪ್ರತಿಕ್ರಿಯೆಯ ಸಂಘಟನೆ : ಇದು ಎಂಟರಿಂದ ಹನ್ನೆರಡು ತಿಂಗಳ ತನಕ ಚಾಚುತ್ತದೆ. ಇಲ್ಲಿವರೆಗೆ ಅವರು ಯಾವುದೇ ಆದ ಕಾರ್ಯವನ್ನು ಮಾಡಿದರೆ ಅದು ಆಕಸ್ಮಿಕವಾಗುತ್ತಿತ್ತು. ಆದರೆ ಈಗ ಅವರು ಏನೇ ಕಾರ್ಯ ಮಾಡಿದರೂ ಅವರಿಗೆ ಅದರ ಅರಿವಿರುತ್ತದೆ. ಅವರಿಗೆ ವಸ್ತುಗಳ ಶಾಶ್ವತದ ಬಗ್ಗೆ ತಿಳುವಳಿಕೆ ಹುಟ್ಟುತ್ತದೆ.

೫) ತೃತೀಯ ವೃತ್ತಕಾಲದ ಪ್ರತಿಕ್ರಿಯೆಗಳು, ನವೀನತೆ, ಕುತೂಹಲ : ಹನ್ನೆರಡರಿಂದ ಹದಿನಾರು ತಿಂಗಳ ತನಕ ಈ ಹಂತವನ್ನು ನೋಡಬಹುದು. ಅವರು ಬೇರೆ ಬೇರೆ ತರಹದ ಕಾರ್ಯಗಳನ್ನು ಮಾಡಲಾರಂಭಿಸುತ್ತಾರೆ.

೬) ಸ್ಕೀಮಾದ ಆಂತರಿಕಗೊಳಿಸುವಿಕೆ

ಎರಡನೇ ಹಂತ : ಪೂರ್ವ ಕಾರ್ಯಾಚರಣೆ (ಪ್ರಿ ಆಪರೇಷನಲ್ ಹಂತ)

ಈ ಹಂತವನ್ನು ಎರಡು ವರ್ಷಗಳಿಂದ ಏಳು ವರ್ಷಗಳ ತನಕ ನಾವು ಕಾಣಬಹುದು. ಮಕ್ಕಳ ಆಟ ಈ ಕಾಲದಲ್ಲಿ ಜಾಸ್ತಿಯಾಗುತ್ತದೆ. ಆದರೂ ಸಹ ಮಕ್ಕಳಿಗೆ ಜಗತ್ತನ್ನು ಬೇರೆ ಬೇರೆ ದೃಶ್ಯಗಳಿಂದ ನೋಡಲಿಕ್ಕೆ ಅಸಾಧ್ಯ ಎಂದು ಪಿಯಾಗೆಟ್ ಹೇಳಿದ್ದಾರೆ. ಈ ಹಂತವನ್ನೂ ಕೂಡ ಮುಂದೆ ಎರಡು ಹಂತಗಳಿಗೆ ವಿಂಗಡಿಸಲಾಗಿದೆ.

೧) ಸಾಂಕೇತಿಕ ಕಾರ್ಯ ಹಂತ : ಎರಡರಿಂದ ನಾಲ್ಕು ವರ್ಷದ ತನಕ ಮಕ್ಕಳು ಅವರ ಸುತ್ತ ಮುತ್ತ ಇರುವ ವಸ್ತುಗಳಿಗೆ ಸಾಂಕೇತಿಕವಾದ ಅರ್ಥವನ್ನು ನೀಡುತ್ತಾರೆ. ಇದನ್ನು ಚಿತ್ರ ಬರೆಯುವ ಮೂಲಕ ಮಕ್ಕಳು ವ್ಯಕ್ತ ಪಡಿಸುತ್ತಾರೆ ಎಂದು ಪಿಯಾಗೆಟ್ ಹೇಳಿದ್ದಾರೆ.

೨) ಅರ್ಥ ಗರ್ಭಿತ ಯೋಚನೆ ಹಂತ : ನಾಲ್ಕರಿಂದ ಏಳು ವರ್ಷದವರೆಗೆ ನಾವು ಈ ಹಂತವನ್ನು ನೋಡಬಹುದು. ಮಕ್ಕಳಲ್ಲಿ ಕುತೂಹಲ ಮೂಡುತ್ತದೆ. ವಸ್ತು ಈ ರೀತಿಯಲ್ಲಿ ಯಾಕೆ ಇದೆ ಎಂದು ಪ್ರಶ್ನಿಸಲು ಆರಂಭಿಸುತ್ತಾರೆ. ಈ ಹಂತದಲ್ಲಿ ಮಕ್ಕಳು ಬಹಳ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಪಿಯಾಗೆಟ್ ಹೇಳಿದ್ದಾರೆ.

ಮೂರನೇ ಹಂತ : ಕಾಂಕ್ರೀಟ್ ಕಾರ್ಯಾಚರಣೆ ಹಂತ

ಮಕ್ಕಳ ತರ್ಕ ಈ ಹಂತದಲ್ಲಿ ಹೆಚ್ಚಾಗುತ್ತದೆ. ಈ ಹಂತವು ಏಳರಿಂದ ಹನ್ನೊಂದು ವರ್ಷಗಳ ತನಕ ಚಾಚುತ್ತದೆ. ಮಕ್ಕಳಿಗೆ ವ್ಯತ್ಯಾಸದ ಅರಿವಾಗುತ್ತದೆ. ಸುತ್ತ ಮುತ್ತ ಇರುವ ಅಂಶಗಳ ಬಗ್ಗೆ ತಿಳುವಳಿಕೆ ಹೆಚ್ಚಾಗುತ್ತದೆ ಎಂದು ಪಿಯಾಗೆಟ್ ಹೇಳಿದ್ದಾರೆ.

ನಾಲಕ್ಕನೇ ಹಂತ : ಸಾರಭೂತ ಕಾರ್ಯಾಚರಣೆ ಹಂತ

ಈ ಹಂತವು ಹನ್ನೊಂದರಿಂದ ಹದಿನಾರು ವರ್ಷಗಳ ತನಕ ಚಾಚುತ್ತದೆ. ತರುಣರು ಈಗ ಬೇರೆ ಬೇರೆ ದೃಶ್ಯಗಳಿಂದ ಜಗತ್ತನ್ನು ನೋಡುತ್ತಾರೆ. ಅವರಲ್ಲಿ ಈಗ ಕಲ್ಪನೆ ಮಾಡುವ ಶಕ್ತಿಯಿದೆ. ಅವರು ಸುಲಭವಾಗಿ ಕಾರಣಗಳನ್ನು ಕೊಡುತ್ತಾರೆ ಹಾಗು ಅವರಲ್ಲಿ ಕಾಲ್ಪನಿಕ ಶಕ್ತಿ ಹೆಚ್ಚಾಗುತ್ತದೆ.

ಹೀಗೆ, ಪಿಯಾಗೆಟ್ ಅವರು ಮಕ್ಕಳ ಅರಿವಿನ ಬೆಳವಣಿಗೆಯನ್ನು ಕುರಿತು ಉಲ್ಲೇಖಿಸಿದ್ದಾರೆ.

ಗೌರವ ಪದವಿಗಳು[ಬದಲಾಯಿಸಿ]

ಅವರು ಬಳಕೆಗೆ ತಂದ ಸಂಶೋಧನೆಗಾಗಿ ಜೀನ್ ಪಿಯಾಗೆಟ್ ಅವರಿಗೆ ಬಹಳಷ್ಟು ವಿಶ್ವವಿದ್ಯಾನಿಲಯಗಳು ಗೌರವ ಪದವಿಯನ್ನು ಕೊಟ್ಟಿದ್ದಾರೆ. ಅವರಿಗೆ ೧೯೩೬ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯ, ೧೯೪೯ರಲ್ಲಿ ಬ್ರೆಜಿಲ್ ವಿಶ್ವವಿದ್ಯಾನಿಲಯ, ೧೯೪೯ರಲ್ಲಿ ಬ್ರಸೆಲ್ಸ್, ೧೯೫೩ರಲ್ಲಿ ಶಿಕಾಗೊ ವಿಶ್ವವಿದ್ಯಾನಿಲಯ, ೧೯೫೮ರಲ್ಲಿ ವಾರ್ಸಾ ವಿಶ್ವವಿದ್ಯಾನಿಲಯ ಹಾಗೂ ೧೯೫೯ ರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯವು ಪದವಿಗಳನ್ನು ನೀಡಿವೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಆಂಗ್ಲ ವಿಕಿಪೀಡಿಯಾ ಪುಟ - ಜೀನ್ ಪಿಯಾಗೆಟ್ - https://en.wikipedia.org/wiki/Jean_Piaget

ಜೀನ್ ಪಿಯಾಗೆಟ್'ನ್ ಬಗ್ಗೆ ಪ್ರಕಟಗಳು - http://www.helveticat.ch/search/query?term_1=Jean+Piaget&locale=en&theme=Helveticat[ಶಾಶ್ವತವಾಗಿ ಮಡಿದ ಕೊಂಡಿ]

ಜೆನಿಟಿಕ್ ಎಪಿಸ್ಟಮಾಲಜಿ - https://www.marxists.org/reference/subject/philosophy/works/fr/piaget.ht

ಉಲ್ಲೇಖಗಳು[ಬದಲಾಯಿಸಿ]

  1. https://kn.reoveme.com/%E0%B2%9C%E0%B3%80%E0%B2%A8%E0%B3%8D-%E0%B2%AA%E0%B2%BF%E0%B2%AF%E0%B2%BE%E0%B2%97%E0%B3%86%E0%B2%9F%E0%B3%8D-%E0%B2%AC%E0%B2%AF%E0%B3%8B%E0%B2%97%E0%B3%8D%E0%B2%B0%E0%B2%AB%E0%B2%BF-1896-1980/
  2. https://kn.reoveme.com/%E0%B2%9C%E0%B3%80%E0%B2%A8%E0%B3%8D-%E0%B2%AA%E0%B2%BF%E0%B2%AF%E0%B2%BE%E0%B2%97%E0%B3%86%E0%B2%9F%E0%B3%8D-%E0%B2%89%E0%B2%B2%E0%B3%8D%E0%B2%B2%E0%B3%87%E0%B2%96%E0%B2%97%E0%B2%B3%E0%B3%81/
  3. https://kn.reoveme.com/%E0%B2%9C%E0%B3%80%E0%B2%A8%E0%B3%8D-%E0%B2%AA%E0%B2%BF%E0%B2%AF%E0%B2%BE%E0%B2%97%E0%B3%86%E0%B2%9F%E0%B3%8D-%E0%B2%AC%E0%B2%AF%E0%B3%8B%E0%B2%97%E0%B3%8D%E0%B2%B0%E0%B2%AB%E0%B2%BF-1896-1980/