ಜೀನ್ ಇಂಜೆಲೊ

ವಿಕಿಪೀಡಿಯ ಇಂದ
Jump to navigation Jump to search
ಜೀನ್ ಇಂಜೆಲೊ
Jean Ingelow by Elliott & Fry, London.jpg
ಜನನ17 ಮಾರ್ಚ್ 1820
Boston, Lincolnshire, United Kingdom
ನಿಧನಜುಲೈ 20, 1897(1897-07-20) (ವಯಸ್ಸು 77)
Kensington, London, United Kingdom
ರಾಷ್ಟ್ರೀಯತೆEnglish
ವೃತ್ತಿಕವಯಿತ್ರಿ ಮತ್ತು ಕಾದಂಬರಿಗಾರ್ತಿ

ಜೀನ್ ಇಂಜೆಲೊ (17 ಮಾರ್ಚ್ 1820 – 20 ಜುಲೈ 1897), ಆಂಗ್ಲ ಕವಯಿತ್ರಿ ಮತ್ತು ಕಾದಂಬರಿಗಾರ್ತಿ.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಲಿಂಕನ್ ಷೈರಿನ ಬೋಸ್ಟನ್ ಎಂಬಲ್ಲಿ ಈಕೆಯ ಜನನ.ಲೇವಾದೇವಿಗಾರ ವಿಲಿಯಂ ಇಂಜೆಲೋ ತಂದೆ.

ಸಾಹಿತ್ಯ ರಚನೆ[ಬದಲಾಯಿಸಿ]

ಭಕ್ತಿಗೀತೆಗಳನ್ನೂ ಹಾಡುಕಬ್ಬಗಳನ್ನೂ ಭಾವಗೀತೆಗಳನ್ನೂ ಬರೆದಿದ್ದಾಳೆ. ಕ್ಯಾಲ್‍ವರ್ಲಿ ಎಂಬಾತ ಇವುಗಳನ್ನು ಅಣಕ ಮಾಡಿ ಜನಪ್ರಿಯ ಹಾಸ್ಯ ಪದ್ಯ ಬರೆದಿದ್ದರಿಂದ ಈ ಕೃತಿಗಳು ನೆನಪಿನಲ್ಲುಳಿದಿವೆ. ಹೈ ಟೈಡ್ ಆನ್ ದಿ ಕೋಸ್ಟ್ ಆಫ್ ಲಿಂಕನ್‍ಷೈರ್ (1871) ಎಂಬುದು ಈಕೆಯ ಅತ್ಯುತ್ತಮ ಕಿರುಗವಿತೆಯೆಂದು ಪರಿಗಣಿಸಲಾಗಿದೆ. ಎ ಸ್ಟೋರಿ ಆಫ್ ಡೂಮ್ (1867) ಎಂಬುದು ಪ್ರಕಟವಾದಾಗ ಅದಕ್ಕೆ ಒಳ್ಳೆಯ ಸ್ವಾಗತ ದೊರಕಿತು. ಡಿವೈಡೆಡ್ ಎಂಬುದೂ ಒಂದು ಯಶಸ್ವೀ ಕವಿತೆ.

ಈಕೆ ಮಕ್ಕಳ ಸಾಹಿತ್ಯವನ್ನೂ ಕಾದಂಬರಿಗಳನ್ನೂ ಬರೆದಿದ್ದಾಳೆ. ಮೋಪ್ಸಾ ದಿ ಫೇರಿ (1867) ಎಂಬುದು ಈಕೆ ಮಕ್ಕಳಿಗಾಗಿ ಬರೆದ ಕಥೆಗಳಲ್ಲಿ ಪ್ರಸಿದ್ಧ. ಫೇಟೆಡ್ ಟು ಬಿ ಫ್ರೀ ಎಂಬ ಕಾದಂಬರಿ ನಿಯತಕಾಲಿಕವೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು (1875). ಆಫ್ ಸ್ಕೆಲ್ಲಿಂಗ್ (1877), ಸರಾ ಡಿ ಬೆರೆಂಜರ್ (1879), ಡಾನ್ ವಾನ್ (1881) ಎಂಬುವು ಆಮೇಲೆ ಬಂದ ಕಾದಂಬರಿಗಳು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: