ಜಿ ಕೃಷ್ಣಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿ. ಕೃಷ್ಣಪ್ಪ
ಜಿ. ಕೃಷ್ಣಪ್ಪ
ಜನನ೨೦-೧೦-೧೯೪೮
ಬೆಂಗಳೂರು
ವೃತ್ತಿಸಾಹಿತಿ, ವಿಮರ್ಶಕ, ಪರಿಚಾರಕ ಹಾಗೂ ಚಿಂತಕರು
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಸಂಶೋಧನೆ, ವಿಮರ್ಶೆ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ
ವಿಷಯಕನ್ನಡ ಸಾಹಿತ್ಯ

ಡಾ. ಜಿ ಕೃಷ್ಣಪ್ಪನವರು ಬೇಂದ್ರೆ ಕೃಷ್ಣಪ್ಪ ಎಂದು ಪರಿಚಿತರು. ಕನ್ನಡದ ವಿಮರ್ಶಕರು. ಇವರು ಪ್ರಸ್ತುತ ಬೆಂಗಳೂರಿನವರು ರಾಜ್ಯ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ವಾಹನಗಳ ನಿರೀಕ್ಷಕರಾಗಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿಯೊಂದಿಗೆ ಅಭಿರುಚಿಯಾಗಿ ಸಾಹಿತ್ಯ ಅಧ್ಯಯನದಲ್ಲಿ ತೊಡಗಿದವರು. ಸಾಹಿತ್ಯ ಪರಿಚಾರಿಕೆಯೊಂದಿಗೆ ನಾಡಿನಾದ್ಯಂತ ಬೇಂದ್ರೆ ಸಾಹಿತ್ಯವನ್ನು ನೀಡುತ್ತಿದ್ದಾರೆ. ಕನ್ನಡದ ಸಾಹಿತಿಗಳಾದ ಬೇಂದ್ರೆ ಹಾಗೂ ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡಿದವರು.

ಸಾಹಿತ್ಯ ಸೇವೆ[ಬದಲಾಯಿಸಿ]

ಪ್ರಾಚೀನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಓದುಗರಿಗೆ ಸರಳವಾಗಿ ಕೆಲವು ಕೃತಿಗಳನ್ನು ಪರಿಚಯಿಸಿದರು. ಬೇಂದ್ರೆ ಸಾಹಿತ್ಯದ ಮೇಲೆ ಸಂಶೋಧನೆ ಮಾಡಿ ಕವಿಯ ಸಾಕಷ್ಟು ಕವಿತೆಗಳ ಕುರಿತ ವಿಮರ್ಶೆಗಳೊಂದಿಗೆ ಕೆಲವು ಕೃತಿಗಳನ್ನು ರಚಿಸಿದ್ದಾರೆ. ೧೯೮೮ರಿಂದ ನಾಡಿನಾದ್ಯಂತ ಶಾಲಾ ಕಾಲೇಜುಗಳಲ್ಲಿ 'ದ.ರಾ ಬೇಂದ್ರೆ ಕವನ ಗಾಯನ ಸ್ಪರ್ಧೆ ಏರ್ಪಡಿಸಿ ದ.ರಾ ಬೇಂದ್ರೆ ಅವರ ಕೃತಿಗಳನ್ನು ಬಹುಮಾನದ ರೂಪದಲ್ಲಿ ನೀಡುವುದು. ೨೦೦೭ರಲ್ಲಿ ಬೆಂಗಳೂರಿನಲ್ಲಿ 'ದ.ರಾ ಬೇಂದ್ರೆ ಕಾವ್ಯ ಕೂಟ' ಸ್ಥಾಪನೆ ಮಾಡಿ ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿವರ್ಷ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಂದ್ರೆ ಕಾವ್ಯ ಕುರಿತು ರಾಜ್ಯ ಮಟ್ಟದ ವಿಮರ್ಶಾ ಸ್ಪರ್ಧೆ ನಡೆಸಿ, ಬಹುಮಾನ ನೀಡುತ್ತಿದ್ದಾರೆ.

ಇತರ ಕೃತಿಗಳು[ಬದಲಾಯಿಸಿ]

  • ರಸ್ತೆ ನಿಯಮಗಳು[೨೦೦೦,೨೦೧೦,೨೦೧೧].

ಅಧ್ಯಯನ ಕೃತಿಗಳು[ಬದಲಾಯಿಸಿ]

  • ಬೇಂದ್ರೆ ಪದ ನಿರುಕ್ತ[೨೦೧೯]
  • ಕುವೆಂಪು ಶ್ರೀ ರಾಮಾಯಣ ದರ್ಶನಂ ವಚನ ದೀಪಿಕೆ[೨೦೨೧]
  • ಕನ್ನಡ ಮೇಘದೂತ ಒಂದು ಸಹಪಯಣ(ಟಿ.ಎನ್. ವಾಸುದೇವಮೂರ್ತಿ ಅವರೊಂದಿಗೆ)[೨೦೨೧]

ವಿಮರ್ಶಾ ಕೃತಿಗಳು[ಬದಲಾಯಿಸಿ]

  • ಹಾಡುಹಕ್ಕಿ ಅಂಬಿಕಾತನಯ ದತ್ತ[೧೯೯೫,೨೦೦೯]
  • ಡಿ.ಆರ್ ಬೇಂದ್ರೆ[೧೯೯೭]
  • ನಾಕುತಂತಿ-ಒಂದು ಟಿಪ್ಪಣಿ[೨೦೦೦,೨೦೧೦]
  • ಹೂತದ ಹುಣಸಿ[೨೦೦೦, ೨೦೧೧]
  • ಬರೆಹದಲ್ಲಿ ಬೇಂದ್ರೆಯವರ ಬದುಕು[೨೦೦೮]
  • ಅಂತರಂಗದತ್ತ ನಯನ[೨೦೧೦]
  • ತಿರುತಿರುಗಿ ಹೊಸತಾಗಿರೆ[೨೦೧೫]
  • ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ[೨೦೧೫]
  • ಬೇಂದ್ರೆ ಕಾವ್ಯ ಪದನಿರುಕ್ತ- ಪದ ವಿವರಣ ವಿಶ್ವಕೋಶ[೨೦೧೮]
  • ಹಸಿರು ಹಚ್ಚಿ ಚುಚ್ಚಿ[೨೦೧೯]
  • ಕುವೆಂಪು ಹನುಮದ್ದರ್ಶನ[೨೦೧೯]
  • ಶ್ರೀರಾಮಾಯಣ ದರ್ಶನಂ ಪಾತ್ರಗಳ ಕಥಾವಳಿ[೨೦೨೧]


ಹಳಗನ್ನಡದ ಸರಳನುವಾದ ಕೃತಿಗಳು[ಬದಲಾಯಿಸಿ]

  • ವಚನ ಜೈಮಿನಿ ಭಾರತ[೨೦೧೨]
  • ವಚನ ಗಿರಿಜಾ ಕಲ್ಯಾಣ[೨೦೧೩]

ಸಂಶೋಧನೆ[ಬದಲಾಯಿಸಿ]

  • ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ- ಒಂದು ಅಧ್ಯಯನ [೨೦೦೧],[೨೦೧೨]

ಪ್ರಶಸ್ತಿಗಳು[ಬದಲಾಯಿಸಿ]

  • ಕನ್ನಡ ಪುಸ್ತಕ ಪ್ರಾಧಿಕಾರವು ೨೦೧೧ರ ಡಾ.ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ನೀಡಿದೆ[೧].
  • ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡವು ೨೦೧೪ರ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ನೀಡಿದೆ.
  • ೨೦೧೪ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಷಿಕವಾಗಿ ನೀಡಲಾಗುವ ನಾಗರಿಕ ಪ್ರಶಸ್ತಿಯಾದ ಕೆಂಪೇಗೌಡ ಪ್ರಶಸ್ತಿ.
  • ೨೦೧೮ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು[೨].
  • ಕನ್ನಡ ವಿಶ್ವವಿದ್ಯಾಲಯವು ತನ್ನ ೩೧ನೇ ಘಟಿಕೋತ್ಸವದಲ್ಲಿ ಡಿಸೆಂಬರ್ ೦೮, ೨೦೨೨ರಂದು ನಾಡೋಜ ಗೌರವ ಪದವಿಯನ್ನು ನೀಡಿತು.

ಉಲ್ಲೇಖ[ಬದಲಾಯಿಸಿ]

  1. http://vijaykarnataka.indiatimes.com/state/karnataka/-/articleshow/12019514.cms
  2. https://sahithyaacademy.karnataka.gov.in/new-page/Sahitya%20Sree%20Awards%202018/kn