ವಿಷಯಕ್ಕೆ ಹೋಗು

ಜಾಹೀರಾತು ಮಾಹಿತಿ ಸಿದ್ಧತೆ (ಕಾಪಿರೈಟಿಂಗ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಹೀರಾತು ಮಾಹಿತಿ ಸಿದ್ಧತೆ ಯು (ಗ್ರಾಹಕರಿಗಾಗಿ)ವ್ಯಕ್ತಿ, ವ್ಯವಹಾರ, ಅಭಿಪ್ರಾಯ ಅಥವಾ ಕಲ್ಪನೆಯನ್ನು ಪ್ರಚಾರ ಮಾಡುವ ಪದಗಳ ಬಳಕೆಯಾಗಿದೆ. ಕಾಪಿ(ನಕಲು) ಪದವನ್ನು ಮುದ್ರಣ ಮಾಡುವ ಯಾವುದೇ ವಿಷಯವನ್ನು ಸೂಚಿಸಲು ಬಳಸಲಾದರೂ (ಸಮಾಚಾರ ಪತ್ರಿಕೆಯ ಲೇಖನ ಅಥವಾ ಪುಸ್ತಕದ ಮಾಹಿತಿಯಲ್ಲಿರುವಂತೆ), ಕಾಪಿರೈಟರ್(ಜಾಹಿರಾತು-ಮಾಹಿತಿ-ಸಿದ್ಧಪಡಿಸುವವ) ಎಂಬ ಪದವು ಸಾಮಾನ್ಯವಾಗಿ ಅಂತಹ ಪ್ರಚಾರದ ಸಂದರ್ಭಗಳಿಗೆ ಮೀಸಲಾಗಿದೆ, ಮಾಧ್ಯಮವನ್ನು ಹೊರತುಪಡಿಸಿ (ಮುದ್ರಣ, ದೂರದರ್ಶನ, ರೇಡಿಯೊ ಅಥವಾ ಇತರ ಮಾಧ್ಯಮದ ಜಾಹೀರಾತಿನಲ್ಲಿರುವಂತೆ) ಉಲ್ಲೇಖಿಸಲಾಗುತ್ತದೆ. ಉದಾಹರಣೆಗಾಗಿ, ಸಮಾಚಾರ ಪತ್ರಿಕೆ ಅಥವಾ ನಿಯತಕಾಲಿಕದ ಲೇಖಕರನ್ನು ಸಾಮಾನ್ಯವಾಗಿ ವರದಿಗಾರ ಅಥವಾ ಬರಹಗಾರ ಅಥವಾ ಕಾಪಿರೈಟರ್ ಎಂದು ಕರೆಯಲಾಗುತ್ತದೆ.

(ಕಾಪಿರೈಟಿಂಗ್ ಪದವನ್ನು ನಾಮಪದ ಅಥವಾ ಕೃದಂತ ಭಾವನಾಮವಾಗಿ ಬಳಸಲಾಗುತ್ತದೆ.ಅಲ್ಲದೇ ಕಾಪಿರೈಟ್ ಅನ್ನು ಕೆಲವೊಮ್ಮೆ ವೃತ್ತಿನಿರತರು ಕ್ರಿಯಾಪದವಾಗಿ ಬಳಸುತ್ತಾರೆ.)

ಆದ್ದರಿಂದ ವ್ಯಾಪಾರೋದ್ಯಮ ಜಾಹೀರಾತಿನ ಮಾಹಿತಿಯ ಅಥವಾ ಪ್ರಚಾರದ ವಿಷಯದ ಮುಖ್ಯ ಉದ್ದೇಶವೆಂದರೆ ಓದುಗರು, ಕೇಳುಗರು ಅಥವಾ ವೀಕ್ಷಕರ ಗಮನವನ್ನು ತನ್ನ ಕಾರ್ಯದೆಡೆಗೆ-ಉದಾ. ಉತ್ಪನ್ನವನ್ನು ಕೊಂಡುಕೊಳ್ಳಲು ಅಥವಾ ಕೆಲವು ದೃಷ್ಟಿಕೋನವನ್ನು ಅನುಮೋದಿಸಲು- ಸೆಳೆಯುವುದಾಗಿದೆ. ಪರ್ಯಾಯವಾಗಿ, ಕಾಪಿಯು ಓದುಗರನ್ನು ತಡೆಯುವ ಉದ್ದೇಶವನ್ನೂ ಹೊಂದಿರಬಹುದು.

ಜಾಹೀರಾತು ಮಾಹಿತಿ ಸಿದ್ಧತೆ(ಕಾಪಿರೈಟಿಂಗ್)ಯು ನೇರ ಮೇಲ್ ಅಂಶಗಳು, ವ್ಯಾಪಾರಿ-ಗುರುತುಗಳು,ಆಕರ್ಷಕ, ಪ್ರಾಸಬದ್ಧ ಸಾಹಿತ್ಯಗಳು, ವೆಬ್ ಪುಟ ಮಾಹಿತಿ (ಆದರೆ ಇದರ ಉದ್ದೇಶವು (ಜಾಹಿರಾತು)ಪ್ರಚಾರವಲ್ಲದಿದ್ದರೆ ಇದರ ಲೇಖಕರನ್ನು ಕೇವಲ ಕಂಟೆಂಟ್ ರೈಟರ್ ಎಂದು ಕರೆಯಲಾಗುತ್ತದೆ.)ಇಲ್ಲಿ ಆನ್‌ಲೈನ್ ಜಾಹೀರಾತುಗಳು, ಇ-ಮೇಲ್ ಮತ್ತು ಇತರ ಇಂಟರ್ನೆಟ್ ಮಾಹಿತಿ, ದೂರದರ್ಶನ ಅಥವಾ ರೇಡಿಯೊ ವಾಣಿಜ್ಯ ಲಿಪಿಗಳು, ಪತ್ರಿಕಾ ಪ್ರಕಟಣೆಗಳು,(ವ್ಯಾಪಾರಿ ಮುದ್ರೆ-ಗುರುತಿನ ಭಿತ್ತಿಪತ್ರಗಳು) ಬಿಳಿ ಹಾಳೆಗಳು, ಕ್ಯಾಟಲಾಗ್‌ಗಳು, ಜಾಹೀರಾತು ಫಲಕಗಳು, ಕಿರುಹೊತ್ತಿಗೆಗಳು, ಪೋಸ್ಟ್‌ಕಾರ್ಡ್‌ಗಳು, ಮಾರಾಟ ಪತ್ರಗಳು ಮತ್ತು ಇತರ ವ್ಯಾಪಾರೋದ್ಯಮ ಸಂವಹನ ಮಾಧ್ಯಮ ಮೊದಲಾದವುಗಳಲ್ಲಿ ಕಂಡುಬರುತ್ತದೆ.

ವೆಬ್‌ಸೈಟ್‌ಗಳಲ್ಲಿನ ವಿಷಯ-ಲೇಖನವನ್ನೂ ಜಾಹೀರಾತು ಮಾಹಿತಿ ಸಿದ್ಧತೆ ಎಂದು ನಿರೂಪಿಸಲಾಗುತ್ತದೆ. ಅಲ್ಲದೇ ಅದರ ಮುಖ್ಯ ಉದ್ದೇಶಗಳಲ್ಲಿ, ಶೋಧಕ ಇಂಜಿನ್‌ಗಳಲ್ಲಿ ಉನ್ನತ ದರ್ಜೆಯನ್ನು ಸಾಧಿಸುವುದೂ ಒಂದಾಗಿದೆ. "ಆರ್ಗ್ಯಾನಿಕ್" ಸರ್ಚ್ ಇಂಜಿನ್ ಆಪ್ಟಿಮೈಸೇಶನ್(ಹುಡುಕಾಟ ಇಂಜಿನ್ ಉತ್ತಮಗೊಳಿಸುವುದು) (SEO) ಎಂದು ಕರೆಯಲಾಗುವ ಈ ಅಭ್ಯಾಸವು, ವೆಬ್ ಪುಟಗಳಲ್ಲಿ ಸೂಚಕ ಪದ(ಕೀವರ್ಡ್)ಗಳು ಮತ್ತು ಸೂಚಕಪದಗಳ ಗುಂಪುಗಳ ಕೌಶಲದ ನಿಯೋಜನೆ ಮತ್ತು ಪುನರಾವರ್ತನೆಯನ್ನು ಹಾಗೂ ಸಾಮಾನ್ಯ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವುದನ್ನು ಒಳಗೊಳ್ಳುತ್ತದೆ.

ಜಾಹೀರಾತು-ರೂಪಿಸುವವರು(ಕಾಪಿರೈಟರ್ಸ್)[ಬದಲಾಯಿಸಿ]

ಹೆಚ್ಚಿನ ಜಾಹೀರಾತು-ರೂಪಿಸುವವರು ಆಯಾ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿರುತ್ತಾರೆ, ಉದಾ. ಜಾಹೀರಾತು ಏಜೆನ್ಸಿಗಳು, ಸಾರ್ವಜನಿಕ ವ್ಯವಹಾರ ಸಂಸ್ಥೆಗಳು, ಕಂಪನಿ ಜಾಹೀರಾತು ವಿಭಾಗಗಳು, ದೊಡ್ಡ ಮಳಿಗೆಗಳು, ವ್ಯಾಪಾರೋದ್ಯಮ ಸಂಸ್ಥೆಗಳು, ಪ್ರಸಾರ ಮಾಡುವವರು ಮತ್ತು ಕೇಬಲ್ ಸಂಪರ್ಕ ಪೂರೈಕೆದಾರರು, ಸಮಾಚಾರ ಪತ್ರಿಕೆಗಳು, ಪುಸ್ತಕ ಪ್ರಕಾಶಕರು ಮತ್ತು ನಿಯತಕಾಲಿಕಗಳು. ಜಾಹೀರಾತು-ರೂಪಿಸುವವರು ವಿವಿಧ ಗ್ರಾಹಕರಿಗೆ ಇನ್ನೊಬ್ಬರ ವಶದಲ್ಲಿಲ್ಲದೆ ಗ್ರಾಹಕರ ಕಛೇರಿಗಳಲ್ಲಿ ಅಥವಾ ಅವರ ಸ್ವಂತ ಸ್ಥಳಗಳಲ್ಲಿ ಕೆಲಸ ಮಾಡಿಕೊಡುವ ಸ್ವತಂತ್ರ ಗುತ್ತಿಗೆದಾರರಾಗಿರಬಹುದು ಅಥವಾ ವಿಶೇಷ ಜಾಹೀರಾತು ಮಾಹಿತಿ ಸಿದ್ಧಪಡಿಸುವ ಏಜೆನ್ಸಿಗಳ ಪಾಲುದಾರರಾಗಿರಬಹುದು ಅಥವಾ ಉದ್ಯೋಗಿಗಳಾಗಿರಬಹುದು.

ಜಾಹೀರಾತು-ರೂಪಿಸುವವರು ಸಾಮಾನ್ಯವಾಗಿ ಸೃಜನಾತ್ಮಕ ತಂಡದ ಭಾಗವಾಗಿ ಕೆಲಸ ಮಾಡುತ್ತಾರೆ. ಏಜೆನ್ಸಿಗಳು ಮತ್ತು ಜಾಹೀರಾತು ವಿಭಾಗಗಳು ಜಾಹಿರಾತು-ಮಾಹಿತಿ-ಸಿದ್ಧಪಡಿಸುವವರನ್ನು ಕಲಾ ನಿರ್ದೇಶಕರೊಂದಿಗೆ ಜತೆಗೂಡಿಸುತ್ತವೆ. ಜಾಹೀರಾತು-ರೂಪಿಸುವವರು ಜಾಹೀರಾತಿನ ಶಾಬ್ದಿಕ ಅಥವಾ ಮೂಲಗ್ರಂಥದ ವಿಷಯದ ಅಂತಿಮ ಜವಾಬ್ದಾರಿಯನ್ನು ಹೊಂದಿರುತ್ತಾರೆ, ಇದು ಹೆಚ್ಚಾಗಿ ಗ್ರಾಹಕರಿಂದ ಜಾಹೀರಾತಿನ ಮಾಹಿತಿ ಪಡೆಯುವುದನ್ನು ಒಳಗೊಳ್ಳುತ್ತದೆ. (ಇದು ವಿಧ್ಯುಕ್ತವಾಗಿ ಲೆಕ್ಕಾಚಾರ ನಿರ್ವಾಹಕನ ಪಾತ್ರವಾಗಿ ವಿಸ್ತರಣೆಯಾದಾಗ, ಈ ಕೆಲಸವನ್ನು "ಕಾಪಿ/ಕಾಂಟ್ಯಾಕ್ಟ್" ಎಂದು ಕರೆಯಲಾಗುತ್ತದೆ.) ಕಲಾ ನಿರ್ದೇಶಕರು ದೃಶ್ಯ ಸಂವಹನದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅಲ್ಲದೇ ವಿಶೇಷವಾಗಿ ಮುದ್ರಣ ಕಾರ್ಯದಲ್ಲಿನ ಪ್ರಗತಿ ಬಗ್ಗೆ ಮೇಲ್ವಿಚಾರಣೆ ವಹಿಸಬಹುದು. ಇವರಿಬ್ಬರೂ ಜಾಹೀರಾತಿನ ಅಥವಾ ವಾಣಿಜ್ಯದ ಒಟ್ಟು ಕಲ್ಪನೆಯೊಂದಿಗೆ (ಹೊಸ ಕಲ್ಪನೆ ಅಥವಾ "ದೊಡ್ಡ ಕಲ್ಪನೆ" ಎಂದು ನಿರೂಪಿಸಲಾಗುತ್ತದೆ.) ಬರಬಹುದು; ಅಲ್ಲದೇ ಸಹಯೋಗದ ಕಾರ್ಯವು ಹೆಚ್ಚಾಗಿ ಕಾರ್ಯದ ರೂಪರೇಷೆಯನ್ನು ಸುಧಾರಿಸುತ್ತದೆ.

ಜಾಹಿರಾತು-ಮಾಹಿತಿ-ಸಿದ್ಧಪಡಿಸುವವರು ತಾಂತ್ರಿಕ ಬರಹಗಾರರಂತೆಯೇ ಇರುತ್ತಾರೆ. ಇದಕ್ಕೆ ಪೂರಕವಾಗಿ ಅವರ ಉದ್ಯೋಗವು ಭಾಗಶಃ ಒಂದೇ ಆಗಿರುತ್ತದೆ. ವಿಶಾಲ ಅರ್ಥದಲ್ಲಿ ಹೇಳುವುದಾದರೆ, ತಾಂತ್ರಿಕ ಬರವಣಿಗೆಯ ಮುಖ್ಯ ಉದ್ದೇಶವು ಓದುಗರನ್ನು ಸೆಳೆಯುವುದಾಗಿರದೇ, ಬದಲಿಗೆ ಅವರಿಗೆ ಮಾಹಿತಿ ಒದಗಿಸುವುದಾಗಿರುತ್ತದೆ. ಉದಾಹರಣೆಗಾಗಿ, ಒಬ್ಬ ಜಾಹೀರಾತು-ರೂಪಿಸುವವನು ಒಂದು ಕಾರನ್ನು ಮಾರಾಟ ಮಾಡುವ ಜಾಹೀರಾತನ್ನು ಬರೆಯುತ್ತಾನೆ, ಅದೇ ತಾಂತ್ರಿಕ ಬರಹಗಾರನು ಅದನ್ನು ಹೇಗೆ ಬಳಸಬೇಕೆಂದು ತಿಳಿಸುವ ಕೈಪಿಡಿಯನ್ನು ಬರೆಯುತ್ತಾನೆ.

ಪದಗಳ ಉಚ್ಛಾರಣೆಯು ಒಂದೇ ರೀತಿ ಇರುವುದರಿಂದ ಜಾಹಿರಾತು-ಮಾಹಿತಿ-ಸಿದ್ಧಪಡಿಸುವವರನ್ನು ಕೆಲವೊಮ್ಮೆ ಕಾಪಿರೈಟ್ ಕಾನೂನಿನಲ್ಲಿ ಕೆಲಸ ಮಾಡುವವರೆಂದು ತಪ್ಪಾಗಿ ತಿಳಿಯಲಾಗುತ್ತದೆ. ಈ ಉದ್ಯೋಗಗಳು ಪರಸ್ಪರ ಸಂಬಂಧವನ್ನು ಹೊಂದಿಲ್ಲ.

ಪ್ರಸಿದ್ಧ ಜಾಹೀರಾತು-ರೂಪಿಸುವವರೆಂದರೆ ಡೇವಿಡ್ ಓಗಿಲ್ವಿ, ವಿಲಿಯಂ ಬರ್ನ್‌ಬ್ಯಾಚ್ ಮತ್ತು ಲಿಯೊ ಬರ್ನೆಟ್. ಹಲವಾರು ಸೃಜನಾತ್ಮಕ ಕಲಾವಿದರು ಇತರ ವಿಷಯಗಳಿಗೆ ಹೆಸರುವಾಸಿಯಾಗುವುದಕ್ಕಿಂತ ಮೊದಲು ಅವರ ವೃತ್ತಿಜೀವನದಲ್ಲಿ ಸ್ವಲ್ಪ ಕಾಲ ಜಾಹೀರಾತು-ರೂಪಿಸುವವರಾಗಿ ಕಳೆದರು, ಅವರೆಂದರೆ - ಪೀಟರ್ ಕ್ಯಾರೆ, ಡೊರೊತಿ L. ಸೇಯರ್ಸ್, ವಿಕ್ಟರ್ ಪೆಲೆವಿನ್, ಎರಿಕ್ ಆಂಬ್ಲರ್, ಜೋಸೆಫ್ ಹೆಲ್ಲರ್, ಟೆರ್ರಿ ಗಿಲ್ಲಿಯಮ್, ವಿಲಿಯಂ S. ಬುರಫ್ಸ್, ಸಲ್ಮಾನ್ ರಶ್ದಿ, ಡಾನ್ ಡಿಲಿಲ್ಲೊ, ಲಾರೆನ್ಸ್ ಕಸ್ಡನ್, ಫೇ ವೆಲ್ಡನ್, ಫಿಲಿಪ್ ಕೆರ್ ಮತ್ತು ಶಿಗೆಸಾಟೊ ಇಟಾಯ್. (ಹರ್ಸ್ಚೆಲ್ ಗೋರ್ಡನ್ ಲೆವಿಸ್ ಹಿಂಸಾತ್ಮಕ ಶೋಷಣೆಯ ಚಲನಚಿತ್ರಗಳನ್ನು ನಿರ್ದೇಶಿಸುವಲ್ಲಿ ಪ್ರಸಿದ್ಧನಾದನು, ಆತನು ನಂತರ ಯಶಸ್ವಿ ಜಾಹೀರಾತು-ರೂಪಿಸುವವನಾದನು.)

ಇಂಟರ್ನೆಟ್, ಜಾಹೀರಾತು ಮಾಹಿತಿ ಸಿದ್ಧಪಡಿಸುವ ಅವಕಾಶಗಳ ವ್ಯಾಪ್ತಿಯನ್ನು ವಿಸ್ತರಿಸಿಸಿ, ವೆಬ್ ಮಾಹಿತಿ, ಜಾಹೀರಾತುಗಳು, ವಾಣಿಜ್ಯ ಇಮೇಲ್‌ಗಳು ಮತ್ತು ಇತರ ಆನ್‌ಲೈನ್ ಮಾಧ್ಯಮ ಮೊದಲಾದವನ್ನು ಒಳಗೊಂಡಿದೆ. ಅಲ್ಲದೆ ಇದು ಜಾಹೀರಾತು-ರೂಪಿಸುವವರಿಗೆ ತಮ್ಮ ಕೌಶಲವನ್ನು ಕಲಿಯಲು, ಸಂಶೋಧನೆ ಮಾಡಲು ಮತ್ತು ಇತರರ ಕಾರ್ಯ ವೀಕ್ಷಿಸಲು ಹೊಸ ಅವಕಾಶಗಳನ್ನು ಒದಗಿಸಿದೆ. ಮಾತ್ರವಲ್ಲದೆ ಇಂಟರ್ನೆಟ್ ಉದ್ಯೋಗಿಗಳು, ಜಾಹೀರಾತು-ರೂಪಿಸುವವರು ಮತ್ತು ಕಲಾ ನಿರ್ದೇಶಕರು ಪರಸ್ಪರ ಗುರುತಿಸಿಕೊಳ್ಳುವುದನ್ನು ಸುಲಭವಾಗಿಸಿದೆ.

ಈ ಅಂಶಗಳ ಪರಿಣಾಮದಿಂದಾಗಿ ಹಾಗೂ ಸ್ವತಂತ್ರ ಗುತ್ತಿಗೆದಾರರ ಸಂಖ್ಯೆ ಮತ್ತು ದೃಶ್ಯ ಸಂವಹನವು ಹೆಚ್ಚಾದುದರಿಂದ, ಸ್ವತಂತ್ರವಾಗಿ ಕೆಲಸಮಾಡುವುದು ಹೆಚ್ಚು ಕಾರ್ಯಸಾಧ್ಯವಾದ ಉದ್ಯೋಗವಾಗಿದೆ, ನಿರ್ದಿಷ್ಟವಾಗಿ ಕೆಲವು ಜಾಹೀರಾತು ಮಾಹಿತಿ ಸಿದ್ಧತೆ ವಿಶಿಷ್ಟ-ಲಕ್ಷಣಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ. ಒಂದು ಪೀಳಿಗೆಯ ಹಿಂದೆ ವೃತ್ತಿಪರ ಸ್ವತಂತ್ರ-ಜಾಹೀರಾತು-ರೂಪಿಸುವವರು (ಸಂಪೂರ್ಣಾವಧಿಯ ಉದ್ಯೋಗಗಳಲ್ಲಿದ್ದವರನ್ನು ಹೊರತುಪಡಿಸಿ) ವಿರಳವಾಗಿದ್ದರು.

ಉದಯೋನ್ಮುಖ ಜಾಹೀರಾತು-ರೂಪಿಸುವವರ ವೃತ್ತಿಪರ ಶಿಕ್ಷಣದಲ್ಲಿ ಶಾಲಾಶಿಕ್ಷಣ ಕೊಡಿಸುವುದು ಉತ್ತಮ ಆರಂಭವಾಗಿರುತ್ತದೆ, ಅಥವಾ ಪೂರೈಕೆಯಾಗಿರುತ್ತದೆ. ಜಾಹೀರಾತು ತಂಡದ ಭಾಗವಾಗಿ ಕೆಲಸ ಮಾಡುವುದು ಅನನುಭವಿಗಳಿಗೆ, ಉದ್ಯೋಗ ನೀಡುವ ಅನೇಕ ಸಂಸ್ಥೆಗಳಿಗೆ ಅಗತ್ಯವಾದ ವ್ಯವಹಾರ ಜ್ಞಾನ ಮತ್ತು ಅನುಭವವನ್ನು ಪಡೆಯಲು ಉತ್ತಮ ಮಾರ್ಗವಾಗಿರುತ್ತದೆ; ಹಾಗೂ ವೃತ್ತಿಜೀವನದ ಅವಕಾಶಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

ಇವನ್ನೂ ಗಮನಿಸಿ[ಬದಲಾಯಿಸಿ]

  • ಜಾಹೀರಾತು-ರೂಪಿಸುವವರ ಪಟ್ಟಿ
  • ಹಿಂದಿನ ಜಾಹೀರಾತು-ರೂಪಿಸುವವರ ಪಟ್ಟಿ
  • ಜಾಹೀರಾತು ಬರಹ
  • SEO ಜಾಹೀರಾತು ಮಾಹಿತಿ ಸಿದ್ಧತೆ
  • ಜಾಹೀರಾತುಗಳು
  • ಬಿಳಿ ಹಾಳೆಗಳು
  • ಸ್ಪೈವ್ ಫೈಲ್
  • ಹುಡುಕಾಟ ಇಂಜಿನ್ ಉತ್ತಮಗೊಳಿಸುವುದು
  • ಸಂವಹನ ವಿನ್ಯಾಸ

ಉಲ್ಲೇಖಗಳು[ಬದಲಾಯಿಸಿ]