ಜಾಮ್ಬಾಟ್ ಟೀಸ್ಟಾ ಜೆಲ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಮ್ಬಾಟ್ ಟೀಸ್ಟಾ ಜೆಲ್ಲಿ (1498-1563). ಇಟಲಿಯ ಸಾಹಿತಿ; ವೃತ್ತಿಯಲ್ಲಿ ಮೋಚಿಯಾದರೂ ಅಪಾರ ಜ್ಞಾನವನ್ನು ಗಳಿಸಿದ ವ್ಯಕ್ತಿ. ಪುರಾತನ ಸಾಹಿತ್ಯ, ಶಾಸ್ತ್ರ, ಪುರಾಣಗಳಲ್ಲಿನ, ತಾತ್ತ್ವಿಕ ವಿಚಾರಧಾರೆಯನ್ನು ಜನಸಾಮಾನ್ಯರಿಗೆ ಎರೆಯಲು ಯತ್ನಿಸಿದ ದಾರ್ಶನಿಕ.

ಕೂಪರ್ಸ್ ಫಾನ್ಸಿಸ್ ಎಂಬ ಗ್ರಂಥದಲ್ಲಿ ಆರೋಗ್ಯಶಾಸ್ತ್ರ, ಜರೆ, ಮೃತ್ಯುಭಯ, ಅಮೃತತ್ತ್ವ-ಮುಂತಾದ ಜಟಿಲ ವಿಚಾರಗಳನ್ನು ಚರ್ಚಿಸುವ ಹತ್ತು ಸ್ವಾಗತಭಾಷಣಗಳಿವೆ. ಸರ್ಸಿ ಎಂಬ ಕೃತಿಯಲ್ಲಿ ಮನುಷ್ಯಜೀವನದ ಗೊತ್ತುಗುರಿಗಳನ್ನು ಕುರಿತು ಯೂಲಿಸಿಸ್. ಸರ್ಸಿ ಮತ್ತು ಶಾಪದಿಂದ ಮೃಗರೂಪಿಗಳಾಗಿರುವ ಹನ್ನೊಂದು ಮಂದಿ ಗ್ರೀಕರು ಸುದೀರ್ಘಜಿಜ್ಞಾಸೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಈತ ಡಾಂಟೆ, ಪೆಟ್ರಾರ್ಕ್ ಮತ್ತು ಮೈಕಲ್ ಏಂಜೆಲೋ ಮುಂತಾದ ಪ್ರಭೃತಿಗಳನ್ನು ಕುರಿತು ಫ್ಲಾರೆನ್ಸ್ ಅಕಾಡೆಮಿಯಲ್ಲಿ ಉಪನ್ಯಾಸಮಾಡಿದ.