ಜಾಗೇಶ್ವರ್
ಜಾಗೇಶ್ವರ್ ದೇವಾಲಯಗಳು (ಜಾಗೇಶ್ವರ್ ಕಣಿವೆಯ ದೇವಾಲಯಗಳು ಎಂದೂ ಕರೆಯಲ್ಪಡುತ್ತವೆ) ಭಾರತದ ಹಿಮಾಲಯ ರಾಜ್ಯವಾದ ಉತ್ತರಾಖಂಡದ ಅಲ್ಮೋರಾ ಬಳಿ ಇರುವ, 7 ಮತ್ತು 12 ನೇ ಶತಮಾನದ ನಡುವಿನ ಕಾಲಮಾನದ್ದೆಂದು ನಿರ್ಧಾರಿತವಾಗಿರುವ 100 ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಒಂದು ಗುಂಪು.[೧] ಈ ಕಣಿವೆಯಲ್ಲಿ ದಂಡೇಶ್ವರ್ ಮತ್ತು ಜಾಗೇಶ್ವರ್ ತಾಣಗಳಂತಹ ಹಲವಾರು ದೇವಾಲಯ ಸಮೂಹಗಳಿವೆ. ಕೆಲವು ಸ್ಥಳಗಳು 20 ನೇ ಶತಮಾನದಾದ್ಯಂತ ಹೊಸ ದೇವಾಲಯಗಳ ನಿರ್ಮಾಣವನ್ನು ಆಕರ್ಷಿಸಿವೆ. ಕಣಿವೆಯ ಮೇಲಿರುವ ಈ ಸಮೂಹಗಳು ಒಟ್ಟಾಗಿ ಕತ್ತರಿಸಿದ ಕಲ್ಲಿನಿಂದ ನಿರ್ಮಿಸಲಾದ 200 ಕ್ಕೂ ಹೆಚ್ಚು ರಚನಾತ್ಮಕ ದೇವಾಲಯಗಳನ್ನು ಒಳಗೊಂಡಿವೆ. ಅನೇಕವು ಚಿಕ್ಕದಾಗಿದ್ದರೆ, ಕೆಲವು ಬೃಹತ್ ಗಾತ್ರದ್ದಾಗಿವೆ. ಇವು ಮುಖ್ಯವಾಗಿ ಉತ್ತರ ಭಾರತದ ನಾಗರ ಶೈಲಿಯ ವಾಸ್ತುಶಿಲ್ಪವನ್ನು ತೋರಿಸುತ್ತವೆ. ದಕ್ಷಿಣ ಮತ್ತು ಮಧ್ಯ ಭಾರತೀಯ ಶೈಲಿಯ ವಿನ್ಯಾಸಗಳನ್ನು ತೋರಿಸುವ ಕೆಲವು ಅಪವಾದಗಳಿವೆ. ಅನೇಕ ದೇವಾಲಯಗಳು ಶಿವನಿಗೆ ಅರ್ಪಿತವಾಗಿದ್ದಾವೆ. ಅತಿ ಸಮೀಪದ ಇತರ ದೇವಾಲಯಗಳು ವಿಷ್ಣು, ಶಕ್ತಿ ದೇವತೆಗಳು ಮತ್ತು ಹಿಂದೂ ಧರ್ಮದ ಸೂರ್ಯ ಸಂಪ್ರದಾಯಗಳಿಗೆ ಸಮರ್ಪಿತವಾಗಿವೆ.[೧][೨]
ಜಾಗೇಶ್ವರ್ ಹಿಂದೂ ತೀರ್ಥಯಾತ್ರೆಯ ಒಂದು ಪಟ್ಟಣವಾಗಿದ್ದು ಶೈವ ಪಂಥದಲ್ಲಿ ಒಂದು ಧಾಮವಾಗಿದೆ. ಈ ತಾಣವು ಭಾರತೀಯ ಕಾನೂನುಗಳ ಅಡಿಯಲ್ಲಿ ರಕ್ಷಿತವಾಗಿದೆ ಮತ್ತು ಇದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯು (ಎಎಸ್ಐ) ನಿರ್ವಹಿಸುತ್ತದೆ. ಈ ಸ್ಥಳವು ಜಾಗೇಶ್ವರ್ ಮಳೆಗಾಲದ ಹಬ್ಬವನ್ನು ಹಿಂದೂ ಪಂಚಾಂಗದ ಶ್ರಾವಣ ಮಾಸದಲ್ಲಿ (ಜುಲೈ- ಆಗಸ್ಟ್‌ನಲ್ಲಿ ಬರುತ್ತದೆ) ಮತ್ತು ವಸಂತಕಾಲದ ಆರಂಭದಲ್ಲಿ ನಡೆಯುವ ವಾರ್ಷಿಕ ಮಹಾ ಶಿವರಾತ್ರಿ ಮೇಳವನ್ನು ( ಶಿವರಾತ್ರಿ ಹಬ್ಬ) ಆಚರಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Nachiket Chanchani 2013.
- ↑ Aśoka Jeratha (1995). The Splendour of Himalayan Art and Culture. Indus. pp. 71–73. ISBN 978-81-7387-034-7.