ವಿಷಯಕ್ಕೆ ಹೋಗು

ಜಾಖೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹನುಮಂತನ ವಿಗ್ರಹವು ವಿಶ್ವದಲ್ಲಿನ ಅತಿ ಎತ್ತರದ ವಿಗ್ರಹಗಳಲ್ಲಿ ಒಂದು.

ಜಾಖೂ ದೇವಾಲಯವು ಶಿಮ್ಲಾದಲ್ಲಿರುವ ಪುರಾತನ ದೇವಾಲಯವಾಗಿದ್ದು, ಹಿಂದೂ ದೇವತೆ ಹನುಮಂತನಿಗೆ ಸಮರ್ಪಿತವಾಗಿದೆ.[] ಇದು ಶಿಮ್ಲಾದ ಅತಿ ಎತ್ತರದ ಶಿಖರವಾದ ಜಾಖೂ ಗುಡ್ಡದ ಮೇಲೆ ಸ್ಥಿತವಾಗಿದೆ.[] ಪ್ರತಿ ವರ್ಷ, ದಸರಾದಂದು ಒಂದು ಉತ್ಸವವನ್ನು ನಡೆಸಲಾಗುತ್ತದೆ. 1972 ಕ್ಕಿಂತ ಮೊದಲು ಈ ಉತ್ಸವವನ್ನು ಅನಾಡೇಲ್‌ನಲ್ಲಿ ನಡೆಸಲಾಗುತ್ತಿತ್ತು.[]

ರಾಮಾಯಣದ ಪ್ರಕಾರ, ಲಕ್ಷ್ಮಣನನ್ನು ಪುನರುಜ್ಜೀವನಗೊಳಿಸಲು ಸಂಜೀವನಿ ಮೂಲಿಕೆಯನ್ನು ಹುಡುಕುವಾಗ ಹನುಮಂತನು ವಿಶ್ರಾಂತಿ ಪಡೆಯಲು ಈ ಸ್ಥಳದಲ್ಲಿ ನಿಂತನು. 4 ನವೆಂಬರ್ 2010 ರಂದು ಜಾಖೂ ಹನುಮಾನ್ ದೇವಸ್ಥಾನದಲ್ಲಿ 108 ಅಡಿ ಎತ್ತರದ ದೈತ್ಯ ವಿಗ್ರಹವನ್ನು ಅನಾವರಣಗೊಳಿಸಲಾಯಿತು.

ನಡಿಗೆ, ಕುದುರೆ, ಟ್ಯಾಕ್ಸಿ ಅಥವಾ ರಜ್ಜುಪಥದ ಮೂಲಕ ಈ ದೇವಾಲಯವನ್ನು ತಲುಪಬಹುದು. ಜಾಖೂ ರಜ್ಜುಪಥವು ವೈಮಾನಿಕ ಎತ್ತುಗವಾಗಿದ್ದು ಶಿಮ್ಲಾದ ಮಧ್ಯಭಾಗದ ಹತ್ತಿರವಿರುವ ಒಂದು ಬಿಂದುವನ್ನು ದೇವಾಲಯಕ್ಕೆ ಜೋಡಿಸುತ್ತದೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Jakoo Temple Archived 2018-04-17 ವೇಬ್ಯಾಕ್ ಮೆಷಿನ್ ನಲ್ಲಿ. Himachal Official website.
  2. Jakhoo Temple Archived 4 June 2008 ವೇಬ್ಯಾಕ್ ಮೆಷಿನ್ ನಲ್ಲಿ. Himachal Pradesh Tourism, Official website.
  3. "The Tribune, Chandigarh, India : Latest news, India, Punjab, Chandigarh, Haryana, Himachal, Uttarakhand, J&K, sports, cricket". www.tribuneindia.com. Retrieved 2019-11-29.
"https://kn.wikipedia.org/w/index.php?title=ಜಾಖೂ&oldid=1060328" ಇಂದ ಪಡೆಯಲ್ಪಟ್ಟಿದೆ