ವಿಷಯಕ್ಕೆ ಹೋಗು

ಜ಼ರ್ದಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ಼ರ್ದಾ ಬೇಯಿಸಿದ ಒಂದು ಸಾಂಪ್ರದಾಯಿಕ ಸಿಹಿ ಅನ್ನದ ಖಾದ್ಯವಾಗಿದೆ. ಇದು ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿದ್ದು (ಕಿತ್ತಳೆ) ಆಹಾರ ಬಣ್ಣ, ಹಾಲು ಮತ್ತು ಸಕ್ಕರೆಯನ್ನು ಹೊಂದಿರುತ್ತದೆ. ಏಲಕ್ಕಿ, ಒಣದ್ರಾಕ್ಷಿ, ಕೇಸರಿ, ಪಿಸ್ತಾ ಅಥವಾ ಬಾದಾಮಿ ಸೇರಿಸಿ ರುಚಿಗೊಳಿಸಲಾಗುತ್ತದೆ.[][] ಜ಼ರ್ದಾ ಹೆಸರು ಪರ್ಷಿಯನ್ ಶಬ್ದ 'ಜ಼ರ್ದ್' ದಿಂದ ಬರುತ್ತದೆ. ಇದರರ್ಥ 'ಹಳದಿ' ಏಕೆಂದರೆ ಅನ್ನಕ್ಕೆ ಸೇರಿಸಿದ ಆಹಾರ ಬಣ್ಣವು ಅದಕ್ಕೆ ಹಳದಿ ಬಣ್ಣವನ್ನು ಕೊಡುತ್ತದೆ. ಜ಼ರ್ದಾವನ್ನು ಸಾಮಾನ್ಯವಾಗಿ ಊಟದ ನಂತರ ಬಡಿಸಲಾಗುತ್ತದೆ. ಭಾರತೀಯ ಉಪಖಂಡದಲ್ಲಿ, ಜ಼ರ್ದಾ ಮದುವೆಗಳಂತಹ ವಿಶೇಷ ಸಂದರ್ಭಗಳಲ್ಲಿ, ಪೂರ್ವದಲ್ಲಿ ಮತ್ತು ಈಗಲೂ ಒಂದು ಜನಪ್ರಿಯ ಸಿಹಿ ತಿನಿಸಾಗಿತ್ತು ಮತ್ತು ಆಗಿದೆ.

ಹಲವುವೇಳೆ ಪಾಕಿಸ್ತಾನದಲ್ಲಿ, ಹಳದಿ ಆಹಾರ ಬಣ್ಣದ ಬದಲು, ಅನೇಕ ಆಹಾರ ಬಣ್ಣಗಳನ್ನು ಸೇರಿಸುವುದರಿಂದ ಅನ್ನದ ಕಾಳುಗಳು ಅನೇಕ ಬಣ್ಣಗಳನ್ನು ಹೊಂದಿರುತ್ತವೆ. ಜೊತೆಗೆ, ಖೋವಾ, ಸಕ್ಕರೆಯನ್ನು ತುಂಬಿ ಕೆಡದಂತೆ ಮಾಡಿದ ಹಣ್ಣುಗಳು (ಮುರಬ್ಬ) ಮತ್ತು ನಟ್‍ಗಳು ಶುಭ ಸಂದರ್ಭಗಳಲ್ಲಿ ತಯಾರಿಸಲಾದ ಜ಼ರ್ದಾದ ಅತ್ಯಗತ್ಯ ಭಾಗವಾಗಿರುತ್ತವೆ. ಜೊತೆಗೆ ಖಾದ್ಯದಲ್ಲಿ ಒಣದ್ರಾಕ್ಷಿಗಳು ಮತ್ತು ಇತರ ಒಣಫಲಗಳ ಜನಪ್ರಿಯ ಬಳಕೆ ಕೂಡ ಇರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Zarda Recipe (Indian Sweet Rice)". The Huffington Post. 17 November 2016. Retrieved 19 January 2017.
  2. "Mama’s Punjabi Recipes- Mithe Chawal (Sweet Rice)". Indo American News. 12 February 2015.
"https://kn.wikipedia.org/w/index.php?title=ಜ಼ರ್ದಾ&oldid=1003387" ಇಂದ ಪಡೆಯಲ್ಪಟ್ಟಿದೆ