ಜ಼ನ್‍ಸ್ಕಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜ಼ನ್‍ಸ್ಕಾರ್ ಪರ್ವತ ಶ್ರೇಣಿ

ಜ಼ನ್‍ಸ್ಕಾರ್ ಕಾರ್ಗಿಲ್ ಜಿಲ್ಲೆಯ ಒಂದು ತೆಹ್ಸಿಲ್. ಇದು ಭಾರತದ ಕೇಂದ್ರಾಡಳಿತ ಪ್ರದೇಶವಾ ಲಡಾಖ್‍ನಲ್ಲಿ ನೆಲೆಗೊಂಡಿದೆ. ಪದೂಮ್ ಆಡಳಿತ ಕೇಂದ್ರವಾಗಿದೆ.

ಜ಼ನ್‍ಸ್ಕಾರ್ ಶ್ರೇಣಿಯು ಲಡಾಖ್‌ನ ಕೇಂದ್ರಾಡಳಿತ ಪ್ರದೇಶದಲ್ಲಿರುವ ಪರ್ವತ ಶ್ರೇಣಿಯಾಗಿದ್ದು, ಜ಼ನ್‍ಸ್ಕಾರನ್ನು ಲಡಾಕ್‌ನಿಂದ ಬೇರ್ಪಡಿಸುತ್ತದೆ. ಭೌಗೋಳಿಕವಾಗಿ, ಜ಼ನ್‍ಸ್ಕಾರ್ ಶ್ರೇಣಿಯು ಬಲವಾಗಿ ಮಡಚಿಕೊಂಡು ಪೇರಿಕೆಯಾದ, ದುರ್ಬಲವಾಗಿ ರೂಪಾಂತರಗೊಂಡ ಸಂಚಿತ ಸರಣಿಯಿಂದ ರೂಪಗೊಂಡಿರುವ, ಸುಮಾರು 100 ಕಿ.ಮೀ ಅಗಲದ ಸಿಂಕ್ಲಿನೋರಿಯಂ ಆಗಿರುವ ಟೆಥಿಸ್ ಹಿಮಾಲಯದ ಒಂದು ಭಾಗವಾಗಿದೆ. ಜ಼ನ್‍ಸ್ಕಾರ್ ಶ್ರೇಣಿಯ ಸರಾಸರಿ ಎತ್ತರ ಸುಮಾರು 6,000 ಮೀ (19,700 ಅಡಿ).

ಆಗ್ನೇಯ ಜ಼ನ್‍ಸ್ಕಾರ್‌ನಲ್ಲಿರುವ ಫುಗ್ಟಾಲ್ ಮಠ.

ಭೌಗೋಳಿಕತೆ[ಬದಲಾಯಿಸಿ]

ಜನವಿವರಣೆ[ಬದಲಾಯಿಸಿ]

ಜ಼ನ್‍ಸ್ಕಾರಿ ಮಹಿಳೆಯರು ಮತ್ತು ಮಕ್ಕಳ ಗುಂಪು.

ಜನಸಂಖ್ಯೆಯು ಮುಖ್ಯವಾಗಿ ಚದುರಿದ ಸಣ್ಣ ಹಳ್ಳಿಗಳಲ್ಲಿ ವಾಸಿಸುತ್ತಿದೆ, ಅತಿದೊಡ್ಡ ಹಳ್ಳಿಯೆಂದರೆ ರಾಜಧಾನಿ ಪದುಮ್. ಇದು ಸುಮಾರು 700 ನಿವಾಸಿಗಳನ್ನು ಹೊಂದಿದೆ. ಹೆಚ್ಚಿನ ಗ್ರಾಮಗಳು ಜ಼ನ್‍ಸ್ಕಾರ್ ನದಿ ಮತ್ತು ಅದರ ಎರಡು ಪ್ರಮುಖ ಉಪನದಿಗಳ ಕಣಿವೆಗಳಲ್ಲಿವೆ.

ಜ಼ನ್‍ಸ್ಕಾರಿಗಳ ಮುಖ್ಯ ಉದ್ಯೋಗಗಳೆಂದರೆ ಜಾನುವಾರು ಸಾಕಣೆ ಮತ್ತು ಅವರು ಬಹುತೇಕ ಯಾವಾಗಲೂ ಹೊಂದಿರುವ ಭೂಮಿಯನ್ನು ಕೃಷಿ ಮಾಡುವುದು.

ಸಸ್ಯಗಳು ಮತ್ತು ಪ್ರಾಣಿಗಳು[ಬದಲಾಯಿಸಿ]

ಜ಼ನ್‍ಸ್ಕಾರ್‌ನ ಹೆಚ್ಚಿನ ಸಸ್ಯವರ್ಗವು ನೀರೊದಗಿಸಿದ ಹಳ್ಳಿಗಳಲ್ಲಿ ಮತ್ತು ಹೆಚ್ಚು ಮಳೆಯಾಗುವ ಮೇಲ್ಭಾಗದ ಇಳಿಜಾರುಗಳಲ್ಲಿ ಕಂಡುಬರುತ್ತದೆ. ಅಲ್ಲಿ ಉನ್ನತ ಪರ್ವತದ ಮತ್ತು ಟಂಡ್ರಾ ಜಾತಿಗಳಿವೆ. ಸಾವಿರಾರು ಏಡಲ್ವೈಸ್‍ಗಳಿಂದ ಆವೃತವಾಗಿರುವ ಹುಲ್ಲುಗಾವಲುಗಳು ಹೆಚ್ಚು ಹೃದಯಸ್ಪರ್ಶಿಯಾಗಿವೆ. ಬಾರ್ಲಿ, ಬೇಳೆಕಾಳುಗಳು, ಆಲೂಗಡ್ಡೆ ಸೇರಿದಂತೆ ಬೆಳೆಗಳನ್ನು ರೈತರು ಕಡಿಮೆ ಎತ್ತರದಲ್ಲಿ ಬೆಳೆಯುತ್ತಾರೆ. ಸಾಕು ಪ್ರಾಣಿಗಳಾದ ಚಮರೀಮೃಗ, ಡಿಜೊ, ಕುರಿ, ಕುದುರೆ ಮತ್ತು ನಾಯಿ ಈ ಪ್ರದೇಶದಲ್ಲಿ ಕಂಡುಬರುತ್ತವೆ.

ಜ಼ನ್‍ಸ್ಕಾರ್‌ನಲ್ಲಿ ಕಂಡುಬರುವ ವನ್ಯಜೀವಿಗಳ ಪೈಕಿ ಮಾರ್ಮೊಟ್, ಕರಡಿ, ತೋಳ, ಹಿಮ ಚಿರತೆ, ಭರಲ್, ಉನ್ನತ ಪರ್ವತದ ಐಬೆಕ್ಸ್, ಕಾಡು ಕುರಿ ಮತ್ತು ಮೇಕೆಗಳು ಮತ್ತು ಲ್ಯಾಮರ್‌ಜಿಯರ್ ಸೇರಿವೆ.

ಸಂಸ್ಕೃತಿ[ಬದಲಾಯಿಸಿ]

ಧರ್ಮ[ಬದಲಾಯಿಸಿ]

ಪೂರ್ನೆ ಗ್ರಾಮದಲ್ಲಿ ರೋ ಆಫ್ ಚೋರ್ಟನ್ (ಅಥವಾ ಸ್ತೂಪ). ಈ ಕಟ್ಟಡಗಳಲ್ಲಿ ಒಳಗೊಂಡಿರುವ ಪ್ರತಿಯೊಂದು ಅಂಶಗಳು ಮತ್ತು ಅವುಗಳ ಬಣ್ಣಗಳು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಸಾಂಕೇತಿಕ ಅರ್ಥವನ್ನು ಹೊಂದಿವೆ.

ಜ಼ನ್‍ಸ್ಕಾರ್‌ನ ಬಹುಪಾಲು ಜನರು ಬೌದ್ಧರು.[೧] ಪ್ರತಿಯೊಂದು ಹಳ್ಳಿಯಲ್ಲೂ ಸ್ಥಳೀಯ ಮಠವಿದೆ. ಇವು ಆಗಾಗ್ಗೆ ಪ್ರಾಚೀನ ಗೋಡೆ-ವರ್ಣಚಿತ್ರಗಳು ಮತ್ತು ವಿಗ್ರಹಗಳನ್ನು ಹೊಂದಿರುತ್ತವೆ.

ಆರ್ಥಿಕತೆ[ಬದಲಾಯಿಸಿ]

ಜಾನುವಾರು[ಬದಲಾಯಿಸಿ]

ಬಿಳಿ ಚಮರೀಮೃಗ.

ಜ಼ನ್‌ಸ್ಕಾರ್‌ನಲ್ಲಿ ಜಾನುವಾರುಗಳು, ಮತ್ತು ವಿಶೇಷವಾಗಿ ಚಮರೀಮೃಗ ಅತ್ಯಂತ ಮಹತ್ವದ್ದಾಗಿದೆ. ಭೂಮಿಯನ್ನು ಉಳುಮೆ ಮಾಡಲು, ಧಾನ್ಯವನ್ನು ಒಕ್ಕಲು, ಭಾರವಾದ ಹೊರೆಗಳನ್ನು ಸಾಗಿಸಲು (200 ಕೆ.ಜಿ. ವರೆಗೆ) ಚಮರೀಮೃಗಗಳನ್ನು ಬಳಸಲಾಗುತ್ತದೆ, ಮತ್ತು ಅವುಗಳ ಸಗಣಿ ಗೊಬ್ಬರವಾಗಿ ಕಾರ್ಯನಿರ್ವಹಿಸುವುದಲ್ಲದೆ ಈ ಪ್ರದೇಶದಲ್ಲಿ ಲಭ್ಯವಿರುವ ಏಕೈಕ ಬಿಸಿಮಾಡುವ ಇಂಧನವಾಗಿದೆ. ಅವು ಹಾಲಿನ ಪ್ರಮುಖ ಮೂಲ ಮತ್ತು ಕೆಲವೊಮ್ಮೆ, ಆದರೆ ವಿರಳವಾಗಿ, ಮಾಂಸದ ಮೂಲ ಕೂಡ. ಬಟ್ಟೆ, ರತ್ನಗಂಬಳಿಗಳು, ಹಗ್ಗಗಳು ಮತ್ತು ಬೆಡ್ ಕವರ್‌ಗಳನ್ನು ತಯಾರಿಸಲು ಚಮರೀಮೃಗ ತುಪ್ಪಳವನ್ನು ಬಳಸಲಾಗುತ್ತದೆ.

ಪ್ರವಾಸೋದ್ಯಮ[ಬದಲಾಯಿಸಿ]

ಪ್ರವಾಸೋದ್ಯಮವು ಇತ್ತೀಚಿನ ದಿನಗಳಲ್ಲಿ ಜ಼ನ್‍ಸ್ಕಾರ್ ಅನುಭವಿಸಿರುವ ಪ್ರಮುಖ ಬದಲಾವಣೆಯಾಗಿದೆ. ಈ ಪ್ರದೇಶವನ್ನು ವಿದೇಶಿಯರಿಗೆ ತೆರೆದಿದ್ದುದರಿಂದ ಶಾಲೆಗಳಿಗೆ ಹಣಕಾಸು ಒದಗಣೆ ಮತ್ತು ಮಠಗಳು ಹಾಗೂ ರಸ್ತೆಗಳ ಪುನಃಸ್ಥಾಪನೆಯಂತಹ ಪ್ರಯೋಜನಗಳನ್ನು ತಂದಿದೆ. ಆದರೆ ಈ ದುರ್ಬಲವಾದ ಪರ್ವತ ಪರಿಸರ ಮತ್ತು ಅದರ ಜನಸಂಖ್ಯೆಯ ಮೇಲೆ ಸಹ ಹಾನಿಯಾಗಿದೆ. 

ಜ಼ನ್‍ಸ್ಕಾರ್ ಪರ್ವತ ಶ್ರೇಣಿ

ಹೊರಗಿನ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Paddar Population". Census India. Retrieved 29 August 2020.