ವಿಷಯಕ್ಕೆ ಹೋಗು

ಜಯಶ್ರೀ ಗಡ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಯಶ್ರೀ ಗಡ್ಕರ್

(೨೧, ಫೆಬ್ರವರಿ, ೧೯೪೨-೨೯ ಆಗಸ್ಟ್, ೨೦೦೮)

೮೦ ರ ದಶಕದ ಸುಪ್ರಸಿದ್ಧ ನಿರ್ದೇಶಕ, ರಮಾನಂದ್ ಸಾಗರ್ ರ ಅತ್ಯಂತ ಜನಪ್ರಿಯ 'ಟೆಲಿವಿಶನ್ ಧಾರಾವಾಹಿ' ರಾಮಾಯಣ್ ನಲ್ಲಿ 'ಶ್ರೀರಾಮಚಂದ್ರನ ಮಾತೆ', 'ಕೌಸಲ್ಯಾ ದೇವಿ' ಯವರ ಅಭಿನಯ, ಹಾಗೂ ಸುಮಾರು ೫ ದಶಕಗಳ ಸುದೀರ್ಘ ಸಮಯದಲ್ಲಿ ಮರಾಠಿ, ಹಿಂದಿ, ಮತ್ತು ಕೆಲವು ಗುಜರಾಥಿ, ಭೋಜಪುರಿ,ಯೂ ಸೇರಿದಂತೆ, ಒಟ್ಟು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ನರ್ತಿಸಿ ತಮ್ಮ ಅಭಿನಯದಿಂದ ಅಸಂಖ್ಯಾತ ಚಿತ್ರರಸಿಕರ ಮನಸೂರೆಗೈದ ಪ್ರತಿಭಾನ್ವಿತ ಅಭಿನೇತ್ರಿ-ಜಯಶ್ರೀ ಗಡ್ಕರ್ ರವರು. ೬೦ ರ ದಶಕದಲ್ಲಿ ತನ್ನ ಅಪ್ರತಿಮ ಸೌಂದರ್ಯ, ಅಮೋಘ ನೃತ್ಯ ಪ್ರದರ್ಶನ, ಹಾಗೂ ಸೌಂದರ್ಯದಿಂದ ಮರಾಠಿ ಚಿತ್ರರಂಗದಲ್ಲಿ ಅಲೆಯೆಬ್ಬಿಸಿ ಮರೆಯಾದ ನಾಯಕಿ. ಗ್ರಾಮೀಣ ಮರಾಠಿ ತಮಷಾ ಪ್ರಧಾನ ಕೌಟುಂಬಿಕ, ವಿನೋದ, ರಹಸ್ಯಮಯ, ಐತಿಹಾಸಿಕ, ಹಾಗೂ ಪೌರಾಣಿಕ ಚಿತ್ರಗಳಲ್ಲೂ ತಮ್ಮ 'ಛಾಪ'ನ್ನು ಒತ್ತಿದ ನಟಿಯೆಂದು ಪ್ರಸಿದ್ಧರು.

ಬಾಲ್ಯ, ಪರಿವಾರ, ಹಾಗೂ ವೃತ್ತಿಜೀವನ[ಬದಲಾಯಿಸಿ]

'ಜಯಶ್ರೀ' ಯವರು, ೨೧, ಫೆಬ್ರವರಿ, ೧೯೪೨ ರಲ್ಲಿ, ಕಾರವಾರದಲ್ಲಿ ಜನಿಸಿದರು. ಅವರ ತಾಯಿ, 'ಗೃಹಿಣಿ'. ತಂದೆ, 'ತಬಲಾವಾದಕ.' ೫ ಜನ ಸಹೋದರಿಯರು. ಮಾತೃ ಭಾಷೆ, ಕೊಂಕಣಿ. ಕಾರವಾರದ ಹತ್ತಿರದ ಕಣಸ್ ಗಿರಿ ಎಂಬ ಗ್ರಾಮದ ಜಾತ್ರೆಗೆ ಹೋದಾಗ, ಅಲ್ಲಿ ಪ್ರದರ್ಶಿಸಲ್ಪಟ್ಟ ನಾಟಕಗಳನ್ನು ಬಹಳ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಮುಂದೆ, 'ಮುಂಬೈನ ರಾಮ್ ಮೋಹನ್ ಶಾಲೆಯ ಗ್ಯಾದರಿಂಗ್' ನಲ್ಲಿ ಭಾಗವಹಿಸಿ ನರ್ತಿಸಿದರು. ಮರಾಠಿ ಕವಿತೆ ಬರವಣಿಗೆಯ ಬಗ್ಗೆ ಅತೀವ ಆಸಕ್ತಿಯಿತ್ತು. ಸನ್, ೧೯೭೫ ರಲ್ಲಿ ಮರಾಠಿ ನಟ ಬಾಳ್ ಧುರಿ ಯವರ ಜೊತೆ ವಿವಾಹವಾದರು. ನಿಧಾನವಾಗಿ, ಪರಿವಾರದ ಜೊತೆ ಬೊಂಬಾಯಿಗೆ ಪಾದಾರ್ಪಣೆಮಾಡಿದರು. ಪ್ರಾರಂಭದಲ್ಲಿ ಹಳ್ಳಿಯ ಮರಾಠಿ ತಮಾಷ ನೃತ್ಯಗಳಲ್ಲಿ ಭಾಗವಹಿಸಿದ ನಂತರ, ಉತ್ತಮ ಪಾತ್ರಗಳು ಅವರನ್ನರಿಸಿ ಬಂದವು.

ಕೆಲವೇ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದರು[ಬದಲಾಯಿಸಿ]

 • ಪ್ರೈವೇಟ್ ಸೆಕ್ರಟೆರಿ, (ನಟ ಅಶೋಕ್ ಕುಮಾರ್ ನ ನಾಯಕಿಯಾಗಿ)
 • ಮದಾರಿ
 • ತುಳಸಿ ವಿವಾಹ್,
 • ಭಜರಂಗ್ ಬಲಿ,
 • ಸಾರಂಗಾ

'ಜಯಶ್ರೀ ಗಡ್ಕರ್', ನಟಿಸಿದ ಮೊಟ್ಟಮೊದಲ ಚಿತ್ರ, ಪ್ರಖ್ಯಾತ ಚಿತ್ರನಿರ್ಮಾಪಕ ವಿ. ಶಾಂತಾರಾಮ್ ರ, ಝನಕ್ ಝನಕ್ ಪಾಯಲ್ ಬಾಜೆ (೧೯೫೫), ಸಾಮೂಹಿಕ ನೃತ್ಯದಲ್ಲಿ ಒಬ್ಬರಾಗಿದ್ದರು. ಆಕೆಯ ಗುರು ನಾಟ್ಯವಿಶಾರದ ಗೋಪೀಕೃಷ್ಣ, ಚಿತ್ರದ ನಾಯಕಿ ಸಂಧ್ಯಾ. ಇದಾದ ಬಳಿಕ ಆಕೆಗೆ ಹಲವಾರು ಚಿತ್ರ ನಿರ್ಮಾಪಕರು 'ಜಯಶ್ರೀ ಗಡ್ಕರ್' ರವರಿಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಲು ಅನುವುಮಾಡಿಕೊಟ್ಟರು. 'ಜಯಶ್ರೀ' ರವರ ಅನುಪಮ ಸೌಂದರ್ಯ, ಮತ್ತು ನಟನಾ ಕೌಶಲ್ಯಗಳು ಅವರಿಗೆ ಅತ್ಯಂತ ಸಹಾಯಕಾರಿಯಾದವು. ಗಡ್ಕರಿಯವರು, ಆಗಿನ ಸಮಯದ ಮರಾಠಿ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯಾಗಿ ಮೆರೆದರು.

ಹೆಸರಾಂತ ಅಂದಿನ 'ಮರಾಠಿ ಚಲನಚಿತ್ರಗಳು'[ಬದಲಾಯಿಸಿ]

 • ಸಾಂಗತೆ ಐಕಾ
 • ಅಳಿಯ ಭೋಗಶಿ,
 • ಸವಾಲ್ ಮಾಝಾ ಐಕಾ
 • ಅವಘೂಚೀ ಸಂಸಾರ್
 • ಮಾನಿನಿ
 • ಸುಖ್ ಅಲೆ ಮಾಝಾ ದಾರಿ
 • ಮೋಹಿತ್ಯಾಂಚೀ ಮಂಜುಳಾ
 • ಸಾದಿ ಮಾಣಸೆ
 • ಥಾಂಬ್ ಲಕ್ಷ್ಮೀ ಕುಂಕು ಲಾವತೆ
 • ಮಾಹಿರ್ ಚೆ ಸಾಡಿ
 • ಏಕ್ ಗಾಂವ್ ಬಾರಾ ಭಾಂಗಡಿ
 • ವೈಜಯಂತ
 • ಡೊಂಗ್ರಾಚಿ ಮೈನ
 • ಕಸಿ ಕಾಯ್ ಪಟೀಲ್ ಬರಾ ಹೈ ಕಾ
 • ಸೂನ್ ಲಾಡ್ಕಿ ಯಾ ಘರ್ ಚಿ
 • ಸಾಸರ್ ಮಾಹೆರ್ ಇತ್ಯಾದಿ.

ಸಾಂಗ್ತೆ ಐಕಾ ಎನ್ನುವ ಚಿತ್ರ, ಮರಾಠಿ ಚಿತ್ರಮಂದಿರವೊಂದರಲ್ಲಿ ೧೩೨ ವಾರಗಳ ಕಾಲ ಪ್ರದರ್ಶಿಸಲ್ಪಟ್ಟಿತ್ತು.

'ಜಯಶ್ರೀ ರವರು,ಚಿತ್ರ ನಿರ್ಮಿತಿ ಹಾಗೂ ನಿರ್ದೇಶನದ ಕೆಲಸದಲ್ಲಿ[ಬದಲಾಯಿಸಿ]

 • ಸಾಸರ್ ಮಾಹೆರ್
 • ಅಸೀ ಅಸಾವೀ ಸಾಸೂ

ರಾಷ್ಟ್ರೀಯ ಪುರಸ್ಕಾರಗಳು-(ಸರ್ವೋತ್ಕೃಷ್ಟ ಅಭಿನೇತ್ರಿ)[ಬದಲಾಯಿಸಿ]

 • ಮಾನಿನಿ ಮತ್ತು ವೈಜಯಂತಾ ಚಿತ್ರಗಳು (೧೯೬೧)
 • ಸವಾಲ್ ಮಾಝಾ ಐಕಾ (೧೯೬೪)
 • ಸಾಥಿ ಮಾಣಸ್ (೧೯೬೫)
 • ಧೋಡಿ ಪವನ್ ಕಾಂಟಾಚಾ (೧೯೬೬)

ರಾಜ್ಯ ಪುರಸ್ಕಾರಗಳು-(ಸರ್ವೋತ್ಕೃಷ್ಟ ಅಭಿನೇತ್ರಿ)[ಬದಲಾಯಿಸಿ]

 • ಸಾಧಿ ಮಾಣಸ್ (೧೯೬೫)
 • ಪಾಟ್ ಲಾಚಿ ಸೂನ್ (೧೯೬೭)
 • ಥಾಂಬ್ ಲಕ್ಷ್ಮೀ ಕುಂಕೂ ಲಾವತೆ (೧೯೬೮)
 • ಘರ್ ಕುಲ್ ವಿಶೇಷ ಅಭಿನೇತ್ರಿ ಪುರಸ್ಕಾರ (೧೯೭೨)
 • ಘು ಗಂಗೇಚಾ ಕಾಟಿ (೧೯೭೫)
 • ವಿ.ಶಾಂತಾರಾಮ್ ಪುರಸ್ಕಾರ (೨೦೦೩)
 • ಚಿತ್ರ ಭೂಷಣ್ ಪ್ರಶಸ್ತಿ,(ಜೂನ್, ೨೦೦೮)

ಜಯಶ್ರೀ ಗಡ್ಕರ್ ಪ್ರತಿಷ್ಠಾನ್[ಬದಲಾಯಿಸಿ]

ಆರ್ಥಿಕ ಮುಗ್ಗಟ್ಟಿನಿಂದ, ಅನಾರೋಗ್ಯದಿಂದ ಬಳಲುತ್ತಿರುವ ಚಿತ್ರರಂಗದ ಕಲಾವಿದರಿಗೆ, ತಂತ್ರಜ್ಞರಿಗೆ ಆರ್ಥಿಕ, ಹಾಗೂ ವೈದ್ಯಕೀಯ ನೆರವನ್ನು ನೀಡುವ ಉದ್ದೇಶದಿಂದ 'ಜಯಶ್ರೀ ಗಡ್ಕರ್ ಪ್ರತಿಷ್ಠಾನ್' ಎಂಬ ಹೆಸರಿನ ಸಂಸ್ಥೆಯೊಂದರ ಸ್ಥಾಪನೆಯಾಯಿತು.

ಮರಾಠಿ ಭಾಷೆಯ ನಾಯಕ ನಟರೊಂದಿಗೆ ಅಭಿನಯ[ಬದಲಾಯಿಸಿ]

೬೦-೭೦ ರ ದಶಕದಲ್ಲಿ 'ಜಯಶ್ರೀ ಗಡ್ಕರ್' ರವರು ಪ್ರಖ್ಯಾತ ಮರಾಠಿ ನಾಯಕ ನಟರ ಜೊತೆ ಅಭಿನಯಿಸಿದರು. ಅವರ ಹೆಸರುಗಳು ಕೆಳಗಿವೆ.

 • ಸೂರ್ಯ ಕಾಂತ್,
 • ಚಂದ್ರ ಕಾಂತ್ ಗೋಖಲೆ,
 • ಅರುಣ್ ಸರ್ ನಾಯಕ್

ಜಯಶ್ರೀ ಗಡ್ಕರ್ ರವರ ಆತ್ಮ ಕಥೆ[ಬದಲಾಯಿಸಿ]

ಮರಣ[ಬದಲಾಯಿಸಿ]

ಕೆಲವು ಸಮಯದಿಂದ ರೋಗಪೀಡಿತರಾಗಿದ್ದ, ೬೬ ವರ್ಷ ವಯಸ್ಸಿನ ಜಯಶ್ರೀ ಗಡ್ಕರ್ , ೨೯ ಆಗಸ್ಟ್, ೨೦೦೮ ರಂದು ಮುಂಬೈನಲ್ಲಿ ಕಾಲವಶರಾದರು. ಆಕೆ, ಗಂಡ, ಮಗ, ಸೊಸೆ, ಹಾಗೂ ಅಸಂಖ್ಯಾತ ಚಿತ್ರ ರಸಿಕರನ್ನು ಅಗಲಿದ್ದಾರೆ. 'ಮುಂಬೈನ ಚಂದನವಾಡಿ ಸ್ಮಶಾನ'ದಲ್ಲಿ ಅವರ ಅಂತ್ಯ ಕ್ರಿಯೆಗಳು ಜರುಗಿದವು.