ಜಯಲಕ್ಷ್ಮಿ ಪಾಟೀಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಯಲಕ್ಷಿ ಪಾಟೀಲ್
ಜನನ
ವಿದ್ಯಾರ್ಹತೆಬಿ.ಎಸ್ಸಿ ಪದವಿ.
ಹಳೆ ವಿದ್ಯಾರ್ಥಿಬಿಜಾಪುರದ ಕೆ.ಸಿ.ಪಿ ಸೈನ್ಸ್ ಕಾಲೇಜ್
ಉದ್ಯೋಗನಟಿ, ಲೇಖಕಿ

ಜಯಲಕ್ಷ್ಮಿ ಪಾಟೀಲ್ ಒಬ್ಬ ನಟಿ, ರಂಗಭೂಮಿ ಕಲಾವಿದೆ ಮತ್ತು ಸ್ತ್ರೀವಾದಿ ಲೇಖಕಿ.

ಪ್ರಾಥಮಿಕ ಜೀವನ[ಬದಲಾಯಿಸಿ]

ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ, ನಿಂಬಾಳದವರು. ಗುಲ್ಬರ್ಗಾ ಜಿಲ್ಲೆಯ ಯಾದಗಿರಿಯಲ್ಲಿ ೦೮,ಜೂನ್,೧೯೬೮ ರಲ್ಲಿ,ಜನಿಸಿದರು. ಇವರದು ಮೂಲತ: ಕೃಷಿಕುಟುಂಬ. ತಂದೆ, 'ರಾಜಶೇಖರ ಅವರಾದಿ', ನಿವೃತ್ತ ಸರಕಾರಿ ವೈದ್ಯಾಧಿಕಾರಿ. ತಾಯಿ, 'ಸರೋಜಿನಿ ಅವರಾದಿ'.
ಜಯಲಕ್ಷ್ಮಿ ಪಾಟೀಲ್ ಬಿಜಾಪುರದ 'ಕೆ.ಸಿ.ಪಿ.ಸೈನ್ಸ್ ಕಾಲೇಜ್' ನಲ್ಲಿ ಬಿ.ಎಸ್ಸಿ ಪದವಿ ಗಳಿಸಿದರು. ಅಭಿನಯ, ಬರವಣಿಗೆ ಹಾಗೂ ಓದು, ಸಂಗೀತ ಹಾಗೂ ನೃತ್ಯಗಳು ಅವರ ಮುಖ್ಯ ಆಸಕ್ತಿಗಳು.

ಅಭಿನಯಿಸಿದ ನಾಟಕಗಳು[ಬದಲಾಯಿಸಿ]

 • ನಾ ಕೊಂದ ಹುಡುಗ - (ರಚನೆ, ನಿರ್ದೇಶನ: ಸಾ ದಯಾ) ಪಾತ್ರ: ಆಕೆ
 • ಒಸರ್ - (ತುಳು ನಾಟಕ ರಚನೆ ಮತ್ತು ನಿರ್ದೇಶನ: ಸಾ.ದಯಾ)
 • ಮಹಾಮಾಯಿ - (ರಚನೆ: ಡಾ.ಚಂದ್ರಶೇಖರ ಕಂಬಾರ,ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್) ಪಾತ್ರ: ಗಿರಿ ಮಲ್ಲಿಗೆ
 • ಶಾಂಡಲ್ಯ ಪ್ರಹಸನ - (ಮೂಲ: ಸಂಸ್ಕೃತದ ಭಗವತ್ ಅಜ್ಜುಕಿಯಂ. ಕನ್ನಡ ರಚನೆ, ಕೆ.ವಿ.ಸುಬ್ಬಣ್ಣ ನಿರ್ದೇಶನ: ಡಾ.ಭರತ್ ಕುಮಾರ್ ಪೊಲಿಪು) ಪಾತ್ರ: ವಸಂತ ಸೇನೆ
 • ಮಂಥರಾ - (ರಚನೆ: ಎಚ್.ಎಸ್.ವೆಂಕಟೇಶಮೂರ್ತಿ, ನಿರ್ದೇಶನ: ಜಯಲಕ್ಷ್ಮಿ ಪಾಟೀಲ್) ಪಾತ್ರ: ಮಂಥರೆ
 • ಆಕಾಶ ಬುಟ್ಟಿ - (ರಚನೆ: ಜಯಂತ ಕಾಯ್ಕಿಣಿ, ನಿರ್ದೇಶನ: ಸಿ.ಬಸವಲಿಂಗಯ್ಯ) ಪಾತ್ರ: ತಾರಾಬಾಯಿ
 • ಜೋಕುಮಾರಸ್ವಾಮಿ - (ರಚನೆ: ಚಂದ್ರಶೇಖರ ಕಂಬಾರ,ನಿರ್ದೇಶನ: ಬಿ.ವಿ.ಕಾರಂತ್) ಪಾತ್ರ: ಬಸ್ಸಿ
 • ಸತ್ತವರ ನೆರಳು - (ರಚನೆ: ಶ್ರೀರಂಗ ನಿರ್ದೇಶನ: ಬಿ.ವಿ.ಕಾರಂತ) ಪಾತ್ರ: ಅವ್ವನವರು
 • ಮದುವೆ ಹೆಣ್ಣು - (ರಚನೆ: ಎಚ್.ಎಸ್.ಶಿವಪ್ರಕಾಶ್ ನಿರ್ದೇಶನ: ಸುರೇಶ್ ಆನಗಳ್ಳಿ) ಪಾತ್ರಗಳು: ಅಜ್ಜಿ, ತಾಯಿ, ಸಂಗಡಿಗರು
 • ಬೆರಳ್ ಗೆ ಕೊರಳ್ - (ರಚನೆ: ಕುಮೆಂಪು,ನಿರ್ದೇಶನ: ಸಿ.ಬಸವಲಿಂಗಯ್ಯ) ಪಾತ್ರ: ಏಕಲವ್ಯನ ತಾಯಿ
 • ಚಂದ್ರಹಾಸ - (ರಚನೆ: ಕುವೆಂಪು, ನಿರ್ದೇಶನ: ಪ್ರಮೋದ್ ಶಿವ್ಗಾಂ) ಪಾತ್ರಗಳು: ಚಂದ್ರಹಾಸನ ಅಜ್ಜಿ ಮತ್ತು ಸಖಿ
 • ಎದೆಗಾರಿಕೆ - (ರಚನೆ: ಅಗ್ನಿ ಶ್ರೀಧರ್,ನಿರ್ದೇಶನ: ಸಿ.ಬಸವಲಿಂಗಯ್ಯ) ಪಾತ್ರ: ಡೆತ್
 • ತಾವ್ರೆ ಕೆರೇಲಿ ತಾಳೀಕಟ್ಟೋಕೂಲಿನೇ - (ರಚನೆ: ಟಿ.ಪಿ.ಕೈಲಾಸಂ ನಿರ್ದೇಶನ: ಸಿ.ಬಸವಲಿಂಗಯ್ಯ) ಪಾತ್ರಗಳು: ಸಾತು ಮತ್ತು ಪಾತುವಿನ ಅಮ್ಮಂದಿರು.
 • ಬೈಸಿಕಲ್ ಧೀವ್ಸ್ - (ಮೂಲ ಸಿನಿಮಾವನ್ನು ಕನ್ನಡಕ್ಕೆ ತಂದವರು : ರ.ಕೆ.ವಿ.ಸುಬ್ಬಣ್ಣ, ನಿರ್ದೇಶನ: ಶ್ರೀಧರಮೂರ್ತಿ)
 • ಆಧೆ ಅಧೂರೆ - (ಮೂಲ ಹಿಂದಿ ನಾಟಕ ರಚನೆ: ಮೋಹನ್ ರಾಕೇಶ್, ಕನ್ನಡಕ್ಕೆ ಸಿದ್ದಲಿಂಗಪಟ್ಟಣಶೆಟ್ಟಿ, ನಿರ್ದೇಶನ: ಐ.ಅಮ್,ದುಂಡಶಿ) ಪಾತ್ರ: ಆಕೆ(ಸಾವಿತ್ರಿ)
 • ಅಗ್ನಿ ಮತ್ತು ಮಳೆ - (ರಚನೆ: ಡಾ.ಗಿರೀಶ್ ಕಾರ್ನಾಡ್, ನಿರ್ದೇಶನ: ಬಸವಲಿಂಗಯ್ಯ) ಪಾತ್ರ:ವಿಶಾಖ
 • ಅಮ್ಮಾವ್ರ ಗಂಡ - (ರಚನೆ: ಟಿ.ಪಿ.ಕೈಲಾಸಂ, ನಿರ್ದೇಶನ: ಕಿರಣ ವಟಿ) ಪಾತ್ರ: ಸರೋಜ
 • ಮ್ಯಾಕ್ಬೆತ್ ಆಟ - (ರಚನೆ: ಎಚ್.ಎಸ್.ಶಿವಪ್ರಕಾಶ್, ನಿರ್ದೇಶನ: ಸುರೇಶ್ ಆನಗಳ್ಳಿ) ಪಾತ್ರ: ಮಾಟಗಾತಿ
 • ಅಪ್ಪ - (ರಚನೆ: ಚಂದ್ರಶೇಖರ ಪಾಟೀಲ, ನಿರ್ದೇಶನ: ಅಶೋಕ ಬಾದರದಿನ್ನಿ) ಪಾತ್ರ: ಆಕೆ
 • ಮೌನ - (ರಚನೆ, ನಿರ್ದೇಶನ: ನಾಗರಾಜ ಸೋಮಯಾಜಿ) ಪಾತ್ರ: ಅಜ್ಜಿ

ಹಾಗೂ ಇನ್ನಿತರ ನಾಟಕಗಳು.

ನಾಟಕ ನಿರ್ದೇಶನ[ಬದಲಾಯಿಸಿ]

 • ಅಮ್ಮ - (ರಚನೆ: ಜಯಲಕ್ಷ್ಮಿ ಪಾಟೀಲ್)
 • ಪುಷ್ಪ ರಾಣಿ - (ರಚನೆ: ಡಾ.ಚಂದ್ರಶೇಖರ ಕಂಬಾರ)
 • ಢಾಣಾ ಢಂಗುರ - (ರಚನೆ:ವೈದೇಹಿ)
 • ಮಂಥರಾ - (ರಚನೆ: ಎಚ್.ಎಸ್.ವೆಂಕಟೇಶಮೂರ್ತಿ)
 • ನೀಲ ಕಡಲ ಬಾನು - (ರೂಪಕ ರಚನೆ: ಅವಿನಾಶ್ ಕಾಮತ್)

ಹೆಜ್ಜೆ ತಂಡದ ಸ್ಥಾಪನೆ[ಬದಲಾಯಿಸಿ]

'ಹೆಜ್ಜೆ ತಂಡ'ದ ಮೊದಲ ಪ್ರಯೋಗವಾಗಿ : ಚಂದ್ರಶೇಖರ ಪಾಟೀಲರ ಅಸಂಗತ ನಾಟಕ, 'ಅಪ್ಪ' (ನಿರ್ದೇಶನ: ಅಶೋಕ ಬಾದರದಿನ್ನಿ).
೨೧, ಜೂನ್, ೨೦೧೪ ರಲ್ಲಿ, 'ಮುಂಬಯಿನ ಶಬ್ದಗುಚ್ಛ ತಂಡ'ವನ್ನು ಬೆಂಗಳೂರಿಗೆ ಆಹ್ವಾನಿಸಿ, ಅವರ 'ಮಾಯಾವಿ ಸರೋವರ', ನಾಟಕ ಪ್ರದರ್ಶನ ಏರ್ಪಡಿಸುವ ಮೂಲಕ, 'ಹೆಜ್ಜೆ ತಂಡ'ದ ಆಶಯವನ್ನು ಮುಂದುವರಿಸಲಾಯಿತು.

ಚಲನಚಿತ್ರಾಭಿನಯ[ಬದಲಾಯಿಸಿ]

 • ಬನದ ನೆರಳು’(ನಿರ್ದೇಶನ: ಉಮಾಶಂಕರ ಸ್ವಾಮಿ) ಶಿವಮ್ಮ ನಾಯಕನ ಅತ್ತೆ - ರಾಜ್ಯ ಪ್ರಶಸ್ತಿ ವಿಜೇತ ಚಿತ್ರ [೧]
 • ಪುಟಾಣಿ ಪಾರ್ಟಿ'(ನಿ.ರಾಮಚಂದ್ರ ಪಿ.ಎನ್)ನ್ಯಾನ್ಸಿ, ಪಂಚಾಯತಿ ಸದಸ್ಯೆ,ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಚಿತ್ರ[೨]
 • ಪುನೀತ್,’(ನಿ.ನೀಲ್ ಕಮಲ್), ಪಾತ್ರ: ನಾಯಕಿಯ ತಾಯಿ
 • 'ಸಕ್ಕರೆ'(ನಿ.ಅಭಯ ಸಿಂಹ), ನಾಯಕಿಯ ತಾಯಿ[೩]
 • ಸಲಿಲ (ನಿರ್ದೇಶನ: ಶ್ರೀನಾಥ್ ವಸಿಷ್ಠ)
 • ಮೂರು ಗಂಟೆ ಮೂವತ್ತು ದಿನ ಮೂವತ್ತು ಸೆಕೆಂಡು (ನಿರ್ದೇಶನ: ಮಧುಸೂದನ್)
 • 9 ಸುಳ್ಳು ಕಥೆಗಳು (ನಿರ್ಧೇಶನ: ಮಂಜುನಥ್ ಮುನಿಯಪ್ಪ)
 • ಸಕುಟುಂಬ ಸಮೇತ (ನಿರ್ದೇಶನ: ರಾಹುಲ್ ಪಿ. ಕೆ)
 • ಬ್ಯಾಚುಲರ್ ಪಾರ್ಟಿ (ನಿರ್ದೇಶನ: ಅಭಿಜಿತ್ ಮಹೇಶ್)

ಕನ್ನಡ ಚಲನಚಿತ್ರಕ್ಕಾಗಿ ಗೀತ ರಚನೆ[ಬದಲಾಯಿಸಿ]

೨೦೧೯ರಲ್ಲಿ ಬಿಡಿಗಡೆಯಾದ 'ಕಥಾ ಸಂಗಮ' ಚಿತ್ರಕ್ಕಾಗಿ, 'ಊರೆಂದರೇನು ಶಿವನ' ಗೀತೆಯನ್ನು ರಚಿಸಿದ್ದಾರೆ.

ಅಭಿನಯಿಸಿದ ಕಿರುಚಿತ್ರಗಳು[ಬದಲಾಯಿಸಿ]

 • ಎರ್ಡಕ್ಕೆ ಹೋಗದೆಲ್ಲಿ ಮತ್ತು ಇನ್ನೂ ಮೂರು ಕಿರು ಚಿತ್ರಗಳು - (ನಿರ್ದೇಶನ: ಬಸು)
 • ಟಿಕೆಟ್ - (ನಿರ್ದೇಶನ: ಅದ್ವೈತ ಗುರುಮೂರ್ತಿ)
 • ಫ್ಲವರಿಂಗ್ ಕ್ಯಾಕ್ಟಸ್ - (ನಿರ್ದೇಶನ: ಅದ್ವೈತ ಗುರುಮೂರ್ತಿ)
 • ಹಸೀನಾ - (ನಿರ್ದೇಶನ: ಪಿ.ಶೇಶಾದ್ರಿ ಮತ್ತು ವಿನೋದ್ ಧೊಂಡಾಳೆ)
 • ಪ್ರೀತಿ ಪ್ರೇಮ - (ನಿರ್ದೇಶನ: ರವಿಕಿರಣ್)
 • ಪ್ರೀತಿ ಪ್ರೇಮ ಸಂಜೆಯ ಹೆಜ್ಜೆಗಳು - (ನಿರ್ದೇಶನ: ಮಾಧುರಿ ಶಿವಣಗಿ)
 • ಪ್ರೀತಿ ಪ್ರೇಮ - (ನಿರ್ದೇಶನ: ವರ್ಷ ಕೃಷ್ಣ)
 • ಪ್ರೀತಿ ಪ್ರೇಮ - (ನಿರ್ದೇಶನ: ಕಲಾಗಂಗೋತ್ರಿ ಮಂಜು)
 • ಫಸ್ಟ್ ಕೇಸ್ ಬೆಂಗಾಲಿ ಕಿರು ಚಿತ್ರ - (ನಿರ್ದೇಶನ: ಇಷಿಕಾ ಬಗ್ಚಿ)
 • ಪಾರಿವಾಳ (ನಿರ್ದೇಶನ: ಜೆರಿನ್ ಚಂದನ್)
 • ದೂರಿ ದೂರಿ ದುಗ್ಗಾಲಮ್ಮ - (ನಿರ್ದೇಶನ: ಗೀತಾ ಬಿ ಯು)
 • ಮುಪ್ಪು (ನಿರ್ದೇಶನ: ಗಿರೀಶ್ ಕಾಸರವಳ್ಳಿ)
 • ಜೇವ ಸೆಲೆ (ನಿರ್ದೇಶನ: ಸುಷ್ಮಾ ಭಾರದ್ವಜ್)

ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯ[ಬದಲಾಯಿಸಿ]

 • ಸೈಲೆನ್ಸ್ ಪ್ಲೀಸ್ - (ನಿರ್ದೇಶನ: ಉಮೇಶ್ ಬಾದರದಿನ್ನಿ)
 • ಮೌನ ರಾಗ - (ನಿರ್ದೇಶನ: ಪಿ.ಶೇಶಾದ್ರಿ, ಸಂಚಿಕೆ ನಿರ್ದೇಶನ: ವಿನೋದ್ ಧೋಂಡಾಳೆ)
 • ಪರಿಸ್ಥಿತಿಯ ಗೊಂಬೆ - (ನಿರ್ದೇಶನ: ಕತ್ಲು ಸತ್ಯ)
 • ಕದನ - (ನಿರ್ದೇಶನ: ರಮೇಶ್ ಕೃಷ್ಣ)
 • ಸ್ವಾಭಿಮಾನ - (ನಿರ್ದೇಶನ: ನಂದಿತಾ ಯಾದವ್)
 • ಕಸ್ತೂರಿ ನಿವಾಸ - (ನಿರ್ದೇಶನ: ಮೋಹನ್ ಸಿಂಗ್)
 • ಕಿಚ್ಚು - (ನಿರ್ದೇಶನ: ಕೆ.ಚೈತನ್ಯ, ಸಂಚಿಕೆ ನಿರ್ದೇಶನ:ತಿಲಕ್)
 • ಬದುಕು - (ನಿರ್ದೇಶನ: ರಾಜೇಂದರ್ ಸಿಂಗ್)
 • ಮನೆಯೊಂದು ಮೂರು ಬಾಗಿಲು - (ನಿರ್ದೇಶನ: ಸಕ್ರೆ ಬೈಲು ಶ್ರೀನಿವಾಸ)
 • ಮುಗಿಲು - (ನಿರ್ದೇಶನ: ಕೆ ಚೈತನ್ಯ, ಸಂಚಿಕೆ ನಿರ್ದೇಶನ: ತಿಲಕ್)
 • ಮುಕ್ತ ಮುಕ್ತ - (ನಿರ್ದೇಶನ: ಟಿ.ಎನ್.ಸೀತಾರಾಂ, ಸಂಚಿಕೆ ನಿರ್ದೇಶನ: ವಿನೋದ್ ಧೋಂಡಾಳೆ)
 • ರಾಧಾ ಕಲ್ಯಾಣ (ಪ್ರಶಾಂತ್ )
 • ಬೆಳಕು - (ನಿರ್ದೇಶನ: ರವಿಕಿರಣ್, ಸಂಚಿಕೆ ನಿರ್ದೇಶನ: ಶಶಿಕಿರಣ್)
 • ಮಹಾಪರ್ವ - (ನಿರ್ದೇಶನ: ಟಿ.ಎನ್.ಸೀತಾರಾಂ)

ಜಾಹಿರಾತುಗಳಲ್ಲಿ ನಟನೆ[ಬದಲಾಯಿಸಿ]

ಕನ್ನಡದ ಜಾಹಿರಾತುಗಳಲ್ಲಿ  ಅಭಿನಯಿಸಿದ್ದಾರೆ. ಅಲ್ಲದೇ ಅನೇಕ ಜಾಹಿರಾತುಗಳಿಗೆ ಕನ್ನಡ ಅನುವಾದವನ್ನು ಮಾಡಿಕೊಟ್ಟಿದ್ದಾರೆ.

ಬರವಣಿಗೆ[ಬದಲಾಯಿಸಿ]

 • ನೀಲ ಕಡಲ ಭಾನು ಕವನ ಸಂಕಲನ
 • ಹನಿಯೊಡೆಯುತಿದೆ ಕವನ ಸಂಕಲನ
 • ಮುಕ್ಕು ಚಿಕ್ಕಿಯ ಕಾಳು ಕಾದಂಬರಿ
 • ಬೇಬಿ ಅನುವಾದಿತ ನಾಟಕ. ಮರಾಠಿ ಮೂಲ: ವಿಜಯ್ ತೆಂಡೂಲ್ಕರ್
 • ಹೇಳತೇವ ಕೇಳ (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕ) ಸಂಪಾದಕಿ[೪]
 • ಕನ್ನಡದ ಖ್ಯಾತ ಪತ್ರಿಕೆಗಳ ಯುಗಾದಿ ಮತ್ತು ದೀಪಾವಳಿ ವಿಶೇಷಾಂಕಗಳಲ್ಲಿ, ಕೆಲವು ಸಂಪಾದಿತ ಸಂಕಲನಗಳಲ್ಲಿ ಬಿಡಿ ಕಥೆಗಳು, ಕವಿತೆಗಳು, ಲೇಖನಗಳು ಪ್ರಕಟಗೊಂಡಿವೆ.
 • ಕೇರಳ ರಾಜ್ಯ ಅಕಾಡೆಮಿ ಮತ್ತು ಪಂಪ (People for performing Arts & more) ಸಂಸ್ಥೆಯ ಸಂಯುಕ್ತ ಆಯೋಜನೆಯಲ್ಲಿ ಕೇರಳದ ಚೆಂಗನೂರಿನಲ್ಲಿ ನಡೆದ 'SIWI-2014'(South India Writers Ensemble) ಸಂಸ್ಥೆಗಳ ಆಮಂತ್ರಣದ ಮೇರೆಗೆ,೨೦೧೪ ರ ಜುಲೈ,೨೪,೨೫ ರಂದು ಕವಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ಸಂಘಟನೆ[ಬದಲಾಯಿಸಿ]

 • ಈ ಹೊತ್ತಿಗೆ[೫] ಕನ್ನಡ ಸಾಹಿತ್ಯ ಕೃತಿಗಳ ಚರ್ಚೆಯ ಮಾಸಿಕ ಕಾರ್ಯಕ್ರಮದ ಸಂಘಟಕಿ. ಪ್ರತಿ ತಿಂಗಳ ಮೂರನೆಯ ರವಿವಾರದಂದು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತದೆ. 'ಈ ಹೊತ್ತಿಗೆ' ಕಾರ್ಯಕ್ರಮದಲ್ಲಿ ಆ ತಿಂಗಳ ಆಯ್ದ ಪುಸ್ತಕವನ್ನು ಓದಿದವರಷ್ಟೇ ಚರ್ಚೆಯಲ್ಲಿ ಭಾಗವಹಿಸುವುದು ಅದರ ವಿಶೇಷತೆ.

೨೦೧೬ರಿಂದ ಈ ಹೊತ್ತಿಗೆಯು ಉದಯೊನ್ಮುಖ ಕಥೆಗಾರರಿಗಾಗಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಕಥಾ ಸ್ಪರ್ಧೆಗಳನ್ನು ಏರ್ಪಡಿಸುತ್ತಾ, ಅತ್ತ್ಯುತ್ತಮ ಅಪ್ರಕಟಿತ ಕಥಾ ಸಂಕಲನಕ್ಕೆ ೨೦೧೯ರಿಂದ ಕಥಾಪ್ರಶಸ್ತಿ ಹಾಗೂ ೨೦೨೨ರಿಂದ ಅತ್ತ್ಯುತ್ತಮ ಅಪ್ರಕಟಿತ ಕವನ ಸಂಕಲನಕ್ಕೆ ಕಾವ್ಯಪ್ರಶಸ್ತಿಯನ್ನು ನೀಡುತ್ತಿದೆ.

ಅಲ್ಲದೆಯೇ ಅನೇಕ ಸಾಹಿತ್ಯಿಕ ಗೋಷ್ಠಿಗಳನ್ನು ಹಮ್ಮಿಕೊಳ್ಳುತ್ತಾ ಮುಂದುವರೆದಿರುವ ಈ ಹೊತ್ತಿಗೆಯು ೨೦೨೦ರಲ್ಲಿ online ನಲ್ಲಿ ೭೫ಕ್ಕೂ ಹೆಚ್ಚು ಕನ್ನಡ ಕತೆಗಾರ್ತಿಯರ ಕಥೆಗಳನ್ನು ಚರ್ಚೆ ಮತ್ತು ವಿಶ್ಲೇಷಣೆ ಮಾಡಿದೆಯಲ್ಲದೇ, ಅದೇ ವರ್ಷ ಏಷಿಯಾ, ಯುರೋಪ್, ಆಸ್ಟ್ರೀಲಿಯಾ, ಅಮೆರಿಕಾ - ಹೀಗೆ ನಾಲ್ಕು ಖಂಡಗಳ ಅನೇಕ ದೇಶಗಳಲ್ಲಿ ವಾಸವಿರುವ ಮತ್ತು ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳಿನಾಡು ರಾಜ್ಯಗಳಲ್ಲಿ ವಾಸವಿರುವ, ಕರ್ನಾಟಕದ ಒಂಬತ್ತು ಜಿಲ್ಲೆಗಳಲ್ಲಿ ನೆಲೆಗೊಂಡ ಕವಿಗಳು ಮತ್ತು ಗಾಯಕರನ್ನು ಆಹ್ವಾನಿಸಿ ನವರಾತ್ರಿಯ ಒಂಬತ್ತೂ ದಿನಗಳಂದು ನಿತ್ಯ ಎರಡು ಕವಿಗೋಷ್ಠಿಗಳನ್ನು ಏರ್ಪಡಿಸಿ ಯಶಸ್ವಿಯಾಗಿದೆ. ಈ ನವರಾತ್ರಿ ಕಾವ್ಯೋತ್ಸವದಲ್ಲಿ ೧೫೦ಕ್ಕೂ ಜನ ಕವಿಗಳೂ, ೫೦ ಜನ ಗಾಯಕರೂ ಭಾಗವಹಿಸಿದ್ದರು.

 • ಜನದನಿ,[೬] ಅತ್ಯಾಚಾರಗಳ, ಲೈಂಗಿಕ ದೌರ್ಜನ್ಯಗಳ ಹಾಗೂ ಲೈಂಗಿಕ ಆಸಕ್ತಿಯನ್ನು ಬಿಂಬಿಸುವ ಅಸಹಜ ನಡವಳಿಕೆಗಳ ಹಿಂದಿನ ಕಾರಣಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಮುಖ್ಯವಾಗಿ ಇಂಥ ಘಟನೆಗಳು ಆಗದಿರುವಂತೆ ತಡೆಯುವ ಬಗ್ಗೆ, ಸಮಾಜದಲ್ಲಿನ ಎಲ್ಲಾ ವರ್ಗಗಳ ಜನರ ಮನಗಳಲ್ಲಿ, ಜಾಗೃತಿ ಮೂಡಿಸುವುದು ಜನದನಿಯ ಪ್ರಥಮ ಧ್ಯೇಯವಾಗಿದೆ . 2012ರ ಡಿಸೆಂಬರ್‍‍ 16ರಂದು ದೆಹಲಿಯಲ್ಲಿ ನಿರ್ಭಯ ಅತ್ಯಾಚಾರ ಪ್ರಕರಣ ಘಟಿಸಿದಾಗ, ಅತ್ಯಾಚಾರದ ವಿರುದ್ಧ ದನಿ ಎತ್ತಿದ್ದ, ಕನ್ನಡ ರಂಗಭೂಮಿ ಮತ್ತು ಕಿರುತೆರೆಯ ಅಭಿನೇತ್ರಿ, ಬರಹಗಾರ್ತಿ ಶ್ರೀಮತಿ ಜಯಲಕ್ಷ್ಮೀ ಪಾಟೀಲ್, ಮುಂದೆ ಅಂತರ್ಜಾಲ ಸಾಮಾಜಿಕ ತಾಣವಾದ ‘ಫೇಸ್‍ಬುಕ್‍’ನ ಸ್ನೇಹಿತರಲ್ಲಿ ಮನವಿ ಮಾಡಿಕೊಂಡು, ತನ್ನ ಮನವಿಗೆ ಸ್ಪಂದಿಸಿದ ಕೆಲವು ಸಹೃದಯಿ ಸ್ನೇಹಿತರೊಂದಿಗೆ ‘ಜನದನಿ’ಯನ್ನು ಹುಟ್ಟುಹಾಕಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರದ ಅನೇಕ ಊರುಗಳ ಶಾಲಾ ಕಾಲೇಜು, ಸಂಸ್ಥೆ, ಸಂಘಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಮುನ್ನಡೆದಿರುವ ಜನದನಿಯು, ಹೈಸ್ಕೂಲು ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಪ್ರಬಂಧ, ಚಿತ್ರಕಲೆ ಮತ್ತು ಚರ್ಚಾಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ೨೦೨೦ರ ಕೋವಿಡ್ ಆತಂಕದ ಸಮಯದಲ್ಲಿ ವೈದ್ಯಕೀಯ ಕ್ಷೇತ್ರ, ಕಾನೂನು, ಪೊಲೀಸ್, ಮನೋಚಿಕಿತ್ಸೆ, ಸಾಹಿತ್ಯ, ಸಿನಿಮಾ, ರಂಗಭೂಮಿ ಕ್ಷೇತ್ರಗಳ ದಿಗ್ಗಜರನ್ನು ಆಹ್ವಾನಿಸಿ ಅವರೊಂದಿಗೆ ಆನ್ಲೈನ್ ಮೂಲಕ ಸಂವಾದ ನಡೆಸಿ, ಜನತೆಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ವ್ಯಾಪಕತೆ ಮತ್ತು ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಪ್ರಶಸ್ತಿ, ಪುರಸ್ಕಾರಗಳು[ಬದಲಾಯಿಸಿ]

 • ಕನ್ನಡ ಸಾಹಿತ್ಯ ಪರಿಷತ್ತಿನ, ೨೦೨೩ನೇ ಸಾಲಿನ ಪದ್ಮಭೂಷಣ ಬಿ. ಸರೋಜಾದೇವಿ ಸಾಹಿತ್ಯ ದತ್ತಿ ನಿಧಿ ಪ್ರಶಸ್ತಿ
 • ಸ್ಯಾಂಡಲ್ ವುಡ್ ಫಿಲ್ಮ್ಸ್ ಕೊಡಮಾಡುವ ೨೦೨೨ನೇ ಸಾಲಿನ ಸೇವಾರತ್ನ ಪ್ರಶಸ್ತಿ
 • 'ಮಾಟುಂಗಾ ಕರ್ನಾಟಕ ಸಂಘ ಮುಂಬಯಿ,'ಆಯೋಜಿಸಿದ,'ಅಖಿಲಭಾರತೀಯ ಕುವೆಂಪು ನಾಟಕ ಸ್ಪರ್ಧೆ'ಯಲ್ಲಿ ನಾ ಕೊಂದ ಹುಡುಗ ನಾಟಕದಲ್ಲಿನ ಅಭಿನಯಕ್ಕಾಗಿ, ಪ್ರತಿಷ್ಠಿತ ಭಾರತಿ ಕೊಡ್ಲೇಕರ್ ಪ್ರಶಸ್ತಿ.
 • ಒಸರ್ ತುಳು [೭] ನಾಟಕದಲ್ಲಿ ಅಭಿನಯ ಶಾರದೆ ಪ್ರಶಸ್ತಿ'.
 • ಹಕ್ಕಿ ಕವನಕ್ಕೆ 'ಮುಂಬಯಿ ಬೆಳಕು ಕನ್ನಡ ಬಳಗ' ಡೊಂಬಿವಲಿ ಸಂಸ್ಥೆಯಿಂದ 'ಡಾ.ದ.ರಾ.ಬೇಂದ್ರೆ ಪ್ರಶಸ್ತಿ'.
 • ಸಮುದ್ರ ಹನಿಗವನ, ರೋಟರಿ ಕ್ಲಬ್ ಕೋಟ, ಸಾಲಿಗ್ರಾಮದಿಂದ 'ಅತ್ಯುತ್ತಮ ಹನಿಗವನ ಪ್ರಶಸ್ತಿ'.
 • ನೀಲ ಕಡಲ ಬಾನು ಕವಿತೆಗೆ ಅಥಣಿಯ ವಿಮೋಚನಾ ಪ್ರಕಾಶನದವರ 'ದು.ನಿಂ.ಬೆಳಗಲಿ ಪ್ರಶಸ್ತಿ'.
 • ನನ್ನೊಳು ನೀ ಕವನಕ್ಕೆ'೨೦೦೭ರ ಸಂಕ್ರಮಣ ಸಾಹಿತ್ಯ ಸ್ಪರ್ಧೆ' ಅತ್ಯುತ್ತಮ ಕವನ ಪ್ರಶಸ್ತಿ.
 • ಕತೆಯೊಂದಕ್ಕೆ ಮಾಟುಂಗಾ ಕರ್ನಾಟಕ ಸಂಘ ಮುಂಬಯಿಯ'ಸ್ನೇಹ ಸಂಬಂಧ ಸಾಹಿತ್ಯ ಸ್ಪರ್ಧೆ'ಯಲ್ಲಿ ಎರಡನೇಯ ಅತ್ಯುತ್ತಮ ಕಥಾ ಪ್ರಶಸ್ತಿ.

ಉಲ್ಲೇಖಗಳು[ಬದಲಾಯಿಸಿ]

 1. "ಸೆನೆಟ್ ಭವನದಲ್ಲಿ ಅ.11 ರಂದು ' ಬನದ ನೆರಳು' ಪ್ರದರ್ಶನ, Just kannada, Dassera, 2013". Archived from the original on 2016-03-04. Retrieved 2014-07-30.
 2. 'ಪುಟಾಣಿ ಪಾರ್ಟಿ' (The Kid Gang)
 3. Review: Sakkare is a sweet movie
 4. ಈ ಹೊತ್ತಿಗೆಯಲಿ ರೂಪದರ್ಶಿ,ಅವಧಿ[ಶಾಶ್ವತವಾಗಿ ಮಡಿದ ಕೊಂಡಿ]
 5. ಈ ಹೊತ್ತಿಗೆ'ಕನ್ನಡ ಸಾಹಿತ್ಯ ಕೃತಿಗಳ ಚರ್ಚೆಯ ಮಾಸಿಕ ಕಾರ್ಯಕ್ರಮ
 6. ಜನದನಿ,30-07-2016, ಜನದನಿಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ, ಜಯಲಕ್ಷ್ಮಿ ಪಾಟೀಲ್
 7. 'ಗುಜರಿ ಅಂಗಡಿ', ಒಸರ್ ತುಳು ನಾಟಕ, ಅಭಿನಯ ಶಾರದೆ ಪ್ರಶಸ್ತಿ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]