ಜಮ್ ಸೆಟ್ ಜಿ ಜೀಜೀಭಾಯ್
(೧೭೮೩-೧೮೫೯)
'ಜಮ್ ಸೆಟ್ ಜಿ ಜೀಜೀಭಾಯ್', ರವರು [೧] ೧೭೮೩ ರಲ್ಲಿ, ಮುಂಬಯಿನ ಒಂದು ಸುಸಂಸ್ಕೃತ ಪಾರ್ಸಿ ಬಡಪರಿವಾರದಲ್ಲಿ ಜನಿಸಿದರು. ಜೀಜೀಭಾಯ್ ರವರ ತಂದೆ ತಾಯಿ, ಇವರು ಹುಟ್ಟಿದ ಸ್ವಲ್ಪ ಸಮಯದಲ್ಲೇ ತೀರಿಕೊಂಡರು. ಅನಾಥ ಮಗುವಿನ ಲಾಲನೆಪಾಲನೆ, ಅವರ ಸಂಬಂಧಿಕರ ಮನೆಯಲ್ಲಿ ನಡೆಯಿತು.೧೬ ನೆಯವಯಸ್ಸಿನಲ್ಲಿ ಅವರಿಗೆ, ಸ್ವಲ್ಪ ಪಾಠಪ್ರವಚನಗಳನ್ನು ಮನೆಯಲ್ಲೇ ಹೇಳಿಕೊಡಲಾಯಿತು.
ಮೊದಲ ಬಾರಿ ಕಲ್ಕತ್ತಾಕ್ಕೆ ಭೇಟಿ
[ಬದಲಾಯಿಸಿ]ವ್ಯಾಪಾರಕ್ಕಾಗಿ ಅವರು ಮೊದಲಬಾರಿ ಕಲ್ಕತ್ತಕ್ಕೆ ಪ್ರಯಾಣಮಾಡಿದರು. ಕಲ್ಕತ್ತಾ ಬಂದರಿನ ಮುಖಾಂತರ, ಹಡಗಿನಲ್ಲಿ ಪ್ರಯಾಣಮಾಡಿ ಅಲ್ಲಿಂದ ಚೈನಕ್ಕೆ ವ್ಯಾಪಾರಮಾಡಲು ಹೋಗುತ್ತಿದ್ದರು. ಆಗ ಇಂಗ್ಲಿಷ್ ಹಾಗೂ ಫ್ರೆಂಚ್ ಸೈನಿಕರ ಮಧ್ಯೆ ಆಗಾಗ ಸಣ್ಣ ಪುಟ್ಟ ಕಲಹಗಳು ನಡೆಯುತ್ತಲೇ ಇದ್ದವು. ಮುಂಬಯಿನವಾಸಿ,ಜೀಜೀಭಾಯಿಯವರ ವ್ಯಾಪಾರ ಹೊರದೇಶಗಳ ಜೊತೆ ಹೆಚ್ಚಾಗಿತ್ತು.
ಎರಡನೆಯ ಪ್ರಯಾಣ
[ಬದಲಾಯಿಸಿ]ಎರಡನೆಯ ಪ್ರಯಾಣವನ್ನು, ’(East India Company's fleet)',ಈಸ್ಟ್ ಇಂಡಿಯ ಕಂಪನಿಯ ಫ್ಲೀಟ್ ಜೊತೆ ಮಾಡಿದರು. ’(Sir Nathaniel Dance)”, ಸರ್ ನಾಥಾನೆಲ್ ಡಾನ್ಸ್ ರವರ ಕರೆಯ ಮೇರೆಗೆ, ಈ ಹಡಗು, ’(French squadron)” ಫ್ರೆಂಚ್ ಸೈನ್ಯದಳ ವನ್ನು”(Pulo Aura)’ ಪೌಲೊ ಔರ, ಯುದ್ಧದಲ್ಲಿ ಹೊಡೆದೋಡಿಸಿತು. ಆಗ”(Rear-Admiral Charles-Alexandre Léon Durand Linois)’, ರೆರ್ -ಅಡ್ಮಿರಲ್ ಚಾರ್ಲ್ಸ್ -ಅಲೆಕ್ಸಾಂಡರ್ ಲೆ ಡಿರಂಡ್ ಲಿನೊಯಿಸ್ ರವರು ಯುದ್ಧದ ನೇತೃತ್ವ ವಹಿಸಿದ್ದರು. ಇದೇ ರೀತಿ ಜೀಜೀಭಾಯ್ ತಮ್ಮ ೪ ನೆಯ ಪ್ರಯಾಣವನ್ನು ಭಾರತೀಯ ಹಡಗಿನಲ್ಲಿ (Indiaman) ಮಾಡಿದರು. ಆದರೆ ಈ ನೌಕೆಯನ್ನು ಫ್ರೆಂಚ್ ರ ವಶಕ್ಕೆ ಒಪ್ಪಿಸಬೇಕಾಯಿತು. ಅವರು ಜೀಜೀಭಾಯ್ ಅವರನ್ನು ಕೈದಿಯಾಗಿ ಬಂಧಿಸಿ,”(Cape of Good Hope)’ ಕೇಪ್ ಆಫ್ ಗುಡ್ ಹೋಪ್, ಗೆ ಒಯ್ದು, ಅಲ್ಲಿ ಡಚ್ ಸರ್ಕಾರದ ಅಧೀನದಲ್ಲಿ ಕೈದಿಯಾಗಿ ಇಟ್ಟರು. ಇಂತಹ ತೊಂದರೆಗಳನ್ನು ಸೈರಿಸಿದ ಬಳಿಕ, ಜೀಜೀಭಾಯ್ ಅವರು, ಸುಮಾರು ಸಮಯ ಕಾದಿದ್ದು, ಕಲ್ಕತ್ತಕ್ಕೆ ಡಾನಿಶ್ ದೇಶದ ನೌಕೆಯಲ್ಲಿ, ವಾಪಸ್ ಬಂದರು. ಯಾವುದಕ್ಕೂ ಅಂಜದ, ತಮ್ಮ ಕಾರ್ಯದಲ್ಲೇ ಸದಾ ನಿರತರಾಗಿದ್ದ ಜೀಜೀಭಾಯ್ ರವರು ಮತ್ತೊಮ್ಮೆ ಚೈನಕ್ಕೆ ವ್ಯಾಪಾರಕ್ಕಾಗಿ ಹೋದರು. ಈ ಬಾರಿ ಅವರ ಮಾರ್ಗ ಸುಗಮವಾಗಿತ್ತು. ಎಲ್ಲವೂ ಬಹಳ ಅನುಕೂಲಕರ ವಾಗಿತ್ತು ಹಾಗೂ ಅದರಲ್ಲಿ ಅವರಿಗೆ ಬಹಳ ಯಶಸ್ಸು ದೊರೆಯಿತು.
ವ್ಯಾಪಾರದಲ್ಲಿ ಯಶಸ್ಸು
[ಬದಲಾಯಿಸಿ]ಈ ಹೊತ್ತಿಗೆ ಜೀಜೀಭಾಯ್ ಅವರು, ತಮ್ಮ ದಿಟ್ಟತನ ಹಾಗೂ ಕಷ್ಟ ಸಹಿಷ್ಣತೆಯಿಂದ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಗಳಿಸಿ, ಭಾರಿಪ್ರಮಾಣದ ಸಂಪತ್ತನ್ನು ಜಮಾಯಿಸಿದ್ದರು. ಈ ಹೊತ್ತಿಗೆ ಎಲ್ಲಾ ಕಡೆಗಳಲ್ಲೂ ಅವರ ಹೆಸರು ಜನಪ್ರಿಯವಾಗಿತ್ತು. ಕೀರ್ತಿ, ಸನ್ಮಾನಗಳು ಅವರನ್ನರಸಿ ಬಂದವು. ನಂತರ ಅವರು, ಮುಂಬಯಿನಗರದಲ್ಲಿ ಖಾಯಂಆಗಿ ನೆಲೆಸಿದರು. 'ಎದೆಗಾರಿಕೆ’,'ದೃಢನಿರ್ಧಾರ ','ವ್ಯವಹಾರಜ್ಞಾನ’,'ನಿರಂತರ ಪರಿಶ್ರಮ’ ಗಳಿಂದಾಗಿ, ’ಜೀಜೀಭಾಯ್ ’ ರವರು ಧನವಂತರಾದರು. ಅಲ್ಲಿಂದ ತಮ್ಮ ಕಾರೋಭಾರ್ ನ್ನು ಜಮಾಯಿಸುತ್ತಿದ್ದರು. ೧೮೩೬ ನಲ್ಲಿ ಜೀಜೀಭಾಯ್ ರವರ ಫರ್ಮ್ ಬೃಹದಾಕಾರವಾಗಿ ಬೆಳೆದಿತ್ತು. ಅಲ್ಲಿ ಮೂವರು ಮಕ್ಕಳು ಮತ್ತು ಸಂಬಂಧೀಕರು ಸೇರಿದಂತೆ ಇನ್ನೂ ಹಲವು ಭಾರತೀಯರಿಗೆ ನೌಕರಿದೊರಕುತ್ತಿತ್ತು. ಕುದುರಿದ ವ್ಯಾಪಾರ, ಲೇವಾದೇವಿಗಳಿಂದ ಅಪಾರ ಧನಸಂಗ್ರಹ ಮಾಡಿದ್ದರು. ಟ್ರೇಡರ್, ಜೀಜೀಭಾಯ್ ರವರು ಬಾಟಲ್ ಗಳನ್ನು ತಯಾರಿಸಿ ಮಾರುತ್ತಿದ್ದರು. ಈಗ ಅವರನ್ನು ಗೆಳೆಯರು "ಮಿಸ್ಟರ್.Bottlewaller" ಎಂದು ಕರೆಯುತ್ತಿದ್ದರು. ಪತ್ರವ್ಯವಹಾರ ಮಾಡುವಾಗಲೆಲ್ಲಾ ತಮ್ಮ ಗಿರಾಕಿಗಳಿಗೆ " Bottlewaller" ಅಂತ ಹೇಳಿಕೊಂಡು, ಪತ್ರಗಳಿಗೆ, ಚೆಕ್ ಗಳಿಗೆ ಸಹಿಮಾಡುತ್ತಿದ್ದರು. ತಮ್ಮ ಅಗಾಧ ಪರಿಶ್ರಮ ದಿಂದ ಜೀವನದಲ್ಲಿ ಮೇಲಕ್ಕೆ ಬಂದವರು. ಬಡತನ, ಹಣಕ್ಕಾಗಿ ಪರದಾಟ, ಮುಂತಾದ ಸಂಕಷ್ಟಗಳು, ಅವರಿಗೆ ಜೀವನದಲ್ಲಿ ಪಾಠ ಕಲಿಸಿತ್ತು., ಜೀಜೀಭಾಯ್ ಸಂಕಟಗಳಲ್ಲಿದ್ದ ಭಾರತೀಯರಿಗೆಲ್ಲಾ, ’ಹಿಂದು’,”ಮುಸಲ್ಮಾನ್”, ಮತ್ತು”ಪಾರ್ಸಿ” ಮತೀಯರೆಂಬ ಭೇದವಿಲ್ಲದಂತೆ ಎಲ್ಲರಿಗೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು.
ಅನಾಥರಿಗೆ ಧನಸಹಾಯ
[ಬದಲಾಯಿಸಿ]ಆಸ್ಪತ್ರೆಗಳು, ಶಾಲಾಕಾಲೇಜ್ ಗಳು, ಧರ್ಮಶಾಲೆಗಳು, ಮತ್ತು ನಿವೃತ್ತರಾದವರಿಗೆ, ವೃದ್ಧರಿಗೆ, ಧನಸಹಾಯವನ್ನು, ಭಾರತದಾದ್ಯಂತ (ಮುಂಬಯಿ, ನವ್ ಸಾರಿ,ಸೂರತ್, ಮತ್ತು ಪುಣೆ)ಗಳ ಜನರಿಗೆ ಮಾಡಿದರು. ಜೀಜೀಭಾಯ್, ರವರ ಸಾರ್ವಜನಿಕ ಹಿತಕಾರ್ಯಗಳು,ಇಂದಿಗೂ ನಮ್ಮ ಕಣ್ಣಿಗೆ ಗೋಚರಿಸುತ್ತವೆ. ಬಾಲ್ಯದಿಂದಲೂ ಬಡತನ, ಸಂಕಷ್ಟಗಳಿಂದ ನೊಂದಿದ್ದ ಜೀಜೀಭಾಯ್ ’ಅನಾಥರಿಗೆ”, ’ಆರ್ತರಿಗಾಗಿ” ತಮ್ಮ ಜೀವನವನ್ನು ಮೀಸಲಾಗಿಟ್ಟರು. ಉದಾಹರಣೆಗೆ : ’ಬಾವಿಗಳು’, ”ನೀರಿನ ರೆಸೆರ್ವೊಯರ್ಸ್,”ಅಣೆಕಟ್ಟುಗಳು” ಮತ್ತು ’ದಾರಿಗಳು”. ಹೀಗೆ ಮುಂಬಯಿನ ಸಾರ್ವಜನಿಕರ ಜೀವನವನ್ನು ಉಜ್ವಲಗೊಳಿಸಿದ, ಜೀಜೀಭಾಯ್ ರವರು, ೧೮೫೯, ರಲ್ಲಿ ಮರಣಹೊಂದಿದರು. ಒಟ್ಟು ಬಡವರ ಧರ್ಮಕಾರ್ಯಗಳಿಗೆ ಮಾಡಿದ ದಾನಧನದ ಮೊತ್ತ, ೨೩೦,೦೦೦ ಬ್ರಿಟಿಷ್ ಪೌಂಡಗಳು.
ಮಾಹಿಮ್ ನಲ್ಲಿ ಕಾಸ್ವೇ ನಿರ್ಮಾಣ
[ಬದಲಾಯಿಸಿ]”ಮಾಹಿಮ್ ಕಾಸ್ ವೇ’, ಕಟ್ಟಲು ಮುಂದಾಳಾದುತನ, ಹಾಗೂ ಅನೇಕ ’ಭವ್ಯ ಶಾಲಾ”, ’ಕಾಲೇಜ್ ” ಗಳ ಸ್ಥಾಪನೆಯಲ್ಲಿ ಅವರ ಯೋಗದಾನ ಅತಿ ಮಹತ್ವದ್ದು. ಮಾಹಿಮ್ ಒಡ್ಡುದಾರಿ. ಬ್ರಿಟಿಷ್ ಸರಕಾರ ಈ ಯೋಜನೆಗೆ ಧನದ ನೆರವು ನೀಡಲು ಒಪ್ಪಲಿಲ್ಲ. 'Mahim Causeway’, ಮುಂಬಯಿನ ಜನರಿಗೆ ಅವರು ಕೊಟ್ಟ ಮಹತ್ತರ ಕೊಡುಗೆಗಳಲ್ಲೊಂದು. ದ್ವೀಪ ಹಾಗೂ ಮುಂಬಯಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲೋಸುವವೇ ಕಾಸ್ ವೆ ಕಟ್ಟಲು, ಜೀಜೀಭಾಯ್ ರವರ ಮೊದಲಿನಿಂದಲೂ ಹೇಳುತ್ತಲೇ ಇದ್ದರು. ಅವರ ಪತ್ನಿ, 'ಲೇಡಿ ಅವಾಬಾಯಿ ಜಮ್ ಸೆಟ್ ಜಿ ಜೀಜೀಭಾಯ್' ಯವರ ಕೂಡಿಟ್ಟ ಧನದಿಂದ, ೧, ೫೫, ೮೦೦ ರೂ. ಖರ್ಚುಮಾಡಿದರು. ಹೀಗೆಮಾಡಿದ ಹಣಸಹಾಯದಿಂದ ಸಮುದ್ರದ ದಾರಿಗುಂಟಕಟ್ಟಿದ ರಸ್ತೆ, ಮುಂಬಯಿಮತ್ತು ಮಾಹಿಮ್ ಪ್ರದೇಶಗಳನ್ನು ಸೇರಿಸಲು ಅನುಕೂಲವಾಯಿತು. ಆ ರಸ್ತೆಗೆ, Lady Avabai ಯವರ ಹೆಸರನ್ನು ಇಡಲಾಯಿತು. ೧೮೪೧ ನೆಯ ವರ್ಷದಲ್ಲಿ ಕಾಮಗಾರಿ ಶುರುವಾಗಿ, ೪ ವರ್ಷಗಳ ನಂತರ ಮುಗಿಯಿತು. Sir J.J Hospital ಸರ್. ಜೆ. ಜೆ. ಆಸ್ಪತ್ರೆ, ಸೇರಿದಂತೆ, ಜೀಜೀಭಾಯ್ ಯವರು ಸುಮಾರು, ೧೨೬ ಸಂಸ್ಥೆಗಳಿಗೆ ಧನಸಹಾಯಮಾಡಿದ್ದರು. ಹಲವಾರು Charities, ಗಳೆಲ್ಲಾ ಸೇರಿದಂತೆ, ಅವರು ಧನಸಹಾಯಮಾಡಿದ ’ಸಂಘಸಂಸ್ಥೆಗಳು” :
- ’Sir J. J. School of Art”, (ಸರ್ ಜೆ. ಜೆ. ಸ್ಕೂಲ್ ಆಫ್ ಆರ್ಟ್)
- ”The Sir J.J. College of Architecture’, (ಸರ್ ಜೆ. ಜೆ . ಕಾಲೇಜ್ ಆಫ್ ಆರ್ಕಿಟೆಕ್ಚರ್)
- ”The Sir J.J. Institute of Applied Art’ ಮತ್ತು,
- ’Seth R.J.J. High School” (ಸೇಠ್ ಆರ್. ಜೆ. ಜೆ ಹೈಸ್ಕೂಲ್).
- ಬಡಪಾರ್ಸಿಕುಟುಂಬಗಳಿಗೂ ಸಹಾಯ ಮಾಡಿದರು. ಅದಕ್ಕಾಗಿ ಒಂದು ನಿಧಿಯನ್ನು
- "Sir Jamsetjee Jeejebhoy Parsi Benevolent Fund", ಧರ್ಮಾರ್ಥ ಸಹಾಯನಿಧಿ. ಸಂಗ್ರಹಿಸಿದರು.
ಪಾರ್ಸಿ ಪಂಚಾಯತ್
[ಬದಲಾಯಿಸಿ]'ಪಾರ್ಸಿ ಜನಸಮುದಾಯದ ಜೀವನಕ್ರಮವನ್ನು ನಿರ್ಧರಿಸಿ ಆಯೋಜಿಸುವಲ್ಲಿ ಸಕ್ರಿಯವಾಗಿದ್ದ, Bombay Parsi Panchayat, ೧೧೦-ವರ್ಷದ ಹಳೆಯ ಸಂಸ್ಥೆ, ’Bombay Presidency”, ಯಲ್ಲಿತ್ತು. ಆದರೆ ಅವರು, ಪಾರ್ಸಿ ಸಮುದಾಯದ ಹಿತಾಸಕ್ತಿಗಳಿಗೆ ಸ್ಪಂದಿಸದಿರುವುದು 'ಜಮ್ ಸೆಟ್ ಜಿ ಜೀಜೀಭಾಯ್'ರವರ ಗಮನಕ್ಕೆ ಬಂತು. ಪಾರ್ಸಿದೇವಾಲಯದ ಹಣವನ್ನು ತಮ್ಮ ಅನುಕೂಲಕ್ಕೆ ಬಳಸಿ ಕೊಳ್ಳುತ್ತಿದ್ದರು. ’Bombay Parsi Panchayat', ನ ದುರ್ವ್ಯವಹಾರ, ಸಾಮಾನ್ಯ ಪಾರ್ಸಿ ಗಳನ್ನು ಕಂಗೆಡಿಸಿತ್ತು. ೧೮೩೮ರ ನಂತರ, ’ಪಾರ್ಸಿ ಪಂಚಾಯತ” ನ ಬಗ್ಗೆ ಜನರ ಗೌರವಾದರಗಳು ಕಡಿಮೆಯಾಯಿತು. ಅದನ್ನು ಬಹಿಷ್ಕರಿಸಲು ಮಾತು ಬಂತು. ನಂತರ, ಪಾರ್ಸಿ ಸಮುದಾಯ ತಮ್ಮ ಅಭಿವೃದ್ಧಿಕಾರ್ಯಗಳಿಗೆ ಹೆಸರಾಂತ ಪಾರ್ಸಿ ಉದ್ಯೋಗಪತಿಗಳ ಮೊರೆ ಹೋಗುತ್ತಿದ್ದರು. ದಯಾಳು ಹಾಗೂ ಬಡವರ ಬಂಧುವಾಗಿದ್ದ, ಜೀಜೀಭಾಯ್ ಅವರ ಬಗ್ಗೆ ಆದರವಿತ್ತು. ಆವರಿಗೆ ಬೇಕಾದಷ್ಟು ಸಂಪತ್ತಿತ್ತು. ಮೇಲಾಗಿ ಬಡಬಗ್ಗರ ಬಗ್ಗೆ ಕನಿಕರವೂ ಇತ್ತು. ಅಲ್ಲದೆ ದಾನಮಾಡುವ ಧಾರಾಳತನವೂ ಇತ್ತು. ಈ ಜನಹಿತ ಕಾರ್ಯಗಳಿಂದ ಆಗಿನ ’ಬ್ರಿಟಿಷ್ ಸರ್ಕಾರದವರು”, ಅವರಿಗೆ " Baronet" ಬಾರೋನೆಟ್ ಪದವಿಯನ್ನು ದಯಪಾಲಿಸಿದರು.