ಜತಿನ್ ಕನಕಿಯ
ಜತಿನ್ ಕನಕಿಯ | |
---|---|
Born | |
Died | Error: Need valid death date (first date): year, month, day |
Children | ದ್ರುಪದ್ ಕನಕಿಯ |
ಜತಿನ್ ಕನಕಿಯ ಭಾರತೀಯ ಟೆಲಿವಿಶನ್, ಹಾಗೂ ಚಲನಚಿತ್ರಗಳಲ್ಲಿ ಕಾಮೆಡಿ ಪಾತ್ರಗಳನ್ನು ಮಾಡುತ್ತಿದ್ದರು. ಗುಜರಾತ್ ನಲ್ಲಿದ್ದಾಗ, ಹೆಚ್ಚಾಗಿ ಗುಜರಾತಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ೧೯೮೦-೯೦ ರವರೆಗೆ 'ಜತಿನ್ ಕನಕಿಯ' ಅಭಿನಯಿಸಿದ ಹಾಸ್ಯಪಾತ್ರಗಳು ಭಿನ್ನವಾಗಿದ್ದು ಪ್ರೇಕ್ಷಕರನ್ನು ಸೆಳೆದವು.
ಜನನ
[ಬದಲಾಯಿಸಿ]೧೯೫೨ ರಲ್ಲಿ 'ಜತಿನ್ ಕನಕಿಯ' ಗುಜರಾತಿನಲ್ಲಿ ಜನಿಸಿದರು. ಬೊಂಬಾಯಿಗೆ ಬಂದ'ಜತಿನ್ ಕನಕಿಯ'ರವರು ಟೆಲಿವಿಶನ್ ನಲ್ಲಿ ನಟಿಸಲು ಆರಂಭಿಸಿ ಒಂದು ಹೊಸ ಅಧ್ಯಾಯವನ್ನೇ ರಚಿಸಿದರು.
ಟೆಲಿವಿಶನ್ ಧಾರಾವಾಹಿ, ಶ್ರೀಮಾನ್ ಶ್ರೀಮತೀಜಿ, ಜತಿನ್ ರನ್ನು ಜನಪ್ರಿಯರನ್ನಾಗಿ ಮಾಡಿತು
[ಬದಲಾಯಿಸಿ]೧೯೯೪ ರಲ್ಲಿ ಟೆಲಿವಿಶನ್ ಧಾರಾವಾಹಿ, ’ಶ್ರೀಮಾನ್ ಶ್ರೀಮತೀಜಿ,’ ಯಲ್ಲಿ, ನಟಿಸಿದ ಕೇಶವ್ ಕುಲಕರ್ಣಿಯ ಪಾತ್ರ ಎಲ್ಲರ ಗಮನ ಸೆಳೆಯಿತು. ಈ ಧಾರಾವಾಹಿಯಲ್ಲಿ ಕೆಲಸಮಾಡುತ್ತಿರುವಾಗಲೇ, ಆಗಲೇ ಹೆಸರುಮಾಡಿದ ಕಲಾವಿದರಾದ, ರಾಕೇಶ್ ಬೇಡಿ, ಅರ್ಚನಾ ಪೂರನ್ ಸಿಂಗ್, ರೀಮ ಲಾಗು, ಹಾಗೂ ಅಂದಿನ ಜನಪ್ರಿಯ ಹಿಂದಿ ಕವಿ, ’ಶೈಲ್ ಚತುರ್ವೇದಿ'ಯವರ ಪರಿಚಯ ಹಾಗೂ ಒಡನಾಟ ಅವರ ವರ್ಚಸ್ಸನ್ನು ಪಸರಿಸಲು ಅನುಕೂಲವಾಯಿತು. ಹಾಸ್ಯಾಭಿನಯವನ್ನು ಮೆಚ್ಚಿಕೊಂಡ ರಸಿಕರು, ಅವರನ್ನು ಆ ತರಹದ ಪಾತ್ರಗಳಲ್ಲೇ ನೋಡಲು ಬಯಸಿದರು. ನಿರ್ಮಾಪಕರೂ ಸಹ ಅವರಿಗಾಗಿಯೇ ಸರಿಹೊಂದುವಂತಹ ಹಾಸ್ಯ ಪ್ರಧಾನವಾದ ಪಟಲೇಖನವನ್ನು ಬರೆದು ಸಹಕರಿಸುತ್ತಿದ್ದರು.
ಕ್ಯಾನ್ಸರ್ ಪೀಡಿತರಾದರೂ,'ಜತಿನ್ ಕನಕಿಯ' ತಮ್ಮ ಅಭಿನಯವನ್ನು ನಿಲ್ಲಿಸಲಿಲ್ಲ
[ಬದಲಾಯಿಸಿ]'ಜತಿನ್ ಕನಕಿಯ' ಕ್ಯಾನ್ಸರ್ ನಿಂದ ನರಳುತ್ತಿದ್ದರು, ೧೯೯೯ ರಲ್ಲಿ ನಿದನರಾದರು. ತಮಗೆ ಕ್ಯಾನ್ಸರ್ ಕಾಯಿಲೆಯಾಗಿದೆ ಎಂದು ಗೊತ್ತಾದಮೇಲೂ ನಟನೆಯನ್ನು ಮಾತ್ರ ನಿಲ್ಲಿಸಲೇ ಇಲ್ಲ.
ಪ್ರಶಸ್ತಿಗಳು
[ಬದಲಾಯಿಸಿ]'ಜತಿನ್ ಕನಕಿಯ' ರವರ ಅಭಿನಯ ಕೌಶಲ್ಯ ಹಾಗೂ ಹಾಸ್ಯದ ಪಾತ್ರಗಳಲ್ಲಿ ಅವರು ಪ್ರದರ್ಶಿಸುತ್ತಿದ್ದ ವೈವಿಧ್ಯತೆಗಳನ್ನು ಗುರುತಿಸಿ, ಅವರಿಗೆ ೨೦೦೧ ರಲ್ಲಿ ಮರಣೋತ್ತರ ಇಂಡಿಯನ್ ಟೆಲ್-ಅವಾರ್ಡ್ ನ್ನು ಪ್ರದಾನಮಾಡಲಾಯಿತು.