ವಿಷಯಕ್ಕೆ ಹೋಗು

ಜಡೆ ಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಡೆ ವಿರಕ್ತಮಠ ಅಥವಾ ಶರಣ ಸಿದ್ಧವೃಷಭೇಂದ್ರ ಬಸವಯೋಗಿಯವರ ವಿರಕ್ತಮಠವು ಲಿಂಗಾಯತ ಧರ್ಮದ ವಿರಕ್ತ ಪರಂಪರೆಯ ಮಠವಾಗಿದೆ , ಇದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿದೆ. ಶರಣ ಸಿದ್ಧವೃಷಭೇಂದ್ರ ಬಸವಯೋಗಿಯವರು ಜಡೆ ಗ್ರಾಮದಲ್ಲಿದ್ದ ವೈದಿಕ ಆಚರಣೆ ಮತ್ತು ಮೌಢ್ಯಾಚರಣೆಗಳಾದ ಮಾಟ ಮಂತ್ರ, ಪ್ರಾಣಿ ಬಲಿ, ಹೋಮ, ಹವನ, ಜ್ಯೋತಿಷ್ಯ, ಮೂರ್ತಿ ಪೂಜೆಗಳನ್ನು ನಿಲ್ಲಿಸಿ, ಬಸವ ತತ್ವಗಳನ್ನು ಜನರಿಗೆ ಭೋಧಿಸುತ್ತ ಲಿಂಗೈಕ್ಯರಾಗಿದ್ದಾರೆ, ಇವರ ಗದ್ದುಗೆಯು ಕರ್ನಾಟಕದ ಅತಿದೊಡ್ಡ ನಿರ್ವಿಕಲ್ಪ ಸಮಾಧಿಯಾಗಿದೆ.

ಶರಣ ಸಿದ್ಧವೃಷಭೆಂದ್ರ ಬಸವಯೋಗಿಯವರ ಮಠ ಜಡೆ
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
Jade Math, Shivamogga
ಭೂಗೋಳ
ರಾಜ್ಯಕರ್ನಾಟಕ
ಜಿಲ್ಲೆಶಿವಮೊಗ್ಗ
ಸ್ಥಳಜಡೆ
ಇತಿಹಾಸ ಮತ್ತು ಆಡಳಿತ
ಅಧೀಕೃತ ಜಾಲತಾಣlingayatreligion.com


ಶರಣ ಕುಮಾರಪ್ರಭು ಸ್ವಾಮಿಯವರು

[ಬದಲಾಯಿಸಿ]

೧೯ ನೇ ಶತಮಾನದ ಮಧ್ಯ ಭಾಗದಲ್ಲಿ ಮಠದ ಅಧಿಕಾರವಹಿಸಿಕೊಂಡ ಇವರು ಜಡೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮಾತ್ರ ಇದ್ದು ಬಡ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿಲ್ಲದನ್ನು ಕಂಡು, ಗ್ರಾಮದಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜನ್ನು ಸ್ಥಾಪಿಸಿ ತಾವು ಲಿಂಗೈಕ್ಯರಾಗುವುದರೊಳಗೆ ಲಕ್ಷಕ್ಕೂ ಹೆಚ್ಚಿನ ಬಡ ವಿದ್ಯಾರ್ಥಿಗಳಿಗೆ ಜಾತಿ ಬೇದ ವಿಲ್ಲದೆ ಶಿಕ್ಷಣವನ್ನು ನೀಡಿ ಬಸವ ತತ್ವವನ್ನು ಪಾಲಿಸಿದ್ದಾರೆ, ಅಷ್ಟೇ ಅಲ್ಲದೆ ಪ್ರತಿ ತಿಂಗಳ ಅಮಾವಾಸ್ಯೆಯಂದು ವಿಶೇಷ ಧರ್ಮ ಸಭೆಗಳನ್ನು ನಡೆಸಿ ಬಸವಾದಿ ಶರಣರ ವಚನಗಳನ್ನು ಜನರಿಗೆ ಭೋದಿಸಿ, ದಾಸೋಹ ಸೇವೆಯನ್ನು ನೀಡುತ್ತಿದ್ದರು, ಇವರು ೨ ನವೆಂಬರ್ ೧೯೯೮ ರಂದು ಲಿಂಗೈಕ್ಯರಾದರು.

"https://kn.wikipedia.org/w/index.php?title=ಜಡೆ_ಮಠ&oldid=1195213" ಇಂದ ಪಡೆಯಲ್ಪಟ್ಟಿದೆ