ಜಗ್ಗಲಿಗೆ ಮೇಳ

ವಿಕಿಪೀಡಿಯ ಇಂದ
Jump to navigation Jump to search

ಜಗ್ಗಲಿಗೆ ಮೇಳಅಥವಾ ಜಗ್ಗ ಹಲಿಗೆ ಕುಣಿತವು ಕರ್ನಾಟಕದ ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಿರುವ ಒಂದು ಜಾನಪದ ಕುಣಿತವಾಗಿದೆ.ಉಗಾದಿ ಮತ್ತು ಹೋಳಿ ಹಬ್ಬದಂದು ಇದನ್ನು ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶಿಸುತ್ತಾರೆ.ಜಗ್ಗ ಹಲಿಗೆಯು ಒಂದು ಬೃಹತ್ ತಾಳವಾದ್ಯವಾಗಿದೆ.ಇದನ್ನು ಎತ್ತಿನಗಾಡಿಯ ಚಕ್ರಗಳಿಗೆ ಎಮ್ಮೆಯ ಚರ್ಮವನ್ನು ಹೊದಿಸಿ ತಯಾರಿಸುತ್ತಾರೆ.ಇದನ್ನು ಜನರು ಗುಂಪಾಗಿ ಉರುಳಿಸಿಕೊಂಡು ಹೋಗುವಾಗ ತಾಳಬದ್ಧವಾಗಿ ಬಾರಿಸುತ್ತಾರೆ. ಇದನ್ನು ನಿಯಂತ್ರಿಸಲು ಒಬ್ಬ ನಿಯಂತ್ರಕ ಚಿಕ್ಕ ಪ್ರಮಾಣದ ವಾದ್ಯವಾದ ಕನಿಹಲಿಗೆ ಯನ್ನು ಬಾರಿಸಿಕೊಂಡು ತಾಳಬದ್ಧವಾಗಿ ಕುಣಿಯುವುದು ಇದರ ಪ್ರಮುಖ ಆಕರ್ಷಣೆ.ಈ ಪ್ರದರ್ಶನವು ಸುಮಾರು ೧೫ ಜನರಿಂದ ಕೂಡಿರುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. "FOLK ARTS & DANCES OF KARNATAKA". Retrieved 29 ಜುಲೈ 2015. Check date values in: |accessdate= (help)