ವಿಷಯಕ್ಕೆ ಹೋಗು

ಜಕ್ಕಲವಡಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಜಕ್ಕಲವಡಿಕೆ - ಇದು ಕರ್ನಾಟಕದ ಚಿತ್ರದುರ್ಗಜಿಲ್ಲೆಯ ಮೊಳಕಾಲ್ಮೂರುತಾಲೂಕಿನ ಒಂದು ಕುಗ್ರಾಮದ ಹೆಸರು. ಇದು ಪ್ರಸಿದ್ಧ ಅಶೋಕನ ಶಾಸನಗಳಿರುವ ಸಿದ್ಧಾಪುರದ ಹತ್ತಿರವಿದೆ. ಇದರ ಹೆಸರಿನ ಉತ್ಪತಿಯ ಬಗ್ಗೆ ಅನೇಕ ಅಭಿಪ್ರಾಯಗಳಿವೆ.

ಹೆಸರಿನ ಉತ್ಪತಿ

[ಬದಲಾಯಿಸಿ]

ಅವುಗಳೆಂದರೆ - ೧)ಜಕ್ಕಲವಡಿಕೆ = ಜಗ + ಕಲ + ವಾಡಿ = ಕಲಾ ಜಗತ್ತಿನ ಮನೆ.(House of world art). ಇದರ ಪ್ರಕಾರ ಈ ಪ್ರದೇಶ ಪ್ರಾಚೀನ ಕಲೆಗೆ ಸಂಭಂದಪಟ್ಟಂತಿದೆ.

೨)ಜಕ್ಕಲವಡಿಕೆ = ಜಕ್ಕ + ಅಳವಡಿಕೆ = ಯತ್ತಿನ ಗಾಡಿಯ ಜಕ್ಕದ ಅಳವಡಿಕೆ.(Adjusting Cart Fixtures). ಇದರ ಪ್ರಕಾರ ಈ ಪ್ರದೇಶ ಯತ್ತಿನ ಗಾಡಿಯ ತಯಾರಿಕೆಗೆ ಸಂಭಂದಪಟ್ಟಂತಿದೆ.

೩)ಜಕ್ಕಲವಡಿಕೆ = ಜಕ್ಕಲ + ಅಡಿಕೆ = ಒಂದು ರೀತಿಯ ಅಡಕೆ.(A type of Betelnut). ಇದರ ಪ್ರಕಾರ ಈ ಪ್ರದೇಶ ಅಡಿಕೆ ಮಾರಾಟಕ್ಕೆ ಸಂಭಂದಪಟ್ಟಂತಿದೆ.

೪)ಜಕ್ಕಲವಡಿಕೆ = ಜಕ್ಕಲ + ವಾಡಿ = ಜಕ್ಕಲ ಮುನಿಯ ಆಶ್ರಮ.(Place of saint Jakkala). ಇದರ ಪ್ರಕಾರ ಈ ಪ್ರದೇಶ ಜಕ್ಕಲ ಮುನಿಯ ಆಶ್ರಮಕ್ಕೆ ಸಂಭಂದಪಟ್ಟಂತಿದೆ.

೫)ಜಕ್ಕಲವಡಿಕೆ = ಜಗಳ + ವಾಡಿಕೆ = ಜಗಳವಾಡುವ ಸ್ಥಳ.(A place of quarrels). ಇದರ ಪ್ರಕಾರ ಈ ಪ್ರದೇಶ ಯುದ್ಧಕ್ಕೆ ಸಂಭಂದಪಟ್ಟಂತಿದೆ.

ಹೀಗೆ ಹಲವಾರು ರೀತಿಯ ಅರ್ಥಗಳು ಇದಕ್ಕೆ ಬರಬಹುದು.