ಚೌಕಾಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಡೊನೇಷ್ಯಾದ ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ಜನರು ಚೌಕಾಸಿ ಮಾಡುತ್ತಿರುವುದು.

ಚೌಕಾಸಿಯು ಒಂದು ಬಗೆಯ ಸಂಧಾನವಾಗಿದ್ದು ಇದರಲ್ಲಿ ಒಂದು ಸರಕು ಅಥವಾ ಸೇವೆಯ ಮಾರಾಟಗಾರ ಮತ್ತು ಖರೀದಿಗಾರನು ಬೆಲೆ ಮತ್ತು ವಹಿವಾಟಿನ ನಿಖರವಾದ ಸ್ವರೂಪವನ್ನು ಚರ್ಚಿಸುತ್ತಾರೆ. ಚೌಕಾಸಿಯು ಬೆಲೆಯ ವಿಷಯದಲ್ಲಿ ಒಪ್ಪಂದವನ್ನು ಸೃಷ್ಟಿಸಿದರೆ, ವಹಿವಾಟು ನಡೆಯುತ್ತದೆ. ಚೌಕಾಸಿಯು ನಿಶ್ಚಿತ ದರಗಳಿಗೆ ಒಂದು ಪರ್ಯಾಯ ದರದ ತಂತ್ರವಾಗಿದೆ. ಅತ್ಯಂತ ಸೂಕ್ತವಾಗಿ, ವ್ಯಾಪಾರಿಯು ಚೌಕಾಸಿಯಲ್ಲಿ ತೊಡಗುವುದು ಮತ್ತು ಅದಕ್ಕೆ ಅವಕಾಶ ಕೊಡುವುದರಿಂದ ಯಾವುದೇ ಹಾನಿಯಾಗದಿದ್ದಲ್ಲಿ, ಅವರು ಖರೀದಿದಾರನ ಖರ್ಚುಮಾಡುವ ಇಚ್ಛೆಯನ್ನು ಊಹಿಸಬಲ್ಲರು. ಇದು ಬೆಲೆ ತಾರತಮ್ಯವನ್ನು ಅನುಮತಿಸುವುದರಿಂದ ಹೆಚ್ಚಿನ ಗ್ರಾಹಕ ಉಳಿಕೆಯನ್ನು ಸೆಳೆಯಲು ಅವಕಾಶ ನೀಡುತ್ತದೆ. ಬೆಲೆ ತಾರತಮ್ಯವು ಒಂದು ಪ್ರಕ್ರಿಯೆಯಾಗಿದ್ದು ಇದರಲ್ಲಿ ಮಾರಾಟಗಾರನು ಹೆಚ್ಚು ಆಸಕ್ತಿಯುಳ್ಳ ಖರೀದಿದಾರನಿಗೆ (ಶ್ರೀಮಂತನಿರುವುದರಿಂದ ಅಥವಾ ಹೆಚ್ಚು ಉತ್ಕಟ ಬಯಕೆ ಹೊಂದಿರುವುದರಿಂದ) ಹೆಚ್ಚಿನ ಬೆಲೆಯನ್ನು ಹೇಳಬಹುದು. ಅತ್ಯಂತ ಸಾಮಾನ್ಯ ಚಿಲ್ಲರೆ ವಸ್ತುಗಳಿಗೆ ಚೌಕಾಸಿ ಮಾಡುವ ವೆಚ್ಚವು ಚಿಲ್ಲರೆ ವ್ಯಾಪಾರಿಗಳಿಗೆ ಆಗುವ ಲಾಭವನ್ನು ಮೀರಿಸುವ ಪ್ರಪಂಚದ ಭಾಗಗಳಲ್ಲಿ ಚೌಕಾಸಿಯು ಹೆಚ್ಚುಕಡಿಮೆ ಕಣ್ಮರೆಯಾಗಿದೆ. ಆದರೆ, ಅಜ್ಞಾನಿ ಖರೀದಿದಾರರಿಗೆ ಮಾರಾಟಮಾಡಲಾದ ಮೋಟಾರು ವಾಹನಗಳಂತಹ ದುಬಾರಿ ಸರಕುಗಳಿಗೆ ಚೌಕಾಸಿಯು ಸಾಮಾನ್ಯ ವಿಷಯವಾಗಿ ಉಳಿಯಬಹುದು.

ಹೆಚ್ಚಿನ ಓದಿಗೆ[ಬದಲಾಯಿಸಿ]

"https://kn.wikipedia.org/w/index.php?title=ಚೌಕಾಸಿ&oldid=979700" ಇಂದ ಪಡೆಯಲ್ಪಟ್ಟಿದೆ