ಚೋಟಾ ಭೀಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೋಟಾ ಭೀಮ್ ಭಾರತದ ಮಕ್ಕಳ ಆನಿಮೇಷನ್ ದಾರವಾಹಿಗಳು ಹಾಗು ಚಿತ್ರಗಳಾಗಿ ಹೊರಹೊಮ್ಮಿವೆ.ಇದು ಢೋಲಕ್ಪುರ್ ಎನ್ನುವ ಕಾಲ್ಪನಿಕ ಊರಿನಲ್ಲಿರುವ ಭೀಮ್ ಎನ್ನುವ ಹುಡುಗನ ಸಾಹಸಕಥೆಗಳನ್ನು ತೋರಿಸುತ್ತವೆ.ಇದನ್ನು ಗ್ರೀನ್ ಗೋಲ್ಡ್ ಆನಿಮೇಷನ್ನ ರಾಜೀವ್ ಚಿಲಕ ನಿರ್ದೇಶಿಸುತ್ತಿದ್ದು ಮಕ್ಕಳ ಪೋಗೊ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.[೧]೨೦೧೨ ಪ್ರಕಾರವಾಗಿ ಚೋಟಾ ಭೀಮ್ ೧೨೦ ಸಂಚಿಕೆಗಳನ್ನು ಮುಗಿಸಿವೆ. ಇದು ಮಕ್ಕಳ ಪ್ರಿಯ ದಾರವಾಹಿಯಾಗಿದ್ದು ಭಾರತದಲ್ಲಿ ಬಲು ಬೇಗ ಪ್ರಶಂಸೆ ಗಳಿಸಿದೆ[೨].

ಮೇ ೧೮ ೨೧೧೨ರಲ್ಲಿ ಚೋಟಾ ಭೀಮ್ ಅಂಡ್ ದಿ ಕರ್ಸ್ ಆಫ್ ದಮ್ಯಾನ್(ಚೋಟಾ ಭೀಮ್ ಮತ್ತು ದಮ್ಯಾನ್ನ ಶಾಪ)ಎಂಬ ಚಿತ್ರ ಬಿಡುಗಡೆಯಾಯಿತು.ಇದು ಚಿತಮಂದಿರಕ್ಕೆ ಬಿಡುಗಡೆಯಾದ ಮೊದಲ ಚಿತ್ರ ಮತ್ತು ಚೋಟಾ ಭೀಮ್ ಚಿತ್ರಗಳಲ್ಲಿ ೯ನೇ ಚಿತ್ರವಾಯಿತು.[೩]

ಪಾತ್ರಧಾರಿಗಳು[ಬದಲಾಯಿಸಿ]

 1. ಚೋಟಾ ಭೀಮ್- ಡೊಲಕ್ಪುರ್ವಾಸಿಯಾದ ಭೀಮ್ ೯ವರ್ಷದ ಶಕ್ತಿಯುತ ಬಾಲಕ.ಇವನ ಶಕ್ತಿ ಅವನ ಹಳ್ಲಿಗೆ ವರಾಗಿ ಕಾಣಿಸುತ್ತದೆ. ಇವನು ತಪ್ಪು ಮಾಡಿದವರನ್ನು ಒಳ್ಳೆಯ ಹಾದಿಗೆ ತರಲು ಪ್ರಯತ್ನ ಮಾಡುತ್ತಾ, ನಿರಾಶ್ರಿತ ಜನರಿಗೆ ಸಹಾಯ ಮಾಡಲು ಇಚ್ಛಿಸುತ್ತಾನೆ.ಕಳ್ಳರು ಮತ್ತು ಕೆಟ್ಟವರನ್ನು ಹೊಡಿದು ಬಡಿದು ಅಮಾಯಕ ವ್ಯಕ್ತಿಗಳಿಗೆ ಸಹಾಯ ಮಾಡುತ್ತಾನೆ.ಇವನಿಗೆ ತಿನ್ನಲು ಬಹಳ ಇಷ್ಟ, ಅದರಲ್ಲು ಲಡ್ಡು ಎಂದರೆ ಪಂಚಪ್ರಾಣ.ಇವನಿಗೆ ಮೂರು ಜನ ಪ್ರಿಯ ಸ್ನೇಹಿತರು- ಚುಟ್ಕಿ, ರಾಜು ಮತ್ತು ಜಗ್ಗು(ಕೋತಿ).
 2. ಚುಟ್ಕಿ - ೭ವರ್ಷದ ಬಾಲಕಿ ಮತ್ತು ಭೀಮ್ನ ಗೆಳತಿ. ಭೀಮ್ನ ಸಾಹಸಗಳಲ್ಲಿ ಅವನಿಗೆ ಅನಿಸಿಕೆಗಳನ್ನು ಕೊಟ್ಟು ಮುಖ್ಯ ಪಾತ್ರಧಾರಿಯಾಗಿದ್ದಾಳೆ.ಇವಳಿಗೆ ಮನೆಕೆಲಸಗಳು ಇಷ್ಟ, ಅಮ್ಮನ ಜತೆ ಲಡ್ಡೂಗಳನ್ನು ಮಾಡುತ್ತಳೆ. ಇವಳಿಗೆ ಎಲ್ಲಾ ಪ್ರಾಣಿಗಳ ಮೇಲು ಕನಿಕರವಿದೆ.
 3. ರಾಜು - ಭೀಮನನ್ನೆ ಆದರ್ಶವಾಗಿಟ್ಟುಕೊಂಡಿರುವ ೪ವರ್ಷದ ಮುದ್ದು ಧೈರ್ಯವಂತ ಬಾಲಕ ರಾಜು.ಇವನ ತಂದೆ ರಾಜನ ಸೈನ್ಯದಲ್ಲಿ ಸಿಪಾಯಿಯಾಗಿದ್ದು, ಇವನಿಗು ಅದರ ಆಸೆ. ಇವನು ಬಿಲ್ವಿದ್ಯೆಯಲ್ಲಿ ತುಂಬ ಚುರುಕಾಗಿದ್ದು ಅರ್ಜುನ ಪ್ರಶಸ್ತಿಯನ್ನು ಗೆದ್ದಿದ್ದಾನೆ.ಮೈಟಿ ರಾಜುಎಂಬ ಚಿರಗಳಲ್ಲಿ ಇವನು ಮುಖ್ಯ ಪಾತ್ರಧಾರಿ.
 4. ಜಗ್ಗು ಬಂದರ್ - ಮಾತನಾಡುವ ಕೋತಿಯೇ ಜಗ್ಗು.ಇವನು ತಮಾಷೆ ಮಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಲು ಭೀಮ್ಗೆ ಸಹಾಯ ಮಾಡುತ್ತಾನೆ.ಇವನಿಂದಲೆ ಭೀಮ್ ಮರದಿಂದ ಮರಕ್ಕೆ ಹಾರುವುದನ್ನು ಕಲಿತದ್ದು.ಜಗ್ಗು ಎಲ್ಲಾ ಪ್ರಾಣಿಗಳ ರಕ್ಷಕನಾಗಬೇಕೆಂಬ ಆಸೆ.
 5. ಕಾಲಿಯ - ೧೦ವರ್ಷದ ಜಗಳಗಂಟ.ಕೆಲುವು ಸಮಯಗಳಲ್ಲಿ ಭೀಮನನ್ನು ದ್ವೇಷಿಸಿ ಅವನಿಗಿಂತ ಮೊದಲು ಕೆಲಸ ಮಾಡಿ ಪ್ರಸಿದ್ಧನಾಗಬೇ
  ಕೆಂದು ಯೋಚಿಸದೆ ಕೆಲಸ ಮಾಡಿ ವಿಫಲವಾಗುವನು. ಅದೇ,ಕೆಲವು ಸಮಯಗಳಲ್ಲಿ ಭೀಮಿಗೆ ಸಹಾಯ ಮಾಡಿ ಡೋಲಕ್ಪುರನ್ನು ಉಳಿಸುವನು.
 6. ಡೋಲು-ಭೋಲು - ಕಾಲಿಯನ ಹಿಂಬಾಲಕರು.ಶಕ್ತಿವಂತರಲ್ಲ, ಆದರೆ ಭೀಮ್ ಮತ್ತು ಚುಟ್ಕಿಯಿನ್ದ ಸುಲಭವಾಗಿ ವಂಚಿತರಾಗುತ್ತಾರೆ.
 7. ಕೀಚಕ್ - ಪೆಹೆಲ್ವಾನ್ಪುರ್ ಹಳ್ಳಿಯ ಸಾಹಸ ಹುಡುಗ ಕೀಚಕ್.ಇವನಿಗೆ ಭೀಮ್ನ ಮೇಲೆ ಹೊಟ್ಟೆಕಿಚ್ಚು. ಬಹಳ ಸಮಯಗಳಲ್ಲಿ ಭೀಮ್ನನ್ನು ಸೋಲಸಲು ಹೋಗಿ ತಾನೆ ಸೋತು ಬಂದಿದ್ದಾನೆ.
 8. ರಾಜಕುಮಾರಿ ಇಂದುಮತಿ- ಢೊಲಕ್ಪುರ್ ರಾಜಕುಮಾರಿ. ಬಹಳ ಸುಂದರ ಮತ್ತು ಉದಾರ ಹೆಣ್ಣುಮಗಳು.
 9. ರಾಜ ಇಂದ್ರವರ್ಮ - ಢೊಲಕ್ಪುರ್ ರಾಜ.ಇವನು ವೀರ ಮತ್ತು ಧೀರ.ಭೀಮ್ನನ್ನು ರಾಜ್ಯದಲ್ಲಿ ತೊಂದರೆಯಾದಗ ಸಲಹೆ ಮತ್ತು ಸಹಾಯವನ್ನು ಕೇಳುವನು.
 10. ಟುನ್-ಟುನ್ ಆಂಟಿ - ಚುತ್ಕಿಯ ತಾಯಿ ಇವಳು. ಡೋಲಕ್ಪುರ್ನ ಲಡ್ಡು ತಯಾರಕಿ.ಇವಳ ಲಡ್ಡುಗಳು ರುಚಿಯಲ್ಲಿ ಬಹಳ ಚಂದ.
 11. ಧೂನಿ ಬಾಬ - ಗುಹೆಯೊಳಗಿರುವ ಎಲ್ಲ ವಿಷಯಗಳನ್ನು ತಿಳಿದಿರುವ ಯೋಗಿ ಧೂನಿ ಬಾಬ.ಭೀಮಿಗೆ ಕೆಲವು ವಿಷಯಗಳಲ್ಲಿ ಸಹಾಯ ಮಡುವರು.
 12. ಪ್ರೊಫೆಸ್ಸರ್ ಧೂಮ್ ಕೇತು - ವಿಜ್ಞಾನಿಯಾದ ಇವರು ಅವರದ್ದೇ ಆವಿಷ್ಕಾರಗಳನ್ನು ಮಾಡಿರುವರು.

ಚಲನಚಿತ್ರಗಳು[ಬದಲಾಯಿಸಿ]

 1. ಚೋಟಾ ಭೀಮ್ ಔರ್ ಕೃಷ್ಣ (೧ನೇ ಚಿತ್ರ)
 2. ಚೋಟಾ ಭೀಮ್ ಅಂಡ್ ಕೃಷ್ಣ : ಪಾತಲಿಪುತ್ರ ಸಿಟಿ ಆಫ್ ದಿ ಡೆಡ್ (೨ನೇ ಚಿತ್ರ)
 3. ಚೋಟಾ ಭೀಮ್: ಭೀಮ್ ವರ್ಸಸ್ ಏಲಿಯನ್ಸ್ (೩ನೇ ಚಿತ್ರ)
 4. ಚೋಟಾ ಭೀಮ್: ಜರ್ನೀ ಟು ಪೆಟ್ರ (೪ನೇ ಚಿತ್ರ)
 5. ಚೋಟಾ ಭೀಮ್ ಅಂಡ್ ಕೃಷ್ಣ: ಮಾಯಾನಗರಿ (೫ನೇ ಚಿತ್ರ)
 6. ಚೋಟಾ ಭೀಮ್: ಮಾಸ್ಟರ್ ಆಫ್ ಶಾವಲಿನ್ (೬ನೇ ಚಿತ್ರ)
 7. ಚೋಟಾ ಭೀಮ್: ಢೋಲಕ್ಪುರ್ ಟು ಕಾತ್ಮಾಂಡು (೭ನೇ ಚಿತ್ರ)
 8. ಚೋಟಾ ಭೀಮ್ ಔರ್ ಹನುಮಾನ್ (೮ನೇ ಚಿತ್ರ)
 9. ಚೋಟಾ ಭೀಮ್ ಅಂಡ್ ದಿ ಕರ್ಸ್ ಆಫ್ ದಮ್ಯಾನ್ (೯ನೇ ಚಿತ್ರ)ಚಿತ್ರಮಂದಿರಕ್ಕೆ ಬಿಡುಗಡೆಯಾದ ೧ನೇ ಚಿತ್ರ
 10. ಚೋಟಾ ಭೀಮ್ ಅಂಡ್ ದಿ ರೈಸ್ ಆಫ್ ಕಿರ್ಮಾಡ (೧೦ನೇ ಚಿತ್ರ)
 11. ಚೋಟಾ ಭೀಮ್ ಔರ್ ಗಣೇಶ್: ದಿ ಅಮೇಜಿಂಗ್ ಒಡಿಸ್ಸಿ (೧೧ನೇ ಚಿತ್ರ)
 12. ಚೋಟಾ ಭೇಮ್ ಅಂಡ್ ದಿ ಬ್ರೋಕನ್ ಆಮ್ಯುಲೆಟ್ (೧೨ನೇ ಚಿತ್ರ)
 13. ಚೋಟಾ ಭೀಮ್ ಅಂಡ್ ದಿ ಕ್ರೌನ್ ಆಫ್ ವಲಹಲ್ಲ (೧೩ನೇ ಚಿತ್ರ)
 14. ಚೋಟಾ ಭೀಮ್ ಅಂಡ್ ದಿ ಥ್ರೋನ್ ಆಫ್ ಬಾಲಿ (೧೪ನೇ ಚಿತ್ರ)ಚಿತ್ರಮಂದಿರಕ್ಕೆ ಬಿಡುಗಡೆಯಾದ ೨ನೇ ಚಿತ್ರ.
 15. ಚೋಟಾ ಭೀಮ್ ಅಂಡ್ ದಿ ಇನ್ಕಾನ್ ಅಡ್ವೆಂಚರ್ (೧೫ನೇ ಚಿತ್ರ)

ಮೈಟಿ ರಾಜು ಚಿತ್ರಗಳು[ಬದಲಾಯಿಸಿ]

ಮೈಟಿ ರಾಜು ಚೋಟಾ ಭೀಮ್ ರಾಜುವಿನ ಮೇಲೆ ಸೃಷ್ಟಿಸಿರುವ ಚಿತ್ರಗಳು.ಇವು:

 1. ಮೈಟಿ ರಾಜು
 2. ಮೈಟಿ ರಾಜು ವರ್ಸಸ್ ದಿ ಗ್ರೇಟ್ ಪೈರೇಟ್
 3. ಮೈಟಿ ರಾಜು ಅಂಡ್ ದಿ ಮಾಗ್ನೆಟರ್ಸ್
 4. ಮೈಟಿ ರಾಜು ಅಂಡ್ ದಿ ಕಮಾಂಡೋಸ್
 5. ಮೈಟಿ ರಾಜು ವರ್ಸಸ್ ಮೈಟಿ ಕ್ಲೋನ್
 6. ಚಕ್ ದೇ! ಮೈಟಿ ರಾಜು
 7. ಗೇಮ್ ಓವರ್ ಮೈಟಿ ರಾಜು

ಬಾಹ್ಯಪುಟಗಳು[ಬದಲಾಯಿಸಿ]

 1. ಚೋಟಾ ಭೀಮ್ ವೆಬ್ಸೈಟ್
 2. ಚೋಟಾ ಭೀಮ್ ಅಂತರ್ಜಾಲ ಆಟಗಳು Archived 2013-08-06 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು[ಬದಲಾಯಿಸಿ]