ವಿಷಯಕ್ಕೆ ಹೋಗು

ಚೊಕ್ಕನಾಥ ದೇವಸ್ಥಾನ ದೊಮ್ಮಲೂರು ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಬೆಂಗಳೂರಿನ ದೊಮ್ಮಲೂರು ಜೊಕ್ಕನಾಥ ದೇವಸ್ಥಾನದ ಮುಂದೆ ಇರುವ ಕಲ್ಲು. ಕಲ್ಲಿನ ಗಾತ್ರ 4’ 6” x 2”. ಶಾಸನದಲ್ಲಿ ಬಳಸಿರುವ ಭಾಷೆ ಹಳೆಗನ್ನಡ ಮತ್ತು ಶಾಸನದ ಕಾಲ ಕ್ರಿ.ಶ ೧೪೪೦. ಚೊಕ್ಕನಾಥ ದೇವಸ್ಥಾನದ ಮುಂದೆ ಇದೇ ರೀತಿಯ ಇನ್ನೂ ಐದು ತಮಿಳು ಶಾಸನಗಳಿವೆ.

ದೊಮ್ಮಲೂರಿನ ಚೊಕ್ಕನಾಥೇಶ್ವರ ದೇಗುಲದ ಎದುರಿಗೆ ಇರುವ ಶಿಲಾಶಾಸನ

ಶಾಸನ ಪಠ್ಯ

[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕ[]ದ ಒಂಭತ್ತನೇ ಸಂಪುಟದ ೮ನೇ ಪುಟದಲ್ಲಿರುವ ಈ ಶಾಸನದ ಪಠ್ಯ ಇಂತಿದೆ.

1 ಸ್ವಸ್ತಿಶ್ರೀಶಖವರು
2 ಷ೧೩೬೦ ರ ಉದ್ರಿಸಂವತ್ಸ
3 ರದಭಾದ್ರಪದ ಬ ೭ ಸೋ | ರಾಜಾ
4 ಧಿರಾಜರಾಜಪರಮೇಶ್ವರಶ್ರೀವೀ
5 ರದೇವರಾಯಮಹಾರಾಯರು
6 ಸಿಂಹಾಸನಾರೂಢರಾಗಿಯಿ
7 ರಬೇಕೆಂದುಪಟ್ಟಣದರಾಯಂ
8 ಣಂಗಳುಕಳಿಹಿದನೊಂಡೆಯಕೊ
9 ಪ್ಪದವೇಂಟೆಯದೆಹೆಜ್ಜುಂಕದ
10 ಅಧಿಕಾರಿಮಲ್ಲರಸರುಡೊಂಬ
11 ಲೂರಚೊಕ್ಕನಾಥದೇವರಿಗೆಕೊ
12 ಟ್ಟದಾನಧಾರೆಯಕ್ರಮವೆಂತೆಂ
13 ದಡೆಪ್ರಾಕಿನಲ್ಲಿಸೊಂಡೆಯಕೊಪ್ಪ
14 ದವೆಂಟೆಯಕ್ಕೆಆರುಬಂದಆ
15 ಸುಂಕದವರೂಆಡೊಂಬಲೂ
16 ರಚೊಕ್ಕನಾಥದೇವರಿಗೆಸಲು
17 ವಂತಾಚತುಸೀಮೆಯಲ್ಲಿಉಳ್ಳಂ
18 ತಾಆವಾವಾಗ್ರಾಮಗಳಿಗೆಬಹಂ
19 ತಾಹೆಜ್ಜುಂಕದವರ್ತನೆಯುಡು
20 ಗರೆಯನುಪೂವ್ರ್ವಮರಿಯ್ಯ
21 ಯಾದೆಯಾಚಂದ್ರಾಕ್ರ್ಕಸ್ತಾ
22 ಯಿಯಾಗಿನಂಮ್ಮರಾಯಂಣ
23 ಯೊಡೆಯ್ರ್ಯಗೆಸಕಳಸಾಂಬ್ರಾಜ್ಯ
24 ವಾಗಿಯೆರಬೇಕೆಂದುನಂ

ಆಕರಗಳು

[ಬದಲಾಯಿಸಿ]
  1. Rice, B. Lewis. Epigraphica carnatica (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)


ಬಾಹ್ಯ ಕೊಂಡಿಗಳು

[ಬದಲಾಯಿಸಿ]
  1. ಎಕನಾಮಿಕ್ ಟೈಮ್ನಿನಲ್ಲಿ ದೊಮ್ಮಲೂರಿನ ಶಾಸನಗಳ ಬಗ್ಗೆ ಬಂದ ವರದಿ, ಜನವರಿ ೧೯,೨೦೧೭
  2. "ದಿ ಹಿಂದು" ಪತ್ರಿಕೆಯಲ್ಲಿ ಬಂದ ದೊಮ್ಮಲೂರಿನ ಶಾಸನಗಳ ಬಗೆಗಿನ ವರದಿ, ಡಿಸೆಂಬರ್ ೧೬, ೨೦೧೭