ಚೆಲ್ಲಾಟವಾಡುವಿಕೆ
Jump to navigation
Jump to search
ಚೆಲ್ಲಾಟವಾಡುವುದು ಅಥವಾ ಒಲಪು/ಒಯ್ಯಾರ/ಬಿನ್ನಾಣ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯತ್ತ ಮೌಖಿಕ ಅಥವಾ ಲಿಖಿತ ಸಂವಹನವನ್ನು, ಜೊತೆಗೆ ದೈಹಿಕ ಹಾವಭಾವವನ್ನು ಒಳಗೊಂಡ ಒಂದು ಸಾಮಾಜಿಕ ಮತ್ತು ಲೈಂಗಿಕ ವರ್ತನೆ.[೧] ಮತ್ತೊಬ್ಬ ವ್ಯಕ್ತಿಯೊಂದಿಗಿನ ಆಳವಾದ ಸಂಬಂಧದಲ್ಲಿ ಆಸಕ್ತಿಯನ್ನು ಸೂಚಿಸಲು ಅಥವಾ ತಮಾಷೆಗಾಗಿ ಮಾಡಿದಾಗ ಮೋಜಿಗಾಗಿ ಇದನ್ನು ಮಾಡಲಾಗುತ್ತದೆ.
ಬಹುತೇಕ ಸಂಸ್ಕೃತಿಗಳಲ್ಲಿ, ಪ್ರಣಯ ಪ್ರವೃತ್ತಿಯೊಂದಿಗೆ ಪರಿಚಿತವಿರದವರಿಗೆ ಸಾರ್ವಜನಿಕವಾಗಿ, ಅಥವಾ ಖಾಸಗಿಯಾಗಿ ಪ್ರಕಟ ಲೈಂಗಿಕ ಪ್ರಸ್ತಾಪಗಳನ್ನು ಮಾಡುವುದು ಸಾಮಾಜಿಕವಾಗಿ ಸಮ್ಮತಿ ಪಡೆದಿರುವುದಿಲ್ಲ, ಆದರೆ ಕೆಲವೊಮ್ಮೆ ಪರೋಕ್ಷ ಅಥವಾ ಸೂಚಕ ಪ್ರಸ್ತಾಪಗಳನ್ನು ಸ್ವೀಕಾರಾರ್ಹವೆಂದು ಪರಿಗಣಿಸಬಹುದು.
ಚೆಲ್ಲಾಟವಾಡುವುದು ಸಾಮಾನ್ಯವಾಗಿ ವ್ಯಕ್ತಿಗಳ ನಡುವೆ ವಾಸ್ತವ ಸಂಬಂಧಕ್ಕಿಂತ ಸೌಮ್ಯವಾಗಿ ಹೆಚ್ಚಿನ ನಿಕಟ ಸಂಬಂಧವನ್ನು ಸೂಚಿಸುವ ರೀತಿಯಲ್ಲಿ ಮಾತಾಡುವುದು ಮತ್ತು ವರ್ತಿಸುವುದನ್ನು ಒಳಗೊಳ್ಳುತ್ತದೆ.