ಚೆನ್ನಣ್ಣ ವಾಲೀಕಾರ

ವಿಕಿಪೀಡಿಯ ಇಂದ
Jump to navigation Jump to search
ಚೆನ್ನಣ್ಣ ವಾಲೀಕಾರರು
ಜನನಚೆನ್ನಣ್ಣ ವಾಲೀಕಾರರು
೧೯೫೦
ಶಂಕರವಾಡ ಗ್ರಾಮ, ಕರ್ನಾಟಕ, ಭಾರತ
ವೃತ್ತಿಕವಿ, ಸಂಶೋಧಕ, ಸಾಹಿತ್ಯ ವಿಮರ್ಶಕ, ಚಿಂತಕ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸMA, Ph.D
ಪ್ರಮುಖ ಪ್ರಶಸ್ತಿ(ಗಳು)ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಂಗಳೂರು ಸಾಹಿತ್ಯ ಬಳಗ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದುವು.

ಚೆನ್ನಣ್ಣ ವಾಲೀಕಾರರು[೧] ಕವಿ, ವಿಮರ್ಶಕ, ಸಂಶೋಧಕ, ವಿದ್ವಾಂಸ, ಅಧ್ಯಾಪಕ, ಪ್ರವಾಚಕ, ಪ್ರಾಧ್ಯಾಪಕರಾಗಿದ್ದು, ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇದುವರೆವಿಗೂ ಸುಮಾರು ಐವತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ.ಚೆನ್ನಣ್ಣ ವಾಲೀಕಾರ[೨]ಇವರು ಬರೆದ 1030 ಪುಟಗಳ ಬೃಹತ್ ಪ್ರಾಯೋಗಿಕ ಕಾವ್ಯ 'ವ್ಯೋಮಾವ್ಯೋಮ'. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ವಾಕ್ಯ, ಎಲ್ಲೂ ಪೂರ್ಣವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ ಇತ್ಯಾದಿ ಬಳಸದಿರುವುದು ಇದರ ವಿಶೇಷ ಪ್ರಯೋಗ. ಬಂಡಾಯ ಸಂಘಟನೆಯಲ್ಲಿ ಚೆನ್ನಣ್ಣ ಸಂಪೂರ್ಣವಾಗಿ ತೊಡಗಿಸಿಕೊಂಡವರು. ಅನೇಕ ಸಲ ಸಂಘಟನೆಯ ರಾಜ್ಯ ಸಂಚಾಲಕನಾಗಿ ಅದರ ಮುಂಚೂಣಿ ನಾಯಕನಾಗಿ ಕೆಲಸ ಮಾಡಿದ್ದಾರೆ.

ಜನನ/ಜೀವನ[ಬದಲಾಯಿಸಿ]

ಚೆನ್ನಣ್ಣ ವಾಲೀಕಾರರು[೩][೪][೫] ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಶಂಕರವಾಡ ಗ್ರಾಮದಲ್ಲಿ ಹುಟ್ಟಿದರು.ತಂದೆ ಧೂಳಪ್ಪ ವಾಲೀಕಾರ, ತಾಯಿ ಸಾಬಮ್ಮ. ಇವರು ಕುಸ್ತಿ, ಹಾಡುಗಾರಿಕೆ, ಬಯಲಾಟದ ಒಕ್ಕಲು ಮನೆತನದವರು. ಪ್ರೌಢಶಿಕ್ಷಣದವರೆಗೆ ಶಹಬಾದಲ್ಲಿ, ಗುಲ್ಬರ್ಗಾ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸ್ನಾತಕೋತ್ತರ ಶಿಕ್ಷಣ ಮತ್ತು ‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’ ಪ್ರಬಂಧ ಮಂಡಿಸಿ ಗಳಿಸಿದ್ದು ಪಿಎಚ್.ಡಿ ಪದವಿ.

ವೃತ್ತಿ ಬದುಕು[ಬದಲಾಯಿಸಿ]

  1. ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಪ್ರೌಢಶಾಲಾ ಶಿಕ್ಷಕರಾಗಿ ೧೯೬೫-೬೯ರವರೆಗೆ ;
  2. ರಾಯಚೂರಿನ ಕಾಲೇಜು ಉಪನ್ಯಾಸಕರಾಗಿ ೧೯೭೧-೭೮ರವರೆಗೆ,
  3. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ೧೯೮೭-೨೦೦೩ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ್ದಾರೆ.

ನಿಭಾಯಿಸಿದ ಜವಾಬ್ದಾರಿಗಳು[ಬದಲಾಯಿಸಿ]

ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾಗ ನಿಭಾಯಿಸಿದ ಜವಾಬ್ದಾರಿಗಳು ಹಲವಾರು.

  1. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ,
  2. ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ,
  3. ಸೆನೆಟ್ ಸದಸ್ಯರಾಗಿ,
  4. ಸಿಂಡಿಕೇಟ್ ಸದಸ್ಯರಾಗಿ,
  5. ವಿದ್ಯಾರ್ಥಿ ಕಲ್ಯಾಣಾಕಾರಿಯಾಗಿ,
  6. ರಾಷ್ಟ್ರೀಯ ಸೇವಾ ಸಮನ್ವಯಾಕಾರಿಯಾಗಿ,
  7. ವಸತಿ ನಿಲಯದ ಅಕ್ಷಕರಾಗಿ,
  8. ಪ್ರಸಾರಾಂಗದ ನಿರ್ದೇಶಕರಾಗಿ. ಹೀಗೆ ನಿರ್ವಹಿಸಿದ್ದು ಹಲವಾರು ಜವಾಬ್ದಾರಿಗಳು.

ಚೆನ್ನಣ್ಣ ವಾಲೀಕಾರರ ಕೃತಿಗಳು[ಬದಲಾಯಿಸಿ]

ಕವನ ಸಂಕಲನಗಳು[ಬದಲಾಯಿಸಿ]

  1. ಮರದ ಮೇಲಿನ ಗಾಳಿ
  2. ಕರಿತೆಲಿ ಮಾನವನ ಜೀಪದ
  3. ಹಾಡಕ್ಕಿ ಹಾಗು ಇತರ ಪದಗಳು
  4. ಬಂಡೆದ್ದ ದಲಿತರ ಬೀದಿ ಹಾಡುಗಳು
  5. ಧಿಕ್ಕಾರದ ಹಾಡುಗಳು
  6. ಪ್ಯಾಂಥರ್ ಪದ್ಯಗಳು

ಮಹಾಕಾವ್ಯ[ಬದಲಾಯಿಸಿ]

  • 'ವ್ಯೋಮಾವ್ಯೋಮ'- ಮಾನಸ ಮಹಾಸಾಗರದ ಪರಮಹಂಸಗಳ ಭೂವ್ಯೋಮದ ಬೃಹದ್‌ಗಾನ.

ಮಹಾಪ್ರಬಂಧ[ಬದಲಾಯಿಸಿ]

  • ‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’

ಕಥಾಸಂಕಲನ[ಬದಲಾಯಿಸಿ]

  1. ಕಪ್ಪು ಕಥೆಗಳು,
  2. ಕುತ್ತದಲ್ಲಿ ಕುದ್ದವರ ಕಥೆಗಳು,
  3. ಹೆಪ್ಪುಗಟ್ಟಿದ ಸಮುದ್ರ

ನಾಟಕಗಳು[ಬದಲಾಯಿಸಿ]

  1. ಟೊಂಕದ ಕೆಳಗಿನ ಜನ,
  2. ಅಗ್ನಿರಾಜ,
  3. ತಲೆ ಹಾಕುವವರು,
  4. ಕೂಸಿನ ಕಂಡಿರಾ,
  5. ಅವಿವೇಕಿ ರಾಜನ ಕಥೆ,
  6. ಜೋಗತಿ.

ಕಾದಂಬರಿ[ಬದಲಾಯಿಸಿ]

  1. ಒಂದು ಹೆಣ್ಣಿನ ಒಳಜಗತ್ತು,
  2. ಕೋಟೆಬಾಗಿಲು,
  3. ಹುಲಿಗೆಮ್ಮ,
  4. ಗ್ರಾಮಭಾರತ,
  5. ಬೆಳ್ಯ[೬].

ಡೆಪ್ಪಿನಾಟಗಳು[ಬದಲಾಯಿಸಿ]

  • ಚೆನ್ನಣ್ಣ ವಾಲೀಕಾರರ[೭] ಆರು ಡೆಪ್ಪಿನಾಟಗಳು.

ಸಂದ ಪ್ರಶಸ್ತಿ/ಗೌರವ, ಪುರಸ್ಕಾರಗಳು[ಬದಲಾಯಿಸಿ]

  1. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ,
  2. ಮಂಗಳೂರು ಸಾಹಿತ್ಯ ಬಳಗ ಪ್ರಶಸ್ತಿ,
  3. ಗುಲಬರ್ಗಾ ವಿ.ವಿ.ದ ರಾಜ್ಯೋತ್ಸವ ಪ್ರಶಸ್ತಿ,
  4. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
  5. ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದುವು.

ಉಲ್ಲೇಖ[ಬದಲಾಯಿಸಿ]

  1. http://aryabhatappc.blogspot.in/2014/02/audio_20.html
  2. http://www.kannadaprabha.com/ supplements/sapthahikaprabha/%E0%B2%9A%E0%B3%86%E0% B2%A8% E0%B3%8D%E0%B2%A8%E0%B2%A3%E0%B3%8D%E0%B2%A3-%E0%B2%B5%E0%B3%8D%E0%B2%AF%E0%B3%8B%E0%B2%AE%E0%B2%BE%E0%B2%95%E0%B2%BE%E0%B2%B0!/38926.html
  3. .dailyhunt.in/news/india/kannada/suddimoola-epaper-suddimoo/chennanna+vaalikaara+sarvaadhyaksharaagali+saahitigala+aagraha-newsid-42000678
  4. http://www.prajavani.net/authors/%E0%B2%A1%E0%B2%BE-%E0%B2%9A%E0%B3%86%E0%B2%A8%E0%B3%8D%E0%B2%A8%E0%B2%A3%E0%B3%8D%E0%B2%A3-%E0%B2%B5%E0%B2%BE%E0%B2%B2%E0%B3%80%E0%B2%95%E0%B2%BE%E0%B2%B0
  5. https://www.sampada.net/blog/kaligananath-gudadur/30/01/2009/16266
  6. http://www.kannadaprabha.com/supplements/sapthahikaprabha/%E0%B2%9A%E0%B3%86%E0%B2%A8%E0%B3%8D%E0%B2%A8%E0%B2%A3%E0%B3%8D%E0%B2%A3-%E0%B2%B5%E0%B3%8D%E0%B2%AF%E0%B3%8B%E0%B2%AE%E0%B2%BE%E0%B2%95%E0%B2%BE%E0%B2%B0!/38926.html
  7. http://libcatmysore-koha.informindia.co.in/cgi-bin/koha/opac-search.pl?q=au:%22%E0%B2%B5%E0%B2%BE%E0%B2%B2%E0%B3%80%E0%B2%95%E0%B2%BE%E0%B2%B0,%20%20%E0%B2%9A%E0%B3%86%E0%B2%A8%E0%B3%8D%E0%B2%A8%E0%B2%A3%E0%B3%8D%E0%B2%A3%22