ವಿಷಯಕ್ಕೆ ಹೋಗು

ಚಿರಂಜೀವಿ (ಚಲನಚಿತ್ರ ೧೯೩೬)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನ ೧೯೩೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಚಿರಂಜೀವಿ ಬಗ್ಗೆ.
೧೯೭೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಚಿರಂಜೀವಿ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ.
ಚಿರಂಜೀವಿ - ತೆಲುಗು ಚಿತ್ರನಟನ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ.

ಚಿರಂಜೀವಿ (ಚಲನಚಿತ್ರ ೧೯೩೬)
ಚಿರಂಜೀವಿ
ನಿರ್ದೇಶನಕೆ.ಪಿ.ಭಾವೆ
ನಿರ್ಮಾಪಕವಿ.ಎ.ಮುಧೋಳ್ಕರ್
ಪಾತ್ರವರ್ಗದೇವುಡು ಶಾರದ ಮಳವಳ್ಳಿ ಸುಂದ್ರಮ್ಮ, ಬಸವರಾಜು ಮಾನ್ಸೂರ್, ಆರ್.ಎಸ್.ಮೂರ್ತಿ, ನಾರಾಯಣರಾವ್
ಸಂಗೀತಹಾರ್ಮೋನಿಯಂ ಶೇಷಗಿರಿರಾವ್
ಛಾಯಾಗ್ರಹಣಪುರೋಹಿತ್
ಬಿಡುಗಡೆಯಾಗಿದ್ದು೧೯೩೬
ಚಿತ್ರ ನಿರ್ಮಾಣ ಸಂಸ್ಥೆಕ್ಯಾನರೀಸ್ ಟಾಕೀಸ್

"ಚಿರಂಜೀವಿ", ೧೯೩೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಇದು ಕನ್ನಡ ವಾಕ್ಚಿತ್ರಗಳು ತಯಾರಾಗಲು ಆರಂಭವಾದಂದಿನಿಂದ, ಬಿಡುಗಡೆಯಾದ ಐದನೇ ಕನ್ನಡ ವಾಕ್ಚಿತ್ರವಾಗಿದೆ. "ಕ್ಯಾನರೀಸ್‌ ಟಾಕೀಸ್‌" ಲಾಂಛನದಲ್ಲಿ, ವಿ.ಎ. ಮೂಧೋಳ್ಕರ್‌ ಮತ್ತು ಇತರರು ನಿರ್ಮಿಸಿದ ಈ ಚಿತ್ರಕ್ಕೆ, ಕೆ.ಪಿ.ಭಾವೆ ಅವರ ನಿರ್ದೇಶನವಿದೆ.[][][]

ಕಥಾ ಸಾರಾಂಶ

[ಬದಲಾಯಿಸಿ]

ಮೃಕಂಡು ಮುನಿಗೆ ದೇವರ ಅನುಗೃಹದಿಂದ ಅಲ್ಪಾಯುಷಿಯಾದ ಮಾರ್ಕಾಂಡೇಯ ಜನಿಸಿದ. ಅಲ್ಪಾಯುಷಿಯಾದ ಈತನ ಆಯಸ್ಸು ಹದಿನಾರನೇ ವಯಸ್ಸಿನಲ್ಲಿ ಮುಗಿದಿತ್ತು.ಆಗ ಈತ ಶಿವಲಿಗವನ್ನು ಅಪ್ಪಿ ಹಿಡಿದು ತಪಸ್ಸು ಮಾಡಲಾರಂಭಿಸಿದ. ಸ್ವಯಂ ಯಮರಾಜ ಬಂದರೂ ಪ್ರಾಣವನ್ನು ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಶಿವಪಾರ್ವತಿಯರು, ಪ್ರತ್ಯಕ್ಷರಾಗಿ ಮಾರ್ಕೇಡೇಯನನ್ನು ಚಿರಂಜೀವಿಯಾಗೆಂದು ಹರಸುವುದೇ ಈ ಚಲನಚಿತ್ರದ ಕಥಾ ಹಂದರವಾಗಿದೆ.[]

ನಿರ್ಮಾಣ ಮತ್ತು ಬಿಡುಗಡೆ

[ಬದಲಾಯಿಸಿ]

ಸರಸ್ವತಿ ಸಿನೆಟೋನ್‌, ಮುಂಬೈಯಲ್ಲಿ ತಯಾರಾದ ಈ ಚಿತ್ರ, ಚಿತ್ರಿಕರಣಕ್ಕೆ ನಾಲ್ಕು ತಿಂಗಳ ಕಾಲ ಸಮಯ ತೆಗೆದುಕೊಂಡಿತು. ಉತ್ತರ ಕರ್ನಾಟಕದವರು ನಿರ್ಮಿಸಿದ ಮೊದಲ ಕನ್ನಡ ಚಲನ ಚಿತ್ರ ಇದಾಗಿದೆ. ೧೪೮ ನಿಮಿಷ ಅವಧಿಯ "ಚಿರಂಜೀವಿ" ಚಲನಚಿತ್ರ ೧೩೨೫ ಅಡಿ ಉದ್ದವಿತ್ತು. ೨೯ ಮೇ, ೧೯೩೭ರಂದು ಮೈಸೂರು ಸೆನ್ಸಾರ್‌ ಬೋರ್ಡಿನಲ್ಲಿ ಸೆನ್ಸಾರ್‌ಗೊಂಡು, ಅದೇ ವರ್ಷ ಬೆಂಗಳೂರಿನ "ಮೆಜೆಸ್ಟಿಕ್‌" ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಪೌರಾಣಿಕ ಚಿತ್ರವೇ ಆದರೂ, ಅಂದಿನ ದಿನಗಳಲ್ಲಿ ಸ್ವಾಂತಂತ್ರ್ಯ ಹೋರಾಟದ ಪ್ರತೀಕವಾಗಿದ್ದ ಚರಕವನ್ನು ಬಳಸಿರುವುದು ವೀಶೇಷ ಎಂದು ಪರಿಗಣಿಸಲಾಗಿದೆ.

ತಾಂತ್ರಿಕ ತಂಡ

[ಬದಲಾಯಿಸಿ]

ಕೆ.ಪಿ. ಭಾವೆ ನಿರ್ದೇಶನದ ಈ ಚಿತ್ರಕ್ಕೆ, ಪುರೋಹಿತ್‌ ಅವರ ಛಾಯಾಗ್ರಹಣ ಹಾಗೂ ಹಾರ್ಮೋನಿಯಂ ಶೇಷಗಿರಿರಾಯರ ಸಂಗೀತವಿದೆ. ಪೌರಾಣಿಕ ಕಥೆ ಆಧಾರಿತವಾದ ಈ ಚಿತ್ರಕ್ಕೆ, ದೇವುಡು ನರಸಿಂಹ ಶಾಸ್ತ್ರಿಯವರ ಚಿತ್ರಕತೆ, ಸಂಭಾಷಣೆ ಮತ್ತು ಗೀತೆಗಳಿವೆ.

ಪಾತ್ರ ವರ್ಗ

[ಬದಲಾಯಿಸಿ]
  • ದೇವುಡು ನರಸಿಂಹ ಶಾಸ್ತ್ರಿ (ಮೃಕಂಡು ಮುನಿ)
  • ಶಾರದ
  • ಮಳವಳ್ಳಿ ಸುಂದರಮ್ಮ (ಮರುದ್ವತಿ)
  • ಬಸವರಾಜ ಮನ್ಸೂರ (ನಾರದ)
  • ಆರ್ ಎಸ್ ಮೂರ್ತಿ
  • ನಾರಾಯಣ ರಾವ್
  • ಕೃಷ್ಣರಾವ್ ನಾಡಗೀರ್
  • ಅಮೀರ್‌ ಬಾಯಿ ಕರ್ನಾಟಕಿ
  • ಮಾಸ್ಟರ್ ನಾರಾಯಣ (ಮಾರ್ಕಾಂಡೇಯ)
  • ಲೀಲಾ (ಅಪ್ಸರೆ)
  • ಗಂಗೂ (ಅಪ್ಸರೆ)
  • ಮುದವೀಡು ಕೃಷ್ಣರಾಯರು (ಯಮ)
  • ಜೀವಣ್ಣ ರಾವ್ ದೇಸಾಯಿ (ಇಂದ್ರ)
  • ಕೆ ಎಚ್ ಪಾರ್ವತಿ ಬಾಯಿ (ಪಾರ್ವತಿ)

ಉಲ್ಲೇಖ

[ಬದಲಾಯಿಸಿ]
  1. "Chiranjeevi". chiloka.com. Retrieved 2015-02-09.
  2. "Chiranjeevi". nthwall.com. Archived from the original on 9 February 2015. Retrieved 2015-02-09.
  3. "Chiranjeevi". bharatmovies.com. Retrieved 2015-02-09.
  4. "ಕನ್ನಡ ಚಲನಚಿತ್ರ ಇತಿಹಾಸ (ಸಂಪುಟ ೨)". ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ೨೦೧೫ ( ಪರಿಷ್ಕೃತ ಎರಡನೇ ಮುದ್ರಣ, ಮೊದಲ ಮುದ್ರಣ - ೨೦೦೫). pp. ಪುಟ ಸಂಖ್ಯೆ ೩, ೪. {{cite book}}: Check date values in: |year= (help)CS1 maint: year (link)