ಚಿತ್ರ ಸ್ಕ್ಯಾನರ್
ಗಣನಾವಿಧಿಯಲ್ಲಿ ಸ್ಕ್ಯಾನರ್ ಚಿತ್ರಗಳು, ಮುದ್ರಣಗೊಂಡ ಪಠ್ಯ, ಕೈ ಬರಹ, ಅಥವಾ ಒಂದು ವಸ್ತುವನ್ನು ನೋಟದಿಂದ ಕ್ಷಿಪ್ರವಾಗಿ ವೀಕ್ಷಿಸುವ ಒಂದು ಸಾಧನವಾಗಿದೆ ಮತ್ತು ಅವುಗಳನ್ನು ಒಂದು ಡಿಜಿಟಲ್ ಚಿತ್ರಕ್ಕೆ ಮಾರ್ಪಡಿಸುತ್ತದೆ. ಕಚೇರಿಗಳಲ್ಲಿ ಕಂಡುಬರುವ ಸಾಮಾನ್ಯ ಉದಾಹರಣೆಗಳೆಂದರೆ ಡೆಸ್ಕ್‌ಟಾಪ್ (ಅಥವಾ ಫ್ಲಾಟ್‌ಬೆಡ್) ಸ್ಕ್ಯಾನರ್ ಅವುಗಳಲ್ಲಿ ದಾಖಲೆಯನ್ನು ಒಂದು ಗಾಜಿನ ಕಿಟಕಿಯ ಮೇಲೆ ಸ್ಕ್ಯಾನ್‌ಮಾಡಲು ಇರಿಸಲಾಗುತ್ತದೆ. ಹ್ಯಾಂಡ್ ಹೆಲ್ಡ್ ಸ್ಕ್ಯಾನರ್‌ಗಳು , ಇವುಗಳ ಸಾಧನವನ್ನು ಕೈಯ ಮೂಲಕ ಸರಿಸಲಾಗುತ್ತದೆ, ಪಠ್ಯ ಸ್ಕ್ಯಾನ್ ಮಾಡುವ "ವ್ಯಾಂಡ್ಸ್"ಗಳಿಂದ 3D ಸ್ಕ್ಯಾನರ್‌ಗಳಿಗೆ ರೂಪಗೊಂಡಿವೆ, ಅವುಗಳನ್ನು ಕೈಗಾರಿಕ ವಿನ್ಯಾಸ, ವಿರುದ್ಧವಾದ ಇಂಜಿನಿಯರಿಂಗ್, ಪರೀಕ್ಷೆ ಮತ್ತು ಮಾಪನ, ಅರ್ಥೊಟಿಕ್ಸ್, ಆಟ ಮತ್ತು ಇತರೆ ಅನ್ವಯಿಸುವಿಕೆಗಳಿಗೆ ಬಳಸಲಾಗುತ್ತದೆ. ತನ್ನಷ್ಟಕ್ಕೆ ತಾನೇ ಚಾಲಿತ ಸ್ಕ್ಯಾನರ್‌ಗಳು ಚಲಿಸುವ ದಾಖಲೆಯನ್ನು ದೊಡ್ಡ- ವಿಧಾನದ ದಾಖಲೆಗಳಿಗೆ ವಿಶಿಷ್ಟವಾಗಿ ಬಳಸಲಾಗುತ್ತದೆ, ಅವುಗಳಲ್ಲಿ ಒಂದು ಫ್ಲಾಟ್‌ಬೆಡ್ ವಿನ್ಯಾಸವು ಕಾರ್ಯಸಾಧ್ಯವಲ್ಲದ್ದಾಗಿರುತ್ತದೆ.
ಅಧುನಿಕ ಸ್ಕ್ಯಾನರ್‌ಗಳು ಒಂದು ಚಾರ್ಜ್-ಕಪಲ್ಡ್ ಡಿವೈಸ್ (CCD) ಅಥವಾ ಒಂದು ಸಂಪರ್ಕ ಚಿತ್ರ ಸಂವೇದಕ (CIS) ಅನ್ನು ಚಿತ್ರ ಸಂವೇದಕವಾಗಿ ವಿಶಿಷ್ಟವಾಗಿ ಬಳಸುತ್ತದೆ, ಆದ್ಯಾಗಿ ಹಳೆಯ ಡ್ರಮ್ ಸ್ಕ್ಯಾನರ್‌ಗಳು ಒಂದು ಫೋಟೊಮಲ್ಟಿಪ್ಲೈಯರ್ ಟ್ಯೂಬ್ ಅನ್ನು ಚಿತ್ರ ಸಂವೇದಕವಾಗಿ ಬಳಸುತ್ತದೆ. ಒಂದು ರೋಟರಿ ಸ್ಕ್ಯಾನರ್, ಅತಿ-ವೇಗದ ದಾಖಲೆ ಸ್ಕ್ಯಾನ್ ಮಾಡಲು ಬಳಸುವ, ಫೋಟೊಮಲ್ಟಿಪ್ಲೈಯರ್‌ನ ಬದಲಾಗಿ CCD ರಚನೆಯನ್ನು ಬಳಸುವ ಇನ್ನೊಂದು ವಿಧದ ಡ್ರಮ್ ಸ್ಕ್ಯಾನರ್. ಇತರೆ ವಿಧದ ಸ್ಕ್ಯಾನರ್‌ಗಳೆಂದರೆ ಪ್ಲಾನೆಂಟರಿ ಸ್ಕ್ಯಾನರ್‌ಗಳು, ಅವುಗಳು ಪುಸ್ತಕಗಳ ಮತ್ತು ದಾಖಲೆಗಳ ಛಾಯಚಿತ್ರಗಳನ್ನು ತೆಗೆದುಕೊಳ್ಳುತ್ತವೆ, ಮತ್ತು 3D ಸ್ಕ್ಯಾನರ್‌ಗಳು, ಇವುಗಳು ವಸ್ತುಗಳ ಮೂರು-ಪರಿಮಾಣಗಳಿರುವ ಮಾದರಿಗಳ್ನ್ನು ಉತ್ಪಾದಿಸಲು ಉಪಯೋಗಿಸಲಾಗುತ್ತದೆ.
ಸ್ಕ್ಯಾನರ್‌ನ ಇನ್ನೊಂದು ಬಗೆಯೆಂದರೆ ಡಿಜಿಟಲ್ ಕ್ಯಾಮರ ಸ್ಕ್ಯಾನರ್‌ಗಳು, ಅವುಗಳು ರಿಪ್ರೊಗ್ರಾಫಿಕ್ ಕ್ಯಾಮರಗಳ ಪರಿಕಲ್ಪನೆಯ ಮೇಲೆ ಆಧಾರವಾಗಿದೆ. ಹೆಚ್ಚುತ್ತಿರುವ ವಿಶ್ಲೇಷಣ ಮತ್ತು ಹೊಸ ಲಕ್ಷಣಗಳಾದ ಕಂಪನ ವಿರೋಧ/ಅಲುಗಾಡದಿರುವ ಕಾರಣಗಳಿಂದ ಡಿಜಿಟಲ್ ಕ್ಯಾಮರಗಳು ಸಾಮಾನ್ಯ ಸ್ಕ್ಯಾನರ್‌ಗಳಿಗೆ ಒಂದು ಅಕರ್ಷಕ ಪರ್ಯಾಯವಾಗಿವೆ. ಹಾಗೆಯೇ ಸಾಂಪ್ರದಾಯಿಕ ಸ್ಕ್ಯಾನರ್‌ಗಳಿಗೆ (ಉದಾಹರಣೆಗೆ ವಿರೂಪ, ಪ್ರತಿಬಿಂಬಗಳು, ನೆರಳುಗಳು, ಕಡಿಮೆ ವಿಭಿನ್ನತೆ) ಹೋಲಿಸಿದರೆ ಇನ್ನೂ ಅನನುಕೂಲಗಳನ್ನು ಹೊಂದಿವೆ, ಡಿಜಿಟಲ್ ಕ್ಯಾಮರಗಳು ಅನುಕೂಲಗಳಾದ ವೇಗ, ಒಯ್ಯಲು ಅನುಕೂಲತೆ ಮತ್ತು ಪುಸ್ತಕದ ಬೆನ್ನನ್ನು ಹಾನಿ ಮಾಡದೆ ದಪ್ಪ ದಾಖಲೆಗಳ ನಯವಾದ ಡಿಜಿಟಲ್ ರೂಪವನ್ನು ಒದಗಿಸುತ್ತದೆ. ಹೊಸ ಸ್ಕ್ಯಾನ್ ಮಾಡುವ ತಂತ್ರಾಂಶಗಳು ಪೂರ್ಣ-ವರ್ಣ, ವಸ್ತುಗಳ ಫೋಟೊ-ವಾಸ್ತವಿಕ 3D ಮಾದರಿಗಳನ್ನು ಸೃಷ್ಟಿಸಲು ಡಿಜಿಟಲ್ ಕ್ಯಾಮರಗಳ ಜೊತೆ 3D ಸ್ಕ್ಯಾನರ್‌ಗಳನ್ನು ಸಂಯೋಜಿಸಿದೆ.
ಬಯೊಮೆಡಿಕಲ್ ಸಂಶೋಧನಾ ಕ್ಷೇತ್ರದಲ್ಲಿ, ಡಿಎನ್‌ಎ ಮೈಕ್ರೋಆಯ್‌ರೆಗಳ ಪತ್ತೆ ಹಚ್ಚುವಿಕೆ ಸಾಧನಗಳನ್ನು ಸಹ ಸ್ಕ್ಯಾನರ್‌ಗಳು ಎಂದು ಕರೆಯಲಾಗುತ್ತದೆ. ಆ ಸ್ಕ್ಯಾನರ್‌ಗಳು ಹೆಚ್ಚು-ವಿಶ್ಲೇಷಣ ವ್ಯವಸ್ಥೆಗಳಾಗಿವೆ (1 µm/ ಪಿಕ್ಸಲ್ ವರೆಗೆ) ಸೂಕ್ಷ್ಮ ದರ್ಶಕಗಳಿಗೆ ಸಮಾನರೂಪವಾಗಿವೆ. ಪತ್ತೆ ಹಚ್ಚುವಿಕೆಯು CCD ಅಥವಾ ಒಂದು ಫೋಟೊಮಲ್ಟಿಪ್ಲೈಯರ್ ಟ್ಯೂಬ್ (PMT) ಮೂಲಕ ಮಾಡಲಾಗುತ್ತದೆ.
ಐತಿಹಾಸಿಕ ದೃಷ್ಟಾಂತ
[ಬದಲಾಯಿಸಿ]ಸ್ಕ್ಯಾನರ್‌ಗಳನ್ನು ಮುಂಚಿನ ಟೆಲಿಫೋಟೊಗ್ರಾಫಿ ಇನ್‌ಪುಟ್ ಸಾಧನಗಳ ಉತ್ತರಾಧಿಕಾರಿ ಎಂದು ಪರಿಗಣಿಸಲಾಗುತ್ತದೆ, 60 ಅಥವಾ 120 rpmಯ ಸಾಮಾನ್ಯ ವೇಗದಲ್ಲಿ ಒಂದು ತಿರುಗುವ ಡ್ರಮ್ ಜೊತೆ ಒಂದು ಪ್ರತ್ಯೇಕ ಫೋಟೊಶೋಧಕವನ್ನು ಹೊಂದಿದೆ (ನಂತರದ ಮಾದರಿಗಳು 240 rpm ವರೆಗೆ). ಅವುಗಳು ಒಂದು ರೇಖೀಯ ಅನಲಾಗ್ AM ಸಂಕೇತವನ್ನು ಸಾಮಾನ್ಯ ದೂರವಾಣಿ ಧ್ವನಿ ಲೈನ್‌ಗಳ ಮೂಲಕ ಗ್ರಾಹಕಗಳಿಗೆ ಕಳಿಸುತ್ತದೆ, ಅವುಗಳು ಜೊತೆಯಾಗಿ ವಿಶೇಷ ಕಾಗದದ ಮೇಲೆ ಅನುಪಾತವಾಗಿ ಗಾಡತೆಯನ್ನು ಮುದ್ರಿಸುತ್ತದೆ. ಈ ವ್ಯವಸ್ಥೆಯು 1920ರಿಂದ 1990ರ ಮಧ್ಯದ ವರೆಗೆ ಮುದ್ರಣಾಲಯದಲ್ಲಿ ಉಪಯೋಗಿಸಲಾಗಿತ್ತು. ವರ್ಣ ಚಿತ್ರಗಳನ್ನು ನಿರಂತರವಾಗಿ ಮೂರು ಪ್ರತ್ಯೇಕ RGB ಶೋಧಿಸಿದ ಚಿತ್ರಗಳ ಹಾಗೆ ಕಳುಹಿಸಲಾಗುತ್ತದೆ, ಆದರೆ ರವಾನೆಯ ವೆಚ್ಚಗಳ ಕಾರಣದಿಂದ ಬರೀ ವಿಶೇಷ ಸಂದರ್ಭಗಳಿಗಾಗಿ ಮಾತ್ರ.
ವಿಧಗಳು
[ಬದಲಾಯಿಸಿ]ಡ್ರಮ್
[ಬದಲಾಯಿಸಿ]ಡ್ರಮ್ ಸ್ಕ್ಯಾನರ್‌ಗಳು ಚಿತ್ರ ಮಾಹಿತಿಯ ಜೊತೆ ಫೋಟೊಮಲ್ಟಿಪ್ಲೈಯರ್ ಟ್ಯೂಬ್‌ಗಳನ್ನು (PMT) ಸೆರೆಹಿಡಿಯುತ್ತದೆ, ಬದಲಾಗಿ ಶುಲ್ಕ-ಸೇರಿದ ಸಾಧನ(CCD) ರಚನೆಗಳು ಫ್ಲಾಟ್‌ಬೆಡ್ ಸ್ಕ್ಯಾನರ್‌ಗಳು ಮತ್ತು ಕಡಿಮೆ ಬೆಲೆಯ ಫಿಲ್ಮಂ ಸ್ಕ್ಯಾನರ್‌ಗಳಲ್ಲಿ ಕಂಡು ಬರುತ್ತದೆ. ಪ್ರತಿಫಲಿತ ಮತ್ತು ರವಾನೆ ಮೂಲಪ್ರತಿಗಳು ಅರ್ಕ್ಯಾಲಿಕ್ ಸಿಲಿಂಡರ್ ಸ್ಕ್ಯಾನರ್ ಡ್ರಮ್ ಮೇಲೆ ಏರಿಸಲ್ಪಡುತ್ತವೆ, ಮತ್ತು ಅದು ಅತ್ಯಂತ ವೇಗದಲ್ಲಿ ತಿರುಗುತ್ತದೆ ಮತ್ತು ಸ್ಕ್ಯಾನ್ ಮಾಡಬೇಕಾದ ವಸ್ತುವನ್ನು ಬೆಳಕಿನ ಮುಂದೆ ಹಾಯಿಸುತ್ತದೆ ಮತ್ತು ಅದು ಚಿತ್ರ ಮಾಹಿತಿಯನ್ನು PMT ಗಳ ಮೇಲೆ ಮೂಡಿಸುತ್ತದೆ. ಹೆಚ್ಚಿನ ಅಧುನಿಕ ಕಲರ್ ಡ್ರಮ್ ಸ್ಕ್ಯಾನರ್‌ಗಳು ಮೂರು ಸರಿಹೊಂದಿದ PMTಗಳನ್ನು ಉಪಯೋಗಿಸುತ್ತವೆ, ಅವುಗಳು ಕ್ರಮವಾಗಿ ಕೆಂಪು, ನೀಲಿ, ಮತ್ತು ಹಸಿರು ದೀಪವನ್ನು ಓದುತ್ತದೆ. ಮೂಲ ಚಿತ್ತಾರದಿಂದ ದೀಪವು ಪ್ರತ್ಯೇಕ ಕೆಂಪು, ನೀಲಿ, ಮತ್ತು ಹಸಿರು ಪ್ರಭೆ/ಕಿರಣಗಳಾಗಿ ಸ್ಕ್ಯಾನರ್‌ನ ಅಪ್ಟಿಕಲ್ ಬೆಂಚಿನಲ್ಲಿ ವಿಭಾಗವಾಗುತ್ತದೆ.
ಡ್ರಮ್ ಸ್ಕ್ಯಾನರ್ ಅದರ ಹೆಸರನ್ನು ಸ್ಪಷ್ಟ ಅಕ್ರೆಲಿಕ್ ಸಿಲಿಂಡರ್‌ನಿಂದ ಪಡೆದಿದೆ, ಡ್ರಮ್ ಮೇಲೆ ಸ್ಕ್ಯಾನಿಂಗ್‌ಗಾಗಿ ಮೂಲ ಚಿತ್ತಾರ ಅಧಿಕಗೊಂಡಿದೆ. ಗಾತ್ರವನ್ನು ಅವಲಂಬಿಸಿ, ಮೂಲಗಳನ್ನು 11"x17" ವರೆಗೆ ಏರಿಸಲು ಸಾಧ್ಯ, ಆದರೆ ಗರಿಷ್ಟ ಗಾತ್ರ ಉತ್ಪಾದಕರಿಂದ ಬದಲಾಗುತ್ತದೆ. ಡ್ರಮ್ ಸ್ಕ್ಯಾನರ್‌ಗಳ ಒಂದು ವಿಶಿಷ್ಟ ಗುಣ ಲಕ್ಷಣಗಳೆಂದರೆ ಸ್ವಾತಂತ್ರವಾಗಿ ಮಾದರಿ ಪ್ರದೇಶ/ವ್ಯಾಪ್ತಿ ಮತ್ತು ರಂದ್ರ ಗಾತ್ರವನ್ನು ನಿಯಂತ್ರಿಸುವ ಸಾಮರ್ಥ್ಯ. ಮಾದರಿ ಗಾತ್ರವೆಂದರೆ ಒಂದು ಪ್ರತ್ಯೇಕ ಪಿಕ್ಸೆಲ್ ಅನ್ನು ಸೃಷ್ಟಿಸಲು ಸ್ಕ್ಯಾನರ್ ಎನ್‌ಕೋಡರ್ (ಒಂದು ಸಾಧನ) ಓದುವ ವ್ಯಾಪ್ತಿ. ರಂದ್ರವು ನಿಜವಾದ ಆರಂಭ, ಅದು ಸ್ಕ್ಯಾನರ್‌ನ ಅಪ್ಟಿಕಲ್ ಬೆಂಚಿನ ಒಳಗೆ ದೀಪವನ್ನು ಎಡೆಗೊಡುತ್ತದೆ. ಪ್ರತ್ಯೇಕವಾಗಿ ರಂದ್ರ ಮತ್ತು ಮಾದರಿ ಗಾತ್ರವನ್ನು ನಿಯಂತ್ರಿಸುವ ಸಾಮರ್ಥ್ಯವು ಕಪ್ಪು ಮತ್ತು ಬಿಳಿ ಮತ್ತು ಬಣ್ಣದ ನೆಗೆಟಿವ್ ಮೂಲಗಳನ್ನು ಸ್ಕ್ಯಾನ್ ಮಾಡುವಾಗ, ಫಿಲ್ಮಂ ವಿನ್ಯಾಸವನ್ನು ಮಟ್ಟಸ ಮಾಡಲು ವಿಶಿಷ್ಟವಾಗಿ ಉಪಯುಕ್ತವಾಗುತ್ತದೆ.
ಡ್ರಮ್ ಸ್ಕ್ಯಾನರ್‌ಗಳು ಪ್ರತಿಫಲಿತ ಮತ್ತು ರವಾನೆಗೆ ಸಂಬಂಧಿಸಿದ ಎರಡೂ ಚಿತ್ತಾರಗಳನ್ನು ಸ್ಕ್ಯಾನ್ ಮಾಡಲು ಸಮರ್ಥವಾಗಿರತ್ತವೆ, ಒಂದು ಉತ್ತಮ ಗುಣಮಟ್ಟದ ಫ್ಲಾಟ್‌ಬೆಡ್ ಸ್ಕ್ಯಾನರ್ ಪ್ರತಿಫಲಿತ ಚಿತ್ತಾರದಿಂದ ಉತ್ತಮ ಸ್ಕ್ಯಾನ್‌ಗಳನ್ನು ತಯಾರಿಸುತ್ತದೆ. ಪರಿಣಾಮವಾಗಿ, ಡ್ರಮ್ ಸ್ಕ್ಯಾನರ್‌ಗಳನ್ನು ಅಪರೂಪವಾಗಿ ಮುದ್ರಣಗಳನ್ನು ಸ್ಕ್ಯಾನ್ ಮಾಡಲು ಬಳಸಲಾಗುತ್ತದೆ, ಈಗ ಉನ್ನತ ಗುಣಮಟ್ಟ, ದುಬಾರಿಯಲ್ಲದ ಫ್ಲಾಟ್‌ಬೆಡ್ ಸ್ಕ್ಯಾನರ್‌ಗಳು ಸರಾಗವಾಗಿ ಲಭ್ಯವಾಗುತ್ತವೆ. ಅದಾಗ್ಯೂ, ಚಲನಚಿತ್ರದಲ್ಲಿ ಡ್ರಮ್ ಸ್ಕ್ಯಾನರ್ ಹೆಚ್ಚು-ಮಿತಿ ಅನ್ವಯಿಸುವಿಕೆಗಳಿಗೆ ಆಯ್ಕೆಯ ಉಪಕರಣವಾಗಿ ಮಂದುವರಿಯುತ್ತಿದೆ. ಫಿಲ್ಮ್‌ಅನ್ನು ಸ್ಕ್ಯಾನರ್ ಡ್ರಮ್‌ಗೆ ವೆಟ್-ಮೌಂಟ್ ಮಾಡಬಹುದಾಗಿದೆ ಮತ್ತು ಅದು PMT ಗಳಿಗೆ ಅತ್ಯಂತ ಸಂವೇದನಾಶೀಲವಾಗಿರುವ ಕಾರಣದಿಂದಾಗಿ ಡ್ರಮ್‌ಸ್ಕ್ಯಾನರ್‌ಗಳು ಅತ್ಯಂತ ಸೂಕ್ಷ್ಮ ವಿವರಗಳನ್ನೂ ಫಿಲ್ಮ್‌ನಲ್ಲಿ ಸೆರೆಹಿಡಿಯಬಲ್ಲವಾಗಿವೆ.
ಕೆಲವು ಕಂಪೆನಿಗಳು ಮಾತ್ರ ಡ್ರಮ್ ಸ್ಕ್ಯಾನರ್‌ಗಳನ್ನು ಉತ್ಪಾದಿಸುವುದನ್ನು ಮುಂದುವರೆಸುತ್ತಿವೆ. ಕಳೆದ ದಶಕಗಳಿಂದ ಹೊಸ ಮತ್ತು ಬಳಿಸಿದ ಎರಡೂ ಘಟಕಗಳ ಬೆಲೆಗಳು ಕಡಿಮೆಯಾಗಿದೆ, CCD ಫ್ಲ್ಯಾಟ್‌ಬೆಡ್ ಮತ್ತು ಫಿಲ್ಮಂ ಸ್ಕ್ಯಾನರ್‌ಗಳಿಗೆ ಹೋಲಿಸಿದಾಗ ಅವುಗಳಿಗೆ ಇನ್ನೂ ಒಂದು ಗಣನೀಯವಾದ ಅರ್ಥಿಕ ತೊಡಗಿಕೆ ಅವಶ್ಯಕ. ಅದಾಗ್ಯೂ, ರೆಸುಲ್ಯೂಶನ್, ಬಣ್ಣ ಪರಿವರ್ತನೆಯ ಹಂತಗಳು, ಮತ್ತು ಮೌಲ್ಯ ಸಂರಚನೆಯಲ್ಲಿ ಅತ್ಯುತ್ತಮವಾಗಿರುವ ಸ್ಕ್ಯಾನ್‌ಗಳನ್ನು ತಯಾರಿಸಲು ಡ್ರಮ್ ಸ್ಕ್ಯಾನರ್‌ಗಳು ಸಮರ್ಥವಾಗಿರುವ ಕಾರಣದಿಂದ ಡ್ರಮ್ ಸ್ಕ್ಯಾನರ್‌ಗಳು ಬೇಡಿಕೆಯಲ್ಲಿ ಉಳಿದಿವೆ. ಹಾಗೂ, ಏಕೆಂದರೆ ಡ್ರಮ್ ಸ್ಕ್ಯಾನರ್‌ಗಳು 12,000 PPI ವರೆಗೆ ರೆಸೊಲ್ಯೂಶನ್‌ಗಳನ್ನು ಮಾಡಬಲ್ಲವು, ಅವುಗಳ ಬಳಕೆಯನ್ನು ಸಾಮಾನ್ಯವಾಗಿ ಸ್ಕ್ಯಾನ್ ಮಾಡಿದ ಚಿತ್ರವನ್ನು ದೊಡ್ದದು ಮಾಡಬೇಕಾದಾಗ ಸೂಚಿಸಲಾಗುತ್ತದೆ.
ಹೆಚ್ಚಿನ ಗ್ರಾಫಿಕ್- ಆರ್ಟ್ಸ್ ಕ್ರಿಯೆಗಳಲ್ಲಿ, ಅತಿ ಉನ್ನತ ಗುಣಮಟ್ಟದ ಫ್ಲಾಟ್‌ಬೆಡ್ ಸ್ಕ್ಯಾನರ್‌ಗಳು ಡ್ರಮ್ ಸ್ಕ್ಯಾನರ್‌ಗಳ ಸ್ಥಾನ ಪಡೆದಿವೆ, ಎರಡೂ ದುಬಾರಿಯಲ್ಲದ ಮತ್ತು ವೇಗವುಳ್ಳದ್ದಾಗಿದೆ. ಅದಾಗ್ಯೂ, ಡ್ರಮ್ ಸ್ಕ್ಯಾನರ್‌ಗಳು ಹೆಚ್ಚು ಮಿತಿಯ ಅನ್ವಯಿಸುವಿಕೆಗಳಲ್ಲಿ ಬಳಸಲ್ಪಡುವುದು ಮುಂದುವರೆದಿದೆ, ಅವುಗಳೆಂದರೆ ಫೋಟೊಗ್ರಾಫ್‌ಗಳ ಮ್ಯೂಸಿಯಮ್ ಗುಣಮಟ್ಟದ ಒಟ್ಟುಗೂಡಿಕೆ ಮತ್ತು ಉನ್ನತ ದರ್ಜೆಯ ಪುಸ್ತಕಗಳ ಮತ್ತು ನಿಯತಕಾಲಿಕ ಜಾಹೀರಾತುಗಳ ಮದ್ರಣ ಉತ್ಪಾದನೆ. ಹೆಚ್ಚುವರಿಯಾಗಿ, ಮೊದಲೇ ಬಳಸಿದ ಘಟಕಗಳ ಹೆವ್ಚ್ಚಿನ ಲಭ್ಯತೆಯ ಕಾರಣದಿಂದ, ಹಲವು ಫೈನ್ ಆರ್ಟ್ ಫೋಟೊ ಗ್ರಾಫರ್‌ಗಳು ಡ್ರಮ್ ಸ್ಕ್ಯಾನರ್‌ಗಳನ್ನು ಹೊಂದುತ್ತಿದ್ದಾರೆ, ಅದು ಯಂತ್ರಗಳಿಗಾಗಿ ಒಂದು ಹೊಸ ಸೂಕ್ತ ಮಾರುಕಟ್ಟೆಯನ್ನು ಸೃಷ್ಟಿಸಿದೆ.
ಮೊದಲು ಅಭಿವೃದ್ಧಿ ಪಡಿಸಿದ ಪ್ರಥಮ ಚಿತ್ರ ಸ್ಕ್ಯಾನರ್ ಎಂದರೆ ಡ್ರಮ್ ಸ್ಕ್ಯಾನರ್. ಅದನ್ನು 1957ರಲ್ಲಿ US ನ್ಯಾಷನಲ್ ಬ್ಯುರೋ ಅಫ್ ಸ್ಟ್ಯಾಂಡರ್ಡ್ಸ್‌ನಲ್ಲಿ ರುಸ್ಸೆಲ್ಲ್ ಕಿರ್ಸ್ಚ್ ಮುಂದಾಳತ್ವದ ಒಂದು ತಂಡ ರಚಿಸಿತು. ಈ ಯಂತ್ರದಲ್ಲಿ ಮೊದಲು ಸ್ಕ್ಯಾನ್ ಮಾಡಿದ ಚಿತ್ರ ಕಿರ್ಸ್ಚ್‌ನ ಮೂರು ತಿಂಗಳ ಮಗ ವಾಲ್ಡೆನ್‌ನ 5 ಸೇ.ಮಿ ಚೌಕದ ಫೋಟೊ ಆಗಿತ್ತು. ಕಪ್ಪು ಮತ್ತು ಬಿಳಿಪು ಚಿತ್ರ ಒಂದು ಬದಿಯಲ್ಲಿ 176 ಪಿಕ್ಸೆಲ್‌ಗಳ ರೆಸೊಲ್ಯೂಶನ್ ಹೊಂದಿತ್ತು.[೧]
ಫ್ಲ್ಯಾಟ್‌ಬೆಡ್
[ಬದಲಾಯಿಸಿ]ಒದು ಫ್ಲ್ಯಾಟ್‌ಬೆಡ್ ಸಮಾನ್ಯವಾಗಿ ಒಂದು ಗಾಜಿನ ಹಲಗೆಯಿಂದ (ಅಥವಾ ಫಲಕ) ರಚಿತವಾಗಿರುತ್ತದೆ, ಅದರ ಅಡಿಯಲ್ಲಿ ಒಂದು ಪ್ರಕಾಶಮಾನವಾದ ದೀಪವಿರುತ್ತದೆ (ಯಾವಾಗಲೂ ಸೆನಾನ್ ಅಥವಾ ಕೋಲ್ಡ್ ಕ್ಯಾಥೋಡ್ ಪ್ಲೋರೆಸೆಂಟ್) ಅದು ಫಲಕವನ್ನು, ಮತ್ತು CCD ಸ್ಕ್ಯಾನಿಂಗ್‌ನಲ್ಲಿ ಚಲಿಸುವ ಅಪ್ಟಿಕಲ್ ರಚನೆಯನ್ನು ಬೆಳಗಿಸುತ್ತದೆ. CCD-ವಿಧದ ಸ್ಕ್ಯಾನರ್‌ಗಳು ವಿಶಿಷ್ಟವಾಗಿ ಕೆಂಪು, ಹಸಿರು, ಮತ್ತು ನೀಲಿ ಶೋಧಕಗಳ ಸಂವೇದಕಗಳ ಮೂರು ಸಾಲುಗಳನ್ನು (ವ್ಯೂಹರಚನೆಗಳು) ಹೊಂದಿರುತ್ತದೆ. CIS ಸ್ಕ್ಯಾನಿಂಗ್ ಹೊಳೆಯುವಂತೆ ಮಾಡಿದ ಕೆಂಪು, ಹಸಿರು ಮತ್ತು ನೀಲಿ LEDಗಳ ಒಂದು ಚಲಿಸುವ ಗುಂಪನ್ನು ಹೊಂದಿರುತ್ತಿದ್ದು ಬೆಳಕಿನ ಸಂಪರ್ಕಕ್ಕಾಗಿ ಒಂದು ಸಂಪರ್ಕಿತ ಒಂದೇಬಣ್ಣದ ಫೋಟೋಡಯೋಡ್ ವ್ಯೂಹರಚನೆಯನ್ನು ಹೊಂದಿದೆ. ಸ್ಕ್ಯಾನ್ ಮಾಡಬೇಕಾದ ಚಿತ್ರಗಳನ್ನು ಗಾಜಿನ ಮೇಲೆ ಮುಖ ಕೇಳಗೆ ಮಾಡಿ ಇಡಲಾಗುತ್ತದೆ, ಆವರಿಸಿರುವ ಬೆಳಕನ್ನು ಸೇರಸದಿರಲು ಒಂದು ಅಪಾರದರ್ಶಕ ಹೊದಿಕೆ ಅದರ ಕೆಳಗೆ ಬರುವಂತೆ ಮಾಡಲಾಗುತ್ತದೆ, ಮತ್ತು ಸಂವೇದಕ ವ್ಯೂಹ ರಚನೆ ಮತ್ತು ಬೆಳಕಿನ ಮೂಲ ಪೂರ್ತಿ ಪ್ರದೇಶವನ್ನು ಓದುತ್ತ ಫಲಕದ ಅಡ್ಡಲಾಗಿ ಚಲಿಸುತ್ತದೆ. ಒಂದು ಚಿತ್ರವು ಆದ್ದರಿಂದ ನಿರ್ದೇಶಕನಿಗೆ ಮಾತ್ರ ಗೋಚರಿಸುತ್ತದೆ ಏಕೆಂದರೆ ಅದು ಪ್ರತಿಫಲಿಸುವ ಬೆಳಕಿನಿಂದ. ಪಾರದರ್ಶಕ ಚಿತ್ರಗಳು ಈ ವಿಧಾನದಲ್ಲಿ ಕೆಲಸಮಾಡುವುದಿಲ್ಲ, ಮತ್ತು ಮೇಲ್‌ಭಾಗದಿಂದ ಅವುಗಳನ್ನು ಪ್ರಕಾಶಿಸುವ ವಿಶೇಷ ಪರಿಕರಗಳು ಅವಶ್ಯಕ. ಹಲವು ಸ್ಕ್ಯಾನರ್‌ಗಳು ಇದನ್ನು ಒಂದು ಆಯ್ಕೆಯಂತೆ ನೀಡುತ್ತದೆ.
ಚಲನಚಿತ್ರ
[ಬದಲಾಯಿಸಿ]ವಿಶೇಷವಾಗಿ ಈ ಉದ್ದೇಶಕ್ಕಾಗಿ ಉತ್ಪಾದಿಸಿದ ಉಪಕರಣದಲ್ಲಿ "ಸ್ಲೈಡ್" (ಧನಾತ್ಮಕ) ಅಥವಾ ಋಣಾತ್ಮಕ ಫಿಲ್ಮಂ ಅನ್ನು ಸ್ಕ್ಯಾನ್ ಮಾಡಲು ಸಾಧ್ಯ. ಸಾಮಾನ್ಯವಾಗಿ, ಆರು ಫ್ರೇಮ್‌ಗಳ ಕತ್ತರಿಸದ ಫಿಲ್ಮಂ ಸ್ಟ್ರಿಪ್‌ಗಳು, ಅಥವಾ ನಾಲ್ಕು ಏರಿದ ಸ್ಲೈಡ್‌ಗಳನ್ನು ಒಂದು ವಾಹಕದ ಒಳಗೆ ಸೇರಿಸಲಾಗಿರುತ್ತದೆ, ಅವುಗಳನ್ನ ಒಂದು ಮಸೂರದ ಅಡ್ಡಲಾಗಿ ಒಂದು ಸ್ಟೆಪ್ಪರ್ ಮೊಟಾರ್ ಮತ್ತು ಸ್ಕ್ಯಾನರ್ ಒಳಗೆ CCD ಸಂವೇದಕದ ಮೂಲಕ ಸ್ಥಳಾಂತರಿಸಲಾಗುತ್ತದೆ. ಕೆಲವು ಮಾದರಿಗಳನ್ನು ಮುಖ್ಯವಾಗಿ ಒಂದೇ ಗಾತ್ರದ ಸ್ಕ್ಯಾನ್‌ಗಳಾಗಿ ಉಪಯೋಗಿಸಲಾಗುತ್ತದೆ.
ಕೈ
[ಬದಲಾಯಿಸಿ]ಕೈ ಸ್ಕ್ಯಾನರ್‌ಗಳು ಎರಡು ವಿಧಗಳಲ್ಲಿ ಕಂಡು ಬರುತ್ತದೆ: ದಾಖಲೆ ಮತ್ತು 3D ಸ್ಕ್ಯಾನರ್‌ಗಳು. ಕೈ ಒಳಗೊಂಡ ದಾಖಲೆ ಸ್ಕ್ಯಾನರ್‌ಗಳು ಕೈಯಿಂದ ನೆಡೆಸುವ ಸಾಧನಗಳು ಅವುಗಳು ಚಿತ್ರದ ಮೇಲ್ಮೈಯನ್ನು ಸ್ಕ್ಯಾನ್ ಮಾಡಲು ಅಡ್ಡಲಾಗಿ ಎಳೆಯುತ್ತದೆ. ಒಂದು ಅಸಮವಾದ ಸ್ಕ್ಯಾನ್ ಮಾಡುವ ಪ್ರಮಾಣವು ವಿರೂಪಗೊಂಡ ಚಿತ್ರಗಳನ್ನು ಉತ್ಪಾದಿಸುವುದರಿಂದ - ಈ ವಿಧಾನದಲ್ಲಿ ಸ್ಕ್ಯಾನ್ ಮಾಡುವ ದಾಖಲೆಗಳು/ಕಾಗದ-ಪತ್ರಗಳಿಗೆ ಒಂದು ಸ್ಥಿರ ಕೈ ಅವಶ್ಯಕ, ಚಲನೆಯು ಅತಿ ವೇಗವಾದರೆ ಸ್ಕ್ಯಾನರ್ ಮೇಲೆ ಒಂದು ಸಣ್ಣ ಬೆಳಕು ತೋರಿಸುತ್ತದೆ. ಅವುಗಳು ವಿಶಿಷ್ಟವಾಗಿ ಒಂದು "ಆರಂಭ" ಬಟನ್ ಅನ್ನು ಹೊಂದಿರುತ್ತದೆ, ಅದನ್ನು ಬಳಕೆದಾರ ಸ್ಕ್ಯಾನ್‌ಗಳ ಸಮಯದಲ್ಲಿ ಹಿಡಿದುಕೊಳ್ಳುತ್ತಾನೆ; ಅಪ್ಟಿಕಲ್ ರೆಸೊಲ್ಯೂಶನ್ ಅನ್ನು ನಿಗದಿ ಪಡಿಸಲು ಕೆಲವು ಸ್ವಿಚ್‌ಗಳನ್ನು ಹೊಂದಿರುತ್ತದೆ; ಮತ್ತು ಒಂದು ರೋಲರ್, ಅದು ಕಂಪ್ಯೂಟರ್ ಜೊತೆ ಹೊಂದಾಣಿಕೆ ಮಾಡಲು ಒಂದು ಗಡಿಯಾರದ ಮಿಡಿತವನ್ನು ಉತ್ಪಾದಿಸುತ್ತದೆ. ಹೆಚ್ಚಿನ ಕೈ ಸ್ಕ್ಯಾನರ್‌ಗಳು ಏಕವರ್ಣದ್ದಾಗ್ಗಿದ್ದವು, ಮತ್ತು ಚಿತ್ರವನ್ನು ಸ್ಪಷ್ಟಗೊಳಿಸಲು ಹಸಿರು LEDಗಳ ಒಂದು ರಚನೆಯಿಂದ ಬೆಳಕನ್ನು ಉತ್ಪಾದಿಸುತ್ತಿದವು. ಒಂದು ವಿಶಿಷ್ಟವಾದ ಕೈ ಸ್ಕ್ಯಾನರ್ ಸಹ ಒಂದು ಸಣ್ನ ಕಿಟಿಕಿಯನ್ನು ಹೊಂದಿತ್ತು, ಅದರ ಮೂಲಕ ಸ್ಕ್ಯಾನ್‌ಗೊಂಡ ಕಾಗದ-ಪತ್ರಗಳನ್ನು ಸೋಡಲು ಸಾಧ್ಯವಾಗುತ್ತಿತ್ತು. ಅವುಗಳು 1990ರ ಆರಂಭದಲ್ಲಿ ಜನಪ್ರಿಯವಾಗಿದ್ದವು ಮತ್ತು ಸಾಮಾನ್ಯವಾಗಿ ಒಂದು ನಿರ್ಧಿಷ್ಟ ಪ್ರಕಾರದ ಕಂಪ್ಯೂಟರ್‌ಗಳಿಗಾಗಿ ಸ್ವಾಮ್ಯದ ಇಂಟರ್‌ಫೇಸ್ ಮಾಡ್ಯೂಲ್‌ಗಳನ್ನು ಹೊಂದಿದ್ದವು, ಅಂದರೆ ಸಾಮಾನ್ಯವಾಗಿ ಒಂದು ಅಟಾರಿ ಎಸ್‌ಟಿ ಅಥವಾ ಕೊಮೊಡೊರ್ ಅಮಿಗಾ.
ಹಾಗೆ ದಾಖಲೆ ಸ್ಕ್ಯಾನಿಂಗ್‌ನ ಜನಪ್ರಿಯತೆ ತಗ್ಗಿತು, ಕೈಯಿಂದ ನೆಡೆಸುವ 3D ಸ್ಕ್ಯಾನರ್‌ಗಳ ಉಪಯೋಗ ಹಲವು ಬಳಕೆಗಳಿಗೆ ಉಳಿಯಿತು, ಅವುಗಳಲ್ಲಿ ಕೈಗಾರಿಕ ವಿನ್ಯಾಸ, ವಿರುದ್ಧವಾದ ಇಂಜಿನಿಯರಿಂಗ್, ಪರಿಶೀಲನೆ & ವಿಶ್ಲೇಷಣೆ, ಡಿಜಿಟಲ್ ಉತ್ಪಾದನೆ ಮತ್ತು ವೈದ್ಯಕೀಯ ಅನ್ವಯಿಸಿಕೆಗಳು ಒಳಗೊಂಡಿವೆ. ಮಾನವ ಕೈಯ ಅಸಮ ಚಲನೆಗೆ ಸರಿದೂಗಿಸಲು, ಹೆಚ್ಚಿನ 3D ಸ್ಕ್ಯಾನ್ ಮಾಡುವ ವ್ಯವಸ್ಥೆಗಳು ಉಲ್ಲೇಖ ಗುರುತಿಟ್ಟುಕೊಳ್ಳುವ ಸಾಧನ ನಿಯೋಜನೆ ಮೇಲೆ ಅವಲಂಬಿಸಿರುತ್ತಾರೆ - ವಿಶಿಷ್ಟವಾಗಿ ಜಾಗದಲ್ಲಿ ಅಂಶಗಳನ್ನು ಜೋಡಿಸಲು ಮತ್ತು ಸ್ಥಾನಗಳನು ಗುರುತು ಮಾಡಲು ಅಂಟು ಪ್ರತಿಪಲಿತ ಟ್ಯಾಬ್‌ಗಳನ್ನು ಸ್ಕ್ಯಾನರ್ ಬಳಸುತ್ತದೆ.
ಗುಣಮಟ್ಟ
[ಬದಲಾಯಿಸಿ]ಸ್ಕ್ಯಾನರ್‌ಗಳು ವ್ಯೂಹ ರಚನೆಯಿಂದ ಕೆಂಪು-ಹಸಿರು-ನೀಲಿ ಬಣ್ಣದ (RGB) ಡೇಟಾವನ್ನು ವಿಶಿಷ್ಟವಾಗಿ ಓದುತ್ತದೆ. ನಂತರದಲ್ಲಿ ಈ ಡೇಟಾವನ್ನು ಕೆಲವು ಸ್ವಾಮ್ಯದ ಆಲ್ಗಾರಿದಮ್ ಜೊತೆಗೆ ಪ್ರಕ್ರಿಯೆಗೊಳಪಡಿಸುವ ಮೂಲಕ ಭಿನ್ನವಾದ ಅನಾವರಣ ಪರಿಸ್ಥಿತಿಗಳನ್ನು ಸರಿಪಡಿಸಬಹುದಾಗಿದೆ, ಮತ್ತು ಅದನ್ನು ಕಂಪ್ಯೂಟರ್‌ಗೆ ಸಾಧನಗಳ ಇನ್‌ಪುಟ್/ಔಟ್‌ಪುಟ್ ಇಂಟರ್‌ಫೇಸ್ ಮುಖಾಂತರ (ಸಾಮಾನ್ಯವಾಗಿ USB ಪ್ರಮಾಣಗಳಿಗಿಂತ ಮೊದಲಿನ SCSI ಅಥವಾ ಎರೆಡುದಿಕ್ಕಿನ ಪ್ಯಾರಲಲ್ ಪೋರ್ಟ್ ಮುಖಾಂತರ) ಕಳುಹಿಸಬಹುದಾಗಿದೆ. ಬಣ್ಣ ದ ಗಾಢತೆ ಯು ಸ್ಕ್ಯಾನ್ ಮಾಡುವ ವ್ಯೂಹ ರಚನೆಯ ಗುಣಲಕ್ಷಣಗಳನ್ನು ಅವಲಂಬಿಸಿ ಮಾರ್ಪಡಾಗುತ್ತದೆ, ಆದರೆ ಸಾಮಾನ್ಯವಾಗಿ ಕನಿಷ್ಟ 24 ಬಿಟ್‌ಗಳಲ್ಲಿರುತ್ತವೆ. ಉತ್ಕೃಷ್ಟ ಗುಣಮಟ್ಟದ ಮಾದರಿಗಳು 48 ಅಥವಾ ಹೆಚ್ಚು ಬಣ್ಣದ ಗಾಢತೆಯನ್ನು ಹೊಂದಿದವೆ. ಒಂದು ಸ್ಕ್ಯಾನರ್‌ಗೆ ಇತರೆ ಅರ್ಹತೆಪಡೆದ ನಿಯತಾಂಕ ಅದರ ರೆಸಲ್ಯೂಶನ್ , ಅದನ್ನು ಪ್ರತಿ ಇಂಚಿಗೆ ಪಿಕ್ಸೆಲ್‌ನಲ್ಲಿ (ppi)ಅಳೆಯಲಾಗುತ್ತದೆ, ಕೆಲವು ವೇಳೆ ಹೆಚ್ಚು ಖಚಿತವಾಗಿ ಪ್ರತಿ ಇಂಚಿಗೆ ಮಾದರಿಗಳಂತೆ (spi) ಉಲ್ಲೇಖಿಸಲಾಗುತ್ತದೆ. ಸ್ಕ್ಯಾನರ್‌ನ ನಿಜವಾದ ಅಪ್ಟಿಕಲ್ ರೆಸೊಲ್ಯೂಶನ್ ಅನ್ನು ಬಳಸುವ ಬದಲು, ಅರ್ಥಪೂರ್ಣ ನಿಯತಾಂಕ ಮಾತ್ರ ಬಳಸಲಾಗುತ್ತದೆ, ಉತ್ಪಾದಕರು ಮಧ್ಯಸೇರಿಸಿದ ರೆಸೊಲ್ಯೂಶನ್ ಗೆ ಉಲ್ಲೇಖಿಸಲು ಇಷ್ಟಪಡುತ್ತಾರೆ, ಅದು ಸಾಫ್ಟ್‌ವೇರ್ ಮಧ್ಯಸೇರಿಸುವಿಕೆಗೆ ಅತಿ ಉನ್ನತ ಮೆಚ್ಚುಗೆಗಳು. As of 2009[update][[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]] ಒಂದು ಹೆಚ್ಚು-ಮಿತಿಯ ಫ್ಲಾಟ್‌ಬೆಡ್ ಸ್ಕ್ಯಾನರ್ 5400 ppi ವರೆಗೆ ಸ್ಕ್ಯಾನ್ ಮಾಡಲು ಸಾಧ್ಯ ಮತ್ತು ಒಂದು ಒಳ್ಳೆಯ ಡ್ರಮ್ ಸ್ಕ್ಯಾನರ್ 12,000 ppiಯ ಒಂದು ಅಪ್ಟಿಕಲ್ ರೆಸೊಲ್ಯೂಶನ್‌ನನ್ನು ಹೊಂದಿದೆ.
ಉತ್ಪಾದಕರು ಯಾವಾಗಲೂ ಮಧ್ಯಸೇರಿಸಿದ ರೆಸೊಲ್ಯೂಶನ್‌ಗಳನ್ನು 19,200 ppi ಯಷ್ಟು ಉನ್ನತ ಮಟ್ಟದ್ದು ಎಂದು ಹೇಳುತ್ತಾರೆ; ಆದರೆ ಆ ಸಂಖ್ಯೆಗಳು ಕಡಿಮೆ ಅರ್ಥಪೂರ್ಣ ಮೌಲ್ಯವನ್ನು ಹೊಂದಿರುತ್ತವೆ, ಏಕೆಂದರೆ ಮಧ್ಯಸೇರಿಸಿದ ಪಿಕ್ಸೆಲ್‌ಗಳ ಸಂಭವನೀಯ ಸಂಖ್ಯೆ ಅಪರಿಮಿತ.
ಸೃಷ್ಟಿಸಿದ ಫೈಲ್‌ನ ಗಾತ್ರವು ರೆಸೊಲ್ಯೂಶನ್‌ನ ಚೌಕ/ಚದರ ಜೊತೆ ಹೆಚ್ಚುತ್ತದೆ; ರೆಸೊಲ್ಯೂಶನ್ ಅನ್ನು ದ್ವಿಗುಣಗೊಳಿಸಿದಾಗ ಫೈಲ್‌ನ ಗಾತ್ರ ನಾಲ್ಮಡಿ/ನಾಲ್ಕರಷ್ಟಾಗುತ್ತದೆ. ಉಪಕರಣದ ಅರ್ಹತೆಗಳ ಒಳಗೆ ಒಂದು ರೆಸುಲ್ಯೂಸನ್‌ನನ್ನು ಆಯ್ಕೆಮಾಡಿಕೊಳ್ಳಬೇಕು, ಬೇಕಾದಷ್ಟು ವಿವರವನ್ನು ಸುರಕ್ಷಿತವಾಗಿಡುತ್ತದೆ, ಮತ್ತು ಮಿತಿಮೀರಿದ ಗಾತ್ರದ ಫೈಲ್ ಅನ್ನು ತಯಾರಿಸುವುದಿಲ್ಲ. "ಲೊಸ್ಸಿ" ಸಂಕ್ಷೇಪಿಸುವ ವಿಧಾನಗಳಾದ JPEG ಬಳಸುವ ಮೂಲಕ, ಗುಣಮಟ್ಟದಲ್ಲಿನ ಕೆಲವು ವೆಚ್ಚದಲ್ಲಿ, ನೀಡಿದ ರೆಸೊಲ್ಯೂಶನ್‌ಗೆ ಫೈಲ್ ಗಾತ್ರವನ್ನು ಕಡಿಮೆ ಮಾಡಲು ಸಾಧ್ಯ. ಉತ್ತಮ ಸಂಭವನೀಯ ಗುಣಮಟ್ಟ ಅಗತ್ಯವಾದರೆ ನಷ್ಟಕಡಿಮೆಯ ಸಂಕ್ಷೇಪಿತವನ್ನೇ ಬಳಸಬೇಕು; ಸಣ್ಣ ಗಾತ್ರದ ಕಡಿಮೆಯಾದ-ಗುಣಮಟ್ಟದ ಫೈಲ್‌ಗಳನ್ನು ಆ ರೀತಿಯ ಚಿತ್ರಗಳಿಂದ ಅಗತ್ಯವಿದ್ದಾಗ ತಯಾರಿಸಬಹುದು (ಉದಾ. ಒಂದು ಪೂರ್ಣ ಹಾಳೆಯ ಮೇಲೆ ಮುದ್ರಿಸಲು ವಿನ್ಯಾಸಗೊಳಿಸಿದ ಚಿತ್ರ, ಮತ್ತು ಒಂದು ಮತ್ತು ವೇಗವಾಗಿ ಲೋಡ್ ಆಗುವ ವೆಬ್ ಪೆಜ್‌ನ ಒಂದು ಭಾಗದಂತೆ ತೋರಿಸುವ ಒಂದು ಸಣ್ಣದಾದ ಫೈಲ್).
ಒಂದು ಸ್ಕ್ಯಾನರ್‌ಗೆ ಮೂರನೆ ಮುಖ್ಯ ಮಾನದಂಡವೆಂದರೆ ಅದರ ಸಾಂದ್ರತೆಯ ಶ್ರೇಣಿ . ಒಂದು ಸಾಂದ್ರತೆಯ ಶ್ರೇಣಿ ಎಂದರೆ ಒಂದು ಸ್ಕ್ಯಾನ್‌ನಲ್ಲಿ ನೆರಳಿನ ವಿವರಗಳು ಮತ್ತು ಹೊಳಪಿನ ವಿವರಗಳನ್ನು ಉತ್ಪಾದಿಸಲು ಸ್ಕ್ಯಾನರ್ ಶಕ್ತ ಎಂದು ಅರ್ಥ.
3D ಮಾದರಿಗಳ ಜೊತೆ ಪೂರ್ಣ ವರ್ಣ ವಿನ್ಯಾಸವನ್ನು ಒಟ್ಟುಗೂಡಿಸುವ ಮೂಲಕ, ಅಧುನಿಕ ಕೈಯಿಂದ ನೆಡೆಸುವ ಸ್ಕ್ಯಾನರ್‌ಗಳು ಸಂಪೂರ್ಣವಾಗಿ ವಸ್ತುಗಳನ್ನು ವಿದ್ಯುಜ್ಜನಿತವಾಗಿ ಪುನರ್‌ಉತ್ಪಾದಿಸಲು ಸಮರ್ಥವಾಗಿರುತ್ತವೆ. 3D ಕಲರ್ ಪ್ರಿಂಟರ್‌ಗಳ ಸೇರ್‌ಪಡೆ ಈ ವಸ್ತುಗಳನ್ನು ನಿಖರವಾಗಿ ಚಿಕ್ಕದಾಗಿಸುವುದನ್ನು ಹಲವು ಕೈಗಾರಿಕೆಗಳು ಮತ್ತು ವೃತ್ತಿಗಳಲ್ಲಿ ಅನ್ವಯಿಸುವಿಕೆಗಳೊಂದಿಗೆ ಸಾಧ್ಯವಾಗಿಸುತ್ತದೆ.
ಕಂಪ್ಯೂಟರ್ ಸಂಪರ್ಕ
[ಬದಲಾಯಿಸಿ]ದಾಖಲೆಗಳನ್ನು ಸ್ಕ್ಯಾನ್ ಮಾಡುವುದು ಪ್ರಕ್ರಿಯೆಯ ಒಂದು ಭಾಗ ಮಾತ್ರ. ಸ್ಕ್ಯಾನ್ ಮಾಡಿದ ಚಿತ್ರ ಉಪಯುಕ್ತವಾಗಲು, ಅದನ್ನು ಸ್ಕ್ಯಾನರ್‌ನಿಂದ ಕಂಪ್ಯೂಟರ್‌ನಲ್ಲಿ ಚಾಲನೆಯಲ್ಲಿರುವ ಒಂದು ಅನ್ವಯಿಸುವಿಕೆಗೆ ವರ್ಗಾಯಿಸಬೇಕು. ಎರಡು ಮೂಲಭೂತ ವಿಷಯಗಳಿವೆ: (1) ಹೇಗೆ ಸ್ಕ್ಯಾನರ್ ದೈಹಿಕವಾಗಿ ಕಂಪ್ಯೂಟರ್‌ಗೆ ಸಂಪರ್ಕಗೊಂಡಿದೆ ಮತ್ತು (2) ಹೇಗೆ ಅನ್ವಯಿಸುವಿಕೆ ಸ್ಕ್ಯಾನರ್‌ನಿಂದ ಮಾಹಿತಿಯನ್ನು ಪತ್ತೆ ಹಚ್ಚುತ್ತದೆ.
ಒಂದು ಕಂಪ್ಯೂಟರ್‌ಗೆ ನೇರ ದೈಹಿಕ ಸಂಪರ್ಕ
[ಬದಲಾಯಿಸಿ]ದು ಸ್ಕ್ಯಾನರ್‌ನಿಂದ ಉತ್ಪಾದಿಸಿದ ಡೇಟಾದ ಮೊತ್ತವು ಅತಿ ದೊಡ್ಡದಾಗಿರಲು ಸಾಧ್ಯ: 600 DPI 9"x11" (A4 ಕಾಗದಕ್ಕಿಂತ ಸ್ಪಲ್ಪ ದೊಡ್ಡದು) ಸಂಕ್ಷೇಪಿಸದ 24-bit ಚಿತ್ರ ಡೇಟಾದ ಸುಮಾರು 100 ಮೆಗಬೈಟ್‌ಗಳು ಅದನ್ನು ವರ್ಗಾಯಿಸಬೇಕು ಮತ್ತು ಶೇಖರಿಸಬೇಕು. ಇತ್ತಿಚೀನ ಸ್ಕ್ಯಾನರ್‌ಗಳು ಡೇಟಾದ ಈ ಪ್ರಮಾಣವನ್ನು ಅಪೇಕ್ಷಣೀಯ ಒಂದು ವೇಗದ ಸಂಪರ್ಕವನ್ನು ಉಂಟುಮಾಡಿ, ಸೆಕೆಂಡ್‌ಗಳ ಒಳಗೆ ಉತ್ಪಾದಿಸುತ್ತದೆ.
ನಿಧಾನದಿಂದ ವೇಗಕ್ಕೆ ಪಟ್ಟಿಮಾಡಿ, ಕೆಳಗಿನ ದೈಹಿಕ ಅಂತರ ಸಂಪರ್ಕ ಸಾಧನಗಳಲ್ಲಿ ಒಂದನ್ನು ಬಳಸಿ ಸ್ಕ್ಯಾನರ್‌ಗಳು ಅವುಗಳ ಆತಿಥೇಯ ಕಂಪ್ಯೂಟರ್ ಅನ್ನು ಸಂಪರ್ಕಿಸುತ್ತದೆ:
- ಸಮಾನಾಂತರ - ಒಂದು ಸಮಾನಾಂತರ ಪೊರ್ಟ್ ಮೂಲಕ ಸಂಪರ್ಕಿಸಿವುದು ಅತ್ತಿ ನಿಧಾನದ ಸಾಮಾನ್ಯ ವರ್ಗಾವಣೆ ವಿಧಾನ. ಮೊದಲಿನ ಸ್ಕ್ಯಾನರ್‌ಗಳು ಸಮಾನಾಂತರ ಪೊರ್ಟ್ ಸಂಪರ್ಕಗಳನ್ನು ಹೊಂದಿದ್ದವು, ಅವುಗಳು 70 ಕಿಲೊಬೈಟ್‌ಗಳು/ಸೆಂಕೆಂಡು ಗಿಂತ ವೇಗವಾಗಿ ಡೇಟಾವನ್ನು ವರ್ಗಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಸಮಾನಾಂತರ ಪೊರ್ಟ್‌ಗಳ ಪ್ರಾಥಮಿಕ ಅನುಕೂಲತೆ ಎಂದರೆ ಆರ್ಥಿಕ: ಅದು ಅಂತರ ಸಂಪರ್ಕ ಕಾರ್ಡನ್ನು ಕಂಪ್ಯೂಟರಿಗೆ ಸೇರಿಸುವುದನ್ನು ನಿವಾರಿಸುತ್ತದೆ.
- GPIB - ಸಾಮಾನ್ಯ ಉದ್ದೇಶ ಅಂತರಸಂಪರ್ಕ ಬಸ್. ಕೆಲವು ಡ್ರಮ್ ಸ್ಕ್ಯಾನರ್‌ಗಳು ಉದಾಹರಣೆಗೆ ಹೌಟೆಕ್ D4000 SCSI ಮತ್ತು GPIB ಅಂತರಸಂಪರ್ಕ ಎರಡನ್ನೂ ಒಳಗೊಂಡಿದೆ. 70ರ ದಶಕದ ಮಧ್ಯದಲ್ಲಿ ಪರಿಚಯಿಸಲಾದ IEEE-488 ಪ್ರಮಾಣಕ್ಕೆ ನಂತರದ್ದು ಅನುಗುಣವಾಗಿದೆ. GPIB-ಅಂತರಸಂಪರ್ಕವನ್ನು ಕೆಲವು ಸ್ಕ್ಯಾನರ್ ಉತ್ಪಾದಕರಿಂದ ಮಾತ್ರ ಬಳಸಲ್ಪಡುತ್ತಿತ್ತು, ಹೆಚ್ಚಾಗಿ ಡಾಸ್/ವಿಂಡೋಸ್ ಪರಿಸರದಲ್ಲಿ ಕೆಲಸಮಾಡುವವರು. ಆಪ್ಯಲ್ ಮ್ಯಾಕಿನ್ಟೊಷ್ ವ್ಯವಸ್ಥೆಗಳಿಗೆ, ನ್ಯಾಷನಲ್ ಇನ್‌ಸ್ಟ್ರುಮೆಂಟ್ಸ್ ಒಂದು NuBus GPIB ಅಂತರ ಸಂಪರ್ಕ ಕಾರ್ಡನ್ನು ಒದಗಿಸಿದೆ.
- ಸಣ್ಣ ಕಂಪ್ಯೂಟರ್ ವ್ಯವಸ್ಥೆ ಅಂತರಸಂಪರ್ಕ(SCSI) , ಇದು ಹೆಚ್ಚಿನ ಕಂಪ್ಯೂಟರ್‌ಗಳಿಂದ ಒಂದು ಹೆಚ್ಚುವರಿ SCSI ಅಂತರಸಂಪರ್ಕ ಕಾರ್ಡ್ ಮೂಲಕ ಮಾತ್ರ ಬೆಂಬಲಿಸುತ್ತದೆ. ಕೆಲವು SCSI ಸ್ಕ್ಯಾನರ್‌ಗಳು ಒಂದು PCಗೆ ಒಂದು ಮೀಸಲಾದ SCSI ಕಾರ್ಡ್‌ನೊಂದಿಗೆ ಜೊತೆಯಾಗಿ ಪೂರೈಸುತ್ತದೆ, ಅದಾಗ್ಯೂ ಯಾವುದೇ SCSI ನಿಯಂತ್ರಕವನ್ನು ಬಳಸಲು ಸಾಧ್ಯ. SCSIನ ವಿಕಸನದ ಸಮಯದಲ್ಲಿ ಹಿಮ್ಮೊಗಗಳ ಹೊಂದಿಕೆಯಾಗುವಿಕೆಯ ಜೊತೆ, ಗುಣಮಟ್ಟದ ವೇಗಗಳು ಹೆಚ್ಚಾಯಿತು; ಒಂದು SCSI ಸಂಪರ್ಕವು ಡೇಟಾವನ್ನು ನಿಯಂತ್ರಕ ಮತ್ತು ಸಾಧನ ಎರಡೂ ಬೆಂಬಲಿಸುವ ಅತಿ ಹೆಚ್ಚಿನ ವೇಗದಲ್ಲಿ ವರ್ಗಾಯಿಸಲು ಸಾಧ್ಯ. ಗಣನೀಯವಾಗಿ USB and Firewireಗಳಿಂದ SCSIನ ಸ್ಥಳ ತುಂಬಿದೆ, ಅವುಗಳಲ್ಲಿ ಒಂದು ಅಥವಾ ಎರಡು ಹೆಚ್ಚಿನ ಕಂಪ್ಯೂಟರ್‌ಗಳಿಂದ ನೇರವಾಗಿ ಬೆಂಬಲಿಸಪ್ಲಡುತ್ತದೆ, ಮತ್ತು ಅವುಗಳು SCSIಗಿಂತ ಸ್ಥಾಪಿಸಲು ಸರಳ.
- ಯುನಿವರ್ಸಲ್ ಸಿರಿಯಲ್ ಬಸ್(USB) ಸ್ಕ್ಯಾನರ್‌ಗಳು ಡೇಟಾವನ್ನು ಶೀಘ್ರವಾಗಿ ವರ್ಗಾಯಿಸುತ್ತವೆ, ಮತ್ತು ಅವುಗಳನ್ನು ಬಳಸಲು ಸುಲಭ ಮತ್ತು SCSI ಸಾಧನಗಳಿಗಿಂತ ಅಗ್ಗ. ಮುಂಚಿನ USB 1.1 ಗುಣಮಟ್ಟವು ಡೇಟಾವನ್ನು ಪ್ರತಿ ಸೆಕೆಂಡಿಗೆ ಕೇವಲ 1.5 ಮೆಗಾಬೈಟ್‌ಗಳು ವರ್ಗಾಯಿಸುತ್ತದೆ (SCSIಗಿಂತ ನಿಧಾನ), ಆದರೆ ನಂತರ USB 2.0 ಗುಣಮಟ್ಟವು ಸೈದ್ಧಾಂತಿಕವಾಗಿ ಪ್ರತಿ ಸೆಕೆಂಡಿಗೆ 60 ಮೆಗಾಬೈಟ್‌ಗಳ ವರೆಗೆ ವರ್ಗಾಯಿಸುತ್ತದೆ (ಅದಾಗ್ಯೂ ಪ್ರತಿದಿನದ ದರಗಳು ಅತಿಕಡಿಮೆ), ಕ್ಷೀಪ್ರವಾದ ಕಾರ್ಯಾಚರಣೆಯಲ್ಲಿ ಸಂಭವಿಸುತ್ತದೆ.
- ಫೈರ್‌ವೈರ್ ಒಂದು ಅಂತರಸಂಪರ್ಕ ಅದು USB 1.1ಗಿಂತ ಹೆಚ್ಚು ವೇಗವಾದದ್ದು ಮತ್ತು USB 2.0ಗೆ ಹೋಲಿಸಬಹುದು. ಫೈರ್‌ವೈರ್ ವೇಗಗಳು 25, 50, ಮತ್ತು 100, 400 ಮತ್ತು 800 ಪ್ರತಿ ಸೆಕೆಂಡಿಗೆ ಮೆಗಾಬಿಟ್‌ಗಳು (ಆದರೆ ಒಂದು ಸಾಧನ ಎಲ್ಲಾ ವೇಗಗಳನ್ನು ಬೆಂಬಲಿಸುವುದಿಲ್ಲ). IEEE-1394 ಎಂದು ಸಹ ಪರಿಚಿತ.
- ಕೆಲವು ಮುಂಚಿನ ಸ್ಕ್ಯಾನರ್‌ಗಳು ಗುಣಮಟ್ಟದ ಅಂತರಸಂಪರ್ಕಕ್ಕಿಂತ ಹೆಚ್ಚಾಗಿ ಸ್ವಾಮ್ಯದ/ಒಡೆತನದ ಅಂತರಸಂಪರ್ಕ ಕಾರ್ಡ್ ಬಳಸುತ್ತಿದ್ದವು.
ಒಂದು ಕಪ್ಯೂಟರ್‌ಗೆ ಪರೋಕ್ಷ (ನೆಟ್‌ವರ್ಕ್) ಸಂಪರ್ಕ
[ಬದಲಾಯಿಸಿ]ತೊಂಬ್ಬಂತ್ತರ ದಶಕದ ಆರಂಭದಲ್ಲಿ, ವೃತ್ತಿನಿರತ ಫ್ಲಾಟ್‌ಬೆಡ್ ಸ್ಕ್ಯಾನರ್‌ಗಳು ವೃತ್ತಿನಿರತ ಬಳಕೆದಾರರಿಗೆ ಗುರಿಮಾಡಲಾಗಿತ್ತು. ಒಂದು ಸ್ಥಳೀಯ ಕಂಪ್ಯೂಟರ್ ನೆಟ್‌ವರ್ಕ್‌ನ ಒಳಗೆ ಎಲ್ಲಾ ಬಳಕೆದಾರಿಗೆ ತಲುಪಲು ಸುಲಭವಾದ ಒಂದು ಸ್ಕ್ಯಾನರ್‌ನ ಹಾಗೆ ಕೆಲವು ವ್ಯಾಪರಿಗಳು (ಉದಾಹರಣೆಗೆ Umax) ಕಾರ್ಯ ನಿರ್ವಹಿಸಲು ಅತಿಥೇಯ ಕಂಪ್ಯೂಟರ್‌ಗೆ ಒಂದು ಬಿಡಿ ಸ್ಕ್ಯಾನರ್‌ನ್ನು ಸಂಪರ್ಕಿಸಿದರು. ಉದಾಹರಣೆಗೆ ಪ್ರಕಾಶಕರು, ಮುದ್ರಣ ಅಂಗಡಿಗಳು, ಇತ್ಯಾದಿಗಳಿಗೆ ಇದು ತುಂಬಾ ಉಪಯುಕ್ತ ಎಂದು ಸಾಬೀತಾಯಿತು.ಫ್ಲಾಟ್‌ಬೆಡ್ ಸ್ಕ್ಯಾನರ್‌ಗಳು ಪ್ರತಿ ವರ್ಷ ಹೆಚ್ಚು ಸಂಪಾದನೀಯ ಆದ ಹಾಗೆ, 90ರ ಮಧ್ಯದ ನಂತರ ಈ ಕಾರ್ಯಾನುಗುಣತೆ ಕ್ರಮೇಣ ಕಣ್ಮರೆಯಾಯಿತು. ಅದಾಗ್ಯೂ, 2000ರಂತೆ ಮತ್ತು ನಂತರ, ಒಂದರಲ್ಲಿ ಎಲ್ಲಾ ಅನೇಕ ಉದ್ದೇಶದ ಸಾಧನಗಳು ಎರಡೂ (ಸಣ್ಣ) ಕಛೇರಿಗಳು ಮತ್ತು ಗ್ರಾಹಕರಿಗೆ ಸೇವೆ ಸಲ್ಲಿಸುವ ಗುರಿ ಹೊಂದಿದ್ದವು, ಸಾಮಾನ್ಯವಾಗಿ ಒಂದು ಪ್ರಿಂಟರ್, ಸ್ಕ್ಯಾನರ್, ಕಾಪಿಯರ್ ಮತ್ತು ಫ್ಯಾಕ್ಸ್‌ಗಳನ್ನು ಜೊತೆಗೂಡಿಸಿ ಒಂದು ಏಕ ಉಪಕರಣದಲ್ಲಿ ಇಡಿ ಕೆಲಸಗಾರಗುಂಪಿಗೆ ಲಭ್ಯವಾಗುವಂತೆ ಮಾಡಲಾಯಿತು, ಪ್ರತಿ ಫ್ಯಾಕ್ಸ್, ಸ್ಕ್ಯಾನ್, ಕಾಪಿ ಮತ್ತು ಪ್ರಿಂಟ್ ಕಾರ್ಯಗುಣತೆಯನ್ನು ಒದಗಿಸುತ್ತದೆ.
ಅನ್ವಯಿಸುವಿಕೆಗಳು ಪ್ರೊಗ್ರಾಂಮಿಂಗ್ ಅಂತರಸಂಪರ್ಕ ಸಾಧನ
[ಬದಲಾಯಿಸಿ]ಅಡೊಬ್ ಫೋಟೊಶಾಪ್‌ನ ರೀತಿಯ ಒಂದು ಅನ್ವಯಿಸುವಿಕೆ ಸ್ಕ್ಯಾನರ್ ಜೊತೆ ಸಂಪರ್ಕ ಹೊಂದಿರಬೇಕು. ಹಲವು ವಿಭಿನ್ನ ಸ್ಕ್ಯಾನರ್‌ಗಳಿವೆ, ಮತ್ತು ಅವುಗಳಲ್ಲಿ ಹೆಚ್ಚಿನ ಸ್ಕ್ಯಾನರ್‌ಗಳು ವಿಭಿನ್ನ ಶಿಷ್ಟಾಚಾರಗಳನ್ನು ಬಳಸುತ್ತವೆ. ಅನ್ವಯಿಸುವಿಕೆಗಳ ಪ್ರೊಗ್ರಾಂಮಿಂಗ್ ಅನ್ನು ಸರಳಗೊಳಿಸುವ ಸಲುವಾಗಿ, ಕೆಲವು ಅನ್ವಯಿಸುವಿಕೆಗಳು ಪ್ರೊಗ್ರಾಂಮಿಂಗ್ ಅಂತರಸಂಪರ್ಕಸಾಧನಗಳನ್ನು ("API") ಅಭಿವೃದ್ಧಿ ಪಡಿಸಲಾಯಿತು. API ಸ್ಕ್ಯಾನರ್‌ಗೆ ಒಂದು ಏಕಪ್ರಕಾರದ ಅಂತರಸಂಪರ್ಕಸಾಧನವನ್ನು ಪ್ರತಿನಿಧಿಸುತ್ತದೆ. ಅಂದರೆ ಅನ್ವಯಿಸುವಿಕೆ ಸ್ಕ್ಯಾನರ್ ಅನ್ನು ನೇರವಾಗಿ ಪ್ರವೇಶಿಸಲು ಸ್ಕ್ಯಾನರ್‌ನ ನಿರ್ದಿಷ್ಟವಾದ ವಿವರಗಳನ್ನು ತಿಳಿಯುವ ಅವಶ್ಯಕತೆ ಇಲ್ಲ. ಉದಾಹರಣೆಗೆ, ಅಡೊಬ್ ಫೋಟೊಶಾಪ್ TWAIN ಗುಣಮಟ್ಟವನ್ನು ಬೆಂಬಲಿಸುತ್ತದೆ; ಆದ್ದರಿಂದ ಸಿದ್ಧಾಂತದಲ್ಲಿ ಫೋಟೊಶಾಪ್ ಯಾವುದೇ ಸ್ಕ್ಯಾನರ್‌ನಿಂದ ಒಂದು ಚಿತ್ರವನ್ನು ಪಡೆಯಲು ಸಾಧ್ಯ ಅದು ಸಹ TWAINನ್ನು ಬೆಂಬಲಿಸುತ್ತದೆ.
ವಾಡಿಕೆಯಲ್ಲಿ, ಒಂದು ಸ್ಕ್ಯಾನರ್ ಜೊತೆ ಸಂಪರ್ಕಿಸುವಾಗ ಒಂದು ಅನ್ವಯಿಸುವಿಕೆಯಲ್ಲಿ ಯಾವಾಗಲೂ ತೊಂದರೆಗಳಿವೆ. ಒಂದೇ ಅನ್ವಯಿಸುವಿಕೆ ಅಥವಾ ಸ್ಕ್ಯಾನರ್ ಉತ್ಪಾದಕ (ಅಥವಾ ಎರಡು) APIನ ಅವರ ಕಾರ್ಯಗತೆಯಲ್ಲಿ ದೋಷಗಳನ್ನು ಹೊಂದಿರಬಹುದು.
ವಿಶಿಷ್ಟವಾಗಿ, ಒಂದು ಕ್ರಿಯಾತ್ಮಕವಾದ ಸಂಪರ್ಕಿಸಿದ ಗ್ರಂಥಾಲಯದ ಹಾಗೆ APIಯನ್ನು ಕಾರ್ಯಗತಮಾಡಲಾಗಿದೆ. ಪ್ರತಿ ಸ್ಕ್ಯಾನರ್‌ನ ಉತ್ಪಾದಕನ್ನು ಸ್ಪಾಪ್ಟ್‌ವೇರ್ ಅನ್ನು ಒದಗಿಸುತ್ತಾನೆ ಅದು ಒಂದು ಹಾರ್ಡ್‌ವೇರ್ ನಿಯಂತ್ರಕಕ್ಕೆ ಜಾರಿಗೊಳಿಸಿದ API ಕಾರ್ಯವಿಧಾನದ ಕರೆಗಳನ್ನು ಪ್ರಾಚೀನ ಅದೇಶಗಳಾಗಿ ಭಾಷಾಂತರಿಸುತ್ತದೆ (ಉದಾಹರಣೆಗೆ CSI, USB, ಅಥವಾ ಫೈರ್‌ವೈರ್ ನಿಯಂತ್ರಕ). APIಯ ಉತ್ಪಾದಕರ ಭಾಗವನ್ನು ಸಾಮಾನ್ಯವಾಗಿ ಒಂದು ಡಿವೈಸ್ ಡ್ರೈವರ್ ಎಂದು ಕರೆಯಲಾಗುತ್ತದೆ, ಆದರೆ ಬಿರುದು ಕಟ್ಟುನಿಟ್ಟಾಗಿ ಖಚಿತವಾಗಿಲ್ಲ: APIಯು ಕೆರ್ನೆಲ್ ಪದ್ಧತಿಯಲ್ಲಿ ನೆಡೆಯುವುದಿಲ್ಲ ಮತ್ತು ನೇರವಾಗಿ ಸಾಧನವನ್ನು ಪ್ರವೇಶಿಸುವುದಿಲ್ಲ.
ಕೆಲವು ಸ್ಕ್ಯಾನರ್ ಉತ್ಪಾದಕರು ಒಂದಕ್ಕಿಂತ ಹೆಚ್ಚು APIಯನ್ನು ಪ್ರಸ್ತಾಪಿಸುತ್ತಾರೆ.
ಹೆಚ್ಚಿನ ಸ್ಕ್ಯಾನರ್‌ಗಳು TWAIN APIಯನ್ನು ಬಳಸುತ್ತಾವೆ, ಮೂಲತಃ ಕಡಿಮೆ-ಕೊನೆ ಮತ್ತು ಮನೆ ಬಳಕೆಯ ಉಪಕರಣಕ್ಕೆ ಬಳಸಲಾಗುತ್ತದೆ, ಈಗ ವ್ಯಾಪಕವಾಗಿ ದೊಡ್ಡ-ಪ್ರಮಾಣದ ಸ್ಕ್ಯಾನ್ ಮಾಡಲು ಬಳಸಲಾಗುತ್ತದೆ.
APIಯ ಇತರೆ ಸ್ಕ್ಯಾನರ್‌ಗಳು
ISIS, ಪಿಕ್ಸೆಲ್ ಟ್ರಾನ್ಸ್‌ಲೇಷನ್ಸ್‌ನಿಂದ ಸೃಷ್ಟಿಸಿದೆ, ಇದು ಇನ್ನೂ ಕೆಲಸ ನಿರ್ವಹಣೆಯ ಉದ್ದೇಶಗಳಿಗಾಗಿ SCSI-IIಯನ್ನು ಬಳಸುತ್ತದೆ, ದೊಡ್ಡ, ಇಲಾಖೆಯ-ಪ್ರಮಾಣ, ಯಂತ್ರಗಳಿಂದ ಬಳಸಲ್ಪಡುತ್ತದೆ.
SANE (ಸ್ಕ್ಯಾನರ್ ಅಕ್ಸೆಸೆಸ್ ನೌ ಇಜಿ) ಸ್ಕ್ಯಾನರ್‌ನ್ನು ಪ್ರವೇಶಿಸಲು ಒಂದು ಮುಕ್ತ/ತೆರದ ಮೂಲ API. ಮೂಲತಃ ಯುನಿಕ್ಸ್ ಮತ್ತು ಲಿನಕ್ಸ್ ಕಾರ್ಯನಿರ್ವಹಣ ವ್ಯವಸ್ಥೆಗಳಿಗಾಗಿ ಅಭಿವೃದ್ಧಿಪಡಿಸಲಾದ ಇದನ್ನು OS/2, Mac OS X, ಮತ್ತು ಮೈಕ್ರೋಸಾಫ್ಟ್ ವಿಂಡೋಸ್ ಗಳಿಗೆ ಇದನ್ನು ಪೋರ್ಟ್ ಮಾಡಲಾಯಿತು. TWAINನ ಹಾಗೇ, SANE ಬಳಕೆದಾರನ ಅಂತರಸಂಪರ್ಕ ಸಾಧನವನ್ನು ನಿರ್ವಹಿಸುವುದಿಲ್ಲ. ಇದು ಗುಂಪು ಸ್ಕ್ಯಾನ್‌ಗಳನ್ನು ಮತ್ತು ಡಿವೈಸ್ ಡ್ರೈವರ್‌ನಿಂದ ಯಾವುದೇ ವಿಶೇಷ ಬೆಂಬಲವಿಲ್ಲದೆ ಪಾರದರ್ಶಕ ನೆಟ್‌ವರ್ಕ್ ಪ್ರವೇಶವನ್ನು ಅನುಮತಿಸುತ್ತದೆ.
ವಿಂಡೋಸ್ ಇಮೇಜ್ ಅಕ್ವಿಸಿಶನ್ ("WIA") ಮೈಕ್ರೊಸಾಫ್ಟ್‌ನಿಂದ ನೀಡಲ್ಪಟ್ಟ ಒಂದು API.
ಸಂಗ್ರಹಿತ ಅಪ್ಲಿಕೇಶನ್‌ಗಳು
[ಬದಲಾಯಿಸಿ]ಒಂದು ಸ್ಕ್ಯಾನಿಂಗ್ ಅನುಕೂಲವನ್ನು ಮೀರಿದ ಯಾವುದೇ ಸಾಫ್ಟ್‌ವೇರ್ ಯಾವುದೇ ಸ್ಕ್ಯಾನರ್‌ನ ವೈಶಿಷ್ಟ್ಯವಲ್ಲದಿದ್ದರೂ ಅನೇಕ ಸ್ಕ್ಯಾನರ್‌ಗಳು ಅನೇಕ ಸಾಫ್ಟ್‌ವೇರ್‌ಗಳೊಂದಿಗೆ ದೊರೆಯುತ್ತವೆ. ವಿಶಿಷ್ಟವಾಗಿ, ಸ್ಕ್ಯಾನ್ ಮಾಡುವ ಬಳಕೆಗೆ ಹೆಚ್ಚುವರಿಯಾಗಿ, ಚಿತ್ರ ಪರಿಷ್ಕರಿಸುವ ಅನ್ವಯಿಸುವಿಕೆಯ ಕೆಲವು ವಿಧದ ಸಾಫ್ಟ್‌ವೇರ್‌ಗಳನ್ನು (ಉದಾಹರಣೆಗೆ ಫೋಟೊಶಾಪ್), ಮತ್ತು ಅಪ್ಟಿಕಲ್ ಕ್ಯಾರೆಕ್ಟರ್ ಗುರುತಿಸುವಿಕೆ (OCR) ಒದಗಿಸಲಾಗುತ್ತದೆ. OCR ಸಾಫ್ಟ್‌ವೇರ್ ಪಠ್ಯದ ಗ್ರಾಫಿಕಲ್ ಚಿತ್ರಗಳನ್ನು ಗುಣಮಟ್ಟದ ಪಠ್ಯಕ್ಕೆ ಮಾರ್ಪಡಿಸುತ್ತದೆ, ಅದನ್ನು ಸಾಮಾನ್ಯ ಪದ-ಸಂಸ್ಕರಿಸುವ ಮತ್ತು ಪಠ್ಯ-ಪರಿಷ್ಕರಿಸುವ ಸಾಫ್ಟವೇರ್ ಬಳಸಿ ಪರಿಷ್ಕರಿಸಲು ಸಾಧ್ಯ; ಅಪರೂಪವಾಗಿ ನಿಖರತೆಯು ಪರಿಪೂರ್ಣವಾಗಿರುತ್ತದೆ.
ಔಟ್‌ಪುಟ್ ಡೇಟಾ
[ಬದಲಾಯಿಸಿ]ಸ್ಕ್ಯಾನ್ ಮಾಡಿದ ಫಲಿತಾಂಶವು ಒಂದು ಸಂಕ್ಷೇಪಿಸದ RGB ಚಿತ್ರ, ಅದನ್ನು ಕಂಪ್ಯೂಟರ್‌ನ ಸ್ಮೃತಿಕೋಶಕ್ಕೆ ವರ್ಗಾಯಿಸಲು ಸಾಧ್ಯ. ಕೆಲವು ಸ್ಕ್ಯಾನರ್‌ಗಳು ಆಂತರಿಕ ಫೈರ್‌ವೇರ್ ಬಳಸಿ ಚಿತ್ರವನ್ನು ಸಂಕ್ಷೇಪಿಸುತ್ತವೆ ಮತ್ತು ಕ್ಲೀನ್ ಮಾಡುತ್ತವೆ. ಕಂಪ್ಯೂಟರ್‌ನಲ್ಲಿ ಒಂದು ಬಾರಿ, ರಾಸ್ಟರ್ ಗ್ರಾಫಿಕ್ಸ್ ಪ್ರೊಗ್ರಾಂನ ಜೊತೆ ಚಿತ್ರವನ್ನು ಪರಿಷ್ಕರಿಸಲಾಗುತ್ತದೆ (ಉದಾಹರಣೆಗೆ ಫೋಟೊಶಾಪ್ ಅಥವಾ GIMP) ಮತ್ತು ಒಂದು ಶೇಖರಣ ಸಾಧನದಲ್ಲಿ (ಡಿವೈಸ್) ಉಳಿಸಲಾಗುತ್ತದೆ (ಉದಾಹರಣೆ ಹಾರ್ಡ್ ಡಿಸ್ಕ್).
ಸಾಮಾನ್ಯವಾಗಿ ಚಿತ್ರಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಶೇಖರಿಸಲಾಗುತ್ತದೆ. ಛಾಯಚಿತ್ರಗಳನ್ನು ಸಾಮಾನ್ಯವಾಗಿ ಚಿತ್ರ ಶೈಲಿಗಳಲ್ಲಿ ಶೇಖರಿಸಲಾಗುತ್ತದೆ ಉದಾಹರಣೆಗೆ ಸಂಗ್ರಹಿಸದ/ಸಂಕ್ಷೇಪಿಸದ ಬಿಟ್‌ಮ್ಯಾಪ್, "ನಾನ್-ಲೊಸ್ಸಿ" (ಕಡಿಮೆನಷ್ಟ) ಸಂಕ್ಷೇಪಿಸಿದ TIFF ಮತ್ತು PNG, ಮತ್ತು "ಲೊಸ್ಸಿ" ಸಂಕ್ಷೇಪಿಸಿದ JPEG. ದಾಖಲೆಗಳು TIFF ಅಥವಾPDF ಶೈಲಿಯಲ್ಲಿ ಅತ್ಯುತ್ತಮ ಮಟ್ಟದಲ್ಲಿ ಶೇಖರವಾಗುತ್ತವೆ; JPEG ಪಠ್ಯಕ್ಕೆ ಸರಿ ಹೊಂದುವುದ್ದಿಲ್ಲ. ಅಪ್ಟಿಕಲ್ ಕ್ಯಾರೆಕ್ಟರ್ ಗುರುತಿಸುವಿಕೆ (OCR) ಸಾಫ್ಟವೇರ್ ಪಠ್ಯದ ಒಂದು ಸ್ಕ್ಯಾನ್ ಮಾಡಿದ ಚಿತ್ರವನ್ನು ಪರಿಷ್ಕರಿಸಬಲ್ಲ ಪಠ್ಯಕ್ಕೆ ಮಾರ್ಪಡಿಸಲು ಯೋಗ್ಯವಾದ ನಿಖರತೆಯೊಂದಿಗೆ ಅನುಮತಿಸುತ್ತದೆ, ಎಲ್ಲಿಯ ವರೆಗೆ ಪಠ್ಯ ಸರಿಯಾಗಿ ಮದ್ರಣವಾಗಿದೆ ಮತ್ತು ಟೈಪ್‌ಫೇಸ್‌ನಲ್ಲಿದೆ ಮತ್ತು ಸಾಫ್ಟ್‌ವೆರ್ ಓದಲು ಸಾಧ್ಯವಾಗುವ ಗಾತ್ರದಲ್ಲಿದೆ. OCR ಸಾಮರ್ಥ್ಯವನ್ನು ಸ್ಕ್ಯಾನ್ ಮಾಡುವ ಸಾಫ್ಟ್‌ವೇರ್‌ನಲ್ಲಿ ಒಂದುಗೂಡಿಸಬಹುದು, ಅಥವಾ ಸ್ಕ್ಯಾನ್ ಮಾಡಿದ ಚಿತ್ರ ಫೈಲ್ ಅನ್ನು ಒಂದು ಪ್ರತ್ಯೇಕ OCR ಪ್ರೊಗ್ರಾಮ್‌ನೊಂದಿಗೆ ಸಂಸ್ಕರಿಸಬಹುದು.
ದಾಖಲೆ ಪರಿಷ್ಕರಣೆ
[ಬದಲಾಯಿಸಿ]ಶೇಖರಣೆಗಾಗಿ ಕಾಗದ ದಾಖಲೆಗಳ ಸ್ಕ್ಯಾನಿಂಗ್ ಅಥವಾ ಡಿಜಲಿಕರಣವು ಪುನರ್‌ಉತ್ಪಾದನೆಗಾಗಿ ಛಾಯಚಿತ್ರಗಳ ಸ್ಕ್ಯಾನಿಂಗ್‌ಗೆ ಬಳಸಿದ ಸ್ಕ್ಯಾನ್ ಮಾಡುವ ಉಪಕರಣಕ್ಕಿಂತ ವಿಭಿನ್ನ ಅವಶ್ಯಕತೆಯನ್ನು ಬೇಡುತ್ತದೆ. ದಾಖಲೆಗಳನ್ನು ಸಾಮಾನ್ಯ ಉದ್ದೇಶ ಸ್ಕ್ಯಾನರ್‌ಗಳಲ್ಲಿ ಸ್ಕ್ಯಾನ್ ಮಾಡಲು ಸಾಧ್ಯ, ಅಟಿಜ್ ಇನ್ನೊವೆಶನ್, Böwe ಬೆಲ್ & ಹೊವೆಲ್, ಕ್ಯಾನನ್, ಇಪ್ಸನ್, ಫುಜಿಟ್ಸು, ಎಚ್‌ಪಿ, ಕೊಡಕ್ ಮತ್ತು ಇತರೆ ಕಂಪೆನಿಗಳಿಂದ ತಯಾರಿಸಲ್ಪಟ್ಟ ಮೀಸಲಾಗಿಟ್ಟಿರುವ ದಾಖಲೆ ಸ್ಕ್ಯಾನರ್‌ಗಳು ಇದನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸುತ್ತವೆ.
ದಾಖಲೆಗಳ ದೊಡ್ದ ಪ್ರಮಾಣವನ್ನು ಸ್ಕ್ಯಾನ್ ಮಾಡುವಾಗ, ವೇಗ ಮತ್ತು ಕಾಗದವನ್ನು ನಿಭಾಯಿಸುವುದು ತುಂಬಾ ಮುಖ್ಯ, ಆದರೆ ಸ್ಕ್ಯಾನ್‌ನ ರೆಸುಲ್ಯೂಶನ್ ಸಾಮಾನ್ಯವಾಗಿ ಚಿತ್ರಗಳ ಪುನರ್‌ಉತ್ಪಾದನೆಗಿಂತ ತುಂಬಾ ಕಡಿಮೆ ಇರುತ್ತದೆ.
ದಾಖಲೆ ಸ್ಕ್ಯಾನರ್‌ಗಳು ದಾಖಲೆ ಪೂರಕಗಳನ್ನು ಹೊಂದಿರುತ್ತವೆ, ಕೆಲವೊಮ್ಮೆ ಕಾಪಿಯರ್‌ಗಳು ಅಥವಾ ಎಲ್ಲಾ ಉದ್ದೇಶದ ಸ್ಕ್ಯಾನರ್‌ಗಳಲ್ಲಿ ಕಂಡುಬರುವ ಅವುಗಳಿಗಿಂತ ಸಾಮಾನ್ಯವಾಗಿ ದೊಡ್ಡದ್ದಾಗಿರುತ್ತದೆ. ಸ್ಕ್ಯಾನ್‌ಗಳನ್ನು ಹೆಚ್ಚು ವೇಗದಲ್ಲಿ ಮಾಡಲಾಗುತ್ತದೆ, ಪ್ರತಿ ನಿಮಿಷಕ್ಕೆ 20 ರಿಂದ 150 ಪುಟಗಳ ವರೆಗೆ, ಹಲವು ಸ್ಕ್ಯಾನರ್‌ಗಳು ಬಣ್ಣವನ್ನು ಬೆಂಬಲಿಸಿದರೂ, ಯಾವಾಗಲೂ ಬೂದು ಬಣ್ಣದಲ್ಲಿ. ಹಲವು ಸ್ಕ್ಯಾನರ್‌ಗಳು ಎರಡು ಬದಿಯ ಮೂಲಗಳ ಎರಡೂ ಬದಿಗಳನ್ನು (ಡ್ಯುಪ್ಲೆಕ್ಸ್ ಆಪರೇಶನ್) ಸ್ಕ್ಯಾನ್ ಮಾಡುತ್ತದೆ. ಸಂಕೀರ್ಣವಾದ ಡಾಕ್ಯುಮೆಂಟ್ ಸ್ಕ್ಯಾನರ್‌ಗಳಲ್ಲಿ ಫರ್ಮ್‌ವೇರ್‌ಗಳು ಅಥವಾ ಸಾಫ್ಟ್‌ವೇರ್‌ಗಳು ಇರುತ್ತಿದ್ದು, ಅವು ಪಠ್ಯ ಸ್ಕ್ಯಾನ್ ಆಗುತ್ತಿದ್ದಂತೆಯೇ ಅದರಲ್ಲಿ ಬರಬಹುದಾದ ಗುರುತುಗಳನ್ನು ಮತ್ತು ಗಾಢವಾಗಿ ಮುದ್ರಿತ ಪಠ್ಯವನ್ನು ಸರಿಪಡಿಸುತ್ತದೆ; ಆದರೆ ಇದು ಛಾಯಾಚಿತ್ರಗ್ರಹಣದ ಸ್ಕ್ಯಾನಿಂಗ್‌ನಲ್ಲಿ ಒಪ್ಪಿಕೊಳ್ಳಲಾಗುವುದಿಲ್ಲ, ಏಕೆಂದರೆ ಅಲ್ಲಿ ಅಗತ್ಯವಿರುವ ಸೂಕ್ಷ್ಮ ವಿವರಗಳನ್ನು ಸ್ಕ್ಯಾನರ್‌ಗಳು ಮಾರ್ಕ್‌ಗಳೆಂದುಕೊಂಡು ನಿವಾರಿಸಿಬಿಡಬಹುದು. ಕಡತಗಳನ್ನು ರಚಿಸುತ್ತಿರುವಂತೆಯೇ ಸಾಂದ್ರಗೊಳಿಸಲಾಗುತ್ತದೆ.
ಇದರಲ್ಲಿ ಬಳಸಲಾಗುವ ದೃಶ್ಯಸಾಂದ್ರತೆಯು ಸಾಮಾನ್ಯವಾಗಿ 150 ರಿಂದ 300 dpi ವರೆಗಿರುತ್ತದೆ, ಮತ್ತು ಅದರ ಹಾರ್ಡ್‌ವೇರ್ ಇನ್ನೂ ಹೆಚ್ಚಿನ ದೃಶ್ಯಸಾಂದ್ರತೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ; ಇದು ಪಠ್ಯಗಳ ಚಿತ್ರಣವನ್ನು ಓದಲು ಉತ್ತಮವಾಗಿರುವಂತೆ ಮಾಡುತ್ತದೆ ಮತ್ತು, ಹೆಚ್ಚಿನ ದೃಶ್ಯಸಾಂದ್ರತೆಯ ಚಿತ್ರಗಳಿಗೆ ಯಾವುದೇ ಹೆಚ್ಚಿನ ಸಂಗ್ರಹ ಸ್ಥಳದ ಅವಶ್ಯಕತೆಯಿಲ್ಲದೇ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ (OCR) ಸಹಾ ಸುಲಭವಾಗಿಸುತ್ತದೆ.
ತಿದ್ದಬಲ್ಲ ಮತ್ತು ಹುಡುಕಬಲ್ಲ ಫೈಲ್‌ಗಳನ್ನು ರಚಿಸಲು OCR ತಂತ್ರಾಂಶ ಉಪಯೋಗಿಸಿ ಯಾವಾಗಲೂ ದಾಖಲೆ ಸ್ಕ್ಯಾನ್‌ಗಳನ್ನು ಪರಿಷ್ಕರಿಸಲಾಗುತ್ತದೆ. ಹೆಚ್ಚಿನ ಸ್ಕ್ಯಾನರ್‌ಗಳು ISIS ಅಥವಾ TWAIN ಡಿವೈಸ್ ಡ್ರೈವ್‌ಗಳನ್ನು ಬಳಸಿ TIFF ಶೈಲಿಯಲ್ಲ್ಲಿ ದಾಖಲೆಗಳನ್ನು ಸ್ಕ್ಯಾನ್ ಮಾಡುತ್ತವೆ, ಅದರಿಂದ ಸ್ಕ್ಯಾನ್ ಮಾಡಿದ ಪುಟಗಳನ್ನು ಒಂದು ಡಾಕ್ಯುಮೆಂಟ್ ಮ್ಯಾನೆಜ್‌ಮೆಂಟ್ ಸಿಸ್ಟಮ್ ಒಳಗೆ ಪೂರೈಸಲು ಸಾಧ್ಯವಾಗುತ್ತದೆ, ಅದು ಸ್ಕ್ಯಾನ್ ಮಾಡಿದ ಪುಟಗಳ ಒಟ್ಟುಗೂಡಿಕೆ ಮತ್ತು ಪುನಃ ಪ್ರಾಪ್ತಿಯನ್ನು ನಿರ್ವಹಿಸುತ್ತದೆ. ಲೊಸ್ಸಿ JPEG ಸಂಕ್ಷೇಪಿಕೆಯು, ಚಿತ್ರಗಳಿಗೆ ತುಂಬಾ ಸಮರ್ಥವಾಗಿದೆ, ಅದು ಪಠ್ಯ ದಾಖಲೆಗಳಿಗೆ ಅಹಿತಕರ/ಅನಪೇಕ್ಷಣೀಯವಾಗಿದೆ ಏಕೆಂದರೆ ಓರೆಯಾದ ನೇರ ಅಂಚುಗಳು ಒಂದು ರೀತಿಯಲ್ಲಿ ಗರಗಸದಂತೆ ಕಾಣುತ್ತವೆ, ಮತ್ತು ದಪ್ಪ ಕಪ್ಪು (ಅಥವಾ ಇತರೆ ಬಣ್ಣದ) ಪಠ್ಯವು ತೆಳು ಹಿನ್ನೆಲೆಯಲ್ಲಿ ಚೆನ್ನಾಗಿ ಕುಳಿತುಕೊಳ್ಳುತ್ತದೆ.
ಹಾಗೆಯೇ ಕಾಗದ ಪೂರೈಕೆ ಮತ್ತು ಸ್ಕ್ಯಾನ್ ಮಾಡುವುದು ಸ್ವಯಂಚಾಲಿತವಾಗಿ ಮತ್ತು ಕ್ಷೀಪ್ರವಾಗಿ ಮಾಡಲು ಸಾಧ್ಯ, ಸಿದ್ಧತೆ ಮತ್ತು ಅನುಕ್ರಮಣಿಕೆ ಗಳು ಅವಶ್ಯಕ ಮತ್ತು ಮನುಷ್ಯರಿಂದ ಹೆಚ್ಚಿನ ಕೆಲಸದ ಅಗತ್ಯವಿದೆ. ಸ್ಕ್ಯಾನ್ ಮಾಡಬೇಕಾದ ಕಾಗದಗಳನ್ನು ದೈಹಿಕವಾಗಿ ಪರಿಶಿಲಿಸುವುದು ಮತ್ತು ಅವುಗಳು ಕ್ರಮವಾಗಿ, ಮಡಚದೆ, ಕೊಂಡಿರಹಿತವಾಗಿ ಅಥವಾ ಸ್ಕ್ಯಾನರ್ ಅನ್ನು ಜಾಮ್ ಮಾಡಬಹುದಾದ ಯಾವುದೇ ವಸ್ತುಗಳಿವೆಯೇ ಎಂದು ಖಚಿತ ಪಡಿಸಿಕೊಳ್ಳುವುದು ಸಿದ್ಧತೆ ಒಳಗೊಳ್ಳುತ್ತದೆ. ಹೆಚ್ಚುವರಿಯಾಗಿ, ಉದಾಹರಣೆಗೆ ಕಾನೂನು ಮತ್ತು ವೈದ್ಯಕೀಯದಂತಹ ಕೆಲವು ಕೈಗಾರಿಕೆಗಳು ದಾಖಲೆಗಳು ಸ್ಕ್ಯಾನ್ ಆಗುವಾಗ ಬೇಟ್ಸ್ ಸಂಖ್ಯೆ ನಮೂದಿಸುವಿಕೆ ಅಥವಾ ಇತರೆ ದಾಖಲೆ ಗುರುತಿನ ಸಂಖ್ಯೆ ಮತ್ತು ದಿನಾಂಕ/ಸಮಯವನ್ನು ನಮೂದಿಸುವಂತೆ ಇರಬೇಕೆಂದು ಬಯಸುತ್ತವೆ.
ಇಂಡೆಕ್ಸಿಂಗ್ ಎಂದರೆ ಕಡತಗಳಿಗೆ ಹೆಸರುಗಳನ್ನು ನೀಡುವ ಮೂಲಕ ಅವುಗಳ ವಿಷಯದ ಪ್ರಕಾರವಾಗಿ ಅವುಗಳನ್ನು ವಿಂಗಡಿಸುವುದಾಗಿದೆ. ಈ ಪ್ರಕ್ರಿಯೆಯು ಕೆಲವು ವೇಳೆ ಕೆಲವು ಮಟ್ಟದವರೆಗೆ ಸ್ವಯಂ ಚಾಲನಗೊಳಿಸಲು ಸಾಧ್ಯ, ಆದರೆ ದೈಹಿಕ ಶ್ರಮ ಒಳಗೊಂಡ ಹಾಗೆ. ಬಾರ್‌ಕೋಡ್-ಗುರುತಿಸುವಿಕೆ ತಂತ್ರಾಂಶದ ಬಳಕೆಯು ಒಂದು ಸಾಮಾನ್ಯ ವಾಡಿಕೆ: ಸಿದ್ಧತೆಯ ಸಮಯದಲ್ಲಿ ಫೋಲ್ಡರ್‌ನ ಹೆಸರಿನ ಜೊತೆ ಬಾರ್‌ಕೋಡ್ ಹಾಳೆಗಳನ್ನು ದಾಖಲೆ ಫೈಲ್‌ಗಳು, ಫೋಲ್ಡರ್‌ಗಳು, ಮತ್ತು ದಾಖಲೆಗಳ ಗುಂಪಿನ ಒಳಗೆ ಸೇರಿಸಲಾಗುತ್ತದೆ. ಸ್ವಯಂಚಾಲಿತ ಗುಂಪು ಸ್ಕ್ಯಾನಿಂಗ್ ಬಳಸಿ, ದಾಖಲೆಗಳನ್ನು ಸರಿಯಾದ ಕಡತಗಳ ಒಳಗೆ ಉಳಿಸಲಾಗಿದೆ, ಮತ್ತು ದಾಖಲೆ-ನಿರ್ವಹಣೆ ಸಾಫ್ಟ್‌ವೇರ್ ವ್ಯವಸ್ಥೆಗಳ ಒಳಗೆ ಒಂದುಗೂಡುವಿಕೆಗಾಗಿ ಒಂದು ಸೂಚಕವನ್ನು ರಚಿಸಲಾಗಿದೆ.
ದಾಖಲೆ ಸ್ಕ್ಯಾನಿಂಗ್‌ನ ವಿಶಿಷ್ಟಗೊಳಿಸಿದ ಒಂದು ವಿಧಾನ ಬುಕ್ ಸ್ಕ್ಯಾನಿಂಗ್. ಸಾಮಾನ್ಯವಾಗಿ ಪರಿಮಿತಿಗೊಳಿಸಿದ ಮತ್ತು ಕೆಲವು ವೇಳೆ ದುರ್ಬಲವಾದ ಮತ್ತು ಬದಲಿಡಲಾಗದ ಪುಸ್ತಕಗಳಿಂದ ತಾಂತ್ರಿಕ ತೊಂದರೆಗಳು ಉಂಟಾಗುತ್ತದೆ, ಆದರೆ ಕೆಲವು ತಯಾರಕರು ಇದರೊಂದಿಗೆ ವ್ಯವಹರಿಸಲು ವಿಶಿಷ್ಟಗೊಳಿಸಿದ ಯಂತ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಉದಾಹರಣೆಗೆ, Atiz DIY ಸ್ಕ್ಯಾನರ್ ಚೂರುಚೂರಾಗುವ ಪುಸ್ತಕವನ್ನು ನಿಭಾಯಿಸಲು ಒಂದು V-ಆಕಾರದ ಚೌಕಟ್ಟು ಮತ್ತು ಒಂದು V-ಆಕಾರದ ಪಾರದರ್ಶಕ ಫಲಕವನ್ನು ಬಳಸುತ್ತದೆ. ಪುಟ ತಿರುಗಿಸುವ ಮತ್ತು ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಸ್ವಯಂ ಚಾಲನೆಗೊಳಿಸಲು ಯಾವಾಗಲೂ ವಿಶೇಷ ರೊಬೊಟಿಕ್ ಯಾಂತ್ರಿಕ ರಚನೆಗಳನ್ನು ಬಳಸಲಾಗುತ್ತದೆ.
ಇನ್‌ಫ್ರರೆಡ್ ಕ್ಲಿನಿಂಗ್
[ಬದಲಾಯಿಸಿ]ಇನ್‌ಫ್ರರೆಡ್ ಕ್ಲಿನಿಂಗ್ ಚಿತ್ರದಿಂದ ದೂಳು ಮತ್ತು ಗೀಚುಗಳನ್ನು ತೆಗೆಯುವ ಒಂದು ತಂತ್ರಾಂಶ, ಮತ್ತು ಹೆಚ್ಚು ಅಧುನಿಕ ಸ್ಕ್ಯಾನರ್‌ಗಳು ಈ ಗುಣಲಕ್ಷಣವನ್ನು ಒಟ್ಟುಗೂಡಿಸುತ್ತವೆ. ಇದು ಇನ್‌ಫ್ರರೆಡ್ ಬೆಳಕು/ದೀಪದ ಜೊತೆ ಚಿತ್ರವನ್ನು ಸ್ಕ್ಯಾನ್ ಮಾಡುವ ಮೂಲಕ ಕೆಲಸ ಮಾಡುತ್ತದೆ. ಇದರಿಂದ, ದೂಳು ಮತ್ತು ಗೀಚುಗಳನ್ನು ಪತ್ತೆಹಚ್ಚಲು ಸಾಧ್ಯ ಅದು ಇನ್‌ಫ್ರರೆಡ್ ದೀಪವನ್ನು ತಡೆಯುತ್ತದೆ; ಮತ್ತು ಅವುಗಳ ಸ್ಥಾನ, ಗಾತ್ರ, ಆಕಾರ, ಮತ್ತು ಆವರಣಗಳನ್ನು ಪರಿಗಣಿಸುವ ಮೂಲಕ ಅವುಗಳನ್ನು ಸ್ವಯಂಚಾಲಿತವಾಗಿ ತೆಗೆಯುತ್ತದೆ.
ಸಾಮಾನ್ಯವಾಗಿ ಸ್ಕ್ಯಾನರ್ ಉತ್ಪಾದಕರು ಈ ತಂತ್ರಾಂಶಕ್ಕೆ ಅವರ ಸ್ವಂತ ಹೆಸರನ್ನು ಅಂಟಿಸಿರುತ್ತಾರೆ. ಉದಾಹರಣೆಗೆ, ಎಪ್ಸೊನ್, ನಿಕಾನ್, ಮೈಕ್ರೊಟೆಕ್, ಮತ್ತು ಇತರರು ಡಿಜಿಟಲ್ ICEಯನ್ನು ಬಳಸುತ್ತಾರೆ, ಹಾಗೆ ಕ್ಯಾನನ್ ಅದರ ಸ್ವಂತ ವ್ಯವಸ್ಥೆ FARE ( ಫಿಲ್ಮಂ ಅಟೊಮ್ಯಾಟಿಕ್ ರಿಟಚಿಂಗ್ ಆಂಡ್ ಎನ್‌ಚಾನ್ಸ್‌ಮೆಂಟ್ ಸಿಸ್ಟಮ್) ಅನ್ನು ಬಳಸುತ್ತದೆ.[೨] ಕೆಲವು ಸ್ವಾತಂತ್ರ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸುವವರು ಅವರ ಸ್ವಂತ ಇನ್‌ಫ್ರರೆಡ್ ಕ್ಲಿನಿಂಗ್ ಟೂಲ್‌ಗಳನ್ನು ವಿನ್ಯಾಸಗೊಳಿಸುತ್ತಾರೆ.
ಚಿಕ್ಕ-ಚೊಕ್ಕ ವಿಷಯಗಳು
[ಬದಲಾಯಿಸಿ]ಸ್ಕ್ಯಾನರ್ ಸಂಗೀತ
[ಬದಲಾಯಿಸಿ]ಫ್ಲಾಟ್‌ಬೆಡ್ ಸ್ಕ್ಯಾನರ್‌ಗಳು ಅವುಗಳ ಸ್ಟೆಪ್ಪರ್ ಮೋಟಾರುಗಳ ಮಾರ್ಪಡಿಸಬಹುದಾದ ವೇಗದ (ಮತ್ತು ಧ್ವನಿ)ಕಾರಣದಿಂದ, ಸರಳ ಸಂಗೀತದ ಅಂಕಗಳನ್ನು ಸಂಯೋಜಿಸಲು ಅರ್ಹವಾಗಿರುತ್ತವೆ. ಈ ಅಸ್ತಿಯನ್ನು ಹಾರ್ಡ್‌ವೇರ್ ವಿಶ್ಲೇಷಣಾತ್ಮಕಗಳಿಗೆ ಅನ್ವಯಿಸಬಹುದು: ಉದಾಹರಣೆಗೆ ಸ್ಕ್ಯಾನ್ ಬಟನ್‌ನನ್ನು ಕೆಳೆಗೆ ಹಿಡಿದು ಜೊತೆಗೆ ವಿದ್ಯುತ್ತನ್ನು ಚಾಲನೆ ಮಾಡಿ ಮತ್ತು SCSI IDಯನ್ನು ಸೊನ್ನೆಗೆ ಇರಿಸಿದರೆ HP ಸ್ಕ್ಯಾನ್‌ಜೆಟ್ 5 ಒಡ್ ಟು ಜಾಯ್‌ಯನ್ನು ನುಡಿಸುತ್ತದೆ.[೩] ವಿಂಡೊಸ್- ಮತ್ತು ಲಿನಕ್ಸ್ ಆಧಾರಿತ ಸಾಫ್ಟ್‌ವೇರ್ ವಿಭಿನ್ನ ಬ್ರಾಂಡ್‌ಗಳು ಮತ್ತು ಫ್ಲಾಟ್‌ಬೆಡ್ ಸ್ಕ್ಯಾನರ್‌ಗಳ ವಿಧಗಳಿಗೆ ವಿನೋದದ ಉದ್ದೇಶಕ್ಕಾಗಿ MIDI ಫೈಲ್‌ಗಳನ್ನು ನುಡಿಸಲು ಲಭ್ಯವಿದೆ.[೪]
ಸ್ಕ್ಯಾನರ್ ಕಲೆ
[ಬದಲಾಯಿಸಿ]ಸ್ಕ್ಯಾನರ್ ಕಲೆಯು ಒಂದು ಫ್ಲಾಟ್‌ಬೆಡ್ ಸ್ಕ್ಯಾನರ್ ಮೇಲೆ ವಸ್ತುಗಳನ್ನು ಇರಿಸುವ ಮತ್ತು ಮತ್ತು ಅವುಗಳನ್ನು ಸ್ಕ್ಯಾನ್ ಮಾಡುವ ಕಲೆಯಾಗಿದೆ. ಸ್ಕ್ಯಾನರ್ ಕಲೆಯು ಡಿಜಿಟಲ್ ಛಾಯಗ್ರಹಣದ ಒಂದು ವಿಧಾನ ಹೌದೋ ಅಲ್ಲವೋ ಎಂಬ ಚರ್ಚೆಗಳಿದ್ದವು.[ಸೂಕ್ತ ಉಲ್ಲೇಖನ ಬೇಕು] ಸ್ಕ್ಯಾನರ್‌ನಿಂದ ಮಾಡಿದ ಚಿತ್ರಗಳು ಕ್ಯಾಮರಗಳಿಂದ ಮಾಡಿದ ಚಿತ್ರಗಳಿಗೆ ಹೋಲುವುದಿಲ್ಲ, ಸ್ಕ್ಯಾನರ್‌ಗಳು ಅತಿ ಸಣ್ಣ ಕ್ಷೇತ್ರದ ಅಳ ಮತ್ತು ಮೇಲ್ಮೈ ಮೇಲೆ ಎಲ್ಲಾ ಒಂದು ನಿರಂತರ ಬೆಳಕನ್ನು ಹೊಂದಿರುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ "ಎನ್ ಐ ಎಸ್ ಟಿ, ಟೆಕ್ ಬೀಟರ್, ಮೇ 27, 2007". Archived from the original on 2007-07-06. Retrieved 2010-05-25.
- ↑ "Film Automatic Retouching and Enhancement". Canon. Retrieved 2007-05-02.
- ↑ http://www.eeggs.com/items/557.html
- ↑ "The oh so musical scanner". uneasysilence.com. 2004-10-04. Archived from the original on 2010-02-24. Retrieved 2007-06-24.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Scanner ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- "ಡ್ರಮ್ ಸ್ಕ್ಯಾನಿಂಗ್ ನಿಜವಾಗಿಯೂ ಉಳಿಯುತ್ತದೆಯಾ ಮತ್ತು ಒಳ್ಳೆಯದಾ?" Archived 2006-08-21 ವೇಬ್ಯಾಕ್ ಮೆಷಿನ್ ನಲ್ಲಿ. ಡಿಜಿಟಲ್ ಔಟ್‌ಪುಟ್ ರಿಮ್ ರಿಚ್ ರಿಂದ
- "ಕ್ಯಾನ್ ಎ ಫೈನ್ -ಆರ್ಟ್ ಲಾರ್ಜ್ ಫಾರ್ಮ್ಯಾಟ್ ಫೋಟೋಗ್ರಾಫರ್ ಫೈಂಡ್ ಹ್ಯಾಪಿನೆಸ್ ವಿತ್ ಎ $30,000 ಸ್ಕ್ಯಾನರ್?" Archived 2013-05-17 ವೇಬ್ಯಾಕ್ ಮೆಷಿನ್ ನಲ್ಲಿ. ಬಿಲ್ ಗ್ಲಿಕ್ಮನ್ರಿಂದ
- Pages using the JsonConfig extension
- Articles with invalid date parameter in template
- All articles containing potentially dated statements
- Articles with hatnote templates targeting a nonexistent page
- Articles with unsourced statements from August 2008
- Commons category link is on Wikidata
- Articles with Open Directory Project links
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕಂಪ್ಯುಟಿಂಗ್ ಔಟ್‌ಪುಟ್ ಡಿವೈಸ್
- ಕಚೇರಿ ಉಪಕರಣ
- ಗಣಕಯಂತ್ರ