ಚಿತ್ರ ಮಿತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರಮಿತ್ರ,[೧] ನೆಂದೇ ಭಾರತ ಹಾಗು ವಿದೇಶಗಳಲ್ಲಿ ಪ್ರಖ್ಯಾತರಾಗಿರುವ ಪ್ರಶಾಂತ್ ಶೆಟ್ಟಿ, ಅಂತಾರಾಷ್ಟೀಯ ಮಟ್ಟದ ಖ್ಯಾತ ಚಿತ್ರ ಕಲಾವಿದ. ತನ್ನ ಪ್ರಾಥಮಿಕ ಶಾಲೆಯ ದಿನಗಳಿಂದ ಚಿತ್ರಗಳನ್ನು ಗೀಚುವ ಹವ್ಯಾಸ, ದೈವದತ್ತವಾಗಿ ಬಂದ ಕೊಡುಗೆಯಾಗಿತ್ತು. ಅವನ ಶಿಕ್ಷಕರು ಈ ಕಲೆಯನ್ನು ವೀಕ್ಷಿಸಿ ಮೆಚ್ಚಿದರು. ಶಾಲಾದಿನಗಳಲ್ಲೇ ೧,೮೦೦ ಭಂಗಿಗಳ ಹಲವಾರು ಬಗೆಯ ಚಿತ್ರಗಳನ್ನು ಬಿಡಿಸಿದ್ದರು. ಈ ಹೆಮ್ಮೆಯ ತುಳು ಕನ್ನಡಿಗ, ತನ್ನ ಸ್ವಪ್ರಯತ್ನದಿಂದಲೇ ಒಬ್ಬ ವಿಶಿಷ್ಠ ಕಲಾವಿದನೆಂದು ಗುರುತಿಸಲ್ಪಟ್ಟಿದ್ದಾರೆ. ಮುಂಬಯಿ ಮಹಾನಗರ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯ ರ 'ನಿವೃತ್ತಿ ವಿದಾಯ ಕೂಟ'ದಲ್ಲಿ ಚಿತ್ರಮಿತ್ರ ಬಿಡಿಸಿದ ಹಲವಾರು ಚಿತ್ರಗಳಲ್ಲೊಂದು ಚಿತ್ರವನ್ನು ಮಾರಿಯಾ ಬಹಳವಾಗಿ ಮೆಚ್ಚಿದರು.

ತಂದೆಯವರ ಹೋಟೆಲ್ ವೃತ್ತಿ[ಬದಲಾಯಿಸಿ]

ಪ್ರಶಾಂತ್ ಶೆಟ್ಟಿಯವರ ತಂದೆ, 'ಎಲ್ಲೂರು ಗುಟ್ಟು ಕರುಣಾಕರ ಶೆಟ್ಟಿ' (ಗುಂಡಣ್ಣ ಶೆಟ್ಟಿ) ತಾಯಿ, 'ಸೂರತ್ಕಲ್ ಹೊಸಬೆಟ್ಟು ದುರ್ಗಾ ನಿವಾಸ ಕಸ್ತೂರಿ ಶೆಟ್ಟಿ' ದಂಪತಿಗಳ ಪುತ್ರರು. ಕರುಣಾಕರಶೆಟ್ಟಿ ಒಬ್ಬ ಯಶಸ್ವಿ ಹೋಟೆಲ್ ಉದ್ಯಮಿ. ಅವರ ಆಶೆಯಂತೆ ಹೋಟೆಲ್ ಉದ್ಯಮದಲ್ಲೇ ಮುಂದುವರೆಯಲು ಪ್ರಯತ್ನಿಸಿದರು. ಆದರೆ ಪ್ರಶಾಂತ್ ಗೆ ಹೋಟೆಲ್ ವೃತ್ತಿಗಿಂತ ಚಿತ್ರಕಲೆ ಬಹಳ ಇಷ್ಟವಾಯಿತು. ಶಾಲೆಯಿಂದ ಮನೆಗೆ ಬಂದಮೇಲೆ ಬಿಡುವಿನ ವೇಳೆಯಲ್ಲಿ ತಂದೆಯವರ ಹೋಟೆಲ್ ನಲ್ಲಿ ಗಲ್ಲದ ಮೇಲೆ ಕುಳಿತರೂ, ಅವರ ಮನಸ್ಸೆಲ್ಲ ಏನೆಲ್ಲಾ ಚಿತ್ರಗಳನ್ನು ರಚಿಸುವ ಬಗ್ಗೆಯೇ ಯೋಚನೆಯಿತ್ತು.

ಹಲವಾರು ಪತ್ರಿಕೆಗಳ ರಕ್ಷಾ ಕವಚವನ್ನು ರಚಿಸಿಕೊಟ್ಟರು[ಬದಲಾಯಿಸಿ]

 1. ಸೇವ್ಹಿ,
 2. ಸೊಸಾಯಿಟಿ,
 3. ಸಿಟಡೆಲ್,
 4. ಹೆಲ್ತ್ ಅಂಡ್ ನ್ಯೂಟ್ರಿಶನ್,
 5. ಐಲ್ಯಾಂಡ್,
 6. ಸ್ಟಾರ್ ಡಸ್ಟ್,
 7. ಫೆಮಿನಾ,
 8. ಟಿಂಕಲ್ ಪತ್ರಿಕೆಗೆ ಚಿತ್ರ ಒದಗಿಸುವಿಕೆ,
 9. ಅಮರ ಚಿತ್ರಕಥಾ ಪತ್ರಿಕೆಗೆ ಚಿತ್ರ ಒದಗಿಸುವಿಕೆ,
 10. ಸಂಡೆ ಅಬ್ಸರ್ವರ್
 11. ರೀಡರ್ಸ್ ಡೈಜೆಸ್ಟ್,
 12. ಟೈಮ್ಸ್ ಆಫ್ ಇಂಡಿಯ,
 13. ಪ್ರಿಥ್ವಿ ಥಿಯೇಟರ್ಸ್ ಮುಂಬಯಿನ ಹಲವಾರು ಪ್ರಾಜೆಕ್ಟ್ಸ್ ಗಳಿಗೆ ನೆರವು,
 14. ನ್ಯೂ ವಿಮೆನ್ ಗ್ರೂಪ್ ಪಬ್ಲಿಕೇಷನ್ ನ ಪತ್ರಿಕೆಗಳಿಗೆ ಹೊರ ರಕ್ಷಾಕವಚ ಚಿತ್ರ, ಕಾರ್ಟೂನ್,ಲೇಖನಗಳಿಗೆ ಸರಿಹೊಂದುವಂತಹ ಸಾಂದರ್ಭಿಕ ಚಿತ್ರಗಳ ರಚನೆ,[೨]
 15. ಹನುಮಂತನ ಚಿತ್ರ, ಅಂತಾರಾಷ್ಟ್ರೀಯ ಸ್ತರದಲ್ಲಿ ಹನುಮಾನ್ ಚಿತ್ರಕ್ಕೆ ಸುಮಾರು ಒಂದು ಸಾವಿರಕ್ಕೂಮಿಕ್ಕಿದ ಡ್ರಾಯಿಂಗ್ ಬರೆದು ಕೊಟ್ಟಿದ್ದಾರೆ. ಅವರ ಚಿತ್ರಗಳು ಜರ್ಮನಿ ದೇಶದಲ್ಲಿ ತ್ರಿಭಾಷಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

ಹಲವು ದಿಗ್ಗಜರ ಭಾವಚಿತ್ರ ರಚನೆ[ಬದಲಾಯಿಸಿ]

 1. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ,
 2. ಮೂಡ್ಬಿದ್ರೆ ವಿರಾಸತ್, ಡಾ.ಮೋಹನ್ ಆಳ್ವ,
 3. ನಿಟ್ಟೆಯ ವಿನಯ್ ಹೆಗ್ಡೆ, (೫ X ೭) ಗಾತ್ರದ ಭಾವಚಿತ್ರವನ್ನು ೫ ನಿಮಿಷಗಳಲ್ಲಿ ರಚಿಸಿದರು. ಹಲವಾರು ದಿಗ್ಗಜರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಹೋಟೆಲ್ ತಾಜ್ ನಲ್ಲಿ ಚಿತ್ರ ಪ್ರದರ್ಶನ[ಬದಲಾಯಿಸಿ]

ಹೋಟೆಲ್ ತಾಜ್ ನಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಚಿತ್ರ ತಾರೆಯವರಾದ ಅಭಿಷೇಕ್ ಬಚ್ಚನ್, ಸುಶ್ಮಿತಾ ಸೆನ್, ಮೆಚ್ಚುಗೆ ಸೂಚಿಸಿದರು.

ಅತಲ್ ಜಿ ಯವರ ಜನ್ಮದಿನದಂದು[ಬದಲಾಯಿಸಿ]

ಯುವ ಸಂಗಮ, ಮಲ್ಪೆ, ಕಡಲತೀರದಲ್ಲಿ ಆಯೋಜಿಸಲಾಗಿದ್ದ ಭಾರತ ರತ್ನ ಅಟಲ್ ಬಿಹಾರಿ ವಾಜ್ ಪೆಯಿ ರವರ ೯೦ ನೇ ಜನ್ಮ ದಿನಾಚರಣೆಯ ವೇಳೆಯಲ್ಲಿ ವಾಜಪೇಯಿ ಹಾಗೂ ಪ್ರಧಾನ ಮಂತ್ರಿ ನಾರೆಂದ್ರ ಮೋದಿಯವರ ಭಾವಚಿತ್ರಗಳನ್ನು ಚಿತಮಿತ್ರ[೩] ರಚಿಸಿ,ನೆರೆದಿದ್ದ ೪೦ ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶನಗೊಳಿಸಿದರು.

ಸದಾನಂದ ಶೆಟ್ಟಿ[ಬದಲಾಯಿಸಿ]

ಪುಣೆಯಲ್ಲಿ ಹೋಟೆಲ್ ನಡೆಸುತ್ತಿರುವ ಸದಾನಂದ್ ಶೆಟ್ಟಿ ಪ್ರಶಾಂತರ ಸೋದರ ಮಾವ. ಅವರ ೭೫ ನೆಯ ಹುಟ್ಟು ಹಬ್ಬದ ದಿನ ಅವಧೂತ ಶ್ರೀ ನಿತ್ಯಾನಂದ ಸ್ವಾಮೀಜಿಗಳ ಭಾವಚಿತ್ರವನ್ನು ಬಿಡಿಸಿದರು ಈ ಕೃತಿ ರಚನೆಗೆ ಸುಮಾರು ೩ ತಿಂಗಳು ಕಾಲ ಅವಿರತವಾಗಿ ಶ್ರಮಿಸಿದರು. ಈ ಸುಂದರ ಕೃತಿಯನ್ನು ಶ್ರೀ ನಿತ್ಯಾನಂದ ಸ್ವಾಮೀಜಿಯವರ ಪರಮ ಭಕ್ತರಾದ, ಸಾಯನ್ ನಂದಳಿಕೆ ರತ್ನಾಕರ ಶೆಟ್ಟಿಯವರಿಗೆ ಸಮರ್ಪಿಸಿದ್ದಾರೆ

ಕುವೈತ್ ನಲ್ಲಿ[ಬದಲಾಯಿಸಿ]

"ಬಂಟರ ಸಂಘ ಕುವೈತ್" ಆಯೋಜಿಸಿದ 'ಬಂಟಾಯನ'[೪] ಎಂಬ ಅದ್ಧೂರಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಚಿತ್ರ ಮಿತ್ರ, ನರೇಂದ್ರ ಮೋದಿಯವರ ಭಾವಚಿತ್ರ ಬಿಡಿಸಿದರು ಆ ದಿನದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ರಾಯಭಾರಿ,ಸುನಿಲ್ ಜೈನ ದಂಪತಿಗಳ ಸಮ್ಮುಖದಲ್ಲಿ ರಚಿಸಿದರು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಭಾವಚಿತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ ೩ ಜನ ಗಣ್ಯರ ಚಿತ್ರಗಳನ್ನು ಕೆಲವೇ ನಿಮಿಷಗಳಲ್ಲಿ ರಚಿಸಿದರು. ಇಷ್ಟು ದೊಡ್ಡ ಸಾಧನೆ ಸಾಧ್ಯವಾದ ಬಗೆಯನ್ನು ಶ್ಲಾಘಿಸಿದಾಗ ಅವರು ಹೇಳಿದ್ದು ಹೀಗೆ :

'ಕಲಾಕ್ಷೇತ್ರದಲ್ಲಿ ನಾನಿನ್ನು ಒಂದು ಬಿಂದು'

ಚಿತ್ರಕಲಾವಿದೆ,ಅನು ಪಾವಂಜೆಯವರ ಸಾಥಿಯಾಗಿ[ಬದಲಾಯಿಸಿ]

'ಚಿತ್ರಮಿತ್ರ', ಬಲುಬೇಡಿಕೆಯ ವಿಶಿಷ್ಠ ರೀತಿಯ ಕಲಾವಿದ. [೫] ದೇಶ ವಿದೇಶಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇವರ ಅಪಾರ ಪರಿಶ್ರಮ ಮತ್ತು ಕಲೆಯಬಗ್ಗೆ ಇರುವ ಅಪೂರ್ವ ಕಾಳಜಿ ಮತ್ತು ಬದ್ಧತೆಗಳನ್ನು ಮೆಚ್ಚಿ, ಅವರಚಿತ್ರ ಕಲೆಯ ಬದುಕಿನಲ್ಲಿ ಪ್ರಬುದ್ಧ ಚಿತ್ರ ಕಲಾವಿದೆ,ಕವಯಿತ್ರಿ, ಅನು ಪಾವಂಜೆಯವರು ಸಾಥ್ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

ಲಂಡನ್ ನಲ್ಲಿ ಚಿತ್ರಪ್ರದರ್ಶನ[ಬದಲಾಯಿಸಿ]

ವರ್ಷ ೨೦೧೮ ರ, ಆಗಸ್ಟ್, ೫ ರಿಂದ ೭ ರವರೆಗೆ ಲಂಡನ್ ನಲ್ಲಿ ಆಯೋಜಿಸಲಿರುವ ಕಲಾ ಪ್ರದರ್ಶನದಲ್ಲಿ ಚಿತ್ರ ಮಿತ್ರ ಹಾಗೂ ಅನು ಪಾವಂಜೆ ಯವರು ಭಾಗಗೊಳ್ಳುವರು. ಚಿತ್ರಮಿತ್ರ ತಮ್ಮ ೩೮ ಚಿತ್ರಕೃತಿಗಳನ್ನು ಪ್ರದರ್ಶನಕ್ಕೆ ಇಡುವರಲ್ಲದೆ, ಅವರ ಚಿಕ್ಕಮ್ಮನವರ ೬೦ ವರ್ಷಗಳ ಹಿಂದೆ ರಚಿಸಿದ ಪೇಂಟಿಂಗ್ ಗಳನ್ನೂ ಲಂಡನ್ ಪ್ರದರ್ಶನದಲ್ಲಿ ವೀಕ್ಷಣೆಗೆ ಇಡುತ್ತಾರೆ. ಈ ಇಬ್ಬರು ಕಲಾವಿದರ ಜೊತೆಗೆ, ಮುಂಬಯಿ ಮಹಾನಗರದ ಹೆಸರಾಂತ ಛಾಯಾಗ್ರಾಹಕ ಗೌರವ್ ರಾಜಾರಾಮ್ ತಮ್ಮ ಒಟ್ಟಾರೆ ಕಲೆಹಾಕಿದ ಕ್ಯಾನ್ವಾಸ್ ಗಳ "Confluence at Birla Art Gallery" ಎಂಬ ಶೀರ್ಷಿಕೆ ಸಹಿತ ಪಾಲ್ಗೊಳ್ಳುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

 1. karnatakamalla.com, "ಬಣ್ಣದ ಲೋಕ",೨೨, ಮಾರ್ಚ್, ೨೦೧೮, ಪು. ೧೦, 'ಚಿತ್ರಮಿತ್ರನ ಕೈಚಳಕದಲ್ಲಿ ಮೂಡುತ್ತಿರುವ ಅದ್ಭುತ ಕಲಾಕೃತಿಗಳು'-ಪ್ರಭಾಕರ ಬೆಳುವಾಯಿ
 2. freelance-illustrator/
 3. about-me
 4. Kuwait: BSK 'Buntaayana' cultural gala - Rapid art, Yakshagana enthrall audience Mon, May 8 2017, Daij world.com
 5. Shadows, An Artist of today, Chithramitra

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. ‘Anu-Chithra’ art exhibition in Udupi from Jan 24,2015,ಗಣೇಶ್ ಪ್ರಭು
 2. Anu-Chithra-art-festival-at-Aditi-Gallery-Udupi[ಶಾಶ್ವತವಾಗಿ ಮಡಿದ ಕೊಂಡಿ]