ಅನು ಪಾವಂಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನು ಪಾವಂಜೆಯವರ, ಬಾಲ್ಯದ ಹೆಸರು, ಅನುರಾಧ ಎಂದು. ಅವರು [೧] ತೈಲವರ್ಣ, ಜಲವರ್ಣ, ಬೆಳಕು-ನೆರಳು ಚಿತ್ರಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. [೨] ಅವರು ಒಬ್ಬ ಕವಯಿತ್ರಿ [೩] ಪ್ರವಾಸ ಕಥನ ಲೇಖನಗಳನ್ನುಬರೆಯುವುದರಲ್ಲಿ ಆಸಕ್ತರು.

ಪರಿವಾರ[ಬದಲಾಯಿಸಿ]

ಅನುರಾಧ ಪಾವಂಜೆಯವರು, [೪] ಪಾವಂಜೆ ಕೃಷ್ಣಮೂರ್ತಿ, ಹಾಗೂ ಶಾರದಮ್ಮ ದಂಪತಿಗಳ ಪ್ರೀತಿಯ ಮಗಳಾಗಿ ೧೯.೦೨.೧೯೭೧ ರಲ್ಲಿ ಮಂಗಳೂರಿನ ಪಾವಂಜೆಯಲ್ಲಿ ಜನಿಸಿದರು. ಅನುರವರು, ಬಿ.ಎ. ಪದವಿಯನ್ನು ಗಳಿಸಿದ್ದಾರೆ. ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಬೆಳೆದ ವಿಶೇಷ ಒಲವು. ಮುತ್ತಜ್ಜ.ಗೋಪಾಲಕೃಷ್ಣಯ್ಯ (ಪಿಜ್ಜ) ಕೇರಳದ ರಾಜಾ ರವಿವರ್ಮನ ಗೆಳೆಯರಾಗಿದ್ದರು. ವಂಶ ಪಾರಂಪರ್ಯವಾಗಿ ಹರಿದುಬಂದ ಚಿತ್ರಕಲಾ ಪರಿಣತಿ ತಲೆಮಾರಿನಷ್ಟು. ಚಿಕ್ಕಪ್ಪ ಮಾಧವ ರಾವ್ ಪಾವಂಜೆ, (ಎಂ.ಆರ್.ಪಾವಂಜೆ) ರವರ ಮಾರ್ಗದರ್ಶನದಲ್ಲಿ ಚಿತ್ರಕಲೆಯಲ್ಲಿ ಪರಿಣತಿ ಗಳಿಸಿದರು. ಹಾಗೆಯೇ ಬೆಳೆದು ಪೆನ್ಸಿಲ್ ಗೆರೆಯ ಚಿತ್ರಗಳು, ರೇಖಾಚಿತ್ರ, ವರ್ಣಚಿತ್ರ, ತೈಲವರ್ಣ, ಮುಂತಾದ ಎಲ್ಲ ಪ್ರಾಕಾರಗಳನ್ನು ಅಭ್ಯಾಸಮಾಡಿದರು. ಕಪ್ಪು-ಬಿಳುಪು ಮತ್ತು ವರ್ಣಕಲೆಯ ಪ್ರಾವೀಣ್ಯತೆ ಇವರ ಸಾಧನೆಯೇನೆಂದು ಗುರುತಸಲ್ಪಟ್ಟಿದೆ. ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆಗೆ ಒತ್ತುಕೊಟ್ಟು ಕಲಿತು ವಿವೇಚನಾಶೀಲ ಬಣ್ಣದ, ಚಿನ್ನದ ಕುಸುರಿ ಕೆಲಸದಲ್ಲಿ ಸಾಧಿಸಿ ತೋರಿಸಿದ ಅಗಾಧ ಪ್ರತಿಭೆ. ಇವರು ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ಅವುಗಳಲ್ಲಿ ಕರ್ನಾಟಕ ಲಲಿತಕಲಾ ಅಕಾಡಮಿ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಏರ್ಪಡಿಸಿದ ರಾಷ್ಟ್ರಮಟ್ಟದ ಕಲಾಪ್ರದರ್ಶನಗಳು ಮುಖ್ಯವಾದುವುಗಳು.

ಕಲಾ ಪ್ರದರ್ಶನಗಳು[ಬದಲಾಯಿಸಿ]

ಸಾಂಘಿಕ[ಬದಲಾಯಿಸಿ]

ಸಾಂಘಿಕ ಪ್ರದರ್ಶನಗಳಾದ ಬೆಳಗಾಂ, ಮಂಗಳೂರು, ಬೆಂಗಳೂರಿನ ರಾಷ್ಟ್ರೀಯ ಕಲಾಮೇಳ, ವೆಂಕಟಪ್ಪ ಆರ್ಟ್ ಗ್ಯಾಲರಿ, ಚಿತ್ರಸಂತೆ, ಉಡುಪಿ, ಮೈಸೂರು, ಮಂಗಳೂರಿನಲ್ಲಿ ಗಣೇಶನ ಗಣ-ರೂಪ ಪ್ರದರ್ಶನ, ಮುಂಬಯಿಯ ಮಾನ್‌ಸೂನ್ ಮೇಳ ಮುಂತಾದುವುಗಳಲ್ಲಿ ಭಾಗಿ. ಹಲವಾರು ಕಲಾ ಶಿಬಿರಗಳಲ್ಲಿ ವಹಿಸಿದ ಪ್ರಮುಖ ಪಾತ್ರ. ಹುಬ್ಬಳ್ಳಿಯಲ್ಲಿ ನಡೆದ ಕಲಾಮೇಳದಲ್ಲಿ ವಿಶೇಷ ಬಹುಮಾನ, ಮಂಗಳೂರಿನ ಜಾಯ್ಸಿ ಕ್ಲಬ್‌ನಿಂದ ವಿಶೇಷ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಇವರು ರಚಿಸಿದ ಮದರ್ ತೆರೆಸಾ, ಅಬ್ದುಲ್ ಕಲಾಂ ಆಜಾದ್ ಚಿತ್ರಗಳು ಮಂಗಳೂರಿನಲ್ಲಿ, ಗಣೇಶನ ಚಿತ್ರ ನೇಪಾಳದ ರಾಜ ಬೀರೇಂದ್ರರಲ್ಲಿ, ಮುದ್ಗಲ ಪುರಾಣ ಆಧಾರಿತ ೩೨ ಗಣೇಶನ ಚಿತ್ರಗಳು ಅಮೆರಿಕದ ಸುನಂದಾ ಜೈನ್ ಮುಂತಾದವರ ಪ್ರಮುಖ ಸಂಗ್ರಹಾಲಯಗಳಲ್ಲಿವೆ.ಅನು ಪ್ರಸ್ತುತ ಮುಂಬೈಯಲ್ಲಿ ವಾಸವಾಗಿದ್ದಾರೆ. 'ಪ್ರಮುಖ ವೆಬ್ ತಾಣ'ಗಳಲ್ಲಿ ಇವರು ಬರೆಯುವ ಅಂಕಣ ಬರಹಗಳಿಂದ ಇವರ ಹೆಸರು ಚಿರಪರಿಚಿತವಾಗಿದೆ. [೫] ಚೌಕಟ್ಟಿಲ್ಲದ ಸ್ವಗತ ಇವರ ಮೊದಲ ಕವನ ಸಂಗ್ರಹ

ಮನೆತನ[ಬದಲಾಯಿಸಿ]

ಪಾವಂಜೆ ವಂಶದ ಮೂಲ ಪುರುಷ, ಶ್ರೀನಿವಾಸಯ್ಯನವರು ಒಬ್ಬ ಪ್ರಖ್ಯಾತ ವೈದ್ಯರು. ಅವರ ಮಗ ಪಾವಂಜೆ ಗೋಪಾಲಕೃಷ್ಣಯ್ಯ,[೬] ಹಾಗೂ ವೆಂಕಮ್ಮ ದಂಪತಿಗಳಿಗೆ ೫ ಜನ ಮಕ್ಕಳು. (ಮೂರು ಗಂಡುಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳು) ೧. ನರಹರಿ ಪಾವಂಜೆ ಮತ್ತು ಕೃಷ್ಣವೇಣಿ ದಂಪತಿಗಳಿಗೆ ಇಬ್ಬರು ಮಕ್ಕಳು. ಅನಸೂಯ ಪಾವಂಜೆ ಸತೀಶ್ ಪಾವಂಜೆ. ೨. ಭುಜಂಗರಾವ್ ಪಾವಂಜೆ ಮತ್ತು ಭಾರತಿ ದಂಪತಿಗಳಿಗೆ ೭ ಮಕ್ಕಳು. (ನಾಲ್ಕು ಜನಗಂಡುಮಕ್ಕಳು ಮತ್ತು ಮೂರುಜನ ಹೆಣ್ಣುಮಕ್ಕಳು) ಹಿರಿಯಮಗ ಕೃಷ್ಣಮೂರ್ತಿ ರಾವ್ ಪಾವಂಜೆ, ಹಾಗೂ ಶಾರದದಂಪತಿಗಳಿಗೆ ಅನುರಾಧ ಪಾವಂಜೆ ಎಂಬ ಮಗಳು ಮತ್ತು ಮಗ ಮುರುಳೀಧರ್ ರಾವ್, ವೃತ್ತಿಯಲ್ಲಿ ಇಂಜಿನಿಯರು. ಕೃಷ್ಣಮೂರ್ತಿರಾಯರು ಒಂದು ಪ್ರೈವೇಟ್ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದಾರೆ.

ನರಹರಿ.ಜಿ.ಪಾವಂಜೆಯವರು[ಬದಲಾಯಿಸಿ]

ಅನುರವರ, ಮುತ್ತಜ್ಜ, ಶ್ರೀ.ನರಹರಿ.ಜೆ.ಪಾವಂಜೆಯವರು, ೧೮೮೫ ರಲ್ಲಿಯೇ ಮುಂಬಯಿನ ಸರ್.ಜೆ.ಜೆ.ಕಲಾ ಶಾಲೆಯಲ್ಲಿ ಓದಿದವರು. ನಂತರ ಆ ಸಂಸ್ಥೆಯಲ್ಲಿಯೇ ೭ ವರ್ಷಗಳ ಕಾಲ ಶಿಕ್ಷಕರಾಗಿ ದುಡಿದರು. [೭]

ನರಹರಿ.ಜಿ.ಪಾವಂಜೆಯವರು,[೮] ಉಡುಪಿಯ 'ಯೆಲ್ಲೂರು' ಎಂಬ ಗ್ರಾಮದಲ್ಲಿ (೧೮೧೨-೧೯೬೫) ಜನಿಸಿದರು.ಅವರು ಮೈಸೂರುನಗರದ ಸುಪ್ರಸಿದ್ದ ದಸರಾ ಉತ್ಸವದಲ್ಲಿ ತಮ್ಮ ಕಲಾಪ್ರದರ್ಶನಮಾಡಿ, ಮೈಸೂರರಸರಿಂದ ಸತತವಾಗಿ ಎರಡುಬಾರಿ,೧೯೧೯ ಮತ್ತು ೧೯೨೦ ರಲ್ಲಿ ಪ್ರಶಸ್ತಿಗಳಿಸಿದರು. ಸುಪ್ರಸಿದ್ಧ ನಾಟಕ ಬರಹಗಾರ, ಮತ್ತು ಅಭಿನೇತ, ಟಿ.ಪಿ.ಕೈಲಾಸಂರವರ Member of Dramatic Association of T.P.Kailasm ನಲ್ಲಿ ಜೊತೆಗೂಡಿ ಕೆಲಸಮಾಡಿದರು. ಇವರ ಕಲಾ ನೈಪುಣ್ಯತೆಗೆ ಮೆಚ್ಚಿ ಮಹಾರಾಜ, ಶ್ರೀ ಕೃಷ್ಣರಾಜವೊಡೆಯರ್ ಬಹದ್ದೂರ್ ರವರು ಪಾವಂಜೆಯವರನ್ನು ಜರ್ಮನಿದೇಶಕ್ಕೆ ವಿಶೇಷ ಕಲೆಯನ್ನು ಅಭ್ಯಾಸಮಾಡಲು ೧೯೨೩ ರಲ್ಲಿ ವಿದ್ಯಾರ್ಥಿವೇತನ ಕೊಟ್ಟು ಕಳುಹಿಸಿಕೊಟ್ಟರು. ಜರ್ಮನಿಯಲ್ಲಿ ಪಾವಂಜೆಯವರು ತಮ್ಮ ಕಲಾಸಾಧನೆಯಿಂದ ಎರಡು ಡಾಕ್ಟರೇಟ್ ಗಳನ್ನು ಸಂಪಾದಿಸಿದರು. ವಿಶ್ವದಲ್ಲೇ ಈ ತರಹದ ಪಾರಿತೋಷಕ ಗಳಿಸಿದ ೧೩ ನೇ ವ್ಯಕ್ತಿಯೆಂಬ ಹೆಗ್ಗಳಿಕೆ ಪಾತ್ರರೆಂದು ಹೆಸರು ಗಳಿಸಿದರು. 'ಬರ್ಲಿನ್ ನ ಗ್ರಾಫಿಕ್ ಸೊಸೈಟಿಯ ಸದಸ್ಯ'ರಾದರು. ನರಹರಿ ಪಾವಂಜೆಯವರ ಮೇಲೆ ಆಗಿನಕಾಲದ ಹೆಸರಾಂತ ಡಚ್ ಕಲಾವಿದ ರೆಂಬ್ರಾಂಟ್ ರ ಮಾದರಿ ಬಹಳ ಗಮನಸೆಳೆಯಿತು. ರೆಂಬ್ರಾಂಟ್ (Rembrandt)ಹಾಗೂ ಟೈಟಿಯನ್ (Titian) ,ವೆನಿಟಿಯನ್ ಶೈಲಿ,ಯನ್ನು ತಮ್ಮದಾಗಿರಿಸಿಕೊಂಡಿದ್ದರು. ಮೈಸೂರಿಗೆ ವಾಪಸ್ಸಾದಮೇಲೆ ಪಾವಂಜೆಯವರು 'ರೆಂಬ್ರಾಂಟರ' ಚಿತ್ರಶೈಲಿಯಲ್ಲೇ ಪೇಂಟಿಂಗ್ ಗಳನ್ನು ರಚಿಸಿ, ಜಗನ್ಮೋಹನ ಅರಮನೆಗೆ ತಮ್ಮ ಉಡುಗೊರೆಯಾಗಿ ಪ್ರದಾನಮಾಡಿದರು. ಮಹಾರಾಜರು ಪಾವಂಜೆಯವರಿಗೆ ಅವರ ಕೊನೆಗಾಲದಲ್ಲಿ ಸನ್ಮಾನಿಸಲು ಕರೆಕೊಟ್ಟಾಗ, ಪಾವಂಜೆಯವರು ಅದನ್ನು ಪಡೆಯಲು ಸಂತೋಷ ವ್ಯಕ್ತಪಡಿಸಲಿಲ್ಲ.

ಅನು ಪಾವಂಜೆಯವರ ಗುರುಗಳು[ಬದಲಾಯಿಸಿ]

ಅನುರವರ ಚಿಕ್ಕಪ್ಪ, ಮಾಧವ ರಾವ್ ಪಾವಂಜೆ 'ಪೋರ್ಟ್ರೇಟ್ ಚಿತ್ರ' ನಿಪುಣರು ಪರಿವಾರದ ಸದಸ್ಯರಲ್ಲದೆ, ಸುಪ್ರಸಿದ್ಧ ಗುರುಗಳ ಬಳಿ ಮನೆಯ ವಾತಾವರಣವಿತ್ತು. ಅವರೆಲ್ಲರ ಜೊತೆಗೆ ಅನುರವರು ಸ್ಪಂದಿಸುತ್ತಿದ್ದರು. ಸಾಂಪ್ರದಾಯಿಕ ಚಿತ್ರರಚನೆಯಲ್ಲಿ ಆಸಕ್ತಿ ಇತ್ತು. ಚಿನ್ನದ ಆಭರಣಗಳಿಗೆ ಬೆಡಗಿನ ವಿನ್ಯಾಸ, ಹಾಗೂ 'ಮೈಸೂರ್ ಸ್ಕೂಲ್' ನ ವಿಶೇಷತೆಗಳಾದ 'ನವಿರಾದ ಬಾರ್ಡರ್' ಕಲೆಯನ್ನು ಮಿಂಚುವಂತೆ ಬಂಗಾರದ ಸಂಪರ್ಕಕೊಡುವ ವಿಶೇಷ ಕಲೆಯಲ್ಲಿ ಪರಿಣಿತಿ ಗಳಿಸಿದ್ದರು. ಸುಂದರ, ಸರಳ ರೇಖೆಗಳ ಜೊತೆಗೆ, ರಂಜಿಸುವ ಕಲಾಪ್ರಕಾರ, ಬಣ್ಣಗಳನ್ನು ಸೊಗಸಾಗಿ ಹೊಂದಿಸುವ ಪರಿಣಿತಿ ಅವರಿಗೆ ತಿಳಿದಿದೆ. ಅಜ್ಜಿ, ಅನುಸೂಯ ಪಾವಂಜೆ, [೯] ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನ ಒಬ್ಬ ವಿಜ್ಞಾನ ಪದವೀಧರೆ (ಬಿ.ಎಸ್ಸಿ),ಹಾಗೂ ಕಲಾವಿದೆ. [೧೦] ಅನುರವರ ಅಜ್ಜ, ಶ್ರೀ ಭುಜಂಗರಾವ್, ಮತ್ತು ಅವರ ಸೋದರ ಸಹಿತ, ಕಲೆಗೆ ಹೆಸರಾದವರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎನ್.ಜಿ.ಪಾವಂಜೆಯವರ ಅಧ್ಯಯನ ಪೀಠ ಸ್ಥಾಪನೆ[ಬದಲಾಯಿಸಿ]

ಎನ್.ಜಿ.ಪಾವಂಜೆಯವರ ಪ್ರೀತಿಯ ಮಗಳು, ಅನಸೂಯ ಪಾವಂಜೆಯವರು, [೧೧]ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಲೆಯ ಪ್ರಸಾರ ಹಾಗೂ ತರಪೇತಿಗೆ ಒಂದು ಅಧ್ಯಯನ ಪೀಠವನ್ನು ಹುಟ್ಟುಹಾಕಿದ್ದಾರೆ. ಅವರು ತಮ್ಮ ತಂದೆಯವರ ಸಮಗ್ರ ಕಲಾ ಬದುಕನ್ನು ಬಿಂಬಿಸುವ ಒಂದು ಸಚಿತ್ರ ಪುಸ್ತಕವನ್ನೂ ಬರೆದಿದ್ದಾರೆ.[೧೨]

ಕಂಡ ಪ್ರದರ್ಶನಗಳು[ಬದಲಾಯಿಸಿ]

 1. 1993 - ಬೆಳಗಾಂ,(ಕರ್ನಾಟಕ)
 2. 1994 - ಮಂಗಳೂರು (ಕರ್ನಾಟಕ)
 3. 1995 - '೮ ನೇ ರಾಷ್ಟ್ರೀಯ ಕಲಾ ಮೇಳ'(ಕರ್ನಾಟಕ)
 4. 1995 - ಉಡುಪಿ (ಕರ್ನಾಟಕ)
 5. 1995 - 'ಬೆಂಗಳೂರಿನ ವೆಂಕಟಪ್ಪ ಕಲಾ ಗ್ಯಾಲರಿ' (ಕರ್ನಾಟಕ)
 6. 1995 - ಮಂಗಳೂರು (ಕರ್ನಾಟಕ)
 7. 1998 - 'ಭರಣಿ ಆರ್ಟ್ ಗ್ಯಾಲರಿ, ಮೈಸೂರು',(ಕರ್ನಾಟಕ)
 8. 2001 - ಮುಂಬಯಿ
 9. 2001 - ಮಂಗಳೂರು (ಕರ್ನಾಟಕ)
 10. 2002 - ಮುಂಬಯಿ
 11. 2002 - ಉಡುಪಿ (ಕರ್ನಾಟಕ)
 12. 2003 - ಉಡುಪಿ (ಕರ್ನಾಟಕ)
 13. 2004 - ಮುಂಬಯಿ
 14. 2004 - ಉಡುಪಿ (ಕರ್ನಾಟಕ)

ಆರ್ಟ್ ಕ್ಯಾಂಪ್ ಗಳಲ್ಲಿ[ಬದಲಾಯಿಸಿ]

 1. 1993 -'ರಾಜ್ಯಮಟ್ಟದ ಮಹಿಳಾ ಕಲಾಕಾರರ ಕ್ಯಾಂಪ್ ಧಾರವಾಡ'(ಕರ್ನಾಟಕ)
 2. 1994 -ಮಂಗಳೂರು (ಕರ್ನಾಟಕ)
 3. 1994 -'ರಾಜ್ಯಮಟ್ಟದ ಮಹಿಳಾ ಕಲಾಕಾರರ ಕ್ಯಾಂಪ್, ಮಂಗಳೂರು' (ಕರ್ನಾಟಕ)
 4. 1994 -'ರಾಜ್ಯಮಟ್ಟದ ಮಹಿಳಾ ಕಲಾಕಾರರ ಕ್ಯಾಂಪ್, ಸೋನನ್ಗೆರಿ'(ಕರ್ನಾಟಕ)
 5. 1995 -'ರಾಜ್ಯಮಟ್ಟದ ಮಹಿಳಾ ಕಲಾಕಾರರ ಕ್ಯಾಂಪ್, ನಿಡ್ಲೆ' (ಕರ್ನಾಟಕ)

ಪ್ರಶಸ್ತಿಗಳು[ಬದಲಾಯಿಸಿ]

 1. 1994-ಹುಬ್ಬಳ್ಳಿಯಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯ ಸ್ತರದ ವಾಟರ್ ಕಲರ್ ಚಿತ್ರಕಲಾಸ್ಪರ್ಧೆಯಲ್ಲಿ ವಿಶೇಷ ಬಹುಮಾನ.
 2. 1995-ಮಂಗಳೂರಿನಲ್ಲಿ ಜೆ.ಸಿ.ಕ್ಲಬ್ ನವರು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೇರು ಯುವಪ್ರತಿಭಾ ಸನ್ಮಾನ ಗಳಿಸಿದರು.
 3. 1995-ಪಾವಂಜೆಯಲ್ಲಿ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

ಉಲ್ಲೇಖಗಳು[ಬದಲಾಯಿಸಿ]

 1. ಪಾವಂಜೆ
 2. ಕನ್ನಡ ಸಂಪದ Kannada Sampada added a new photo to the album: ಲಲಿತಕಲಾಸಂಪದ — with Anu Pavanje. February 19, 2017
 3. ಅನು ಪಾವಂಜೆ ಸೀರೆ ಉಟ್ಟಿದ್ದು..G | August 3, 2011[ಶಾಶ್ವತವಾಗಿ ಮಡಿದ ಕೊಂಡಿ]
 4. "'ಕಣಜ ಅಂತರ್ಜಾಲ ಕನ್ನಡ ಜ್ಞಾನಕೋಶ ಪತ್ರಿಕೆ'". Archived from the original on 2020-09-23. Retrieved 2018-04-27.
 5. ಚೌಕಟ್ಟಿಲ್ಲದ ಸ್ವಗತ[ಶಾಶ್ವತವಾಗಿ ಮಡಿದ ಕೊಂಡಿ]
 6. "ವರ್ಣಚಿತ್ರ ಕಲಾವಿದ ಪಾವಂಜೆ ಗೋಪಾಲಕೃಷ್ಣಯ್ಯ". Archived from the original on 2015-12-14. Retrieved 2015-12-14.
 7. Narahari G.Pavanje, The Achievers, Anisha seth, Hindu news paper
 8. N.G.Pavanje, an Artist of par excellence ! (1882-1965)
 9. 'A treasure trove of knowledge,' Deccan herald, 13, Aug, 2011
 10. TRADITIONAL ART IN THE MODERN ERA, By Jayanthi Madhukar, Bangalore Mirror Bureau, Updated: Jul 28, 2014
 11. # N.G.Pavanje memorial lectures,TOI, Modern art has its roots in the tradition: Expert, TNN |Dec 4, 2010
 12. FLOWER BORN TO BLUSH UNSEEN : LIFE AND WORKS OF N.G PAVANJE by : ANASUYA PAVANJE[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. "ಕೆಂಡಸಂಪಿಗೆ",'ಎನ್ನ ಪ್ಯಾರಿಸ್ ಯಾನ’: ಅನು ಪಾವಂಜೆ ಪ್ರವಾಸ ಕಥನ,Feb 5, 2018,
 2. About Mythic society, Bengaluru Archived 2018-03-03 ವೇಬ್ಯಾಕ್ ಮೆಷಿನ್ ನಲ್ಲಿ.
 3. chaukattillada-swagata/, 'ಎಳೆಗಾಳಿ ಸುರಿದಂತೆ'[ಶಾಶ್ವತವಾಗಿ ಮಡಿದ ಕೊಂಡಿ]