ವಿಷಯಕ್ಕೆ ಹೋಗು

ಚಾರ್ಲ್ಸ್ ಜೇಮ್ಸ್ (ವಿಜ್ಞಾನಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಚಾರ್ಲ್ಸ್ ಜೇಮ್ಸ್ (1880-1928). ಆಂಗ್ಲೋ-ಅಮೆರಿಕನ್ ರಸಾಯನ ವಿಜ್ಞಾನಿ.

ಬದುಕು

[ಬದಲಾಯಿಸಿ]

ಇಂಗ್ಲೆಂಡಿನ ನಾಥ್ರ್ಯಾಮ್‍ಟನ್ನಿನ ಅರ್ಲ್ ಬ್ಯಾರ್ಟನ್ನಿನಲ್ಲಿ ಜನನ. ಲಂಡನ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಳಿಕ ಅಮೆರಿಕದ ನ್ಯೂ ಹ್ಯಾಂಪ್ಷೈರಿನ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕ ಹುದ್ದೆ ಸ್ವೀಕರಿಸಿದ. ಅಮೆರಿಕದ ಬೋಸ್ಟನಿನಲ್ಲಿ ಮರಣ.

ಆವರ್ತಕೋಷ್ಟಕಲ್ಯಾಂಥನಮ್ಮಿನಿಂದ ಲ್ಯೂಟೆಷಿಯಮ್‍ವರೆಗಿನ 14 ಧಾತುಗಳನ್ನು ಲ್ಯಾಂಥನೈಡುಗಳು ಅಥವಾ ವಿರಳ ಭಸ್ಮಧಾತುಗಳೆಂದು ಕರೆಯುತ್ತಾರೆ. ಲ್ಯಾಂಥನೈಡುಗಳ ಗುಣಗಳು ಗಣನೀಯವಾಗಿ ಸದೃಶವಾಗಿವೆ. ಈ ಧಾತುಗಳ ಗುಣಗಳಲ್ಲಿನ ವ್ಯತ್ಯಾಸಗಳು ಸೂಕ್ಷ್ಮವಾದವು ಮಾತ್ರ. ಆದ್ದರಿಂದ ಇವುಗಳ ಬೇರ್ಪಡೆ ಬಲು ಕಷ್ಟವಾದುದು ಮತ್ತು ಬಿಡಿಚಲು ಹಿಡಿಸುವ ಕೆಲಸ. ಇಂಥ ಕಾರ್ಯದಲ್ಲಿ ಪರಿಣತನಾಗಿದ್ದವ ಜೇಮ್ಸ್. ಲೂಟೆಷಿಯ ಎಂಬ ಲ್ಯಾಂಥನೈಡನ್ನು ಆವಿಷ್ಕರಿಸಿದ ಈತ ಮೊದಲಿಗನಾದರೂ ಆ ಸಂಶೋಧನೆಯನ್ನು ಪ್ರಕಟಿಸಿರಲಿಲ್ಲವಾದ್ದರಿಂದ ಈ ಕೀರ್ತಿ ಅವನಿಗೆ ಸಲ್ಲಲಿಲ್ಲ. ಅರ್ಬೇನ್ ಎಂಬಾತನಿಗೆ ಇದು ಸಂದಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: