ವಿಷಯಕ್ಕೆ ಹೋಗು

ಚಾರ್ಲೋಟ್ ಬ್ರಾಂಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಚಾರ್ಲೊಟ್ ಬ್ರಾಂಟೆ

ಚಾರ್ಲೋಟ್ ಬ್ರಾಂಟೆಯವರು ಪಶ್ಚಿಮ ಸವಾರಿಯ ಥಾರ್ನ್ಟನ್, ಬ್ರಾಡ್ಫೋರ್ಡ್ನ ಪಶ್ಚಿಮದಲ್ಲಿ ೨೧ ಎಪ್ರಿಲ್ ೧೮೧೬ ರಲ್ಲಿ, ಮಾರಿಯಾ ಮತ್ತು ಪ್ಯಾಟ್ರಿಕ್ ಬ್ರಾಂಟೆ ಅವರ ಆರು ಮಕ್ಕಳಲ್ಲಿ ಮೂರನೆಯ ಮಗಳಾಗಿ ಜನಿಸಿದರು. ಪ್ಯಾಟ್ರಿಕ್ ಬ್ರಾಂಟೆ ಅವರು ಐರಿಷ್ ಆಂಗ್ಲಿಕನ್ ಪುರೋಹಿತರಾಗಿ ಕಾರ್ಯವನ್ನು ನಿರ್ವಹಿಸುತಿದ್ದರು.೧೮೨[೦ರಲ್ಲಿ ಬ್ರಾಂಟೆಯವರ ಕುಟುಂಬ ಕೆಲವು ಮೈಲುಗಳಷ್ಟು ದೂರದ ಹಾವೊರ್ಥ್ ಎಂಬ ಗ್ರಾಮಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರ ತಂದೆ ಸೇಂಟ್ ಮೈಕೆಲ್ ಮತ್ತು ಆಲ್ ಏಂಜಿಲ್ಸ್ ಚರ್ಚ್ನಲ್ಲಿ ಸಾರ್ವಕಾಲಿಕ ಮೇಲ್ವಿಚಾರಕರಾಗಿ ನೇಮಕರಾದರು. ಮಾರಿಯ ಅವರು ೧೫ ಸೆಪ್ಟೆಂಬರ್ ೧೮೨೧ ರಂದು ಕ್ಯಾನ್ಸರ್ನಿಂದಾಗಿ ನಿಧನರಾದರು.ಅದೇ ಕಾರಣದಿಂದಾಗಿ ಮಾರಿಯ ಯವರ ಮೊದಲ ಪುತ್ರಿ ಎಲಿಜಬೆತ್ ಅವರಿಗೆ ಉಳಿದ ಐದು ಸಹೋದರರನ್ನು ನೋಡಿಕೊಳ್ಳುವ ಕಾರ್ಯವನ್ನು ಬಿಟ್ಟಿ ಹೋದರು.[೧]

ಆಗಸ್ಟ್ ೧೮೨೪ ರಲ್ಲಿ ಪ್ಯಾಟ್ರಿಕ್ ಅವರು ಚಾರ್ಲೋಟ್,ಎಮಿಲಿ,ಮಾರಿಯ ಮತ್ತು ಎಲಿಜಬೆತ್ ಅವರನ್ನು ಲಂಕಾಷೆನಲ್ಲಿನ ಕೋವನ್ ಬ್ರಿಜ್ ನಲ್ಲಿರುವ ಕ್ಲೆರ್ಜಿ ಡಾಟರ್ಸ್ ಸ್ಕೂಲ್ ಗೆ ಕಳುಹಿಸಿದರು. ಚಾರ್ಲೋಟ್ ಅವರಿಗೆ ತನ್ನ ಶಾಲೆಯಲ್ಲಿನ ಕಳಪೆ ಪರಿಸ್ಥಿತಿಗಳಿಂದ, ತಮ್ಮ ಆರೋಗ್ಯದ ಮತ್ತು ದೈಹಿಕ ಬೆಳವಣೆಗೆಯ ಮೇಲೆ ಶಾಶ್ವತವಾದ ಪರಿಣಾಮ ಬೀಳಿತ್ತು. ಪ್ಯಾಟ್ರಿಕ್ ಅವರು ತಮ್ಮ ಹೆಂಡತಿ ಹಾಗೂ ಮೊದಲ ಪುತ್ರಿ ಎಲಿಜಬೆತ್ ಅವರು (ಕ್ಷಯ ರೋಗದಿಂದಾಗಿ ಮರಣ ಹೊಂದಿದ )ನಂತರ ಬಹಳ ತೀವ್ರವಾದ ನೋವಿಗೆ ಹೋಗಿದ್ದರು. ಅದೇ ಕಾರಣದಿಂದಾಗಿ ಪ್ಯಾಟ್ರಿಕ್ ಅವರು ಚಾರ್ಲೋಟ್ ಮತ್ತು ಎಮಿಲಿ ಅವರನ್ನು ಶಾಲೆಯಿಂದ ತೆಗೆದು ಹಾಕಿದರು ಮತ್ತು ಚಾರ್ಲೋಟ್ ಅವರು ಜಾನೆ ಐರೆಯನಲ್ಲಿನ ಲೋವುಡ್ ಶಾಲಿಗೆ ತಮ್ಮ ಹಿಂದಿನ ಶಾಲೆಯನ್ನೇ ಆದಾರವಾಗಿ ತೆಗೆದು ಕೊಂಡರು.

ಹಾವರ್ತ್ ಪರ್ಸೊನೇಜ್ ನಲ್ಲಿರುವ ಅವರ ಮನೆಯಲ್ಲಿ, ಬ್ರಾಂಟೆ ಅವರು ಅವರ ಕಿರಿಯ ಸಹೋದರಿಯರಿಗೆ ತಾಯಿ, ಸ್ನೇಹಿತೆ ಹಾಗು ಪೋಷಕರಾಗಿ ಅಭಿನಯಿಸಿದ್ದಾರೆ. ೧೮೨೯ ರಲ್ಲಿ ೧೩ ನೇ ವಯಸ್ಸಿನಲ್ಲಿ ಬ್ರಾಂಟೆ ಯವರು ತಮ್ಮ ಮೊದಲ ಕವೆತೆಯನ್ನು ಬರೆದರು, ಮತ್ತು ಆಕೆಯ ಸುಮಾರು ೨೦೦ ಕ್ಕೂ ಹೆಚ್ಚಿನ ಕವಿತೆಗಳನ್ನು ಬರೆದಿದ್ದಾರೆ.ಅವರ ಉಳಿದ ಸಹೋದರರು,ತಮ್ಮ ಕಾಲ್ಪನಿಕ ಜಗತ್ತನ್ನು ಸ್ರುಷ್ಟಿಸಿದರು ಮತ್ತು ಅವರ ಕಾಲ್ಪನಿಕ ಸಾಮ್ರಾಜ್ಯದ ನಿವಾಸಿಗಳ ಜೀವನ ಮತ್ತು ಹೋರಾಟಗಳನ್ನು ಪರಿಶೀಲಿಸಿದರು. ಚಾರ್ಲೋಟ್ ಮತ್ತು ಬ್ರಾನ್ವೆಲ್ ಅವರು ಜಂಟಿಯಾಗಿ ಊಹಿಸಿಕೋಂಡ ತಮ್ಮ ದೇಶ,ಅಂತ್ರಿಯಾದ ಬಗ್ಗೆ ಲೇಖನಗಳು ಮತ್ತು ಕವೆತೆಗಳನ್ನು ಬರೆದರು ಮತ್ತು ಎಮಿಲಿ ಮತ್ತು ಆನ್ನೆ ಗೊಂಡಲ್ ಬಗ್ಗೆ ಲೇಖನಗಳು ಮತ್ತು ಕವೆತೆಗಳನ್ನು ಬರೆದರು. ಅವರು ರಚಿಸಿದ ಸಾಗಗಳು ಎಪಿಸೋಡಿಕ್ ಮತ್ತು ವಿಸ್ತಾರವಾದವು ಮತ್ತು ಅಪೂರ್ಣ ಹಸ್ತಪ್ರತಿಗಳಲ್ಲಿ ಅವು ಅಸ್ತಿತ್ವದಲ್ಲಿದೆ, ಅವುಗಳಲ್ಲಿ ಕೆಲವು ಜುವೆನಿಲಿಯಾ ಎಂದು ಪ್ರಕಟಿಸಲಾಗಿದೆ. ಬಾಲ್ಯ ಮತ್ತು ಆರಂಭಿಕ ಹದಿಹರೆಯದ ಸಮಯದಲ್ಲಿ ಅವರು ಗೀಳಿನ ಆಸಕ್ತಿಯನ್ನು ಒದಗಿಸಿದರು, ಇದು ಪ್ರೌಡಾವಸ್ಥೆಯಲ್ಲಿನ ಸಾಹಿತ್ಯಿಕ ಕಾರ್ಯವನ್ನು ತಯಾರಿಸಿದ್ದಾರೆ. [೨]

ಬ್ರಸೆಲ್ಸ್[ಬದಲಾಯಿಸಿ]

೧೮೪೨ರಲ್ಲಿ ಚಾರ್ಲೋಟ್ ಮತ್ತು ಎಮಿಲಿ ಅವರು ಬ್ರಸೆಲ್ಸ್ನಲ್ಲಿ ಇರುವ ಬೋರ್ಡಿಂಗ್ ಶಾಲೆಯನ್ನು ಸೇರಿಕೊಳ್ಳಲು ಬ್ರಸೆಲ್ಸ್ಗ ಹೋಗುತ್ತಾರೆ.ಆ ಬೋರ್ಡಿಂಗ್ ಶಾಲೆಯನ್ನು ಕಾನ್ನ್ಟಾಂಟಿನ್ ಹೇಗರ್ ಮತ್ತು ಅವರ ಹೆಂಡತಿ ನಡೆಸುತ್ತಿದರು. ಮಂಡಳಿ ಮತ್ತು ಶಿಕ್ಷಣಕ್ಕಾಗಿ ಚಾರ್ಲೋಟ್ ಅವರು ಆಂಗ್ಲವನ್ನು ಮತ್ತು ಎಮಿಲೆ ಅವರು ಸಂಗೀತವನ್ನು ಕಲಿಸುತ್ತಿದರು. ಅವರ ತಾಯಿಯ ಮರಣದ ನಂತರ ಚಾರ್ಲೋಟ್ ಅವರ ಕುಟುಂಬವನ್ನು ಅವರ ಚಿಕ್ಕಮ್ಮನವರು ನೋಡಿಕೊಳ್ಳುತ್ತಿದರು. ಆದ್ದರಿಂದ ಚಾರ್ಲೋಟ್ ಅವರು ಜನವರಿ ೧೮೪೩ ರಲ್ಲಿ ಬ್ರಸೆಲ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಪಾಠ ಮಾಡಲು ಹೋದರು. ಅವರು ೧೮೪೪ ರಲ್ಲಿ ಹಾವರ್ತ್ಗೆ ಹಿಂತಿರುಗಿದರು ಮತ್ತು ಬ್ರಸೆಲ್ಸ್ನಲ್ಲಿ ಕಳೆದ ಕೆಲವು ಸಮಯವನ್ನು "ದಿ ಫ್ರೋಫೆಸರ್ ಮತ್ತು ವಿಲ್ಲೆಟ್" ಕವಿತೆಗಳಿಗೆ ಸ್ಫೂರ್ತಿಯಾಗುವಂತೆ ಮಾಡಿತ್ತು.

ಮೊದಲ ಪ್ರಕಟಣೆ[ಬದಲಾಯಿಸಿ]

"ದಿ ಫ್ರೋಫೆಸರ್ ಮತ್ತು ಜೇನ್ ಐರ್" ಈ ಸಂಗ್ರಹನೆಯಿಂದಾಗಿ ಚಾರ್ಲೋಟ್, ಎಮಿಲಿ ಅತ್ತು ಆನ್ನೆ ಅವರಿಗೆ ಕೊರೆರ್, ಎಲ್ಲಿಸ್ ಮತ್ತು ಆಕ್ಷನ್ ಎಂಬ ಹೆಸರುಗಳು ಬಂದಿವೆ. ದಿ ಫ್ರೋಫೆಸರ್ ಪ್ರಕಾಶಕರನ್ನು ರಕ್ಷಿಸಲ್ಲು ಆಗಲಿಲ್ಲ. ಆದರೆ ಆಗಸ್ಟ್ ೧೮೪೭ ರಲ್ಲಿ ಎರಡನೇ ಹಸ್ತಪ್ರತಿಯನ್ನು ಮುಗಿಸಿ ಕಳುಹಿಸುವ ಮೂಲಕ ಬ್ರಾಂಟೆ ಪ್ರತಿಕ್ರಿಯಿಸಿದರು. ಆರು ವಾರಗಳ ನಂತರ ಜೇನ್ ಐರ್ ಆಟೊಬಯೊಗ್ರಫಿ ಪ್ರಕಟವಾಯಿತು.

ಶೆರ್ಲಿ ಮತ್ತು ವಿನಾಶಗಳು[ಬದಲಾಯಿಸಿ]

೧೮೪೮ ರಲ್ಲಿ ಬ್ರಾಂಟೆ ತನ್ನ ಎರಡನೆಯ ಕಾದಂಬರಿ ಶೆರ್ಲೆಯ ಹಸ್ತಿಪ್ರತಿಯಲ್ಲಿ ಕೆಲಸವನ್ನು ಪ್ರಾರಂಭಿಸಿದರು. ಬ್ರಾಂಟೆ ಅವರ ಕುಟುಂಬದಲ್ಲಿ ಮೂರು ಸಾವಿನ ನಂತರ ಬ್ರಾಂಟೆಯವರಿಗೆ ಕಾದಂಬರಿಯನ್ನು ಬರೆಯುವ ಆಸಕ್ತಿ ಮೂಡಿರುವುದಿಲ್ಲ. ಸಮಾಜದಲ್ಲಿ ಅವರ ಕಾದಂಬರಿಗಳು ಯಶಸ್ಸಿನ ನೋಟದಿಂದ, ವಿಶೇಷವಾಗಿ ಜೇನ್ ಐರ್ ಕಾದಂಬರಿಯಿಂದಾಗಿ ಬ್ರಾಂಟೆಯವರಿಗೆ ಲಂಡನ್ ಅನ್ನು ಸಾಂದರ್ಭಿಕವಾಗಿ ಬೇಟಿ ನೀಡುವಂತೆ ಪ್ರಕಾಶಕರು ಮನವೊಲಿಸಿದರು, ಅಲ್ಲಿ ಅವರಿಗೆ ತಮ್ಮ ನಿಜವಾದ ಗುರುತನ್ನು ಬಹಿರಂಗ ಪಡಿಸಲು ಮತ್ತು ಹೆಚ್ಚು ಶ್ರೇಷ್ಠವಾದ ಸಾಮಾಜಿಕ ಚಲನೆಯನ್ನು ಮಾಡಲು ಉಪಯೋಗವಾಯಿತು. ಡಿಸೆಂಬರ್ ೧೮೩೫ ನಲ್ಲಿ ಬರೆದ ಬರೆದ "ವೀವ್ ಎ ವೆಭ್ ಇನ್ ಚೈಲ್ದ್ದುಡ್"ನಲ್ಲಿ ಚಾರ್ಲೋಟ್ ತನ್ನ ಶಿಕ್ಷಕನ ವಿರುದ್ದ ದುಃಖ ಕರವಾದ ಜೀವನದ ವಿರುದ್ದ ವ್ಯತಿರಿಕ್ತತೆಯನ್ನು ವ್ಯಕ್ತಪದಿಸಲಾಗಿದೆ. ಮೊದಲ ಸಂಗ್ರಹ ೧೮೪೬ ರಲ್ಲಿ ಚಾರ್ಲೋಟ್, ಎಮಿಲಿ ಮತ್ತು ಆನ್ನೆ ತಮ್ಮ ಕವಿತೆಗಳನ್ನು ಜಂಟಿಯಾಗಿ ಪ್ರಕಟಣೆ ಸ್ವಂತ ಹಣವನ್ನು ಉಪಯೋಗಿಸಿ ಪ್ರಕಟಿಸಿದಾರೆ.ಶರ್ಲಿ ಮತ್ತು ವಿನಾಶಗಳು ೧೮೪೮ ರಲ್ಲಿ ಬ್ರಾಂಟೆ ತನ್ನ ಎರಡನೆಯ ಕಾದಂಬರಿ ಶಿರ್ಲೆಯ ಹಸ್ತಪ್ರತಿಯಲ್ಲಿ ಕೆಲಸವನ್ನು ಪ್ರರಂಭಿಸಿದರು. ತಮ್ಮ ಕುಟುಂಭದಲ್ಲಿನ ಮೂರು ಸಾವುಗಳನ್ನು ಅನುಭವಿಸಿದಾಗ ದುಃಖ ಅಪಾರವಾದದ್ದು. ಅದೇ ದುಃಖದ ಪ್ರತಿಬಿಂಭವನ್ನು ನಾವು ಚಾರ್ಲೋಟ್ ಅವರ ಎರಡನೆಯ ಕಾದಂಬರಿಯಲ್ಲಿ ಪ್ರಸ್ತಾಪಿಸಿದಾರೆ.

ವಿಲ್ಲೆಟೆ[ಬದಲಾಯಿಸಿ]

ಮೂರನೆಯ ಕಾದಂಬರಿ ಅವರು ಕಳೆದ ಜೇವಿತಾವಧಿಯಲ್ಲಿ ಪ್ರಕಟವಾದ ಅಂತಿಮ್ಮವಾದ ಕಾದಂಬರಿಯಾಗಿದೆ. ಈ ಎಲ್ಲ ರೀತಿಯ ಕಷ್ಟದ ಸಮಯದಲ್ಲೂ ಚಾರ್ಲೋಟ್ ಅವರ ರೋಯಿ ಹೆಡ್ ಸ್ಕೂಲ್ ೧೮೩೧ ಮತ್ತು ೧೮೩೨ ರ ನಡುವೆ ವೆಲೆಸ್ಲೆ ಎಂಬ ಹೆಸರನ್ನು ಬಳಿನಸಿಕೊಂಡು ಅವರು " ದಿ ಗ್ರೀನ್ ಡ್ವಾರ್ಫ್" ಎಂಬ ಕಾದಂಬರಿಯನ್ನು ಬರೆದರು. ವಿಲ್ಲೆಟ್ವೆ ಇದು ಬ್ರಾಂಟೆಯವರ ಮೂರನೆಯ ಕಾದಂಬರಿ ಕಳೆದ ತಮ್ಮ ಜೀವಿತಾವದಿಯಲ್ಲಿ ಪ್ರಕಟವಾದ ಇದರ ಮೂಖ್ಯ ವಿಷಯಗಳನ್ನು ಹೇಗೆ ಮಾಡಬಹುದು ಎಂಬುದನ್ನು ಪ್ರಸ್ತಾಪಿಸುತವೆ. ಇವು ಮೂರು ಚಾರ್ಲೋಟೆ ಯವರ ಜೀವನವನ್ನು ಮತ್ತು ಕಷ್ಟಕರವಾದ ಎಲ್ಲ ಪರಿಸ್ಥಿಯನ್ನುತಮ್ಮು ಕವಿತೆ ಹಾಗೂ ಕಾದಂಬರಿಗಳ ಮೂಲಕ ಬ್ರಾಂಟೆಯವರು ಪ್ರಕಟಿಸಿದಾರೆ.

ಮದುವೆ[ಬದಲಾಯಿಸಿ]

ಚಾರ್ಲೋಟ್ ಅವರ ಮದುವೆಯ ಸಂತಾಪ ವಿಲ್ಲೆಟ್ ಎಂಬ ಕವಿತೆಯನ್ನು ಪ್ರಕಟಿಸುವ ಮುಂಚೆಯೆ ಅವರ ತಂದೆ ಪ್ಯಾಟ್ರಿಕ್ ಅವರಿಗೆ ತಿಳಿದಿತ್ತು. ಆರಂಭದಲ್ಲಿ ಚಾರ್ಲೋಟ್ ಅವರು ನಿಕೋಲ್ಸ್ ನವರನ್ನು ಮದುವೆಯಾಗಲು ಒಪ್ಪುವುದಿಲ್ಲ .ನಂತರ ತಮ್ಮ ತಂದೆಯವರು ನಿಕೋಲ್ಸ್ ನವರ ಆರ್ಥಿಕ ಸ್ಥಿತಿಯನ್ನು ಕಂಡು ಚಾರ್ಲೋಟ್ ಅವರನ್ನು ಒಪಿಕೊಳ್ಳುವಂತೆ ಹೇಳುತ್ತಾರೆ.ನಿಕೋಲ್ಸ್ ಎಂಜಿನಿಯರ್ ಯಾಗಿರುತ್ತಾನೆ, ಅವರ ಹೆಚ್ಚು ಆಕರ್ಷಿತವಾದ ಮಾತುಗಳಿಂದಾಗಿ ಚಾರ್ಲೋಟ್ ಅವರು ಜನವರಿ ೧೮೫೪ ರಲ್ಲಿ ಮದುವೆಯಾಗುತ್ತಾರೆ.

ಮರಣ[ಬದಲಾಯಿಸಿ]

ತನ್ನ ಮದುವೆಯ ನಂತರ ಚಾರ್ಲೋಟ್ ಗರ್ಭಿಣಿಯಾಗಿದರು, ಆದರೆ ಅವರ ಆರೋಗ್ಯ ವೇಗವಾಗಿ ಕುಸಿಯಿತು ಮತ್ತು ಗ್ಯಾಸ್ಕಲ್ ಪ್ರಕಾರ" ಶಾಶ್ವತವಾದ ವಾಕರಿಕೆ ಮತ್ತು ನಿರಂತರವಾಗಿ ಮುರುಕಳೀಸುವ ಮನೋಭವದ ಸಂವೇದನೆ:ಯಿಂದಾಗೀ ಚಾರ್ಲೋಟ್ ಅವರು ಅಕ್ರಮಣಕ್ಕೆ ಒಳಗಾಗಿದ್ದರು. ಮಾರ್ಚ್ ೧೮೫೫ ರಂದು ೩೮ ನೇ ವಯಸಿನ್ನಲ್ಲಿ ಅವರ ೩೯ ನೇ ಹುಟ್ಟು ಹಬ್ಬದ ಮೂರು ವಾರದ ಮೊದಲೆ ತಮ್ಮ ಮರಣದ ಪ್ರಮಾಣ ಪತ್ರವನ್ನು ಕ್ಷಯ ರೋಗದ ಕಾರಣದಿದಾಗಿಯೇ ಮರಣ ಹೋಂದಿದರು ಎಂದು ತಿಳಿದು ಬಂದಿದ್ದೆ.


ಉಲೇಖಗಳು[ಬದಲಾಯಿಸಿ]