ವಿಷಯಕ್ಕೆ ಹೋಗು

ಚಾಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾಮರವು ದೇವರನ್ನು ಪೂಜಿಸಲು ಬಳಸಲಾಗುವ ಬೀಸಣಿಗೆ. ಇದಕ್ಕೆ ಹೋಲುವ ಸಾಧನವನ್ನು ಉಷ್ಣವಲಯದ ಹವಾಮಾನದಲ್ಲಿ ಗಾಳಿ ಬೀಸಿಕೊಳ್ಳಲು ಬಳಸಲಾಗುತ್ತದೆ. ಕೆಲವೊಮ್ಮೆ ಇದನ್ನು ರಾಜಲಾಂಛನವಾಗಿ ಬಳಸಲಾಗುತ್ತದೆ.[] ಚಾಮರವು ಆಗಾಗ್ಗೆ ಹಿಂದೂ, ಜೈನ, ಬೌದ್ಧ ದೇವತೆಗಳ ಲಕ್ಷಣವಾಗಿ ಕಾಣಿಸುತ್ತದೆ. ಚಾಮರವು ಅಷ್ಟಮಂಗಲದ ಕೆಲವು ಸಂರಚನೆಗಳಲ್ಲಿ ಸ್ಪಷ್ಟವಾಗಿರುತ್ತದೆ. ಇದನ್ನು ಮೂರ್ತಿ ಪೂಜೆಯ ಕೆಲವು ಸಂಪ್ರದಾಯಗಳಲ್ಲಿ ಬಳಸಲಾಗುತ್ತದೆ, ವಿಶೇಷವಾಗಿ ಗೌಡೀಯ ವೈಷ್ಣವ ಪಂಥದಲ್ಲಿ. ಭಾರತೀಯ ಉಪಖಂಡದ ಪೂರ್ವ ಭಾಗಗಳಲ್ಲಿ ಚಾಮರವನ್ನು ಯಾಕ್ ಪ್ರಾಣಿಯ ಬಾಲದ ಕೂದಲಿನಿಂದ ತಯಾರಿಸಲಾಗುತ್ತದೆ. ಚಾಮರಗಳು ಆಗಾಗ್ಗೆ ಅರಸರು ಮತ್ತು ಕುಲೀನ ವ್ಯಕ್ತಿಗಳ ಸಾಂಪ್ರದಾಯಿಕ ಲಾಂಛನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದನ್ನು ಚೌರಿ ಎಂದೂ ಕರೆಯಲಾಗುತ್ತದೆ. ಸಿಕ್ಖರು ಗುರು ಗ್ರಂಥ್ ಸಾಹಿಬ್‍ಗೆ ಗೌರವಾರ್ಥವಾಗಿ ಚಾಮರದಿಂದ ಗಾಳಿ ಹಾಕುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Gopal, Madan (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 81.


"https://kn.wikipedia.org/w/index.php?title=ಚಾಮರ&oldid=888941" ಇಂದ ಪಡೆಯಲ್ಪಟ್ಟಿದೆ