ಚರ್ಚೆಪುಟ:ಸುನಾಮಿ

ವಿಕಿಪೀಡಿಯ ಇಂದ
Jump to navigation Jump to search

ಸುನಾಮಿ ಲೇಖನದ ಅನುವಾದ ಕಾರ್ಯ[ಬದಲಾಯಿಸಿ]

ಹಲೋ, ನಾನು ಹೊಸ ಸದಸ್ಯೆ.ಸುನಾಮಿ ಲೇಖನದ ಅನುವಾದ ಕಾರ್ಯದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇದೆ.ಆ ಲೇಖನ ಈಗಾಗಲೇ ಆರಂಭವಾಗಿರುವುದರಿಂದ ನಾನು ಹೇಗೆ ಅಥವಾ ಎಲ್ಲಿಂದ ಪ್ರಾರಂಭ ಮಾಡಬಹುದು ಎನ್ನುವುದನ್ನು ಸೂಚಿಸಿದರೆ ಸಹಾಯವಾಗುತ್ತದೆ. ಆ ಲೇಖನದಲ್ಲಿ ಕೆಲವು ಕಡೆ ಇಂಗ್ಲಿಷ್ ಪ್ಯಾರಾಗಳು ಹಾಗೇ ಇವೆ.ಅವುಗಳನ್ನು ಅನುವಾದಿಸಬೇಕೆ?ಹಾಗೆ ಅನುವಾದಿಸಿದಲ್ಲಿ ಇಂಗ್ಲಿಷ್ ಪ್ಯಾರಾ ಪಕ್ಕದಲ್ಲೇ ಕನ್ನಡ ಅನುವಾದ ಬರೆದು ಬಿಡಬಹುದೆ?ನನ್ನ ಸಂದೇಹಗಳು ನಿವಾರಣೆಯಾದಲ್ಲಿ ಆದಷ್ಟು ಬೇಗ ಈ ಕಾರ್ಯದಲ್ಲಿ ಭಾಗಿಯಾಗುತ್ತೇನೆ.

Raja bv ೧೦:೧೩, ೨೪ September ೨೦೦೬ (UTC) Raja bv( Rajalakshmi B.V.)

ಅನುವಾದಕ್ಕೆ ಸಹಾಯ[ಬದಲಾಯಿಸಿ]

ರಾಜಲಕ್ಷ್ಮಿಯವರೇ, ಅನುವಾದ ಕಾರ್ಯಕ್ಕೆ ಸ್ವಾಗತ. ನೀವು ಈ ಲೇಖನದ ಯಾವುದಾದರೂ ಒಂದು ಭಾಗದಿಂದ ಪ್ರಾರಂಭಿಸಿ, ಮುಂದುವರೆಸಿಕೊಂಡು ಹೋಗಬಹುದು. ಇಂಗ್ಲೀಷಿನಲ್ಲಿರುವ ಸಾಲುಗಳನ್ನು ಕನ್ನಡಕ್ಕೆ ಅನುವಾದಿಸಿದ ನಂತರ ಆ ಸಾಲುಗಳನ್ನು ತೆಗೆಯಬಹುದು. ನಿಮಗೆ ತಿಳಿಯದಿದ್ದರೆ ಅದನ್ನು ಹಾಗೆಯೇ ಬಿಡಿ.

ಹಾಗೆ ಅನುವಾದಿಸಿದಲ್ಲಿ ಇಂಗ್ಲಿಷ್ ಪ್ಯಾರಾ ಪಕ್ಕದಲ್ಲೇ ಕನ್ನಡ ಅನುವಾದ ಬರೆದು ಬಿಡಬಹುದೆ? - ಈ ಪ್ರಶ್ನೆಗೆ ಉತ್ತರ - ಪಕ್ಕದಲ್ಲಿ ಬೇಡ, ಆ ಪ್ಯಾರಾದ ಕೆಳಗೆ ಅನುವಾದದ ಸಾಲುಗಳನ್ನು ಬರೆದರೆ ಸುಲಭವಾಗುತ್ತದೆ. ಇನ್ನೇನಾದರೂ ಅನುಮಾನಗಳಿದ್ದರೆ ಇಲ್ಲಿ ಕೇಳಿ ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೫:೧೯, ೨೪ September ೨೦೦೬ (UTC)

ಸುನಾಮಿ

paragraph[ಬದಲಾಯಿಸಿ]

ಅನುವಾದ ಮಾಡಿದ ಪ್ಯಾರಾಗಳು ಸರಿಯಾಗಿ ಹೊಂದಿಕೊಂಡು ಬರುತ್ತಿಲ್ಲ.ಕೆಲವು ಸಾಲುಗಳು ಬೇರೆಯಾಗಿ dotted lineಗಳ ಒಳಗೆ ಬರುತ್ತಿವೆ.ಕಾರಣ ಗೊತ್ತಾಗುತ್ತಿಲ್ಲ.ಇದನ್ನು ಸರಿ ಮಾಡುವುದು ಹೇಗೆ ಎಂದು ತಿಳಿಯುತ್ತಿಲ್ಲ. --Raja bv ೧೧:೪೯, ೧೧ October ೨೦೦೬ (UTC)

Paragraph ಪ್ರಾರಂಭ edit boxನ ಎಡ ಬದಿಗೆ ಸರಿಯಾಗಿ ಹೊಂದಬೇಕು. ಪ್ರಾರಂಭದಲ್ಲಿ space ಇದ್ದರೆ ಅದು dotted line ಇರುವ ಬಾಕ್ಸಿನೊಳಗೆ ಕಾಣುತ್ತದೆ. ಎಡ marginನಲ್ಲಿರುವ space ತಗೆದರೆ ಬಾಕ್ಸ ಕಾಣುವುದಿಲ್ಲ. ಶುಶ್ರುತ \ಮಾತು \ಕತೆ ೧೫:೨೫, ೧೧ October ೨೦೦೬ (UTC)