ಚರ್ಚೆಪುಟ:ಸರ್ವಜ್ಞ
ಗೋಚರ
Can do with a **lot** more information, but couldn't find much more. --ಅಶ್ವತ್ಥ ೦೨:೫೩, ೧ ಡಿಸೆಂಬರ್ ೨೦೦೪ (UTC)
ಆಧಾರವಿಲ್ಲದೆ ತಿದ್ದುವಿಕೆ
[ಬದಲಾಯಿಸಿ]- ಈಗ ಮೊಬೈಲಿನಲ್ಲಿ ತಿದ್ದುವವರು ಆಧಾರವಿಲ್ಲದೆ/ ಆಧಾರ/ ಉಲ್ಲೇಖ ಹಾಕದೆ ತಿದ್ದುತ್ತಿದ್ದಾರೆ- ಅದು ಸರಿಕಾಣುವುದಿಲ್ಲ. ಹಾಗೆ ತಿದ್ದಿದ ಅವನ್ನು ತೆಗೆದು ಮೂಲವನ್ನು ಉಳಿಸಲು ಸಂಪಾದಕರಲ್ಲಿ ಕೋರುತ್ತೇನೆ.Bschandrasgr (ಚರ್ಚೆ) ೧೨:೧೩, ೨೧ ಏಪ್ರಿಲ್ ೨೦೧೯ (UTC)
ಕೆಲವು ಸರ್ವಜ್ಞ ಪದಗಳು
[ಬದಲಾಯಿಸಿ]- 1.
- ನಂದಿಯನು ಏರಿದನ
- ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
- ಮುಂದೆ ಹೇಳುವೆನು ಸರ್ವಜ್ಞ
- 2.
- ಮುನ್ನ ಕಾಲದಲಿ ಪನ್ನಗಧರನಾಳು
- ಎನ್ನೆಯ ಪೆಸರು, ಪುಷ್ಪದತ್ತನು ಎಂದು
- ಮನಿಪರು ದಯದಿ ಸರ್ವಜ್ಞ
- 3.
- ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ
- ಮುದವ ಸಾರೆ, ಸರ್ವಜ್ಞನೆಂದೆನಿಸಿ
- ನಿಂದವನು ನಾನೆ ಸರ್ವಜ್ಞ
- 4.
- ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
- ಬಣ್ಣೆಸಿಬರೆದ ಪಟದೊಳಗೆಯಿರುವಾತ
- ತಣ್ಣೊಳಗೆ ಇರನೇ ಸರ್ವಜ್ಞ
- 5.
- ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
- ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
- ಕುಲವನರಸುವರೆ ಸರ್ವಜ್ಞ
- 6.
- ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
- ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
- ಕುಲವಾವುದಯ್ಯ ಸರ್ವಜ್ಞ
- 7.
- ಸರ್ವಜ್ಞನೆಂಬುವನು ಗರ್ವದಿಂದಾದವನೆ ?
- ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
- ಪರ್ವತವೇ ಆದ ಸರ್ವಜ್ಞ
- 8.
- ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
- ಮೆರೆವ ಬ್ರಹ್ಮಾಂಡದೊಳಹೊರಗೆ
- ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ
- 9.
- ಊರಿಂಗೆ ದಾರಿಯನು ಆರು ತೋರಿದರೇನು?
- ಸಾರಾಯದಾ ನಿಜವ ತೋರುವ ಗುರುವು ತಾ
- ನಾರಾದರೇನು? ಸರ್ವಜ್ಞ
- 10.
- ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
- ಪರದೇಶಿಯಂತೆ ಇರುತಿರ್ಪಯೋಗಿಯನು
- ಪರಮಗುರುವೆಂಬೆ ಸರ್ವಜ್ಞ
- 11.
- ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ
- ಹರಭಕ್ತಿಯುಳ್ಳ ಗುರುವರನು ಓರ್ವನೇ
- ನರ ದೈವವೆಂಬೆ ಸರ್ವಜ್ಞ
- 12.
- ಬಂಧುಗಳು ಆದವರು ಬಂದುಂಡು ಹೋಗುವರು
- ಬಂಧನವ ಕಳೆಯಲರಿಯರಾ ಗುರುವಿಗಿಂತ
- ಬಂಧುಗಳುಂಟೆ ಸರ್ವಜ್ಞ
- 13.
- ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ
- ಮಾಯನಾಶವನು ಹರಿಸುತ್ತ ಶಿಷ್ಯಂಗೆ
- ತಾಯಿಯಂತಾದ ಸರ್ವಜ್ಞ
- 14.
- ತಂದೆಗೂ ಗುರುವಿಗೂ ಒಂದು ಅಂತರವುಂಟು
- ತಂದೆ ತೋರುವನು ಸದ್ಗುರುವ. ಗುರುರಾಯ
- ಬಂಧನವ ಕಳೆವ ಸರ್ವಜ್ಞ
- 15.
- ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
- ಗುರುತೋರ್ವ ದೈವದೆಡೆಯನು ದೈವತಾ
- ಗುರುವ ತೋರುವನೇ? ಸರ್ವಜ್ಞ
- 16.
- ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
- ಪರಿಣಾಮವಕ್ಕು ಪದವಕ್ಕು ಕೈಲಾಸ
- ನೆರಮನೆಯಕ್ಕು ಸರ್ವಜ್ಞ
- 17.
- ಒಂದರೊಳಗೆಲ್ಲವು ಸಂದಿಸುವದನು ಗುರು
- ಚಂದದಿಂ ತೋರಿಕೊಡದಿರಲು ಶೊಷ್ಯನವ
- ಕೊಂದನೆಂದರಿಗು ಸರ್ವಜ್ಞ
- 18.
- ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ
- ಲಿಂಗದೊಳು ಜಗವು ಅಡಗಿಹುದು ಲಿಂಗವನು
- ಹಿಂಗಿದವರುಂಟೆ? ಸರ್ವಜ್ಞ
- 19.
- ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ
- ಕೇಶವನು ಭಕ್ತರೊಳಗೆಲ್ಲ ಮೂರು ಕ
- ಣ್ಣೇಶನೆ ದೈವ ಸರ್ವಜ್ಞ
- 20.
- ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
- ಶಂಭುವಿರಲಿಕ್ಕೆ ಮತ್ತೊಂದು ದೈವವ
- ನಂಬುವನೇ ಹೆಡ್ಡ ಸರ್ವಜ್ಞ
- 21.
- ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು
- ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು
- ನಂಜಿನಂತಕ್ಕು ಸರ್ವಜ್ಞ
- 22.
- ಎಂಜಲೂ ಅಶೌಚ
- ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ
- ರಂಜನನ ನೆನೆಯೊ ಸರ್ವಜ್ಞ
- 23.
- ಭೂತೇಶಗೆರಗುವನು ಜಾತಿ ಮಾದಿಗನಲ್ಲ
- ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ
- ದಾತ ಮಾದಿಗನು ಸರ್ವಜ್ಞ
- 24.
- ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ
- ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
- ಕುಲಗೋತ್ರವುಂಟೆ? ಸರ್ವಜ್ಞ
- 25.
- ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ?
- ಜಾತಂಗೆ ಜಾತನೆನಲೇಕೆ? ಅರುವಿಡಿ
- ದಾತನೇ ಜಾತ ಸರ್ವಜ್ಞ
- 26.
- ಯಾತರ ಹೂವೇನು ? ನಾತವಿದ್ದರೆ ಸಾಕು
- ಜಾತಿಯಲಿ ಜಾತಿಯೆನಬೇಡ ಶಿವನೊಲಿ
- ದಾತನೆ ಜಾತ ಸರ್ವಜ್ಞ
- 27.
- ಅಕ್ಕರವು ತರ್ಕಕ್ಕೆ ಲೆಕ್ಕವು ಗಣಿತಕ್ಕೆ
- ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ
- ರಕ್ಕರವೇ ಸಾಕು ಸರ್ವಜ್ಞ
- 28.
- ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ?
- ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು
- ಇಲ್ಲೆನ್ನಲರಿಯನು ಸರ್ವಜ್ಞ
- 29.
- ಇಂದ್ರನಾನೆಯನೇರಿ ಒಂದನೂ ಕೊಡಲರಿಯ
- ಚಂದ್ರಶೇಖರನು ಮುದಿ ಎತ್ತನೇರಿ ಬೇ
- ಕೆಂದುದನು ಕೊಡುವ ಸರ್ವಜ್ಞ
- 30.
- ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು
- ಮಾರಸಂಹರನ ನೆನೆದರೆ ಮೃತ್ಯುವು
- ದೂರಕ್ಕೆ ದೂರ ಸರ್ವಜ್ಞ
- 31.
- ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ
- ಭವ ಪುಶ್ಪದಿಂ ಶಿವಪೂಜೆ ಮಾಡುವರ
- ದೇವರೆಂದೆಂಬೆ ಸರ್ವಜ್ಞ
- 32.
- ಓದು ವಾದಗಳೇಕೆ, ಗಾದಿಯ ಮಾತೇಕೆ
- ವೇದ ಪುರಾಣ ನಿನಗೇಕೆ? ಲಿಂಗದಾ
- ಹಾದಿಯರಿದವಗೆ ಸರ್ವಜ್ಞ
- 33.
- ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ?
- ಅರ್ಪಿತನ ಗೊಡವೆ ತನಗೇಕೆ? ಲಿಂಗದ
- ನೆಪ್ಪನರಿದವಗೆ ಸರ್ವಜ್ಞ
- 34.
- ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ
- ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ
- ಲಿಂಗದರುವಿಲ್ಲ ಸರ್ವಜ್ಞ
- 35.
- ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ
- ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ
- ಭ್ರಷ್ಟನ ಕಂಡ್ಯಾ ? ಸರ್ವಜ್ಞ
- 36.
- ಗುರುವಿಂದ ಬಂಧುಗಳು, ಗುರುವಿಂದ ದೈವಗಳು
- ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ
- ಗುರುವಿಂದ ಮುಕ್ತಿ ಸರ್ವಜ್ಞ
- 37.
- ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ
- ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ
- ವವಗೆ ಕಾಣಯ್ಯ ಸರ್ವಜ್ಞ
- 38.
- ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ
- ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ
- ಬಿಟ್ಟು ಬಯಲಪ್ಪ ಸರ್ವಜ್ಞ
- 39.
- ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು
- ಇಟ್ಟಾವಿಭೂತಿಯರಿಯದಿರೆ ಸೀಳಿದಾ
- ಬಟ್ಟೆಯಂತಕ್ಕು ಸರ್ವಜ್ಞ
- 40.
- ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ
- ಲಿಂಗದಲಿ ನೋಟ, ನುಡಿಕೂಟವಾದವನು
- ಲಿಂಗವೇ ಅಕ್ಕು ಸರ್ವಜ್ಞ
- 41.
- ದೇಹಿಯನಬೇಡ, ನಿರ್ದೇಹಿ ಜಂಗಮಲಿಂಗ
- ದೇಹ ಗುಣದಾಸೆಯಳಿದೊಡೆ ಆತ ನೀರ್ದೇಹಿ
- ಕಾಣಯ್ಯ ಸರ್ವಜ್ಞ
- 42.
- ವಂಶವನು ಪುಗನೆಂದಿ, ಗಾಶಿಸನು ಪರಧನವ
- ಸಂಶಯವನಳಿದ ನಿಜಸುಖಿ ಮಹಾತ್ಮನು
- ಹಿಂಸೆಗೊಡಬಡನು ಸರ್ವಜ್ಞ
- 43.
- ಅರ್ಪಿತದ ಭೇದವನು
- ತಪ್ಪದೆಲೆ ತಿಳಿದಾತ ಸರ್ಪಭುಷಣನ ಸಮನಹನು ನಿಜಸುಖದೋ
- ಳೊಪ್ಪುತ್ತಲಿಹನು ಸರ್ವಜ್ಞ
- 44.
- ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು
- ರಾಗದಿಂ ಸತ್ಯವೆರಸಿಹ ಪ್ರಸಾದಿಯ
- ಶ್ರಿ ಗುರುವು ಎಂಬೆ ಸರ್ವಜ್ಞ
- 45.
- ಲಿಂಗವಿರಹಿತನಾಗಿ ನುಂಗದಿರು ಏನುವನು
- ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು
- ನುಂಗಿದೆಂತಕ್ಕು ಸರ್ವಜ್ಞ
- 46.
- ಅಂಜದಲೆ ಕೊಂಡಿಹರೆ, ನಂಜು ಅಮೃತವದಕ್ಕು
- ಅಂಜಿ, ಅಳುಕುತಲಿ ಕೊಂಡಿಹರೆ ಅಮೃತವು
- ನಂಜಿನಂತಕ್ಕು ಸರ್ವಜ್ಞ
- 47.
- ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು
- ಮರಣವಿಲ್ಲದಾ ಮಗಲೇಸು ಲಿಂಗಕ್ಕೆ
- ಶರಣುವೆ ಲೇಸು ಸರ್ವಜ್ಞ
- 48.
- ಸೋಕಿಡಾ ಸುಖಂಗಳ
- ನೇಕವನು ಶಿವಗಿತ್ತು
- ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ
- 49.
- ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ
- ಸುಲಲಿತವು ಆದ ಶರಣರಾಹೃದಯದಲಿ
- ನೆಲಸಿಹನು ಶಿವನು ಸರ್ವಜ್ಞ
- 50.
- ಕಿಚ್ಚಿನೊಳು ಸುಘೃತವು, ಒಚ್ಚತದಿ ಕರ್ಪುರವು
- ಅಚ್ಚಳಿದು ನಿಜದಿ ನಿಂದಂತೆ, ಭೇದವನು
- ಮುಚ್ಚುವನೆ ಶರಣ ಸರ್ವಜ್ಞ
- 51.
- ಗಂಗೆಯಾ ತಡೆ ಲೇಸು, ಮಂಗಳನ ಬಲ ಲೇಸು
- ಜಂಗಮ ಭಕ್ತನಾ ನಡೆ ಲೇಸು, ಶರಣರಾ
- ಸಂಗವೇ ಲೇಸು ಸರ್ವಜ್ಞ
- 52.
- ಆಕಾಶಪಥ ಮೀರಿ, ದೇಕವಸ್ತುವ ತಿಳಿದು
- ಸಾಕಾರವಳಿದು ನಿಜವಾದ ಐಕ್ಯಂಗೆ
- ಏಕತ್ರ ನೋಡು ಸರ್ವಜ್ಞ
- 53.
- ನಾನು-ನೀನುಗಳದು, ತಾನು ಲಿಂಗದಿ ಉಳಿದು
- ನಾನಾ ಭ್ರಮೆಗಳ ಅತಿಗಳೆದು ನಿಂದಾತ
- ತಾನೈಕ್ಯ ನೋಡು ಸರ್ವಜ್ಞ
- 54.
- ಹೀನಂಗೆ ಗತಿಯಿಲ್ಲ, ದೀನಗನುಚಿತವಲ್ಲ
- ಏನು ಇಲ್ಲದವಗೆ ಭಯವಿಲ್ಲ ಐಕ್ಯಂಗೆ
- ತಾನೆಂಬುದಿಲ್ಲ ಸರ್ವಜ್ಞ
- 55.
- ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ
- ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ
- ದೇಗುಲವೆ ಇಲ್ಲ ಸರ್ವಜ್ಞ
- 56.
- ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ
- ಬಲುಕವಲು ಒಡೆದು ಬೇರಿಂದ ತುದಿತನಕ
- ಹಲಸು ಕಾತಂತೆ ಸರ್ವಜ್ಞ
- 57.
- ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ
- ಕಂಡು ಲಿಂಗವನು ಪೂಜಿಸಿದವಗೆ ಯಮ
- ದಂಡ ಕಾಣಯ್ಯ ಸರ್ವಜ್ಞ
- 58.
- ಆತುಮದ ಲಿಂಗವನು
- ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ
- ದಶವಿಧದ ಪಾತಕಗಳಿಲ್ಲ ಸರ್ವಜ್ಞ
- 59.
- ಲಿಂಗವನು ಅಂದವನ ಅಂಗ ಹಿಂಗಿರಬೇಕು
- ತೆಂಗಿನಕಾಯಿ ಪರಿಪೂರ್ಣ ಬಲಿದು ಜಲ
- ಹಿಂಗಿದಪ್ಪಂದ ಸರ್ವಜ್ಞ
- 60.
- ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು
- ಲಿಂಗದಾ ನೆನಹು ಘನವಾಗೆ ಶಿವಲಿಂಗ
- ಹಿಂಗಿರದು ಅವನ ಸರ್ವಜ್ಞ
- 61.
- ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು
- ಇಮ್ಮನವ ಪಿಡಿದು ಕೆಡಬೇಡ ವಿಧಿವಶವು
- ಸರಿಮ್ಮನೇ ಕೆಡಗು ಸರ್ವಜ್ಞ
- 62.
- ಅಷ್ಟವಿಧದರ್ಚನೆಯ ನೆಷ್ಟು ಮಾಡಿದರೇನು?
- ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ
- ನಷ್ಟ ಕಾಣಯ್ಯ ಸರ್ವಜ್ಞ
- 63.
- ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ
- ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ
- ಬಟ್ಟೆಗೆ ಹೋಹ ಸರ್ವಜ್ಞ
- 64.
- ಎಷ್ಟು ಬಗೆಯಾರತಿಯ ಮುಟ್ಟಿಸಿದ ಫಲವೇನು?
- ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ
- ಕೊಟ್ಟಗುರಿದಂತೆ ಸರ್ವಜ್ಞ
- 65.
- ಒಸೆದೆಂಟು ದಿಕ್ಕಿನಲ್ಲಿ ಮಿಸುನಿ ಗಿಣ್ಣಲು ಗಿಂಡಿ
- ಹಸಿದು ಮಾಡುವನ ಪೂಜೆಯದು ಬೋಗಾರ
- ಪಸರ ವಿಟ್ಟಂತೆ ಸರ್ವಜ್ಞ
- 66.
- ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು?
- ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ
- ಹತ್ತಿಗೇಡೆಂದ ಸರ್ವಜ್ಞ
- 67.
- ಎಣಿಸುತಿರ್ಪುದು ಬಾಯಿ ಪೆÇಣರುತಿರ್ಪುದು ಬೆರಳು
- ಕ್ಷಣಕ್ಕೊಮ್ಮೆ ಒಂದನೆಣಿಸುವಾ ಜಪಕೊಂದು
- ಕುಣಿಕೆಯುಂಟೆಂದ ಸರ್ವಜ್ಞ
- 68.
- ಎಣಿಸುತಿರ್ಪುದು ಬೆರಳು
- ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ
- ಶುನಕನಂತಕ್ಕು ಸರ್ವಜ್ಞ
- 69.
- ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳು ಮಂತ್ರ
- ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ
- ಹೊಲೆಯ ಕಾಣಯ್ಯ ಸರ್ವಜ್ಞ
- 70.
- ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ
- ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ
- ಹಿಂಗದಿರುತಿಹುದು ಸರ್ವಜ್ಞ
- 71.
- ಲಿಂಗಕ್ಕೆ ತೋರಿಸುತ ನುಂಗುವಾತನೇ ಕೇಳು
- ಲಿಂಗವುಂಬುವದೆ ? ಇದನರಿದು ಕಪಿಯೆ ನೀ
- ಜಂಗಮಕೆ ನೀಡು ಸರ್ವಜ್ಞ
- 72.
- ಲಿಂಗಪ್ರಸಾದವನು ಅಂಗಕ್ಕೆ ಕೊಂಬುವರು
- ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ
- ಮಂಗಗಳ ನೋಡು ಸರ್ವಜ್ಞ
- 73.
- ಹಲವನೋದಿದಡೇನು? ಚೆಲುವನಾದದಡೇನು ?
- ಕುಲವೀರನೆನೆಸಿ ಫಲವೇನು? ಲಿಂಗದಾ
- ಒಲುಮೆ ಇಲ್ಲದಲೆ ಸರ್ವಜ್ಞ
- 74.
- ಓದುವಾದಗಳೇಕೆ ? ಗಾದೆಯ ಮಾತೇಕೆ?
- ವೇದ ಪುರಾಣವು ನಿನಗೇಕೆ ಲಿಂಗದಾ
- ಹಾದಿಯರಿಯದಲೆ ಸರ್ವಜ್ಞ
- 75.
- ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ
- ಕೊಂಡಾಡಲರಿಯದಧಮಂಗೆ ಲಿಂಗವದು
- ಕೆಂಡದಂತಿಹುದು ಸರ್ವಜ್ಞ
- 76.
- ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ
- ಕಟ್ಟಲೂ ಬೇಡ ಬಿಡಲೂ ಬೇಡ
- ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ
- 77.
- ಆ ದೇವ ಈ ದೇವ ಮಹಾದೇವನೆನಬೇಡ
- ಆ ದೇವರ ದೇವ ಭುವನದಾ ಪ್ರಾಣಿಗಳಿ
- ಗಾದವನೇ ದೇವ ಸರ್ವಜ್ಞ
- 78.
- ಚಿತ್ರವನು ನವಿಲೊಳು ವಿ ಚಿತ್ರವನು ಗಗನದೊಳು
- ಪತ್ರ ಪುಷ್ಪಗಳ ವಿವಿಧವರ್ಣಗಳಿಂದ
- ಚಿತ್ರಿಸಿದರಾರು ಸರ್ವಜ್ಞ
- 79.
- ಇಂಗಿನನೊಳು ನಾತವನು ತೆಂಗಿನೊಳಗೆಳೆ ನೀರು
- ಭ್ರಂಗ ಕೋಗಿಲೆಯ ಕಂಠದೊಳು ಗಾಯನವ
- ತುಂಬಿದವರಾರು ಸರ್ವಜ್ಞ
- 80.
- ಕಳ್ಳಿಯೊಳು ಹಾಲು, ಮುಳು ಗಳ್ಳಿಯೊಳು ಹೆಜ್ಜೇನು
- ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ
- ಸುಳ್ಳೆನ್ನಬಹುದೆ? ಸರ್ವಜ್ಞ
- 81.
- ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ
- ಬಲ್ಲ ದಾಶಿವನ ಭಜಿಸಿ ಬೇಡಿದಾತ
- ಇಲ್ಲೆನಲಿಕರಿಯ ಸರ್ವಜ್ಞ
- 82.
- ಆದಿ ದೈವವನು ತಾ ಭೇದಿಸಲಿ ಕರಿಯದಲೆ
- ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ
- ಮಾದಿಗರ ನೋಡು ಸರ್ವಜ್ಞ
- 83.
- ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ
- ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ
- ಅನ್ಯಾಯ ನೋಡು ಸರ್ವಜ್ಞ
- 84.
- ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ
- ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ
- ಬಣಗುಗಳ ನೋಡ ಸರ್ವಜ್ಞ
- 85.
- ಕಲ್ಲು ಕಲ್ಲೆಂಬುವಿರಿ ಕಲ್ಲೊಳಗಿರ್ಪುದೇ ದೈವ
- ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ
- ಸೊಲ್ಲೇದೈವ ಸರ್ವಜ್ಞ
- 86.
- ಗುಡಿಯ ಬೋದಿಗೆ ಕಲ್ಲು
- ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು
- ಕೊಡುವಾತ ಬೇರೆ ಸರ್ವಜ್ಞ
- 87.
- ಪ್ರಾಣನೂ ಪರಮಮನು ಕಾಣದಲೆ ಒಳಗಿರಲು
- ಮಾಣದೇ ಸಿಲೆಯ ಹಿಡಿದದಕೆ ಮೂರ್ಖ ತಾ
- ಪ್ರಾಣಾತ್ಮನೆಂಬ ಸರ್ವಜ್ಞ
- 88.
- ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ
- ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ
- ದಿಲ್ಲ ಕಾಣಯ್ಯ ಸರ್ವಜ್ಞ
- 89.
- ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ
- ಹತವ ಗೈವುದಕ್ಕೆ ರುದ್ರಗಣ, ಇವರುಗಳ
- ಸ್ಥಿತಿಯನರಿಯೆಂದ ಸರ್ವಜ್ಞ
- 90.
- ಬೊಮ್ಮನಿರ್ಮಿಪನೆಂಬ ಮರ್ಮತಿಯ ನೀ ಕೇಳು
- ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ
- ನಿರ್ಮಿಸನದೇಕೆ ಸರ್ವಜ್ಞ
- 91.
- ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ
- ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು
- ಹುಟ್ಟಿಸನದೇಕೆ ಸರ್ವಜ್ಞ
- 92.
- ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು
- ಮತ್ತೆ ಪಾಂಡವರಿಗಾಳಾದ ಹರಿಯು ತಾ
- ನೆತ್ತಣಾ ದೈವ ಸರ್ವಜ್ಞ
- 93.
- ನರಸಿಂಹನವತಾರ
- ಹಿರಿದಾದ ಅದ್ಭುತವು
- ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ
- 94.
- ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ
- ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ
- ಪಾಲಿಸದೆ ಹೋದ ಸರ್ವಜ್ಞ
- 95.
- ಹರನವನ ಕೊಲುವಂದು, ಎರಳೆಯನು ಎಸೆವಂದು
- ಮರಳಿ ವರಗಳನು ಕೊಡುವಂದು ಪುರಹರಗೆ
- ಸರಿಯಾದ ಕಾಣೆ ಸರ್ವಜ್ಞ
- 96.
- ಹರಿ ಬೊಮ್ಮನೆಂಬವರು, ಹರನಿಂದಲಾದವರು
- ಅರಸಿಗೆ ಆಳು ಸರಿಯಹನೆ ಶಿವನಿಂದ
- ಮೆರೆವರಿನ್ನಾರು ಸರ್ವಜ್ಞ
- 97.
- ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ
- ನೆರೆಹತ್ತು ಜನನವಾಹರಿಗೆ ಇವರುಗಳು
- ಸರಿಯಹರೆ ಸರ್ವಜ್ಞ
- 98.
- ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ
- ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ
- ಸರಿಯಾರು ಹೇಳಿ ಸರ್ವಜ್ಞ
- 99.
- ಇಂದ್ರನಾನೆಯನೇರಿ ಒಂದನೂ ಕೊಡಲರಿಯ
- ಚ್‍ಂದ್ರಶೇಖರನು ಮುದಿಯೆತ್ತನೇರಿ
- ಬೇಕೆಂದುದನು ಕೊಡುವ ಸರ್ವಜ್ಞ
- 100.
- ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ
- ಶಂಭುವಿದ್ದಂತೆ ಮತ್ತೊಂದು ದೈವವನು
- ನಂಬುವನೆ ಹೆಡ್ಡ ಸರ್ವಜ್ಞ
- 101.
- ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ
- ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ
- ಕುಲವಾವುದಯ್ಯ ಸರ್ವಜ್ಞ
- 102.
- ಹೊಲಸು ಮಾಂಸದ ಹುತ್ತು | ಎಲುವಿನ ಹಂಜರವು
- ಹೊಲೆ ಬಲಿದ ತನುವಿನೊಳಗಿರ್ದು - ಮತ್ತದರ
- ಕುಲವನೆಣಿಸುವರೆ ಸರ್ವಜ್ಞ
- 103.
- ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ
- ಕುಟಿಲ ವಂಚನೆಯ ಪೆÇಗದಿರು - ನಿಜವ ಪಿಡಿ
- ಘಟವ ನೆಚ್ಚದಿರು ಸರ್ವಜ್ಞ
- 104.
- ಸುರತರು ಮರನಲ್ಲ | ಸುರಭಿಯೊಂದಾವಲ್ಲ
- ಪರುಷ ಪಾಷಾಣದೊಳಗಲ್ಲ - ಗುರುವು ತಾ
- ನರರೊಳಗಲ್ಲ ಸರ್ವಜ್ಞ
- 105.
- ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ
- ಸೂತ್ರದಲಿ ಧಾತನರಿವಂತೆ - ಶಿವನ ಗುರು
- ನಾಥನಿಂದರಿಗು ಸರ್ವಜ್ಞ
- 106.
- ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ
- ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ
- ಕಂಡಲ್ಲದಿಲ್ಲ ಸರ್ವಜ್ಞ
- 107. ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ
- ಒಮ್ಮೆ ಸದ್ಗುರುವಿನುಪದೇಶ - ವಾಲಿಸಲು
- ಗಮ್ಮನೆ ಮುಕ್ತಿ ಸರ್ವಜ್ಞ
- 108.
- ಊರಿಂಗೆ ದಾರಿಯ | ನಾರು ತೋರಿದರೇನು
- ಸಾರಾಯಮಪ್ಪ ಮತವನರುಹಿಸುವ ಗುರು
- ಆರಾದೊಡೇನು ಸರ್ವಜ್ಞ
- 109.
- ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ
- ನಿಃಪತ್ತಿಯಾದ ಗುರುವಿನುಪದೇಶದಿಂ
- ತಪ್ಪದೇ ಮುಕ್ತಿ ಸರ್ವಜ್ಞ
- 110.
- ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ
- ಪರುಷವೆಂತಂತೆ ಶಿಷ್ಯಂಗೆ - ಗುರುವಿನ
- ಸ್ಪರುಶನವೆ ಮೋಕ್ಷ ಸರ್ವಜ್ಞ
- 111.
- ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ
- ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ
- ವಶವಾಗದಿಹುದೆ ಸರ್ವಜ್ಞ
- 112.
- ಗುರುಪಾದ ಸೇವೆ ತಾ ದೊರಕೊಂಡಿತಾದೊಡೆ
- ಹಿರಿದಪ್ಪ ಪಾಪ ಹರೆವುದು - ಕರ್ಪುರದ
- ಗಿರಿಯ ಸುಟ್ಟಂತೆ ಸರ್ವಜ್ಞ
- 113.
- ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ
- ಮತ್ತೆ ಪಾದದ ಕೆರವಾಗಿ - ಗುರುವಿನ
- ಹತ್ತಿಲಿರು ಎಂದ ಸರ್ವಜ್ಞ
- 114.
- ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ
- ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ
- ಕಾಣಿಸುತಿಹುದು ಸರ್ವಜ್ಞ
- 115.
- ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ
- ನೆಟ್ಟನೆ ಗುರುವಿನರಿದನ - ಕರ್ಮವು
- ಮುಟ್ಟಲಂಜುವವು ಸರ್ವಜ್ಞ
- 116.
- ವಿಷಯಕ್ಕೆ ಕುದಿಯದಿರು | ಅಶನಕ್ಕೆ ಹದೆಯದಿರು
- ಅಸಮಾಕ್ಷನಡಿಯನಗಲದಿರು - ಗುರುಕರುಣ
- ವಶವರ್ತಿಯಹುದು ಸರ್ವಜ್ಞ
- 117.
- ತಂದೆಗೆ ಗುರುವಿಗೆ | ಒಂದು ಅಂತರವುಂಟು
- ತಂದೆ ತೋರುವನು ಶ್ರೀಗುರುವ - ಗುರುರಾಯ
- ಬಂಧನವ ಕಳೆವ ಸರ್ವಜ್ಞ
- 118.
- ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು
- ವಿಷಯಂಗಳುಳ್ಳ ಮನುಜರಿಗೆ - ಗುರುಕರುಣ
- ವಶವರ್ತಿಯಹುದೆ ಸರ್ವಜ್ಞ
- 119.
- ಒಂದೂರ ಗುರುವಿರ್ದು | ವಂದನೆಯ ಮಾಡದೆ
- ಸಂಧಿಸಿ ಕೂಳ ತಿನುತಿರ್ಪವನ - ಇರವು
- ಹಂದಿಯ ಇರವು ಸರ್ವಜ್ಞ
- 120.
- ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
- ಲಿಂಗದೆ ಜಗವು ಅಡಗಿಹುದು - ಲಿಂಗವನು
- ಹಿಂಗಿ ಪರ ಉಂಟೆ ಸರ್ವಜ್ಞ
- 121.
- ಓರ್ವನಲ್ಲದೆ ಮತ್ತೆ | ಈರ್ವರುಂಟೇ ಮರುಳೆ
- ಸರ್ವಜ್ಞನೋರ್ವ ಜಗಕೆಲ್ಲ - ಕರ್ತಾರ
- ನೋರ್ವನೇ ದೇವ ಸರ್ವಜ್ಞ
- 122.
- ಎಂಜಲು ಶೌಚವು | ಸಂಜೆಯೆಂದೆನ ಬೇಡ
- ಕುಂಜರ ವನವ ನೆನೆವಂತೆ - ಬಿಡದೆ ನಿ
- ರಂಜನನ ನೆನೆಯ ಸರ್ವಜ್ಞ
- 123.
- ಭೂತೇಶ ಶರಣೆಂಬ | ಜಾತಿ ಮಾದಿಗನಲ್ಲ
- ಜಾತಿಯಲಿ ಹುಟ್ಟಿ ಭೂತೇಶ - ಶರಣೆನ್ನ
- ದಾತ ಮಾದಿಗನು ಸರ್ವಜ್ಞ
- 124.
- ಯಾತರ ಹೂವಾದರು | ನಾತರೆ ಸಾಲದೆ
- ಜಾತಿ-ವಿಜಾತಿ ಯೆನಬೇಡ - ಶಿವನೊಲಿ
- ದಾತನೇ ಜಾತಿ ಸರ್ವಜ್ಞ
- 125.
- ಮಾಯಾಮೋಹವ ನೆಚ್ಚಿ | ಕಾಯವನು ಕರಗಿಸುತೆ
- ಆಯಾಸಗೊಳುತ ಇರಬೇಡ - ಓಂ ನಮಶ್ಯಿ
- ವಾಯವೆಂದೆನ್ನಿ ಸರ್ವಜ್ಞ
- 126.
- ಮುನಿವಂಗೆ ಮುನಿಯದಿರು | ಕನೆವಂಗೆ ಕನೆಯದಿರು
- ಮನಸಿಜಾರಿಯನು ಮರೆಯದಿರು - ಶಿವನ ಕೃಪೆ
- ಘನಕೆ ಘನವಕ್ಕು ಸರ್ವಜ್ಞ
- 127.
- ನರರ ಬೇಡುವ ದೈವ | ವರವೀಯ ಬಲ್ಲುದೇ
- ತಿರಿವವರನಡರಿ ತಿರಿವಂತೆ - ಅದನರಿ
- ಹರನನೆ ಬೇಡು ಸರ್ವಜ್ಞ
- 128.
- ಲಿಂಗವ ಪೂಜಿಸುವಾತ | ಜಂಗಮಕೆ ನೀಡದೊಡೆ
- ಲಿಂಗದ ಕ್ಷೋಭೆ ಘನವಕ್ಕು - ಮಹಲಿಂಗ
- ಹಿಂಗುವುದು ಅವನ ಸರ್ವಜ್ಞ
- 129.
- ಉಣ ಬಂದ ಲಿಂಗಕ್ಕೆ | ಉಣಲಿಕ್ಕದಂತಿರಿಸಿ
- ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈ ಮುಗಿವ
- ಬಣಗುಗಳ ನೋಡ ಸರ್ವಜ್ಞ
- 130.
- ಒಮ್ಮನದಲ್ಲಿ ಶಿವಪೂಜೆಯ | ಗಮ್ಮನೆ ಮಾಡುವುದು
- ಇಮ್ಮನವಿಡಿದು ಕೆಡಬೇಡ - ವಿಧಿವಶವು
- ಸುಮ್ಮನೆ ಕೆಡಗು ಸರ್ವಜ್ಞ
- 131.
- ಅಂಗವನು ಲಿಂಗವನು | ಸಂಗೊಳಿಸಲೆಂತಕ್ಕು ?
- ಲಿಂಗದೆ ನೆನಹು ಘನವಾಗೆ - ಆ ಅಂಗ
- ಲಿಂಗವಾಗಿಕ್ಕು ಸರ್ವಜ್ಞ
- 132. ಕಂಗಳಿಚ್ಛೆಗೆ ಪರಿದು | ಭಂಗಗೊಳದಿರು ಮನುಜ
- ಲಿಂಗದಲಿ ಮನವ ನಿಲ್ಲಿಸಿ - ಸತ್ಯದಿ ನಿಲೆ
- ಲಿಂಗವೇಯಹೆಯೊ ಸರ್ವಜ್ಞ
- 133.
- ಓದುವಾದಗಳೇಕೆ | ಗಾದೆಯ ಮಾತೇಕೆ
- ವೇದ-ಪುರಾಣ ನಿನಗೇಕೆ - ಲಿಂಗದ
- ಹಾದಿಯನರಿದವಗೆ ಸರ್ವಜ್ಞ
- 134.
- ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ
- ನಾಟಿ ತನು ಗುರುವಿನಲಿ ಕೂಡೆ - ಭಕ್ತನ ಸ
- ಘಾಟವದು ನೋಡ ಸರ್ವಜ್ಞ
- 135.
- ನಾನು-ನೀನುಗಳಳಿದು | ತಾನೆ ಲಿಂಗದಿ ನಿಂದು
- ನಾನಾ ಭ್ರಮೆಗಳ ನೆರೆ ಹಿಂಗಿ - ನಿಂದವನು
- ತಾನೈಕ್ಯ ನೋಡ ಸರ್ವಜ್ಞ
- 136.
- ತನ್ನ ನೋಡಲಿಯೆಂದು | ಕನ್ನಡಿ ಕರೆವುದೇ
- ತನ್ನಲ್ಲಿ ಜ್ಞಾನ ಉದಿಸಿದ - ಮಹತುಮನು
- ಕನ್ನಡಿಯಂತೆ ಸರ್ವಜ್ಞ
- 137.
- ಹೆಣ್ಣನು ಹೊನ್ನನು | ಹಣ್ಣಾದ ಮರವನು
- ಕಣ್ಣಲಿ ಕಂಡು - ಮನದಲಿ ಬಯಸದ
- ಅಣ್ಣಗಳಾರು ಸರ್ವಜ್ಞ
- 138.
- ತಿರಿದು ತಂದಾದೊಡಂ | ಕರೆದು ಜಂಗಮಕಿಕ್ಕು
- ಪರಿಣಾಮವಕ್ಕು ಪದವಕ್ಕು - ಕೈಲಾಸ
- ನೆರೆಮನೆಯಕ್ಕು ಸರ್ವಜ್ಞ
- 139.
- ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು
- ಆಡಿ ಕೊಡುವವನು ಮಧ್ಯಮನು - ಅಧಮ
- ತಾನಾಡಿಯೂ ಕೊಡದವನು ಸರ್ವಜ್ಞ
- 140.
- ಮಾನವನ ದುರ್ಗುಣವ | ನೇನೆಂದು ಬಣ್ಣಿಸುವೆ
- ದಾನಗೈಯಲು ಕನಲುವ - ದಂಡವನು
- ಮೋನದಿಂ ತೆರುವ ಸರ್ವಜ್ಞ
- 141.
- ಅಂತಕ್ಕು ಇಂತಕ್ಕು | ಎಂತಕ್ಕು ಎನಬೇಡ
- ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ
- ದಂತಿಹುದೆ ಲೇಸು ಸರ್ವಜ್ಞ
- 142.
- ಸಿರಿಯು ಸಂಸಾರವು | ಸ್ಥಿರವೆಂದು ನಂಬದಿರು
- ಹಿರಿದೊಂದು ಸಂತೆ ನೆರೆದೊಂದು - ಜಾವಕ್ಕೆ
- ಹರೆದು ಹೋಹಂತೆ ಸರ್ವಜ್ಞ
- 143.
- ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು
- ಸಂತತ ಖಳರ ಒಡನಿರ್ದು - ಬಾಳುವು
- ದಂತೆ ಕಂಡಯ್ಯ ಸರ್ವಜ್ಞ
- 144.
- ಹಸಿಯದಿರೆ ಕಡುಗಾದ | ಬಿಸಿನೀರ ಕೊಂಬುದು
- ಹಸಿವಕ್ಕು ಸಿಕ್ಕ ಮಲ ಬಿಡುಗು - ದೇಹ ತಾ
- ಸಸಿನವಾಗುವುದು ಸರ್ವಜ್ಞ
- 145.
- ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ
- ಬಿಸಿ ಬೇಡ ತಂಗುಳವು ಬೇಡ - ವೈದ್ಯನ
- ಗಸಣಿಸಿಯೇ ಬೇಡ ಸರ್ವಜ್ಞ
- 146.
- ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ
- ಜಾತಿ-ವಿಜಾತಿಯೆನಬೇಡ - ದೇವನೊಲಿ
- ದಾತನೇ ಜಾತ ಸರ್ವಜ್ಞ
- 147.
- ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದು
- ಗುಣಹೀನರುಗಳ ಒಡನಾಟ - ಬಹುದುಃಖ
- ದಣಲೊಳಿರ್ದಂತೆ ಸರ್ವಜ್ಞ
- 148.
- ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
- ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ
- ಬಸವನೇ ಕರ್ತ ಸರ್ವಜ್ಞ
- 149.
- ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
- ಬಸುರಲ್ಲಿ ಬಂದ ಶಿಶು ಮುದ್ದು - ಲೋಕಕ್ಕೆ
- ಬಸವಣ್ಣನೇ ಮುದ್ದು ಸರ್ವಜ್ಞ
- 150.
- ಕತ್ತೆ ಬೂದಿಯ ಹೊರಳಿ | ಭಕ್ತನಂತಾಗುವುದೆ
- ತತ್ವವರಿಯದಲೆ ಭಸಿತವಿಟ್ಟರೆ ಶುದ್ಧ
- ಕತ್ತೆಯಂತಕ್ಕು ಸರ್ವಜ್ಞ
- 151.
- ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ
- ಅಲ್ಲದಜ್ಞಾನಿಯೊಡನಾಡೆ - ಮೊಳಕೈಗೆ
- ಕಲ್ಲು ಹೊಡೆದಂತೆ ಸರ್ವಜ್ಞ
- 152.
- ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು
- ಬಂದುದನೆ ಮೆಟ್ಟಿ ನಿಂತರೆ - ವಿಧಿ ಬಂದು
- ಮುಂದೇನ ಮಾಳ್ಕು ಸರ್ವಜ್ಞ
- 153.
- ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
- ಪರಿಣಾಮವಕ್ಕು ಪದವಕ್ಕು - ಕೈಲಾಸ
- ನೆರೆಮನೆಯಕ್ಕು ಸರ್ವಜ್ಞ
- 154.
- ಏನ ಬೇಡುವಡೊಬ್ಬ | ದಾನಿಯನೆ ಬೇಡುವುದು
- ದೀನನ ಬೇಡಿ ಬಳಲಿದಡೆ - ಆ ದೀನ
- ನೇನ ಕೊಟ್ಟಾನು ಸರ್ವಜ್ಞ
- 155.
- ಕೋಡಿಯನು ಕಟ್ಟಿದರೆ | ಕೇಡಿಲ್ಲವಾ ಕೆರೆಗೆ
- ಮಾಡು ಧರ್ಮಗಳ ಮನಮುಟ್ಟಿ - ಕಾಲನಿಗೆ
- ಈಡಾಗದ ಮುನ್ನ ಸರ್ವಜ್ಞ
- 156.
- ಅನ್ನದಾನಗಳಿಗಿಂತ | ಇನ್ನು ದಾನಗಳಿಲ್ಲ
- ಅನ್ನಕ್ಕೆ ಮೇಲು ಹಿರಿದಿಲ್ಲ - ಲೋಕಕ್ಕೆ
- ಅನ್ನವೇ ಪ್ರಾಣ ಸರ್ವಜ್ಞ
- 157.
- ಉಣ್ಣದೊಡವೆಯ ಗಳಿಸಿ | ಮಣ್ಣಾಗೆ ಬಚ್ಚಿಟ್ಟು
- ಚೆನ್ನಾಗಿ ಬಳಿದು ಮೆತ್ತಿದನ - ಬಾಯೊಳಗೆ
- ಮಣ್ಣು ಕಂಡಯ್ಯ ಸರ್ವಜ್ಞ
- 158.
- ಕೊಟ್ಟಿರ್ದ ಕಾಲದಲಿ | ಅಟ್ಟುಣ್ಣಲರಿಯದೆ
- ಹುಟ್ಟಿಕ್ಕಿ ಜೇನು ಅನುಮಾಡಿ - ಪರರಿಗೆ
- ಕೊಟ್ಟು ಹೋದಂತೆ ಸರ್ವಜ್ಞ
- 159.
- ಹೆಣ್ಣಿಂದ ಇಹವುಂಟು | ಹೆಣ್ಣಿಂದ ಪರವುಂಟು
- ಹೆಣ್ಣಿಂದ ಸಕಲ ಫಲವುಂಟು - ಮರೆದರೆ
- ಹೆಣ್ಣಿಂದ ಮರಣ ಸರ್ವಜ್ಞ
- 160.
- ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು
- ಕಜ್ಜಾಯ ತುಪ್ಪ ಉಣ ಲೇಸು - ಮನೆಗೊಬ್ಬ
- ಅಜ್ಜಿಯೇ ಲೇಸು ಸರ್ವಜ್ಞ
- 161.
- ಸಿರಿ ಬಲ ಉಳ್ಳಾಗ | ಮರೆಯದವನೇ ಜಾಣ
- ಕೊರತೆಯಾದಾಗ ಕೊಡುವೆನಿದ್ದರೆ ಎಂದು
- ಅರಚುವವನೆ ಹೆಡ್ಡ ಸರ್ವಜ್ಞ
- 162.
- ನಿತ್ಯ ನೀರೊಳು ಮುಳುಗಿ | ಹತ್ಯಾನೆ ಸ್ವರ್ಗಕ್ಕೆ
- ಹತ್ತೆಂಟು ಕಾಲ ಜಲದೊಳಗಿಹ ಕಪ್ಪೆ
- ಹತ್ತವ್ಯಾಕಯ್ಯ ಸರ್ವಜ್ಞ
- 163.
- ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆ
- ಅನ್ನವಿರುವನಕ ಪ್ರಾಣವು - ಜಗದೊಳ
- ಗನ್ನವೇ ದೈವ ಸರ್ವಜ್ಞ
- 164.
- ನಂಬು ಪರಶಿವನೆಂದು | ನಂಬು ಗುರುಚರಣವನು
- ನಂಬಲಗಸ್ತ್ಯ ಕುಡಿದನು - ಶರಧಿಯನು
- ನಂಬು ಗುರುಪದವ ಸರ್ವಜ್ಞ
- 165.
- ಬಂಧುಗಳಾದವರು ಮಿಂದುಂಡು ಹೋಹರು
- ಬಂಧನವ ಕಳೆಯಲರಿಯರು - ಗುರುವಿಂದ
- ಬಂಧನವಳಿಗು ಸರ್ವಜ್ಞ
- 166.
- ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ
- ತೊಟ್ಟಿಪ್ಪುದುಳ್ಳ ಸಮತೆಯನು - ಶಿವಪದವ
- ಮುಟ್ಟಿಪ್ಪುದಯ್ಯ ಸರ್ವಜ್ಞ
- 167.
- ಚಿತ್ತೆಯ ಮಳೆ ಹೊಯ್ದು | ಮುತ್ತಾಗಬಲ್ಲುದೆ
- ಚಿತ್ತದ ನೆಲೆಯನರಿಯದೆ - ಬೋಳಾದ
- ರೆತ್ತಣ ಯೋಗ ಸರ್ವಜ್ಞ
- 168.
- ಇಂದ್ರಿಯವ ತೊರೆದಾತ | ವಂದ್ಯನು ಜಗಕೆಲ್ಲ
- ಬಿಂದುವಿನ ಬೇಧವರಿದ ಮಹಾತ್ಮನು
- ಬೆಂದ ನುಲಿಯಂತೆ ಸರ್ವಜ್ಞ
- 169.
- ಜ್ಞಾನಿ ಸಂಸಾರದೊಳು | ತಾನಿರಬಲ್ಲನು
- ಭಾನು ಮಂಡಲದಿ ಹೊಳೆವಂತೆ - ನಿರ್ಲೇಪ
- ಏನಾದಡೇನು ಸರ್ವಜ್ಞ
- 170.
- ಸತ್ಯವ ನುಡಿವಾತ | ಸತ್ತವನೆನಬೇಡ
- ಹೆತ್ತ ತಾಯ್ ಮಗನ ಕರೆವಂತೆ - ಸ್ವರ್ಗದವ
- ರಿತ್ತ ಬಾಯೆಂಬ ಸರ್ವಜ್ಞ
- 171.
- ಜ್ಞಾನಿಯನಜ್ಞಾನಿಯೆಂದು | ಹೀನ ತಾ ನುಡಿದರೆ
- ಆನೆಯನೇರಿ ಸುಖದಿಂದಲಿ - ಹೋಹಂಗೆ
- ಶ್ವಾನ ಬೊಗಳ್ದೇನು ಸರ್ವಜ್ಞ
- 172.
- ತುಂಬಿದಾ ಕೆರೆಭಾವಿ | ತುಂಬಿಹುದೆನಬೇಡ
- ನಂಬಿರಬೇಡ ಲಕ್ಶ್ಮಿಯನು - ಬಡತನವು
- ಬೆಂಬಳಿಯೊಳಿಹುದು ಸರ್ವಜ್ಞ
- 173.
- ಕೇಡನೊಬ್ಬನಿಗೆ ಬಯಸೆ | ಕೇಡು ತಪ್ಪದು ತನಗೆ
- ಕೂಡಿ ಕೆಂಡವನು ತೆಗೆದೊಡೆ - ತನ್ನ ಕೈ
- ಕೂಡೆ ಬೇವಂತೆ ಸರ್ವಜ್ಞ
- 174.
- ಅರಸು ಮುನಿದೂರೊಳಗೆ | ಇರುವುದೇ ಕರ ಕಷ್ಟ
- ಅರಸು ಮನ್ನಣೆಯು ಕರಗಿದ - ಠಾವಿಂದ
- ಸರಿವುದೇ ಲೇಸು ಸರ್ವಜ್ಞ
- 175.
- ಆಶೆಯುಳ್ಳನ್ನಕ್ಕರ - ದಾಸನಾಗಿರುತಿಪ್ಪ
- ಆಶೆಯ ತಲೆಯನಳಿದರೆ - ಕೈಲಾಸ
- ದಾಚೆಯಲಿಪ್ಪ ಸರ್ವಜ್ಞ
- 176.
- ಧಾರುಣಿ ನಡುಗುವುದು | ಮೇರುವಲ್ಲಾಡುವುದು
- ವಾರಿಧಿ ಬತ್ತಿ ಬರೆವುದು - ಶಿವಭಕ್ತಿ
- ಯೋರೆಯಾದಂದು ಸರ್ವಜ್ಞ
- 177.
- ಮಂದಿಯಿಲ್ಲದರಸು | ತಂದೆ ಇಲ್ಲದ ಕಂದ
- ಬಂಧುಗಳಿಲ್ಲದಿಹ ಬಡತನ - ಇವು ತಾನು
- ಎಂದಿಗೂ ಬೇಡ ಸರ್ವಜ್ಞ
- 178.
- ಅನ್ನವಿಕ್ಕದನಿಂದ | ಕುನ್ನಿ ತಾ ಕರ ಲೇಸು
- ಉನ್ನತವಪ್ಪತಿಥಿಗಿಕ್ಕದ ಬದುಕು - ನಾಯ
- ಕುನ್ನಿಯಿಂ ಕಷ್ಟ ಸರ್ವಜ್ಞ
- 179.
- ಉರಿಯುದಕ ಶೀತವು | ಉರಗಪತಿ ಭೀಕರವು
- ಗುರುವಾಜ್ಞೆಗಂಜಿ ಕೆಡುವವು - ಇದ ನರ
- ರರಿಯದೆ ಕೆಡುಗು ಸರ್ವಜ್ಞ
- 180.
- ಶೇಷನಿಂ ಹಿರಿದಿಲ್ಲ | ಆಸೆಯಿಂ ಕೀಳಿಲ್ಲ
- ರೋಷದಿಂದಧಮಗತಿಯಿಲ್ಲ - ಪರದೈವ
- ಈಶನಿಂದಿಲ್ಲ ಸರ್ವಜ್ಞ
- 181.
- ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
- ಸಿಟ್ಟಿನಲಿ ಶಿವನ ಬೈದರೆ - ಶಿವ ತಾನು
- ರೊಟ್ಟಿ ಕೊಡುವನೆ ಸರ್ವಜ್ಞ
- 182.
- ಹಸಿವರಿತು ಉಂಬುದು | ಬಿಸಿನೀರ ಕುಡಿವುದು
- ಹಸಿವಕ್ಕು ವಿಷಯ ಘನವಕ್ಕು - ವೈದ್ಯಗೆ
- ಬೆಸಸ ಬೇಡೆಂದ ಸರ್ವಜ್ಞ
- 183.
- ಲಿಂಗಕೆ ತೋರಿಸುತ | ನುಂಗುವಾತನೆ ಕೇಳು
- ಲಿಂಗ ಉಂಬುವುದೆ ? ಪೆÇಡಮಡು - ತೆಲೊ ಪಾಪಿ
- ಜಂಗಮಕೆ ನೀಡು ಸರ್ವಜ್ಞ
- 184.
- ಹೆಂಡಿರು ಮಕ್ಕಳಿಗೆಂದು | ದಂಡಿಸದಿರು ದೇಹವನು
- ಭಂಡ ವಸ್ತುವನು ಕೊಡದುಣದೆ - ಬೈಚಿಡಲು
- ಕಂಡವರಿಗಹುದು ಸರ್ವಜ್ಞ
- 185.
- ಮಾತು ಬಂದಲ್ಲಿ ತಾ | ಸೋತು ಬರುವುದು ಲೇಸು
- ಮಾತಿಂಗೆ ಮಾತು ಮಥಿಸೆ - ವಿಧಿ ಬಂದು
- ಆತುಕೊಂಡಿಹುದು ಸರ್ವಜ್ಞ
- 186.
- ಕಣ್ಣು ನಾಲಗೆ ಮನವು | ತನ್ನವೆಂದೆನ ಬೇಡ
- ಅನ್ಯರು ಕೊಂದರೆನ ಬೇಡ - ಇವು ಮೂರು
- ತನ್ನನೇ ಕೊಲುಗು ಸರ್ವಜ್ಞ
- 187.
- ನುಡಿಸುವುದಸತ್ಯವನು | ಕೆಡಿಸುವುದು ಧರ್ಮವನು
- ಒಡಲನೆ ಕಟ್ಟಿ ಹಿಡಿಸುವುದು - ಲೋಭದ
- ಗಡಣ ಕಾಣಯ್ಯ ಸರ್ವಜ್ಞ
- 188.
- ಸೊಡರಿಂಗೆ ಎಣ್ಣೆಯ | ಕೊಡನೆತ್ತಿ ಹೊಯಿವರೆ
- ಬಡವನೆಂದು ಕೊಡದೆ ಇರಬೇಡ - ಇರವರಿದು
- ಕೊಡುವುದೇ ಲೇಸು ಸರ್ವಜ್ಞ
- 189.
- ಒಡಲೆಂಬ ಹುತ್ತಕ್ಕೆ | ನುಡಿವ ನಾಲಗೆ ಸರ್ಪ
- ಕಡುರೋಷವೆಂಬ ವಿಷವೇರೆ - ಸಮತೆ ಗಾ
- ರುಡಿಗನಂತಕ್ಕು ಸರ್ವಜ್ಞ
- 190.
- ಅಪಮಾನದೂಟದಿಂ | ದುಪವಾಸ ಕರ ಲೇಸು
- ನೃಪನೆದ್ದು ಬಡಿವ ಅರಸನೋಲಗದಿಂದ
- ತಪವಿಹುದೆ ಲೇಸು ಸರ್ವಜ್ಞ
- 191.
- ಹಿರಿದು ಪಾಪವ ಮಾಡಿ - ಹರಿವರು ಗಂಗೆಗೆ
- ಹರಿವ ನೀರಲ್ಲಿ ಕರಗುವೊಡೆ - ಯಾ ಪಾಪ
- ಎರೆಯ ಮಣ್ಣಲ್ಲ ಸರ್ವಜ್ಞ
- 192.
- ಅಂತಿರ್ದರಿಂತಿರ್ದ | ರೆಂತಿರ್ದರೆನಬೇಡ
- ಕುಂತಿಯಣುಗರು ತಿರಿದರು - ಮಿಕ್ಕವರು
- ಎಂತಿರ್ದರೇನು ಸರ್ವಜ್ಞ
- 193.
- ಉಳ್ಳಲ್ಲಿ ಉಣಲೊಲ್ಲ | ಉಳ್ಳಲ್ಲಿ ಉಡಲೊಲ್ಲ
- ಉಳ್ಳಲ್ಲಿ ದಾನಗೊಡಲೊಲ್ಲ - ನವನೊಡವೆ
- ಕಳ್ಳಗೆ ನೃಪಗೆ ಸರ್ವಜ್ಞ
- 194.
- ಕೊಡುವಾತನೇ ಮೃಢನು | ಪಡೆವಾತನೇ ನರನು
- ಒಡಲು-ಒಡವೆಗಳು ಕೆಡೆದು ಹೋಗದ ಮುನ್ನ
- ಕೊಡು ಪಾತ್ರವನರಿದು ಸರ್ವಜ್ಞ
- 195.
- ಅನ್ನವನಿಕ್ಕುವುದು | ನನ್ನಿಯನು ನುಡಿವುದು
- ತನ್ನಂತೆ ಪರರ ಬಗೆದೊಡೆ - ಕೈಲಾಸ
- ಬಿನ್ನಾಣವಕ್ಕು ಸರ್ವಜ್ಞ
- 196.
- ಆನೆ ಮುಕುರದೊಳಡಗಿ | ಭಾನು ಸರಸಿಯೊಳಡಗಿ
- ನಾನೆನ್ನ ಗುರುವಿನೊಳಡಗಿ - ಸಂಸಾರ
- ತಾನದೆತ್ತಣದು ಸರ್ವಜ್ಞ
- 197.
- ಎಂಜಲು ಹೊಲೆಯಿಲ್ಲ | ಸಂಜೆಗತ್ತಲೆಯಿಲ್ಲ
- ಅಂಜಿಕೆಯಿಲ್ಲ ಭಯವಿಲ್ಲ - ಜ್ಞಾನವೆಂ
- ಬಂಜನವಿರಲು ಸರ್ವಜ್ಞ
- 198.
- ಬಲ್ಲೆನೆಂಬಾ ಮಾತು | ಎಲ್ಲವೂ ಹುಸಿ ನೋಡಾ
- ಬಲ್ಲರೆ ಬಲ್ಲೆನೆನಬೇಡ - ಸುಮ್ಮನಿರ
- ಬಲ್ಲರೆ ಬಲ್ಲ ಸರ್ವಜ್ಞ
- 199.
- ಏನಾದಡೇನಯ್ಯ | ತಾನಾಗದನ್ನಕ್ಕ
- ತಾನಾಗಿ ತನ್ನನರಿದಡೆ - ಲೋಕ ತಾ
- ನೇನಾದಡೇನು ಸರ್ವಜ್ಞ
- 200.
- ಆನೆ ನೀರಾಟದಲಿ | ಮೀನ ಕಂಡಂಜುವುದೇ
- ಹೀನಮಾನವರ ಬಿರುನುಡಿಗೆ - ತತ್ವದ
- ಜ್ಞಾನಿ ಅಂಜುವನೆ ಸರ್ವಜ್ಞ
Bschandrasgr (ಚರ್ಚೆ) ೦೯:೦೩, ೧೬ ಜನವರಿ ೨೦೧೭ (UTC)