ಚರ್ಚೆಪುಟ:ಶ್ಲೋಕ
ಶ್ರೀ ರಾಮಾಯಣ ದರ್ಶನಂ ಶ್ರೀ ರಾಮಾಯಣ ದರ್ಶನಂ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ಕನ್ನಡದಲ್ಲಿ ಕುವೆಂಪು ಅವರ ಅತ್ಯಂತ ಜನಪ್ರಿಯ ಕೃತಿ ಮತ್ತು ಶ್ರೇಷ್ಠ ಕೃತಿಯಾಗಿದೆ. ಇದು ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 1968 ರಲ್ಲಿ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ತಂದುಕೊಟ್ಟಿತು.ಶ್ರೀ ರಾಮಾಯಣ ದರ್ಶನಂ"ವು ಮಹಾಕಾವ್ಯವಾದ ರಾಮಾಯಣವನ್ನು ಆಧರಿಸಿ ಕುವೆಂಪುರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ ರಲ್ಲಿ 'ಜ್ಞಾನಪೀಠ ಪ್ರಶಸ್ತಿ'ಯನ್ನು ಕುವೆಂಪುರವರಿಗೆ ತಂದೊದಗಿಸಿದೆ.ಶ್ರೀ ರಾಮಾಯಣ ದರ್ಶನಂ ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ. ಮಹಾಕಾವ್ಯಗಳ ರಚನೆಯ ಯುಗ ಮುಗಿದೇ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ. ವಾಲ್ಮೀಕಿಯ ಕಥಾ ಹಂದರದ ಮೇಲೆ ಸರ್ವೋದಯ ಸಮನ್ವಯ ತತ್ವಗಳನ್ನು ಪ್ರತಿಪಾದಿಸಿ ರಚಿತವಾದ ಈ ಕೃತಿ ’ಕುವೆಂಪುವ ಸೃಜಿಸಿದ’ ಮಹಾಕೃತಿಯೂ ಹೌದು. 'ಬಹಿರ್ಘಟನೆಯಂ ಪ್ರತಿಕೃತಿಸುವ ಲೌಕಿಕ ಚರಿತ್ರೆ ಮಾತ್ರವಲ್ಲದೆ, ಅಲೌಕಿಕ ನಿತ್ಯ ಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನ’ವೂ ಹೌದು. ಸುಮಾರು ಇಪ್ಪತ್ತೆಂಟು ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ಈ ಕಾವ್ಯ ರಚಿತವಾಗಿದೆ. 1949ರಲ್ಲಿ ಮೊದಲ ಭಾಗ ಮತ್ತು 1951ರಲ್ಲಿ ಎರಡನೆಯ ಭಾಗ ಪ್ರಕಟವಾದವು. ನಂತರ, ಎರಡೂ ಭಾಗಗಳನ್ನು ಸೇರಿಸಿ ಒಂದೇ ಗ್ರಂಥವನ್ನಾಗಿಸಿ ಪ್ರಕಟಿಸಲಾಯಿತು. ಇದುವರೆಗೆ ಸುಮಾರು 20ಕ್ಕು ಹೆಚ್ಚಿನ ಮರುಮುದ್ರಣಗಳಾಗಿವೆ. ಕಾವ್ಯದ ವಾಚನ, ವ್ಯಾಖ್ಯಾನಗಳಿಗೆ ಸಂಬಂದಿಸಿದಂತೆ ಹಲವಾರು ಧ್ವನಿಮುದ್ರಿಕೆಗಳು ಹೊರಬಂದಿವೆ. ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದಗೊಂಡು ಸಹೃದಯ ಓದುಗರನ್ನು ಸಂಪಾದಿಸಿದೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರವನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಪುರಸ್ಕಾರವನ್ನೂ ಒದಗಿಸಿಕೊಟ್ಟ ಕೃತಿರತ್ನವೂ ಇದಾಗಿದೆ. ಮಹಾಕಾವ್ಯದ ನಡೆಗೆ ಅನ್ವಯವಾಗುವಂತೆ ಸರಳರಗಳೆಯನ್ನು ಪುನರ್ ರೂಪಿಸಿಕೊಂಡ ಮಹಾಛಂದಸ್ಸಿನಲ್ಲಿ ರಚಿತವಾಗಿದೆ. ಲಲಿತ ರಗಳೆಯ ಬಂಧದಲ್ಲಿ ಅಂತ್ಯ ಪ್ರಾಸವನ್ನು ತ್ಯಜಿಸಿ ಸರಳ ರಗಳೆಯಾಗಿ ಪರಿವರ್ತಿಸಿ ಮಹಾಛಂದಸ್ಸನ್ನು ಕವಿ ನಿರ್ಮಿಸಿಕೊಂಡಿದ್ದಾರೆ. ಕಾವ್ಯದ ನಡೆಗೆ ಹಲವಾರು ಮಹೋಪಮೆಗಳನ್ನೂ ಕವಿ ಬಳಸಿದ್ದಾರೆ. ಹೀಗೆ, ಪ್ರಸ್ತುತಿ, ಛಂದಸ್ಸು, ಅಲಂಕಾರ, ಯುಗ ಧರ್ಮ ಹೀಗೆ ಎಲ್ಲಾ ವಿಷಯಗಳಲ್ಲೂ ಇದೊಂದು ಆಚಾರ್ಯ ಕೃತಿಯೆನಿಸಿದೆ. ಅಯೋಧ್ಯಾ ಸಂಪುಟಂ, ಕಿಷ್ಕಿಂಧಾ ಸಂಪುಟಂ, ಲಂಕಾ ಸಂಪುಟಂ ಮತ್ತು ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳ ಅಡಿಯಲ್ಲಿ ವಿಸ್ತರಿಸಿರುವ, ಒಟ್ಟು ಐವತ್ತು ಸಂಚಿಕೆಗಳಲ್ಲಿ, ಒಟ್ಟು ೨೨೨೯೧ ಸಾಲುಗಳ ಮಹಾಕಾವ್ಯ ಅಡಕವಾಗಿದೆ. ಕೃತಿಯ ಆರಂಭದಲ್ಲೇ, ಕವಿಯು ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣಯ್ಯನವರಿಗೆ ಕಾವ್ಯವನ್ನು ಅರ್ಪಣೆ ಮಾಡಿದ್ದಾರೆ. ನಿತ್ಯ ಸತ್ಯವನ್ನು ಸಾರುವ ಕಾವ್ಯೋದ್ದೇಶವನ್ನು ಕೆಳಗಿನಂತೆ ಸ್ಪಷ್ಟಪಡಿಸಿದ್ದಾರೆ. ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ, ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸ್ಸಿನ ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ! ಹಳೆಯ ಕಥೆ ಹೊಸ ಯುಗಧಮವನ್ನು ಮೈಗೂಡಿಸಿಕೊಂಡು, ಎಷ್ಟರಮಟ್ಟಿಗೆ ಹೊಸದಾಗಬಹುದು ಎಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಮಿಲ್ಟನ್ ಕವಿಯ ʼಪ್ಯಾರಡೈಸ್ ಲಾಸ್ಟ್ʼ ʼಪ್ಯಾರಡೈಸ್ ರಿಗೇನ್ಡ್ʼ ಆದ ಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ -ಎಂದು ರಾಷ್ಟ್ರಕವಿ ಗೋವಿಂದ ಪೈ ಅವರು ಹೇಳಿದ್ದರೆ, ಶ್ರೀ ದೇವೇಂದ್ರ ಕುಮಾರ ಹಕಾರಿಯವರು ಇಪ್ಪತ್ತನೆಯ ಶತಮಾನದ ಜಟಿಲ ಮತ್ತು ಸಂಕೀರ್ಣ ಅನುಭವಗಳನ್ನು ಅಭಿವ್ಯಕ್ತಿಯ ಸಂಭವನೀಯ ಆಯಾಮಗಳಿಗೆ ಅಳವಡಿಸಿ, ಅದಕ್ಕನುಗುಣವಾದ ಬೃಹತ್ ಪರಿಧಿಗಳನ್ನು ಸೃಷ್ಟಿಸಿ ರೂಪಗೊಂಡ ಶ್ರೀ ಕುವೆಂಪು ಅವರ ʼಶ್ರೀರಾಮಾಯಣ ದರ್ಶನಂʼ ಸಹಜ ಸಂವೇದನೆಯ ಒಂದು ಮಹೋನ್ನತ ಕೃತಿ ಎಂದಿದ್ದಾರೆ.
Start a discussion about ಶ್ಲೋಕ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಶ್ಲೋಕ.