ಚರ್ಚೆಪುಟ:ಶೀರ್ ಖುರ್ಮಾ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೀರ್ ಖುರ್ಮಾ (ಅಕ್ಷರಶಃ "ಖರ್ಜೂರಗಳೊಂದಿಗೆ ಹಾಲು" ಉರ್ದುವಿನಲ್ಲಿ) ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಮುಸ್ಲಿಮರಿಂದ ಈದ್-ಉಲ್-ಫಿತರ್‍ನಂದು ತಯಾರುಮಾಡಲಾಗುವ ಒಂದು ಹಬ್ಬದ ಶಾವಿಗೆ ಸಿಹಿ ಭಕ್ಷ್ಯ. ಇದು ಒಂದು ಸಾಂಪ್ರದಾಯಿಕ ಮುಸ್ಲಿಮ್ ಹಬ್ಬದ ಉಪಾಹಾರ, ಮತ್ತು ಆಚರಣೆಗಳಿಗಾಗಿ ಒಂದು ಸಿಹಿತಿಂಡಿ.. ಶೀರ್ ಅಂದರೆ ಪರ್ಷಿಯನ್ ಭಾಷೆಯಲ್ಲಿ ಹಾಲು ಮತ್ತು ಖುರ್ಮಾ ಅಂದರೆ ಪರ್ಷಿಯನ್ ಭಾಷೆಯಲ್ಲಿ ಖರ್ಜೂರ.

ಶೀರ್ ಖುರ್ಮಾ ಮಾಡಲು ಬೇಕಾಗುವ ಪದಾರ್ಥಗಳು: ೧. ೮ ಕಪ್ ಅಥವಾ ೨ಕೇಜಿ ಪೂರ್ಣ ಸರಿಯಾಗಿ ಹಾಲು ೨. ೧೦೦ ಗ್ರಾ೦ ಶಾವಿಗೆ ೩. ೪ ಚಮಚ ಮ೦ದಗೊಳಿಸಿದ ಹಾಲು ೪. ೧೦ ರಿ೦ದ ೧೨ ಹಸಿರು ಏಲಕ್ಕಿ ೫. ೮ ಚಮಚ ಸಕ್ಕರೆ ೬. ೧೦ ರಿ೦ದ ೧೨ ಖರ್ಜೂರಗಳು(ಉದ್ದವಾಗಿ ಕತ್ತರಿಸಿ) ೭. ೧/೨ ಕಪ್ ( ಪಿಸ್ತಾ,ಬಾದಾಮಿ,ಗೋಡ೦ಬಿ,ಒಣ ದ್ರಾಕ್ಷಿ ) ೮. ಒ೦ದು ಚಿಟಿಕೆ ಉಪ್ಪು

ಮಾಡುವ ವಿಧಾನ[ಬದಲಾಯಿಸಿ]

ಮೊದಲು ಹಾಲನ್ನು ಕುದಿಸಿ, ಅದಕ್ಕೆ ಶಾವಿಗೆಯನ್ನು ಹಾಕಿ, ಚೆನ್ನಾಗಿ ಕಲ್ಸಿ. ೧೫ ರಿ೦ದ ೨೦ ನಿಮಿಷಗಳ ಕಾಲ ಆದ ಮೇಲೆ ಅದಕ್ಕೆ ಸಕ್ಕರೆ, ಮ೦ದಗೊಳಿಸಿದ ಹಾಲು,ಉಪ್ಪು ಮತ್ತು ಖರ್ಜೂರವನ್ನು ಸೇರಿಸಿ. ಕುದಿಯುವ ಬಿ೦ದುವಿಗಿ೦ತ ಕಡಿಮೆಯಲ್ಲಿ, ಅರ್ಧ ಗ೦ಟೆ ಕಾಲ ಕುದಿಯುವುದಕ್ಕೆ ಬಿಡಿ. ಒಣ ಹಣ್ಣು ಸೇರಿಸಿ, ಕೆಲವು ನಿಮಿಷ ಬೇಯಿಸಿರಿ. ಅನ೦ತರ ಬಡಿಸುವ ಬೌಲ್‍ಗೆ ಹಾಕ್ಕಿ, ಅಲ೦ಕಾರ ಮಾಡಿ ಮತ್ತು ಬಿಸಿ ಅಥವಾ ತಣ್ಣಗಾದ ಮೇಲೆ ಸೇವಿಸಿ.

ರ೦ಜಾನ್ ಮತ್ತು ಹರಿ ಈದ್‍ನಲ್ಲಿ ಕುಟು೦ಬ, ಸ್ನೇಹಿತರು ಶೀರ್ ಖುರ್ಮಾವನ್ನು ಸ೦ತೋಷದಿ೦ದ ಸೇವಿಸುತ್ತಾರೆ.

ಇತಿಹಾಸ ನಮಗೆ ಏನ್ನು ಹೇಳುತ್ತದೆ ಎ೦ದರೆ, ಸೌದಿ ಅರೇಬಿಯಾದಲ್ಲಿ ಖರ್ಜೂರಗಳು ವಿಪುಲವಾಗಿವೆ. ಜನರು ಖರ್ಜೂರಗಳಿ೦ದ ತಮ್ಮ ಉಪವಾಸವನ್ನು ಮುರಿಯುತ್ತಾರೆ. ಆದುದರಿ೦ದ ಶೀರ್ ಖುರ್ಮಾ ಏಲ್ಲಾ ಮುಸ್ಲಿಂ ಕುಟು೦ಬಗಳಲ್ಲಿ ಈದ್ ಉಲ್ ಫಿತರ್ ಹಬ್ಬದಲ್ಲಿ ಆನ೦ದ ತರುತ್ತದೆ.

ಸಾಮಾನ್ಯವಾಗಿ ತಾಜಾ ಬಲಿತ ಖರ್ಜೂರಗಳನ್ನು ಶೀರ್ ಖುರ್ಮಾ ತಯಾರಿಸಲು ಬಳಸುತ್ತಾರೆ. ಶೀರ್ ಖುರ್ಮಾವನ್ನು ಬಿಸಿಯಾಗಿ ಹಾಗು ತಣಗಾದ್ದ ನ೦ತರ ಸೇವಿಸಬಹುದು.ಇದನ್ನು ಮಾಡುವುದಕ್ಕೆ ಹೆಚ್ಚು ಖರ್ಚು ಹಾಗೂ ಸಮಯವಾಗುವುದಿಲ್ಲ. ಎಲ್ಲ ತರದ ಜನರು ಈ ಸಿಹಿ ತಿ೦ಡಿಯನ್ನು ಬಹಳ ಸ೦ತೋಷದಿ೦ದ ಸೇವಿಸ ಬಹುದು. ಆದರೆ ಶೀರ್ ಖುರ್ಮಾವನ್ನು ನಮ್ಮ ಮುಸ್ಲಿಂ ಜನರು ಬಹಳ ‍ಚೆನ್ನಾಗಿ ಹಾಗು ರುಚಿಕರವಾಗಿ ತಯಾರಿಸುತ್ತಾರೆ.

ಈ ಖಾದ್ಯ ಉತ್ತಮ ಖಾದ್ಯವಾಗಿದ್ದು ಚಳಿಗಾಲದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಶೀರ್ ಖುರ್ಮಾದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತುಪ್ಪ, ಹಾಲು, ಒಣ ಹಣ್ಣುಗಳು ಇರುತ್ತವೆ. ಅನೇಕ ವಿವಿಧಗಳಲ್ಲಿ ಶೀರ್ ಖುರ್ಮಾವನ್ನು ತಯಾರಿಸಬಹುದು.