ಚರ್ಚೆಪುಟ:ಯು. ಬಿ. ಪವನಜ
ನಾನು ಕನ್ನಡ ವಿಕಿಪೀಡಿಯ ರೂವಾರಿ ಅಲ್ಲ. ಅದು ಎಲ್ಲರಿಗೂ ಸೇರಿದ್ದು. ಅದನ್ನು ಬೆಳೆಸಲು ನನಗಿಂತ ಎಷ್ಟೋ ಪಾಲು ಜಾಸ್ತಿ ಕೆಲಸ ಮಾಡಿದವರಿದ್ದಾರೆ --Pavanaja (talk) ೦೨:೧೮, ೩೧ ಆಗಸ್ಟ್ ೨೦೧೩ (UTC) ನಮ್ಮ ಕಂಪ್ಯೂಟರೆನಲ್ಲಿ ಇದ್ದ ಫೈಲುಗಳನ್ನು ವಿಕಿಪೀಡಿಯಾಕ್ಕೆ ಅಂಟಿಸುವುದು ಹೇಗೆ? ಸಹಾಯ ಮಾಡುವಿರಾ?Manjappabg (talk) ೧೨:೪೩, ೫ ಸೆಪ್ಟೆಂಬರ್ ೨೦೧೩ (UTC)
- ಮೊತ್ತಮೊದಲನೆಯದಾಗಿ ನಿಮ್ಮಲ್ಲಿರುವ ಫೈಲ್ ವಿಶ್ವಕೋಶಕ್ಕೆ ಸೂಕ್ತವಾದ ಲೇಖನದ್ದಾಗಿರಬೇಕು. ಅದು ಯುನಿಕೋಡ್ ಕನ್ನಡದಲ್ಲಿರಬೇಕು. ಯುನಿಕೋಡ್ ನಲ್ಲಿ ಇಲ್ಲವಾದಲ್ಲಿ ಅದನ್ನು ಯುನಿಕೋಡ್ ಗೆ ಪರಿವರ್ತಿಸಬೇಕು. ನಂತರ ವಿಕಿಪೀಡಿಯದಲ್ಲಿ ಹೊಸ ಲೇಖನ ಪ್ರಾರಂಭಿಸಿ ಎಡಿಟ್ ವಿಂಡೋದಲ್ಲಿ ಅದನ್ನು ಅಂಟಿಸಬೇಕು. --Pavanaja (talk) ೧೫:೩೭, ೫ ಸೆಪ್ಟೆಂಬರ್ ೨೦೧೩ (UTC)
ವ್ಯಕ್ತಿಯ ಪುಟದಲ್ಲಿ ಕಾರ್ಯಕ್ರಮ ವರದಿ ಬೇಡ
ದಯವಿಟ್ಟು ಒಬ್ಬ ವ್ಯಕ್ತಿಯ ಪುಟದಲ್ಲಿ ಒಂದು ಕಾರ್ಯಕ್ರಮದ ಸುದೀರ್ಘ ವರದಿ ಬೇಡ. --Pavanaja (talk) ೦೩:೫೩, ೨೫ ನವೆಂಬರ್ ೨೦೧೩ (UTC)
clean up
ಬ್ಲಾಗ್ ಮಾದರಿಯಲ್ಲಿ ಬರೆಯಲಾಗಿತ್ತು. ಅನೇಕ ಹೋಗಳಿಕೆ ಭಾಷೆಗಳಿಂದ ಕೂಡಿತ್ತು. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದ ಬಗ್ಗೆ ವಿವರಗಳು ಬೇಕಾಗಿರಲಿಲ್ಲ ಅಂತಹ ಮಾಹಿತಿಯನ್ನು ಹಾಕಲಾಗಿತ್ತು. ತನ್ನ ಬೆಂಬಲಿಗರ ಮೂಲಕ ಮಾಹಿತಿ ಹಾಕಿಸಿದಂತೆ ಇದೆ. ಯಾವುದಕ್ಕೂ ಉಲ್ಲೇಖ ಇರಲಿಲ್ಲ ಅಂತಹ ಮಾಹಿತಿಯನ್ನು ತೆಗೆದು ಲೇಖನ ವನ್ನು ಚೊಕ್ಕಗೊಳಿಸಲಾಗಿದೆ.--Lokesha kunchadka (ಚರ್ಚೆ) ೦೮:೦೦, ೪ ಏಪ್ರಿಲ್ ೨೦೨೦ (UTC)
ವೆಬ್ ಲಿಂಕ್
ವಿಶ್ವ ಕನ್ನಡ ಎನ್ನುವ ಜಾಲತಾಣದ ಲಿಂಕ್ ೪-೫ ಬಾರಿ ಕೊಡಲಾಗಿದೆ.ಎಷ್ಟು ಬಾರಿ ಒಂದು ವೆಬ್ ಲಿಂಕ್ ಕೊಡಬಹುದು?. --Lokesha kunchadka (ಚರ್ಚೆ) ೧೩:೩೯, ೫ ಏಪ್ರಿಲ್ ೨೦೨೦ (UTC)