ಚರ್ಚೆಪುಟ:ಮಹಿಳೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಿಳೆ ಮೀಸಲಾತಿ[ಬದಲಾಯಿಸಿ]

  • ಮಹಿಳಾ ಮೀಸಲು ಮಸೂದೆ: ಬದಲಾಗದ ಕಥನಶೈಲಿ=ಅಂಕಣಗಳು›-ಕಡೆಗೋಲು|ಸಿ.ಜಿ. ಮಂಜುಳಾ.|prajavani.|೮-೩-೨೦೧೬.
  • -------ಭಾರತದಲ್ಲಿ ಈಗಿನ ಲೋಕಸಭೆಯಲ್ಲಿರುವುದು ಕೇವಲ 62 ಮಹಿಳಾ ಸಂಸತ್ ಸದಸ್ಯೆಯರು. ಎಂದರೆ ಶೇ 11ರಷ್ಟು ಪ್ರಮಾಣವನ್ನು ಈ ಸಂಖ್ಯೆ ಪ್ರತಿನಿಧಿಸುತ್ತದೆ. ಪ್ರಜಾಪ್ರಭುತ್ವ ಎಂಬುದು ಪ್ರತಿನಿಧೀಕರಣದ ರಾಜಕಾರಣ. ಸುಮಾರು ಶೇ 49ರಷ್ಟಿರುವ ಮಹಿಳೆಯರ ಪ್ರಾತಿನಿಧ್ಯ ಶೇ 11ರಷ್ಟಿದ್ದರೆ ಹೇಗೆ?
  • 1997ರಲ್ಲಿ ಲೋಕಸಭೆಯಲ್ಲಿ ಶೇ 3.5ರಷ್ಟಿದ್ದ ಮಹಿಳಾ ಪ್ರಾತಿನಿಧ್ಯ 2009ರಲ್ಲಿ ಶೇ 10ಕ್ಕೆ ಏರಿತ್ತು. ಈಗ 2013ರಲ್ಲಿ ರಚನೆಯಾಗಿರುವ 16ನೇ ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 11ಕ್ಕೇರಿದೆ ಅಷ್ಟೆ. ಇಷ್ಟೊಂದು ಮಂದಗತಿಯ ಪ್ರಗತಿ ಭರವಸೆ ಮೂಡಿಸುವಂತಹದ್ದಲ್ಲ. ಹೀಗಾಗಿಯೇ ಮಹಿಳಾ ಮೀಸಲಾತಿಯ ಅಗತ್ಯವನ್ನು ಇದು ಎತ್ತಿ ಹಿಡಿಯುತ್ತದೆ. ಆದರೆ ಮಹಿಳಾ ಮೀಸಲು ಮಸೂದೆಯ ಕಥಾನಕ, ಪುರುಷ ಪ್ರಧಾನ ಪೂರ್ವಗ್ರಹ ಹಾಗೂ ಮಹಿಳೆ ಕುರಿತ ಅನುಗ್ರಹಪೂರ್ವಕ ಧೋರಣೆಗಳಿಗೆ ಕನ್ನಡಿ ಹಿಡಿಯುತ್ತದೆ.
  • ಜೊತೆಗೆ ಸಾರ್ವಜನಿಕ ಬದುಕಿನಲ್ಲಿನ ‘ಬಾಲ್ ಕಟಿ’ (ತುಂಡುಗೂದಲಿನ) ಮಹಿಳೆಯರ ಬಗ್ಗೆ ಮಾತನಾಡುವ ಪುರುಷರ ಆಷಾಢಭೂತಿತನವನ್ನೂ ಬಯಲುಗೊಳಿಸುತ್ತದೆ. 1996ರಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮಂಡಿತವಾದದ್ದು ಈ ಮಹಿಳಾ ಮೀಸಲು ಮಸೂದೆ. ಬರೋಬ್ಬರಿ ಎರಡು ದಶಕಗಳೇ ಕಳೆದು ಹೋಗಿವೆ.
  • 2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷಗಳ ಸಹಮತದೊಂದಿಗೆ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳಾ ಮೀಸಲು ಮಸೂದೆಗೆ ಅನುಮೋದನೆ ಪಡೆದು ಹೊಸ ಇತಿಹಾಸವನ್ನೇನೊ ನಿರ್ಮಿಸಿತು. ಆದರೆ ಲೋಕಸಭೆ ಅನುಮೋದನೆ ದಕ್ಕಲಿಲ್ಲ. 2014ರ ಆರಂಭದಲ್ಲಿ 16ನೇ ಲೋಕಸಭಾ ಚುನಾವಣೆಗಳಿಗಾಗಿ 15ನೇ ಲೋಕಸಭೆ ವಿಸರ್ಜನೆಯಾಯಿತು. ಮಂಡನೆಗೆ ಕಾದಿದ್ದ ಮಸೂದೆಯೂ ಅಸ್ತಿತ್ವ ಕಳೆದುಕೊಂಡಿತು.
  • ರಾಜಕೀಯ ಪಕ್ಷಗಳ ಮಧ್ಯೆ ಒಮ್ಮತ ಮೂಡಿಸುವುದು ಅಗತ್ಯ ಇರುವುದರಿಂದ ಮಹಿಳಾ ಮೀಸಲು ಮಸೂದೆ ಮಂಡನೆ ಬಗ್ಗೆ ನಿಗದಿತ ಕಾಲ ಚೌಕಟ್ಟು ನೀಡುವುದು ಅಸಾಧ್ಯ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡರು ಈಗ ಹೇಳಿದ್ದಾರೆ. ಆದರೆ ಸರ್ಕಾರದ ಪ್ರಯತ್ನ ಮುಂದುವರಿದಿದೆ ಎಂಬಂಥ ಉಪಚಾರದ ಮಾತುಗಳನ್ನೂ ಲೋಕಸಭೆಗೆ ಇತ್ತೀಚೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ.
  • 1996ರಿಂದ ಈ ಇಪ್ಪತ್ತು ವರ್ಷಗಳ ಪಯಣದಲ್ಲಿ ಮಹಿಳಾ ಮೀಸಲು ಮಸೂದೆ ಕುರಿತಾದ ಚರ್ಚೆ ಪ್ರತಿ ಲೋಕಸಭಾ ಅಧಿವೇಶನ ಸಂದರ್ಭದಲ್ಲೂ ದೊಡ್ಡ ಸದ್ದು ಮಾಡಿ ಹಾಗೆಯೇ ಅಡಗಿ ಹೋಗುತ್ತದೆ ಎಂಬುದು ವಿಷಾದನೀಯ. ಮುಂದಕ್ಕೊಯ್ಯುವ ಛಾತಿ ನಮ್ಮ ನೇತಾರರಿಗೆ ಇಲ್ಲ ಎಂಬುದು ನಮ್ಮ ಪಿತೃ ಪ್ರಧಾನ ಸಮಾಜದಲ್ಲಿರುವ ದ್ವಿಮುಖ ಧೋರಣೆಗಳಿಗೆ ಮತ್ತೊಂದು ಸಾಕ್ಷಿ ಅಷ್ಟೆ.
  • ಮಹಿಳಾ ಸಬಲೀಕರಣದ ಬಣ್ಣದ ಮಾತುಗಳು ಆಲಂಕಾರಿಕ ಅಥವಾ ಸಾಂಕೇತಿಕ ಕ್ರಿಯೆಗಳಿಗಷ್ಟೇ ಸೀಮಿತವಾಗಿಬಿಡುತ್ತವೆ. ಮಹಿಳಾ ಮೀಸಲು ಮಸೂದೆ ಜಾರಿಯಾದಲ್ಲಿ ಪ್ರಭಾವಿ ಮಹಿಳೆಯರಿಗೆ ನೆರವಾಗುತ್ತದೆ. ಸಾಧಾರಣ ಮಹಿಳೆಯರಿಗೆ ಈ ಸೌಲಭ್ಯ ದಕ್ಕುವುದಿಲ್ಲ ಎಂಬಂತಹ ವಾದ ಇದೆ. ಇದು ಭಾಗಶಃ ಸತ್ಯವೂ ಹೌದು.
  • ಏಕೆಂದರೆ ಕಾನೂನು ಮಾತ್ರದಿಂದಲೇ ಸಮಾಜವನ್ನು ಬದಲಾಯಿಸುವುದು ಸಾಧ್ಯವಿಲ್ಲ ಎಂಬುದು ಕಟು ವಾಸ್ತವ. ಇಂತಹ ಮೀಸಲು ಸೌಲಭ್ಯವನ್ನು ಪ್ರಭಾವಿಗಳು ಆರಂಭದಲ್ಲಿ ಬಳಸಿಕೊಳ್ಳುತ್ತಾರೆಂಬುದು ಸತ್ಯಸ್ಯ ಸತ್ಯ. ಆದರೆ ಕ್ರಮೇಣ ರಾಜಕೀಯ ನಾಯಕತ್ವ ಮಹಿಳೆಯರಲ್ಲಿ ಅರಳುತ್ತದೆ ಎಂಬುದೂ ಅಷ್ಟೇ ನಿಜ. ಪರಿಶಿಷ್ಟ ಜಾತಿ, ಪಂಗಡ ಮೀಸಲು ಸಂದರ್ಭದಲ್ಲೂ ಇಂತಹ ಬೆಳವಣಿಗೆಗಳು ಆಗಿವೆ.
  • ಈ ಮಸೂದೆಯಿಂದ ಮೇಲ್ಜಾತಿ ಹಾಗೂ ಸುಶಿಕ್ಷಿತ ಮಹಿಳೆಯರಿಗೆ ಹೆಚ್ಚು ಲಾಭವಾಗುತ್ತದೆ. ಹೀಗಾಗಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಗೆ ಒಳ ಮೀಸಲಾತಿಗೆ ಅವಕಾಶವಿರಬೇಕೆಂಬ ಒತ್ತಾಯವೂ ದೊಡ್ಡದಾದ ವಿವಾದವೇ ಆಗಿದೆ. ಆದರೆ ಚುನಾವಣಾ ವ್ಯವಸ್ಥೆ ಜಾರಿಗೆ ಬಂದಾಗಲಿಂದಲೂ ಪುರುಷರೇ ಎಲ್ಲಾ ರಾಜಕೀಯ ಅಧಿಕಾರ ಅನುಭವಿಸಿದ್ದಾರೆ.
  • ಹೀಗಿದ್ದಾಗ ಈಗಲೂ ಮಹಿಳೆಯರಿಗೆ ಸಿಗಬೇಕಾದ ಅವಕಾಶಗಳಿಗೆ ನೆಪಗಳನ್ನು ತೆಗೆದು ಅಡ್ಡಗಾಲು ಹಾಕುವ ಪ್ರವೃತ್ತಿ ಮುಂದುವರಿದಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಸತತವಾಗಿ ಮೆರೆದ ಪುರುಷ ಪ್ರಾಧಾನ್ಯ ಕೋಟೆಯನ್ನು ಮಹಿಳಾ ಮೀಸಲು ಮಸೂದೆ ಛಿದ್ರಗೊಳಿಸಲಿದೆ ಎಂಬುದೇ ಇಲ್ಲಿ ನಿಜವಾದ ಚಿಂತೆ. ಇದು ಒಂದು ಬಗೆಯ ಸಾಮಾಜಿಕ, ಮಾನಸಿಕ ಹಾಗೂ ರಾಜಕೀಯ ತಳಮಳ.
  • ಭಾರತೀಯ ರಾಜಕಾರಣವನ್ನು ನಿಕಟವಾಗಿ ಪರಿಶೀಲಿಸಿದಾಗ ಎರಡು ವಿಶಿಷ್ಟ ಪ್ರವೃತ್ತಿಗಳನ್ನು ಗಮನಿಸಬಹುದು. ಮೊದಲಿಗೆ ಆರಂಭದಲ್ಲಿ ಬಂದ ಮಹಿಳೆಯರು ತಮ್ಮ ಕೌಟುಂಬಿಕ ಹಿನ್ನೆಲೆ ಬಳಸಿಕೊಂಡಿರಬಹುದು. ಆಮೇಲೆ ರಾಜಕೀಯ ಕೆರಿಯರ್‌ನ ಪ್ರಕ್ರಿಯೆಯಲ್ಲಿ ತಮ್ಮದೇ ಶೈಲಿಯ ರಾಜಕೀಯ ನಾಯಕಿಯರಾಗಿಯೂ ಅವರು ಹೊರಹೊಮ್ಮಿದ್ದಾರೆ. ಇಂತಹ ಪ್ರವೃತ್ತಿಗೆ ಹೊಳೆಯುವ ಉದಾಹರಣೆಯಾಗಿದ್ದಾರೆ ಇಂದಿರಾ ಗಾಂಧಿ.
  • ದೊಡ್ಡ ರಾಜಕೀಯ ಕೌಶಲದ ನಾಯಕಿ ಅವರು ಎಂಬುದನ್ನು ಅವರ ಟೀಕಾಕಾರರೂ ಒಪ್ಪಿಕೊಳ್ಳುತ್ತಾರೆ. ಹಾಗೆಯೇ ಯಾವುದೇ ಕುಟುಂಬದ ಹಿನ್ನೆಲೆ ಅಥವಾ ಗಾಡ್ ಫಾದರ್‌ಗಳ ನೆರಳಿಲ್ಲದೆ ರಾಜಕೀಯ ನಾಯಕಿಯರಾದವರೂ ಇದ್ದಾರೆ. ಈ ಪ್ರವೃತ್ತಿಗೆ ಮಮತಾ ಬ್ಯಾನರ್ಜಿ ಉದಾಹರಣೆ. ಹೀಗಾಗಿ ‘ದೀದಿ, ಬೀಬಿ, ಬೇಟಿ’ಗೆ ಲಾಭದಾಯಕ ಎಂಬ ಹಿನ್ನೆಲೆಯಲ್ಲಿ ಮಹಿಳಾ ಮೀಸಲು ವಿರೋಧಿಸುವುದು ಸಲ್ಲದು.[[೧]]Bschandrasgr (ಚರ್ಚೆ) ೧೬:೪೮, ೭ ಏಪ್ರಿಲ್ ೨೦೧೬ (UTC)