ಚರ್ಚೆಪುಟ:ಮದನ ಮೋಹನ ಮಾಳವೀಯ

ವಿಕಿಪೀಡಿಯ ಇಂದ
Jump to navigation Jump to search

ನಮಸ್ತೆ, ಉಲ್ಲೇಖಗಳಿಗೆ ಇಂಗ್ಲೀಷ್ ವಿಕಿಪೀಡಿಯ ಕೊಂಡಿ ನೀಡವುದು ಸಾಧ್ಯವಿಲ್ಲ. ಈ ಲೇಖನದ ಇಂಗ್ಲೀಷ್ ಪುಟ ಈಗಾಗಲೇ ಈ ವಿಕಿಗೆ ಭಾಷಾ ಕೊಂಡಿ ಹೊಂದಿದೆ. ಉಲ್ಲೇಖಗಳು ತಂತಾನೇ ಉಲ್ಲೇಖ ವಿಭಾಗದಲ್ಲಿ ಬರುವಂತೆ ಮಾಡಲು ಬಳಸಿರುವ references ಟ್ಯಾಗ್ ಅನ್ನೂ ನೋಡಿ. ಜೊತೆಗೆ ಲೇಖನಗಳ ವಿಭಾಗ ಶೀರ್ಷಿಕೆಗಳಲ್ಲಿ ಅನವಶ್ಯಕ ' ಕೋಲನ್, " ಡಬಲ್ ಕೋಲನ್ ಬಳಸುವ ಅವಶ್ಯಕತೆ ಇಲ್ಲ. ಇಂಗ್ಲೀಷ್ ವಿಕಿಪೀಡಿಯದಲ್ಲಿ, ಪುಸ್ತಕಗಳಲ್ಲಿ ಶೀರ್ಷಿಕೆಗಳನ್ನು ಬಳಸುವ ಶೈಲಿ ಗಮನಿಸಿ. ಕನ್ನಡ ವಾರ್ತಾಪತ್ರಿಕೆಗಳಲ್ಲಿ ಸುದ್ದಿ ಬಂದಿದ್ದಲ್ಲಿ, ಆಯಾ ಪತ್ರಿಕೆಯ ಆನ್‌ಲೈನ್ ಆವೃತ್ತಿಯ ಸರಿಯಾದ ಕೊಂಡಿ ಸೇರಿಸಿ. ಕೇವಲ ಪತ್ರಿಕೆಯ ಹೆಸರು, ದಿನಾಂಕ ನೀಡಿದಲ್ಲಿ ಅದು ಉಲ್ಲೇಖ ಎನಿಸಿಕೊಳ್ಳುವುದಿಲ್ಲ. (ಏಕೆಂದರೆ ವಿಕಿಪೀಡಿಯ ಬಳಸುವ/ಓದುವ ವ್ಯಕ್ತಿಗೆ ಲೇಖನದಲ್ಲಿರುವ ಉಲ್ಲೇಖಗಳು ಇಂಟರ್ನೆಟ್ ಮೂಲಕ ತಕ್ಷಣ ಪರೀಕ್ಷಿಸಲು ಸಾಧ್ಯವಾಗುವಂತಿರಬೇಕು) ಈಗಾಗಲೇ ಆ ಮಾಹಿತಿ ಪತ್ರಿಕೆಯ ಇ-ಆವೃತ್ತಿಯಲ್ಲಿ ಇದ್ದೂ ಉಲ್ಲೇಖವಾಗಿ ಬಳಸಿಕೊಳ್ಳಲಿಲ್ಲ ಎಂದಲ್ಲಿ, ಮತ್ತೆ ಆ ಕೆಲಸವನ್ನು ಯಾರಾದರೂ ಮಾಡಲೇ ಬೇಕಾಗುತ್ತದೆ. (ಕನ್ನಡ ಪುಸ್ತಕಗಳಲ್ಲಿ ಇತ್ತೀಚೆಗೆ ಮಾತ್ರ ಐ.ಎಸ್.ಬಿ.ಎನ್ ಬಳಸುತ್ತಿರುವುದರಿಂದ, ಪುಸ್ತಕದ ಹೆಸರು ಇತ್ಯಾದಿ ಬಳಸಬಹುದು, ಲಭ್ಯವಿದ್ದಲ್ಲಿ ಪುಸ್ತಕದ ಐ.ಎಸ್.ಬಿ.ಎನ್ ನಂಬರ್ ನಮೂದಿಸಿ) Radhatanaya , User:Dr.K.Soubhagyavathi, User:Bschandrasgr ನಿಮ್ಮ ಗಮನಕ್ಕೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೬:೦೭, ೩೧ ಮಾರ್ಚ್ ೨೦೧೫ (UTC)