ಚರ್ಚೆಪುಟ:ಭಯೋತ್ಪಾದನೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಇಂಗ್ಲಿಷನಲ್ಲಿ en:Terrorism ಎಂದು ಇರುವ ಪುಟವನ್ನು ಬಹಳ ಹಿಂದೆಯೇ 'ಚುಟುಕ'ವಾಗಿ ಆರಂಭಿಸಿ ಬಿಟ್ಟಿದ್ದರು. ಅದನ್ನು ನಾನು ಮುಂದುವರಿಸಿದ್ದೇನೆ. ಇಂಗ್ಲಿಷ್‍ನಲ್ಲಿರಬಹುದಾದರೆ ಕನ್ನಡದಲ್ಲಿ ಏಕೆ ಇರಬಾರದು? ಅದರಲ್ಲಿಯೂ ಪತ್ರಿಕಾ ವರದಿಯಿಂದಲೇ ಎಲ್ಲಾ ಆಯ್ದು ಬರೆಯಲಾಗಿದೆ. ಕೆಲವು ಅವರ ಆಯ್ಕೆ ಬೇರೆ ಇರಬಹುದು-ಪಾಶ್ಚಿಮಾತ್ಯ ದೃಷ್ಟಿಕೋನಕ್ಕೆ ಅನುಗುಣವಾಗಿ. ಅದರಲ್ಲಿ ಅನೇಕ ಐತಿಹಾಸಿಕ ದಾಖಲೆಗಳಿವೆ. ಆದ್ದರಿಂದ ಇದನ್ನು ಅಳಿಸುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ. ಇತಿಹಾಸದಲ್ಲಿ ಕೆಡುಕಿನ ವಿಷಯ ಇದ್ದರೆ ಅದನ್ನು ದಾಖಲಿಸುವುದು ತಪ್ಪೇ. ಮೊನ್ನೆ ಮಸೂಲಿನ ಯುದ್ಧದಲ್ಲಿ ಸಅಔಇರಾರುಜನ ಸತ್ತರು. ಇಸ್ಲಾಮಿಕ್ ಸ್ಟೇಟ್ ವಿಭಾಗದಲ್ಲಿ ಇಂಗ್ಲಿಷ್ ನಲ್ಲಿ ಅದನ್ನು ದಾಖಲಿಸುತ್ತಾರೆ - ಅಲ್ಲಿ ಮಾಡಿದರೆ ಸರಿ; ಅದೇ ಇಲ್ಲಿದ್ದರೆ ಅದು ತಪ್ಪು. ಭಯೋತ್ಪಾದನೆ ಒಂದು ಮುಖ್ಯ ವಿಷಯ. ಮುಖ್ಯವಾಗಿ ಪ್ರಸ್ತುತ ಇತಿಹಾಸ ಪತ್ರಿಕಾವರದಿಗಳಿಂದಲೇ ದಾಖಲಾಗುವುದು, ಅದು "ಇಂಗ್ಲಿಷ್ ವಿಕಿಯ ವಿಶೇಷ". ಇದರಲ್ಲಿ ಹಿಂದಿನ ಮುದ್ರಿತ ವಿಶ್ವಕೋಶಕ್ಕೂ ಇದಕ್ಕೂ ಪ್ರಸ್ತುತವಿಷಯಗಳನ್ನು ತೆಗೆದುಕೊಳ್ಳುವುದೇ ವಿಷೇಶವಾದದ್ದು. ನಿಮಗೆ ಬಿಡುವಿದ್ದರ ಕನ್ನಡ ವಿಕಿಯಲ್ಲಿ ಆಧಾರ ಹಾಕದ ಅರ್ಥವಾಗದ ಅನೇಕ ಲೇಖನಗಳಿವೆ. ಅವನ್ನು ಹುಡುಕಬಹುದು. ದಯವಿಟ್ಟು ಅಳಿಸುವುದು ಹವ್ಯಾಸಕ್ಕಾಗಿ ಆಗುವುದು ತರವಲ್ಲವೆಂದು ನ್ನ ವಿನಯ ಪೂರ್ವಕ ಸಲಹೆ.
    • ಮಾನ್ಯ ಗೋಪಲಕೃಷ್ಣರವರೇ ಅಳಿಸುವ ಘನ ಕಾರ್ಯಕ್ಕಿಂತ ಯಾವುದಾದರೂ ಉತ್ತಮ ಲೇಖನ ತಯಾರಿಸಿ ಹಾಕಿದರೆ ಕನ್ನಡ ವಿಕಿಸೇವೆಯನ್ನು ಅರ್ಥಪೂರ್ಣವಾಗಿ ಮಾಡಿದಂತೆ ಆಗುವುದು. ಆಧಾರವಿಲ್ಲದ ಕೊಂಡಿಗಳಿಲ್ಲದ ನೂರಾರು ಲೇಖನಗಳ ಪಟ್ಟಿಯನ್ನು ನಿಮಗೆ ಕೊಡಬಲ್ಲೆ - ನಿಮಗೆ ಅದೇ ಅಳಿಸುವುದೇ ಪ್ರಾಮುಖ್ಯವಾದ ವಿಕಿಸೇವೆ ಅನಿಸಿದರೆ. ತಪ್ಪು ಕಂಡರೆ ತಿದ್ದಿ ಸರಿಪಡಿಸಿ. ವಿಕಿಗೆ ಲೇಖನ ಹಾಕುವವರೇ ಕಡಿಮೆ! ಸಾದ್ಯವಾದರೆ ಉತ್ತಮ ಲೇಖನ ಹಾಕಿ ವಿಕಿ-ಬೆಳೆಸಿ; ನಿರುತ್ಸಾಹಗೊಳಿಸುವುದು ಸರಿಯಲ್ಲ! (ಬೇಜಾರಾದಾಗ ಕಲ್ಲು ಹೊಡೆದಂತೆ)

Bschandrasgr (ಚರ್ಚೆ) ೦೭:೪೭, ೧೧ ಜುಲೈ ೨೦೧೭ (UTC)