ಚರ್ಚೆಪುಟ:ಜ್ಯೋತಿರ್ಲಿಂಗ

ವಿಕಿಪೀಡಿಯ ಇಂದ
Jump to navigation Jump to search

ಜ್ಯೋತಿರ್ಲಿಂಗ ಎಂದರೇನು ?[ಬದಲಾಯಿಸಿ]

ಪ್ರಶ್ನೆ ಕೇಳಿದ ನೀವು ನಿಮ್ಮ ಹೆಸರು ಸಹಿ ಹಾಕಬೇಕು-ಅದುನಿಯಮ , ಇಲ್ಲದಿದ್ದರೆ ಅದನ್ನು ಅಳಿಸಲಾಗುವುದು Bschandrasgr ೧೬:೪೮, ೬ ಅಕ್ಟೋಬರ್ ೨೦೧೩ (UTC)

  • ಬ್ರಹ್ಮ ಮತ್ತು ವಿಷ್ಣು ಇವರಲ್ಲಿ ಯಾರು ಮೇಲೆಂದು ಚರ್ಚೆಯಾದಾಗ ಅವರು ಯಾರು ಮೇಲೆಂದು ಶಿವನನ್ನು ಕೇಳುವರು. ಶಿವನು ಮೂರು ಜ್ಯೋತಿಗಳ (ಬೆಳಕಿನ) ಕಂಬಗಳನ್ನು ಸೃಷ್ಠಿಸಿದನು (ಜ್ಯೋತಿರ್ಲಿಲಿಂಗ). ವಿಷ್ಣು ಮತ್ತು ಬ್ರಹ್ಮ ರಿಗೆ ಅದರ ಮೇಲಿನ ಮತ್ತು ಕೆಳಗಿನ ತುದಿಯನ್ನು ಕಂಡುಹಿಡಿಯಲು ತಿಳಿಸಿದನು. ವಿಷ್ಣುವು ಅದರ (ಮೇಲಿನ) ತುದಿಯನ್ನು ಕಾಣದೇ ಹಿಂತುರುಗಿ ಬಂದು ತನಗೆ ಆ ಲಿಂಗದ ತುದಿ ಸಿಗದಿರುವ ವಿಷಯ ತಿಳಿಸಿದನು. ಆದರೆ ಬ್ರಹ್ಮ ನು ತಾನುನೋಡಿರುವದಾಗಿ ಹೇಳಿದನು. ಈಶ್ವರನು ಎರಡನೇ ಜ್ಯೋತಿಸ್ಥಂಬವಾಗಿದ್ದು ಬ್ರಹ್ಮನು ಸುಳ್ಳು ಹೇಳಿದನೆಂದು ತಿಳಿದು ಅವನಿಗೆ ಪೂಜೆ ಯಿಲ್ಲದಿರಲಿ ಎಂದು ಶಪಿಸಿದನು .ಅದರೆ ಸತ್ಯ ಹೇಳಿದ ವಿಷ್ಣು ವು ಪೂಜೆ ಗೆ ಅರ್ಹನೆಂದು ಹೇಳಿದನು ಆ ಜ್ಯೋತಿಯೇ ಈ ಜ್ಯೋತಿರ್ ಲಿಂಗವಾಗಿದೆ ಎಂದು ಶಿವ ಪುರಾಣ ಹೇಳುತ್ತದೆ.
  • ಶಿವ (ಶಕ್ತಿ) ಎನ್ನುವುದು ಈ ಜಗತ್ತಿನ ಮೂಲ ವಾದ ಪರಬ್ರಹ್ಮ ವೆಂದು ಹೇಳುವ ಪರಂ ಜ್ಯೋತಿ ಅದರ 'ಜ್ಯೋತಿ ಸ್ತಂಬ' ಕ್ಕೆ ಶಿವಲಿಂಗದ ಸಂಕೇತ. ಈ ಹನ್ನೆರಡು ಲಿಂಗಗಳಲ್ಲಿ ಯೋಗಿಗಳಿಗೆ ಆ ದಿವ್ಯ ಜ್ಯೋತಿಯ ಕಿರಣಗಳು ಕಾಣುವುದೆಂದು ಹೇಳುವರು. ಪರಮಹಂಸ ಯೋಗಾನಂದರು ಕೇದಾರದ ಶಿವಲಿಂಗದಲ್ಲಿ ಅದನ್ನು ನೋಡಿದ್ದಾಗಿ ತಮ್ಮ ಆತ್ಮ ಚರಿತ್ರೆ ಯಲ್ಲಿ ಬರೆದಿದ್ದಾರೆ. :Bschandrasgr ೧೬:೪೪, ೬ ಅಕ್ಟೋಬರ್ ೨೦೧೩ (UTC) :ಬಿ.ಎಸ್ ಚಂದ್ರಶೇಖರಹೋಗಿ-> ಸದಸ್ಯ:Bschandrasgr/ಪರಿಚಯ- ಸಾಗರ