ಚರ್ಚೆಪುಟ:ಕನ್ನಡ ಸಾಹಿತ್ಯ ಚರಿತ್ರೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಚರ್ಚಾಪುಟದಲ್ಲಿ ಪ್ರಾರಂಭಿಸಿದ ಚರ್ಚೆಯನ್ನು, ಸಮುದಾಯಕ್ಕೂ ಲಭ್ಯವಾಗಿಸುವ ಆಲೋಚನೆ ಇಂದ ಇಲ್ಲಿಗೆ ರವಾನಿಸುತ್ತಿದ್ದೇನೆ.

ಕನ್ನಡ ಸಾಹಿತ್ಯ ಚರಿತ್ರೆ ಪುಟದ ಬಗ್ಗೆ[ಬದಲಾಯಿಸಿ]

ನಿಮ್ಮ ಸಲಹೆ ಸರಿಯಾದದ್ದು. ಸದ್ಯ ಮೈಸೂರು ಸಂಪಾದನೋತ್ಸವ ಮುಗಿಯುವವರೆಗೆ ಹೀಗೇ ಇರುತ್ತದೆ. ಆಮೇಲೆ ಬದಲಾಯಿಸುತ್ತೇನೆ. ನಿಮ್ಮ ಸಲಹೆಗೆ ಧನ್ಯವಾದಗಳು.--Vishwanatha Badikana (ಚರ್ಚೆ) ೧೦:೨೪, ೧೦ ಜನವರಿ ೨೦೧೬ (UTC)

Vishwanatha Badikana ನಮಸ್ತೆ , ತಾಂತ್ರಿಕವಾಗಿ ಈ ಪುಟವನ್ನು ಹೀಗೆಯೇ ಬಿಡಲು ಸಾಧ್ಯವಿಲ್ಲ, ವಿಕಿ ಕಾರ್ಯನೀತಿಗಳಿಗೆ ಅನುಸಾರವಾಗಿಯೂ ಕೂಡ. ಮುಂದೆ ಲಭ್ಯವಿಲ್ಲದೇ ಹೋಗುವ ಪುಟಗಳನ್ನು ವಿಕಿಯಲ್ಲಿರಿಸುವುದರಿಂದ ಮುಂದೆ ಆಗುವ ತೊಂದರೆಗಳು ಅನೇಕ. ತಾಂತ್ರಿಕ ವಿವರಣೆ ನಿಮಗೆ ಅರ್ಥವಾಗದಿರಬಹುದು. ಆದರೂ, ಕೆಲವೊಂದನ್ನು ಇಲ್ಲಿ ವಿವರಿಸಲು ಯತ್ನಿಸುತ್ತೇನೆ. ವಿಕಿ ಪುಟವನ್ನು ಹತ್ತಾರು ಜನ ಸುಲಭವಾಗಿ ಹಂಚುವ ಸಾಧ್ಯತೆಗಳಿವೆ. ಮುಂದೆ ಹೀಗೆ ಹಂಚಿದ ಪುಟಗಳು ದೊರೆಯದೇ ಹೋದರೆ ಎಲ್ಲರಿಗೂ ಬೇಸರ ಮತ್ತು ಅದನ್ನು ಇಲ್ಲವಾಗಿಸಿದವರನ್ನು ನಿಂದಿಸುವ ಸಾಧ್ಯತೆಗಳೂ ಇವೆ. ಈ ಪುಟವು ಇರಬೇಕಾದ ಜಾಗದಲ್ಲಿದ್ದರೆ, ಅದನ್ನು ಮುಂದೆ ಹುಡುಕಿ ಪಡೆಯುವುದು ಸುಲಭ. ಇದೊಂದು ಕಾರ್ಯಕ್ರಮಕ್ಕೆ ಸಂಬಂಧಿಸಿದ/ಯೋಜನೆಗೆ ಸಂಬಂಧಿಸಿದ ಪುಟವಾದ್ದರಿಂದ ಇದನ್ನು ಮುಖ್ಯ ನೇಮ್‌ಸ್ಪೇಸ್‌ನಲ್ಲಿ ಬಳಸುವುದು ಯೋಗ್ಯವಲ್ಲ ಎನ್ನುವುದು ನನ್ನ ಅನಿಸಿಕೆ. ನಿಮಗೆ ಮತ್ತೊಂದು ಸಲಹೆ. ಪುಟಗಳಿಗೆ ಸಂಬಂಧಿಸಿದ ಚರ್ಚೆಯನ್ನು ಆಯಾ ಪುಟದ ಚರ್ಚಾಪುಟದಲ್ಲೇ ನೆಡೆಸುವುದರಿಂದ ಇತರರಿಗೂ ಪುಟದ ಬಗ್ಗೆ ನೆಡೆಯುವ ಚರ್ಚೆಗಳ ಬಗ್ಗೆ ಅರಿವಾಗುತ್ತದೆ (ಈ ಚರ್ಚೆಯನ್ನು ಅದೇ ಪುಟಕ್ಕೆ ನಾನು ರವಾನಿಸುತ್ತಿದ್ದೇನೆ). ಈ ಪುಟವನ್ನು ನಾನು ಯೋಜನಾ ಪುಟಕ್ಕೆ ನಾಳೆ ಬೆಳಗ್ಗೆ ಸರಿಸುವೆ. ಇವನ್ನು ಇತರರಿಗೆ ಸುಲಭವಾಗಿ ಹಂಚಲು ನೀವು ಪುಟದ ಮೇಲೆ ದೊರೆಯುವ ಕಿರುURL ಬಳಸಿ. ಧನ್ಯವಾದಗಳೊಂದಿಗೆ. -~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೬:೪೭, ೧೦ ಜನವರಿ ೨೦೧೬ (UTC)