ಚರ್ಚೆಪುಟ:ಅಕ್ಕಮಹಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಅಕ್ಕನ ವಯಸ್ಸು[ಬದಲಾಯಿಸಿ]

ಅಕ್ಕ ಬಹಳ ಚಿಕ್ಕ ವಯಸ್ಸಿನಲ್ಲೇ ಲಿಂಗೈಕ್ಯಳಾದಳು ; ಆಗ ಅವಳ ವಯಸ್ಸು ಎಷ್ಟರಬಹುದು ? Bschandrasgr ೧೨:೨೨, ೩೦ ಡಿಸೆಂಬರ್ ೨೦೧೩ (UTC) (ಸದಸ್ಯ:Bschandrasgr/ಪರಿಚಯ-ಬಿ.ಎಸ್ ಚಂದ್ರಶೇಖರ -ಸಾಗರ

ಸಂದೇಹ[ಬದಲಾಯಿಸಿ]

ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ , ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ .ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ , ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವಪೂರ್ಣವಾದ , ನುಡಿ,ನಡೆಗಳೊಂದಾದ ಪರಿಯಲ್ಲಿರುವುದು ಕಂಡು ಬರುತ್ತದೆ .

ಮಾನ್ಯ -‎Dr.K.Soubhagyavathi ಯವರೇ ನೀವು "ಅನುಭಾವಪೂರ್ಣ"ವಾದ ಪದವನ್ನು ಬದಲಿಸಿ ಜೀವನಾನುಭವ ಹಾಕಿರುವುದು ನನಗೆ ಸರಿ ಕಾಣುವುದಿಲ್ಲ  ; 'ಜೀವನಾನುಭವ ', ಪ್ರಾಪಂಚಿಕವಾದುದು, ಅಕ್ಕ ಅದನ್ನು ಮೀರಿದವಳೆಂದು ಅಲ್ಲಮರೇ ಹೇಳುತ್ತಿರುವಾಗ, ಅಲ್ಲದೆ ಅವಳ ಉತ್ತರದಲ್ಲಿ ತಾನು ಮಲ್ಲಿಕಾರ್ಜುನನಲ್ಲಿ ಒಂದಾಗಿರುವುದಅಗಿ ಹೇಳು ತ್ತಿರುವಾಗ - ಅವಳ ಜೀವನಾನುಭವದ ಬಗೆಗೆ ಒತ್ತುಕೊಡುವುದು ಎಷ್ಟು ಸರಿ? ಅದೇಅವಳ ಹಿಂದಿನ ಅನೇಕ ವಚನಗಳು ಜೀವನಾನುಭವದ ಬಗೆಗೆ ಸಾಕ್ಷಿಯಾಗಿವೆ ; ಆದರೆ ಇಲ್ಲಿ -ಎರಡೂ ಕಡೆ ಅನುಭಾವ (ಇಂದ್ರಿಯಾತೀತ ಆತ್ಮಾನುಭವ ) ಪದವೇ ಸರಿಕಾಣುವುದು. -ನನಗೆ ಮೊದಲಿದ್ದ ಪಾಠವೇ ಸರಿ ಎನಿಸುವುದು. ವಿಚಾರ ಮಾಡಿ/ವಿಚಾರಿಸಿ. ಲೇಖನ ನನ್ನದಲ್ಲ. ನನ್ನದು ಸಂಪಾದನೆ ಮಾತ್ರಾ.

```Bschandrasgr ೧೮:೧೦, ೩೦ ಡಿಸೆಂಬರ್ ೨೦೧೩ (UTC) -(ಸದಸ್ಯ:Bschandrasgr/ಪರಿಚಯ-ಬಿ.ಎಸ್ ಚಂದ್ರಶೇಖರ )

೩೧-೧೨-೨೦೧೩[ಬದಲಾಯಿಸಿ]

ಅಕ್ಕಮಹಾದೇವಿ

(talk)

Dr.K.Soubhagyavathi ;

ನಮಸ್ಕಾರ ;ಕ್ಷಮಿಸಿ ; ಮೊದಲಿನ ವಾಕ್ಯಗಳನ್ನು ಬದಲಿಸಿ , ಹೊಸ ವಾಕ್ಯಗಳನ್ನು ಯಾರು ಹಾಕಿದರೆಂದು ತಿಳಿಯುವುದಿಲ್ಲ.

  • ಸರಿ:
  • ಕೊನೆಯ ಸಂಪಾದನೆ ನಿಮದಿದ್ದುರಿಂದ ಹಾಗೆ ಭಾವಿಸಿದೆ. ಆದರೂ ನೀವೂ ವಚನಸಾಹಿತ್ಯದಲ್ಲಿ ಸಾಕಷ್ಟು ಅಧ್ಯಯನ ಮಾಡಿದ್ದೀರಿ ಎಂದು ಭಾವಿಸಿದ್ದೇನೆ; ಇಲ್ಲಿ 'ಅನುಭಾವ' ಪದದ ಬದಲಿಗೆ 'ಜೀವನಾನುಭವ' ಸೇರಿಸಿ ಹೊಸವಾಕ್ಯಗಳನ್ನೇ ಹಾಕಲಾಗಿದೆ. ನನಗೆ ಇಷ್ಟ ವಾಗಲಿಲ್ಲ. ಕಾರಣ, ಅಪ್ರಸ್ತುವಾದರೂ, ಹೇಳಲು ಬಯಸುತ್ತೇನೆ ; - "ಆಕ್ಕ ಒಬ್ಬ ಅನುಭಾವಿ ಶರಣೆ, ಆಕೆ ಚಕ್ಕಂದಿನಿಂದಲೂ ಗುರುಗಳಿಂದ ಸಾಹಿತ್ಯ,, ತತ್ವ (ಶಿವಾದ್ವೈತ) ಕಲಿತು, ಚನ್ನಮಲ್ಲಿಕಾರ್ಜು ನ ಹೆಸರಿನಲ್ಲಿ ಆತ್ಮ ಸಾದನೆಯಲ್ಲಿ ತೊಡಗಿ ೧೫-೧೬ (?) ವಯಸ್ಸಿಗೆಲ್ಲಾ ಆತ್ಮಾನುಭವ ಪಡೆದವಳು ; ಆತ್ಮಾನುಭವಕ್ಕೆ ವಚನಗಳಲ್ಲಿ 'ಅನುಭಾವ' ಎನ್ನುತ್ತಾರೆ ಎಂದು ನನ್ನ ನಂಬುಗೆ. ಅವಳು ಬಯಸಿ ಮದುವೆಯಾಗಲಿಲ್ಲ. ಪುರುಷ ಸುಖ ಕಾಣಳು, ಬಸುರಿಯಾಗಿ ಮಗುವನ್ನು ಹೆತ್ತು ಅದನ್ನು ನೋಡಿ ಆನಂದ ಪಡಲಿಲ್ಲ ; ಮಗುವಿಗೆ ಮೊಲೆಯುಣಿಸಿ ಎತ್ತಿ ಮುದ್ದಾಡಿ ಅನಂದ ಪಡಲಿಲ್ಲ. ಅಕ್ಕಪಕ್ಕದವರ, ನೆಂಟರಿಷ್ಟರ ಸುಖ ಕಷ್ಟಗಳಿಗೆ ಸ್ಪಂದಿಸಿ ಅನುಭವಿಸಲಿಲ್ಲ . ಇದು ಜೀವನಾನುಭವವೆಂದು ನನ್ನ ಭಾವನೆ; ಕೇವಲ ನೋಡಿದ್ದು ಅನುಭವವ ಅಗುವುದಿಲ್ಲ. ಅವಳ ವಚನಗಳಲ್ಲಿ ಜೀವನಾನುಭವದ ವಿಷಯ ಬಂದರೆ ಅದು ಅಂತರಂಗದ ಹುಟ್ಟುಕವಿಯ ಕಾವ್ಯದ ಕಾಣ್ಕೆ . ಅವಳು ಹುಟ್ಟು ಕವಯತ್ರಿ. ಆದರೆ ಅನುಭಾವಿ ಶಿವಶರಣೆ. ಚಿಕ್ಕ ವಯಸ್ಸಿನಲ್ಲೇ ಆತ್ಮಾನುಭೂತಿ ಪಡೆದು (೧೭-೧೮ ಪ್ರಾಯ ?) ಕಲ್ಯಾಣಕ್ಕೆ ಹೋಗಿ ಅಲ್ಲಿ ಸ್ವಲ್ಪ ದಿನವಿದ್ದು ಶ್ರೀಶೈಲಕ್ಕೆ ಹೋಗಿ ಅಲ್ಪ ಕಾಲದಲ್ಲೇ ಸಮಾಧಿಸ್ಥಿತಿ ತಲುಪಿ ಶಿವೈಕ್ಯಳಾದಳೆಂದು (ಪ್ರಾಯ ೨೦-೨೧?) ನನ್ನ ಅನಿಸಿಕೆ ; ಕಲ್ಯಾಣಕ್ಕೆ ಬರುವಾಗಲೇ ಅವಳು ದೇಹ ಭಾವನೆಯಿಂದ / ಪ್ರಾಪಂಚಕ ಭಾವನೆಯಿಂದ ಆಚೆ ಶಿವ ತತ್ವದಲ್ಲಿ (ಪರ ಬ್ರಹ್ಮ) ಮುಳುಗಿದ್ದಳೆಂದು ನನ್ನ ಅನಿಸಿಕೆ. ಆ ಕಾಲದಲ್ಲಿ ಅವಳನ್ನು ಅರಿಯಬಲ್ಲವರು -ಅಲ್ಲಮ, ಚನ್ನಬಸವಣ್ಣ, ಮಾತ್ರಾ ಎಂಬುದು. ಅವಳ-ಅವರ ಮಾತಿನಿಂದ ತಿಳಿಯುವುದು. ಬಸವಣ್ಣ ಇನ್ನೂ ಪ್ರಾಪಂಚಿಕ ಕಾರ್ಯವಿದ್ದುದರಿಂದ (ಅರಿತೂ) ಪ್ರಾಪಂಚಿಕನಾಗಿಯೆ ಇದ್ದನೆಂದು ನನ್ನ ಅನಿಸಿಕೆ .
ಆ ಪಾಠ ಬದಲಿಸಿದವರು ದಯಮಾಡಿ ಇದನ್ನು ಓದಲಿ ಎಂದು ಇಲ್ಲಿ ದಾಖಲಿಸಿದ್ದೇನೆ.
Bschandrasgr ೧೦:೨೨, ೩೧ ಡಿಸೆಂಬರ್ ೨೦೧೩ (UTC)

ಪ್ರತಿಕ್ರಿಯೆ[ಬದಲಾಯಿಸಿ]

--