ವಿಷಯಕ್ಕೆ ಹೋಗು

ಚಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಟ್ಟ ಎಂದರೆ ಅಡ್ಡಣಿಗೆಯಾಗಿದ್ದು ಇದರ ಮೇಲೆ ಶವ, ಶವಪೆಟ್ಟಿಗೆ ಅಥವಾ ಶವವಿರುವ ಪೆಟ್ಟಿಗೆಯನ್ನು ಅಂತಿಮದರ್ಶನಕ್ಕಾಗಿ ಅಥವಾ ಸ್ಮಶಾನಕ್ಕೆ ಒಯ್ಯಲು ಅಥವಾ ಸುಡಲು ಒಯ್ಯಲು ಇಡಲಾಗುತ್ತದೆ.[]

ಚಟ್ಟವು ಚಪ್ಪಟೆಯಾದ ಚೌಕಟ್ಟಾಗಿದ್ದು, ಸಾಂಪ್ರದಾಯಿಕವಾಗಿ ಕಟ್ಟಿಗೆಯಿಂದ ತಯಾರಿಸಲಾಗುತ್ತದ ಆದರೆ ಕೆಲವೊಮ್ಮೆ ಇತರ ವಸ್ತುಗಳಿಂದ ತಯಾರಿಸಬಹುದು. ಪ್ರಾಚೀನ ಕಾಲದಲ್ಲಿ ಇದು ಹಲವುವೇಳೆ ಕಟ್ಟಿಗೆಯ ಫಲಕವಾಗಿದ್ದು ಇದರ ಮೇಲೆ ಮೃತರ ದೇಹವನ್ನು ಇಟ್ಟು ಹೊದಿಕೆಯಿಂದ ಮುಚ್ಚಲಾಗುತ್ತಿತ್ತು. ಆಧುನಿಕ ಕಾಲದಲ್ಲಿ, ಕ್ರೈಸ್ತರಲ್ಲಿ ಶವವನ್ನು ಮೊದಲು ಶವಪೆಟ್ಟಿಗೆಯಲ್ಲಿಟ್ಟು ಚಟ್ಟದ ಮೇಲೆ ಒಯ್ಯಲಾಗುತ್ತದೆ ಆದರೆ ಶವಪೆಟ್ಟಿಗೆಯ ಮೇಲಿನ ಮುಚ್ಚಳವನ್ನು ಕೆಲವೊಮ್ಮೆ ತೆರೆದಿಟ್ಟಿರಲಾಗುತ್ತದೆ.

ಚಟ್ಟಗಳು ಸಾಮಾನ್ಯವಾಗಿ ನೋಟದ ಕಾರಣಗಳಿಗಾಗಿ ಅವುಗಳು ಹೊರುವ ಶವಪೆಟ್ಟಿಗೆಗಿಂತ ಹೆಚ್ಚು ಚಿಕ್ಕದಾಗಿರುತ್ತವೆ. ಪರಿಣಾಮವಾಗಿ ಅವು ಬಹಳ ಸ್ಥಿರವಾಗಿರುವುದಿಲ್ಲ, ಮತ್ತು ಸರಿಯಾಗಿ ಕೇಂದ್ರಸ್ಥವಾಗಿ ಕದಡದ ಸ್ಥಿತಿಯಲ್ಲಿರದಿದ್ದರೆ ಮಗುಚಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. The American Heritage Dictionary of the English Language (American Heritage Publishing Co., Inc., New York, 1973), s.v., "bier"


"https://kn.wikipedia.org/w/index.php?title=ಚಟ್ಟ&oldid=972114" ಇಂದ ಪಡೆಯಲ್ಪಟ್ಟಿದೆ