ಚಕ್ರಬಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಸ್ತವಿಕ ಬಡ್ಡಿದರಗಳು

ಚಕ್ರಬಡ್ಡಿಯು ಸಾಲ ಅಥವಾ ಠೇವಣಿಯ ಅಸಲಿಗೆ ಬಡ್ಡಿಯ ಸೇರುವಿಕೆ, ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ ಬಡ್ಡಿಯ ಮೇಲೆ ಬಡ್ಡಿ. ಇದು ಬಡ್ಡಿಯನ್ನು ಸಂದಾಯ ಮಾಡುವ ಬದಲು ಮರುಹೂಡಿಕೆ ಮಾಡುವುದರ ಪರಿಣಾಮವಾಗಿರುತ್ತದೆ. ಹಾಗಾಗಿ ಮುಂದಿನ ಅವಧಿಯಲ್ಲಿ ಬಡ್ಡಿಯನ್ನು ಅಸಲು ಮತ್ತು ಹಿಂದೆ ಸಂಗ್ರಹವಾದ ಬಡ್ಡಿಯ ಕೂಡುಮೊತ್ತದ ಗಳಿಸಲಾಗುತ್ತದೆ. ಹಣಕಾಸು ಮತ್ತು ಅರ್ಥಶಾಸ್ತ್ರದಲ್ಲಿ ಚಕ್ರಬಡ್ಡಿಯು ಸಾಮಾನ್ಯವಾಗಿದೆ..

ಚಕ್ರಬಡ್ಡಿಯು ಸರಳ ಬಡ್ಡಿಯಿಂದ ಭಿನ್ನವಾಗಿದೆ. ಸರಳಬಡ್ಡಿಯಲ್ಲಿ ಹಿಂದೆ ಸಂಗ್ರಹವಾದ ಬಡ್ಡಿಯನ್ನು ಪ್ರಸಕ್ತ ಅವಧಿಯ ಅಸಲಿಗೆ ಸೇರಿಸಲಾಗುವುದಿಲ್ಲ, ಹಾಗಾಗಿ ಹೆಚ್ಚಳವಿರುವುದಿಲ್ಲ. ಸರಳ ವಾರ್ಷಿಕ ಬಡ್ಡಿದರ ಎಂದರೆ ಪ್ರತಿ ಅವಧಿಯಲ್ಲಿನ ಬಡ್ಡಿ ಮೊತ್ತವನ್ನು ಒಂದು ವರ್ಷದಲ್ಲಿರುವ ಅವಧಿಗಳ ಸಂಖ್ಯೆಗಳಿಂದ ಗುಣಿಸಿದಾಗ ಬರುವ ಮೊತ್ತ. ಸರಳ ವಾರ್ಷಿಕ ಬಡ್ಡಿದರವನ್ನು ನಾಮಮಾತ್ರದ ಬಡ್ಡಿದರವೆಂದು ಕೂಡ ಕರೆಯಲಾಗುತ್ತದೆ (ಹಣದುಬ್ಬರಕ್ಕೆ ಸರಿಹೊಂದಿಸದ ಬಡ್ಡಿದರವೆಂದು ತಪ್ಪಾಗಿ ತಿಳಿಯಬಾರದು).

ಬಾಹ್ಯ ಸಂಪರ್ಕಗಳು[ಬದಲಾಯಿಸಿ]