ವಿಷಯಕ್ಕೆ ಹೋಗು

ಚಂದ್ರಿಕಾ (ಸಾಬೂನು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರಿಕಾ ಎಂಬುದು ಔಷಧೀಯ ಗಿಡಮೂಲಿಕೆಗಳಿಂದಾದ ಸಾಬೂನು ಆಗಿದ್ದು, ಇದನ್ನು ಭಾರತದಲ್ಲಿ ಎಸ್‌ವಿ ಪ್ರಾಡಕ್ಟ್ಸ್ ಕಂಪೆನಿಯವರು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ೧೯೪೦ ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ಮೊದಲ ಬಾರಿಗೆ ಕಲ್ಪಿಸಿ ರೂಪಿಸಿದ್ದು ಮತ್ತು ಕಂಪೆನಿಯನ್ನು ಸ್ಥಾಪಿಸಿದ್ದು ಸಿ ಆರ್ ಕೇಶವನ್ ವೈದ್ಯರ್ ಎಂಬವರು. ೨೦೦೪ ರಲ್ಲಿ ಕೇರಳ ಮೂಲದ ಎಸ್‌ ವಿ ಪ್ರಾಡಕ್ಟ್ಸ್‌ಕಂಪೆನಿಯಿಂದ ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್‌ ಕಂಪೆನಿಯವರು ಚಂದ್ರಿಕಾ ಸಾಬೂನು ಬ್ರ್ಯಾಂಡ್ ಅನ್ನು ಕೊಂಡುಕೊಂಡರು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಇರುವ ವಿಪ್ರೋ ಕಂಪೆನಿಯವರು ಸದ್ಯ ಇದರ ಮಾರಾಟವನ್ನು ಮಾಡುತ್ತಿದ್ದಾರೆ.[]

ಪದಾರ್ಥಗಳು

[ಬದಲಾಯಿಸಿ]

ಕಂಪನಿಯ ಪ್ರಕಾರ, ಚಂದ್ರಿಕಾ ಸಾಬೂನಿನಲ್ಲಿರುವ ಪದಾರ್ಥಗಳೆಂದರೆ ತೆಂಗಿನ ಎಣ್ಣೆ, ಕಾಸ್ಟಿಕ್ ಸೋಡಾ (ಹೆಚ್ಚಿನ ಶೇಕಡಾವಾರು), ಕಾಡು ಶುಂಠಿ, ನಿಂಬೆ ಸಿಪ್ಪೆಯ ಎಣ್ಣೆ, ಹೈಡ್ನೋಕಾರ್ಪಸ್ ಎಣ್ಣೆ, ಕಿತ್ತಳೆ ಎಣ್ಣೆ ಮತ್ತು ಶ್ರೀಗಂಧದ ಎಣ್ಣೆ. ಪ್ರತಿಯೊಂದೂ ನಿರ್ದಿಷ್ಟ ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಬಾಹ್ಯ ಸಂಪರ್ಕ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Wipro buys lease rights of Chandrika soap". Business Standard. Business Standard. Retrieved 30 January 2022.