ವಿಷಯಕ್ಕೆ ಹೋಗು

ಚಂದ್ರಶೇಖರ ಪಾಲೆತ್ತಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರಶೇಖರ ಪಾಲೆತ್ತಾಡಿಯವರು ಎಂ.ಮಲ್ಲಿಕಾರ್ಜುನಯ್ಯನವರ ಮುಂದಾಳತ್ವದಲ್ಲಿ ಆಗತಾನೇ ಗರಿಕೆದರುತ್ತಿದ್ದ [] ಮುಂಬಯಿನಿಂದ ಪ್ರಕಟಗೊಳ್ಳುತ್ತಿದ್ದ, ಕರ್ನಾಟಕ ಮಲ್ಲ ಕನ್ನಡ ದೈನಿಕಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡು ೨೫ ವರ್ಷಗಳ ಸೇವೆಸಲ್ಲಿಸಿದ್ದಾರೆ. ಅವರು ಒಬ್ಬ ಒಳ್ಳೆಯಪತ್ರಕರ್ತರು,ಚಿಂತಕರು. ‘ಹೊಸದಿಗಂತ’ ದೈನಿಕದ ಮೂಲಕ ಪತ್ರಿಕಾರಂಗಕ್ಕೆ ಪಾದಾರ್ಪಣೆಮಾಡಿದ ಪಾಲೆತ್ತಾಡಿಯವರು, ಕರ್ನಾಟಕ ಮಲ್ಲವೆಂಬ ದಿನಪತ್ರಿಕೆಯನ್ನು ಮುಂಬಯಿನಗರದಲ್ಲಿ ಹುಟ್ಟಿಹಾಕಿ ಬೆಳೆಸಿದವರು. ಆ ಪತ್ರಿಕೆಯಲ್ಲಿ ಸುಮಾರು ೧೫ ವರ್ಷಗಳ ಕಾಲ ಬರೆಯುತ್ತಿದ್ದ ‘ಇದು ಭಾರತ’[] ಎಂಬ ಅಂಕಣ ಓದುಗರಿಗೆ ಮೆಚ್ಚುಗೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಸಾಕ್ಷರತಾ ಆಂದೋಳನದಲ್ಲಿ ಸಕ್ರಿಯವಾಗಿ ದುಡಿದ ಪಾಲೆತ್ತಾಡಿಯವರು, ವಿದ್ಯಾರ್ಥಿ, ರೈತ ಮತ್ತು ಕಾರ್ಮಿಕ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೀದಿನಾಟಕಗಳಬಗ್ಗೆ ಅವರಿಗೆ ಬಹಳ ಆಸ್ತೆಯಿದೆ.

ಮನೆತನ,ಜನನ, ವಿದ್ಯಾಭ್ಯಾಸ

[ಬದಲಾಯಿಸಿ]

ಚಂದ್ರಶೇಖರರು, ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕೃಷಿಕ ಪರಿವಾರದಲ್ಲಿ ಜನನ. ತಂದೆ ನೇಮಣ್ಣಗೌಡರು, ತಾಯಿ ನೀಲಮ್ಮ ತಂದೆತಾಯಿಗಳಿಬ್ಬರೂ ಅಕ್ಷರಸ್ಥರಲ್ಲ. ಹತ್ತಾರು ಸಂಧಿ,ಪಾಡ್ದನಗಳನ್ನು ಸರಾಗವಾಗಿ ಹೇಳಬಲ್ಲವರು. ತಾಯಿ ರೋಚಕ ಕತೆಗಾರ್ತಿ. ಈ ದಂಪತಿಗಳಿಗೆ ೧೯೬೧ ರ ಫೆಬ್ರವರಿ ೧೪, ರಂದು ಜನಿಸಿದ ಚಂದ್ರಶೇಖರರು,ನಾಲ್ಕನೆಯವರು.

  1. ಅಣ್ಣಯ್ಯ
  2. ರಾಮಣ್ಣ
  3. ಸೇಸಮ್ಮ,
  4. ಚಂದ್ರಶೇಖರ,
  5. ಸೀತಮ್ಮ,
  6. ಮೇದಪ್ಪ

ವಳಾಲಿನ ಪ್ರಾಥಮಿಕಶಾಲೆಯಲ್ಲಿ ಸರಕಾರಿ ಹಿರಿಯ ಕಾಲೇಜಿನ ಶಿಕ್ಷಣ.ಐದು-ಏಳನೇ ತರಗತಿಯಲ್ಲಿ ನಾಟಕದಲ್ಲಿ ಪಾತ್ರಾಭಿನಯ. ಹೈಸ್ಕೂಲು ಮತ್ತು ಕಾಲೇಜ್ ಶಿಕ್ಷಣ ಉಪ್ಪಿನಂಗಡಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಿತು. ಉಪ್ಪಿನಂಗಡಿಯಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ.ಪದವಿ.ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗೆ ೧೦೦-೨೦೦ ಮೀಟರ್, ಓಡುವಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರಿಬಾರಿ ಪಾರಿತೋಷಕಗಳನ್ನು ಪಡೆಯುತ್ತಿದ್ದರು.

ಆರಂಭದ ದಿನಗಳು

[ಬದಲಾಯಿಸಿ]

ಚಂದ್ರಶೇಖರ ಪಾಲೆತ್ತಾಡಿಯವರು, ತಮ್ಮ ಪತ್ರಿಕೋದ್ಯಮದ ಆರಂಭದದಿನಗಳನ್ನು ಮಂಗಳೂರಿನಲ್ಲಿ ಕಳೆದರು. ಎಂ.ಮಲ್ಲಿಕಾರ್ಜುನಯ್ಯನವರ ಸ್ವಾಮ್ಯತ್ವದಲ್ಲಿ ಚಾಲನೆಯಲ್ಲಿದ್ದ, ‘ಮಂಗಳೂರು ಮಿತ್ರ’ 'ಹೊಸದಿಗಂತ' ವೆಂಬ ಪತ್ರಿಕೆಗಳಲ್ಲಿ ಕೆಲಸಮಾಡಿದರು. ಮುಂಬಯಿನಗರದಿಂದ'ಉಯದೀಪ ದೈನಿಕ' ವನ್ನು ಅವರು ಹಾಗೂ ಅವರ ಗೆಳೆಯರು ಕಟ್ಟಿ ಬೆಳೆಸಿದರು. ಕನ್ನಡ ತುಳು ಸಾಹಿತ್ಯ ಸಂಸ್ಕೃತಿಯ ಕುರಿತು ವಿಶೇಷ ಆಸ್ಥೆಯನ್ನು ಹೊಂದಿದ್ದಾರೆ.

ಎಡಪಂಥೀಯ ವಿಚಾರಧಾರೆಗಳು,ಮಾರ್ಕ್ಸ್ ವಾದ

[ಬದಲಾಯಿಸಿ]

ಹೈಸ್ಕೂಲಿನಲ್ಲಿದ್ದಾಗಲೇ,ವಿದ್ಯಾರ್ಥಿ ಸಂಘಟನೆ ಎಸ್.ಎಫ್.ಐ.ಸದಸ್ಯರಾಗಿದ್ದರು. ಕಾರ್ಲ್ ಮಾರ್ಕ್ಸ್ ರ ಎಡಪಂಥೀಯ ಧೋರಣೆಗಳು ಚಂದ್ರಶೇಖರ ಮೇಲೆ ಪ್ರಬಲ ಪರಿಣಾಮ ಬೀರಿದ್ದವು. ಇ.ಎಮ್.ಎಸ್.ನಂಬೂದ್ರಿಪಾದ್ ರಪುಸ್ತಕ, "ನನ್ನ ಬದುಕು", ನಿರಂಜನರ "ಚಿರಸ್ಮರಣೆ" ಮತ್ತು ಮಾಕ್ಸಿಮ್ ಗಾರ್ಕಿಯವರ ಪುಸ್ತಕ "ತಾಯಿ", ಚಂದ್ರಶೇಖರರ ಮೇಲೆ ಪ್ರಬಲವಾದ ಪ್ರಭಾವ ಬೀರಿತು. ಅಣ್ಣ,ಎಲ್ಲಣ್ಣಗೌಡರ ನಾಯಕತ್ವದಲ್ಲಿ ವಳಾಲುಬಳಿ ರೈತರ ಸಂಘಸಭೆಗಳು ನಡೆಯುತ್ತಿದ್ದವು. ಎಲ್ಲರಿಗೂ ಆಣ್ಣನಂತಿದ್ದ ಅವರ ಅಣ್ಣಯ್ಯನವರ ಜಾಥಾಗಳಲ್ಲಿ ಚಂದ್ರಷೇಖರರು ಭಾಗವಹಿಸುತ್ತಿದ್ದರು ಭಾಷಣಸ್ಪರ್ಧೆ, ನಾಟಕ ಆಶುಭಾಷಣ ಸ್ಪರ್ಧೆ, ಅಣ್ಣ ಸಿ.ಪಿ.ಎಂ ಪಕ್ಷದ ಅಡಿಯಲ್ಲಿ ಬರುವ ’ಅಖಿಲ ಭಾರತ ಕಿಸಾನ್ ಸಭಾದ ರೈತ ಸಂಘದ ನಾಯಕ.ಎಸ್.ಎಫ್.ಐ,ಡಿ.ವೈ.ಎಫ್.ಐ, ರೈತಸಂಘ, ಕಮ್ಯುನಿಸ್ಟ್ ಪಕ್ಷ, ಸಿ.ಐ.ಟಿ.ಯು.ವಿನಂಥಹ ಸಮ್ಮೇಳನ,ಪ್ರತಿಭಟನೆ ಜಾಥಾಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮಂಗಳೂರು,ಬೆಳ್ತಂಗಡಿ,ಬಂಟ್ವಾಳ, ಸುಳ್ಯ ತಾಲೂಕಿನ ಯುವ ಯುವಜನ ಒಕ್ಕೂಟರಚನೆ ಮಾಡಿದರು.ದಕ್ಷಿಣ ಕನ್ನಡ ಕಾಸರಗೋಡುಜಿಲ್ಲಾ ಯುವಜನ ಒಕ್ಕೂಟದ ಪುತ್ತೂರು ಘಟಕದ ಅಧ್ಯಕ್ಷ, ವಳಾಲ ಶಾಲೆಯಲ್ಲಿ ತಾಲೂಕುಮಟ್ಟದ ’ಪ್ರತಿಭಾ ವಿಕಾಸ’ ಕಾರ್ಯಕ್ರಮಬಹಳ ಬಹಳ ಹೆಸರುಮಾಡಿತು. ಪುತ್ತೂರು ತಾಲೂಕು ಯುವ ಯುವಜನ ಒಕ್ಕೂಟ ಮತ್ತು ಯುವಕ-ಯುವತಿಮಂಡಲ.

ವೃತ್ತಿಜೀವನ

[ಬದಲಾಯಿಸಿ]

ಸ್ನಾತಕೋತ್ತರ ಪದವಿಯನ್ನು ಮಂಗಳೂರಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ೧೯೮೫-೮೭ ರಲ್ಲಿ ಡಾ.ರಾಘವೇಂದ್ರ ರಾವ್, ರಾಜ್ಯ ಶಾಸ್ತ್ರದ ವಿಭಾಗದ ಅಧ್ಯಕ್ಷ, ಪ್ರಭಾವ ಮಾಡಿದರು. ಅವರೊಬ್ಬ ಮಾರ್ಕ್ಸ್ ವಾದಿ. ಎಂ.ಎ.ಮಾಡಿ ಮನೆಯಲ್ಲಿದ್ದ ಸಮಯದಲ್ಲಿ ಬೀಡಿಕಟ್ಟುವ ಕೆಲಸ ಕಲಿತರು.ಮುಲ್ಕಿ ವಿಜಯಾ ಕಾಲೇಜಿನಲ್ಲಿ ೨ ತಿಂಗಳು ಅರೆಕಾಲಿಕ ಉಪನ್ಯಾಸಕ ವೃತ್ತಿ. ಮಂಗಳೂರು ಮಿತ್ರ ಸಂಜೆಪತ್ರಿಕೆಯಲ್ಲಿ ಕೆಲಸ.

ಮುಂಬಯಿನಲ್ಲಿ

[ಬದಲಾಯಿಸಿ]

ಮಲ್ಲಿಕಾರ್ಜುನಯ್ಯನವರ ಆಣತಿಯಂತೆ ಆಗತಾನೇ ಶುರುವಾಗುತ್ತಿದ್ದ ಮುಂಬಯಿನ ಕರ್ನಾಟಕ ಮಲ್ಲ ದಿನಪತ್ರಿಕೆಯ ಸಿಬ್ಬಂದಿವರ್ಗದವರಲ್ಲೊಬ್ಬರಾಗಿ ಸೇರಿದರು. ಆ ಸಮಯದಲ್ಲಿ ಕರ್ನಾಟಕ ಮಲ್ಲ ಕಚೇರಿ ನೌಕಾ ಪಡೆಯ, ಲಯನ್ ಗೇಟಿನ, ವಿ.ಬಿ.ಗಾಂಧಿ ಮಾರ್ಗದಲ್ಲಿತ್ತು. ೧೯೯೨ ಫೆಬ್ರವರಿ ೧ ರಂದು, ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಕರ್ನಾಟಕ ಮಲ್ಲ ದೈನಿಕ ಪತ್ರಿಕೆಯ ಬಿಡುಗಡೆ ಸಮಾರಂಭವಿತ್ತು ಪತ್ರಿಕೆಯ ಮಾಲಕರು, ಶಿಂಗೋಟೆ ಒಬ್ಬ ಸಮರ್ಥ ಆಡಳಿತಗಾರರು.ಮುಂಬಯಿಗರ ಮುಖವಾಣಿಯಾಗಿರುವ ಕರ್ನಾಟಕ ಮಲ್ಲದ ಒಡೆಯರಾದ ಶಿಂಗೋಟಿಯವರ ಪತ್ರಿಕಾ ಸಮೂಹ : ವಾರ್ತಾಹಾರ್,ಚೌಫೇರ್, ಸಂಜೆ ಮರಾಠಿ ದೈನಿಕ,ಯಶೋಭೂಮಿ ಹಿಂದಿ ದೈನಿಕ,ಪುಣ್ಯನಗರಿ ಮರಾಠಿ ದೈನಿಕ,ತಮಿಳ್ ಟೈಮ್ಸ್, ಎಂಬ ತಮಿಳು ದೈನಿಕ ಹೆಚ್ಚು ಸಮಯ ನಡೆಯಲಿಲ್ಲ. ಪತ್ರಿಕಾ ಸಮೂಹದಲ್ಲಿ ಒಂದುಸಾವಿರಕ್ಕೂ ಹೆಚ್ಚು ಸಿಬ್ಬಂದಿವರ್ಗವಿದೆ.ಮಲ್ಲದಲ್ಲಿ ೩೦ಖಾಯಂ ಸಿಬ್ಬಂದಿಗಳಲ್ಲದೆ,ವರದಿಗಾರರು, ಜಾಹಿರಾತು ಪ್ರತಿನಿಧಿಗಳು ಇದ್ದಾರೆ.

ಪತ್ರಿಕೋದ್ಯಮದ ಏರುಪೇರುಗಳು

[ಬದಲಾಯಿಸಿ]

ಚಂದ್ರಶೇಖರ ಪಾಲೆತ್ತಾಡಿಯವರು, ಕೇವಲ ಕುತೂಹಲದಿಂದ ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆರಿಸಿಕೊಂಡರು. ಪತ್ರಿಕಾಜೀವನದ ಏಳುಬೀಳುಗಳು ಮುರುಳೀಧರ ಶಿಂಗೋಟೆಯವರಮಾಲಿಕತ್ವದಲ್ಲಿ ಬಹಳ ಎತ್ತರಕ್ಕೆ ಬೆಳೆಯಿತು. ಮಲ್ಲದ ೪ ನೇ ಹುಟ್ಟುಹಬ್ಬ ರವೀಂದ್ರ ಕಲಾಕ್ಷೇತ್ರದಲ್ಲಿ. ಪತ್ರಿಕಾಧರ್ಮದ ಅಡಿಯಲ್ಲೇ ಯಾವ ತಾರತಮ್ಯವೂ ಇಲ್ಲದೆ ಮುನ್ನಡೆಸಾಗಿದೆ.

ಕನ್ನಡ ವಾರ್ತಾಪತ್ರಿಕೆ ಮುಂಬಯಿನಲ್ಲಿ

[ಬದಲಾಯಿಸಿ]

ಶಿಕ್ಷಣ ಸುಧಾರಕ ಎಂಬ ಪತ್ರಿಕೆಯಿಂದ [],[]. ಎಂ.ಮಲ್ಲಿಕಾರ್ಜುನಯ್ಯನವರು,'ಆದರ್ಶ ಗಂಡ ಹೆಂಡತಿ' ಮಾಸಪತ್ರಿಕೆ, ಮುಂಬೈಯಲ್ಲಿ `ಕರ್ನಾಟಕ ಮಲ್ಲ' ದಿನಪತ್ರಿಕೆ ಹಾಗೂ ಮಂಗಳೂರಿನಲ್ಲಿ `ಮಂಗಳೂರು ಮಿತ್ರ' ಸಂಜೆ ಪತ್ರಿಕೆ ಆರಂಭಿಸಿ ಯಶಸ್ಸು ಪಡೆದಿದ್ದರು ಪೋಲಿಸ್ ನ್ಯೂಸ್ ಎಂಬ ಕ್ರೈಮ್ ಪತ್ರಿಕೆ ಆರಂಭಿಸಿದರು. ಮಂಗಳೂರು ಮಿತ್ರ ಪತ್ರಿಕೆಯ ಯಶಸ್ಸಿನಿಂದ ಧೈರ್ಯಪಡೆದು ಮುಂಬಯಿನಲ್ಲಿ ಕನ್ನಡ ಪತ್ರಿಕೆ ಆರಂಭಿಸುವ ಸಾಹಸದ ಹೆಜ್ಜೆ ಇಟ್ಟರು .ಪ್ರಸರಣ ಏಜೆನ್ಸಿಯ ಮಾಲೀಕ್ ಶೆಟ್ಟಿಗಾರ್ ಎಂಬುವರ ದ ೯ ಸಾವಿರಕ್ಕೂ ಹೆಚ್ಚು ಪ್ರತಿಗಳು ಪ್ರಸಾರದಲ್ಲಿದ್ದವು. ಮುಂಬಯಿ ಫೋರ್ಟ್ ನಲ್ಲಿದ್ದ ಎಸ್.ಕೆ.ಟೈಲರ್ಸ್ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ, ವಸಂತ್ ಕುಮಾರ್ ಸುವರ್ಣ, ಹೇಮ ರಾಜ್ ಕರ್ಕೇರ, ಮತ್ತು ಶೆಟ್ಟಿಗಾರ್ ನೆರವಿನಿಂದ. ಪತ್ರಿಕೆ ಬಿಡುಗಡೆ ಸಮಾರಂಭ ಕರ್ನಾಟಕ ಸಂಘದ ಡಾ.ವಿಶ್ವೇಶ್ವರಯ್ಯ ಹಾಲ್ ನಲ್ಲಿ, ೧೯೯೨, ಫೆಬ್ರವರಿ ೧ ರಂದು ನೆರವೇರಿತು.

ಪರಿವಾರ

[ಬದಲಾಯಿಸಿ]

ಚಂದ್ರಶೇಖರ ಪಾಲೆತ್ತಾಡಿಯವರು, ೧೯೯೮ ಜನವರಿ ೨೩ ರಂದು ಕುಸುಮಾರನ್ನು ವಿವಾಹವಾದರು. ಕುಸುಮಾರವರು, ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಕುಕ್ಕಳ ಗ್ರಾಮದ ಹೊಸಮನೆ ಉಗ್ಗಪ್ಪ ಗೌಡ ಮತ್ತು ಸೇಸಮ್ಮ ದಂಪತಿಗಳ ೭ ಮಕ್ಕಳಲ್ಲಿ ಕೊನೆಯವರು. ಚಂದ್ರಶೇಖರ ಪಾಲೆತ್ತಾಡಿ-ಕುಸುಮ ದಂಪತಿಗಳಗೆ ಇಬ್ಬರು ಮಕ್ಕಳು. ಮಗಳು ದೀಪಾ, ಹಾಗೂ ಮಗ, ರೋಶನ್.

ಕರ್ನಾಟಕ ಮಲ್ಲ ದೈನಿಕದ ಬೆಳ್ಳಿಹಬ್ಬ

[ಬದಲಾಯಿಸಿ]

ಈ ಸಮಯದಲ್ಲಿ ಕರ್ನಾಟಕ ಮಲ್ಲ ಪತ್ರಿಕೆಯನ್ನು ಕಟ್ಟಿಬೆಳೆಸಿದ ಚೇತನವಾದ ಪಾಲೆತ್ತಾಡಿಯವರು ಪತ್ರಿಕೋದ್ಯಮದಲ್ಲಿ ಮಾಡಿದ ಸೇವೆಗಳನ್ನು ಗುರುತಿಸಿ ಗೌರವಗಳನ್ನು ಸಲ್ಲಿಸಲಾಯಿತು.

ಗೌರವಗಳು

[ಬದಲಾಯಿಸಿ]
  1. ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ಹಮ್ಮಿಣಿಯೊಂದನ್ನು ಅರ್ಪಿಸಲಾಯಿತು.
  2. ಅನೇಕ ಸಂಘ ಸಂಸ್ಥೆಗಳು ಪಾಲೆತ್ತಾಡಿ ಅವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.

ನಿರ್ವಹಿಸುತ್ತಿರುವ ಹುದ್ದೆಗಳು

[ಬದಲಾಯಿಸಿ]
  • ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆಲಸನಿರ್ವಹಿಸುತ್ತಿದ್ದಾರೆ.[]

ಪಾಲೆತ್ತಾಡಿ ಅವರ ಜೀವನ ಸಾಧನೆಯನ್ನು ಬಿಂಬಿಸುವ ಅಭಿನಂದನ ಗ್ರಂಥ ‘ಆಪ್ತಮಿತ್ರ’ದ ಪ್ರಧಾನ ಸಂಪಾದಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ, ಸಂಪಾದಕರಾಗಿ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ.ಎಸ್.ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕರಾಗಿ ಕಲಾಸೌರಭದ ನಿರ್ದೇಶಕ, ಕಲಾವಿದ ಪದ್ಮನಾಭ ಸಸಿಹಿತ್ಲು ಅವರು ಕಾರ್ಯನಿರ್ವಹಿಸಿದರು.[]

ಪಾಲೆತ್ತಾಡಿಯವರಿಗೆ,ಅಭಿನಂದನಾ ಸಮಾರಂಭ

[ಬದಲಾಯಿಸಿ]

೧೩, ಮಾರ್ಚ್, ೨೦೧೭ ರಂದು,ರ್ನಾಟಕ ಮಲ್ಲ ದೈನಿಕದ ಹಿರಿಯ ಸಂಪಾದಕ, ಚಂದ್ರಶೇಖರ ಪಾಲೆತ್ತಾಡಿಯವರಿಗೆ [] ಮುಂಬಯಿನ ಕನ್ನಡಿಗರು ಒಂದುದಿನದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಅದೇ ಸಮಯದಲ್ಲಿ ಪಾಲೆತ್ತಾಡಿಯವರ ಅಭಿನಂದನಾ ಗ್ರಂಥ, 'ಆಪ್ತಮಿತ್ರ' (ಆತ್ಮಕಥನ) ದ ಬಿಡುಗಡೆಯಾಯಿತು][]

ಪ್ರಶಸ್ತಿಗಳು

[ಬದಲಾಯಿಸಿ]

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ (ಹೊರನಾಡು ಕನ್ನಡಿಗ) ಚಂದ್ರಶೇಖರ ಪಾಲೆತ್ತಾಡಿಯವರಿಗೆ ಸನ್ಮಾನ []

ಉಲ್ಲೇಖಗಳು

[ಬದಲಾಯಿಸಿ]
  1. 'ಪೊಲೀಸ್ ನ್ಯೂಸ್' ಪತ್ರಿಕೆಯ ಮೂಲಕ ಕನ್ನಡದಲ್ಲಿ ಕ್ರೈಂ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದ ಹಿರಿಯ ಪತ್ರಕರ್ತ ಎಂ.ಮಲ್ಲಿಕಾರ್ಜುನಯ್ಯನವರು,೨೦೦೫ ರಲ್ಲಿ, ಬೆಂಗಳೂರಿನಲ್ಲಿ ನಿಧನರಾದರು
  2. 'ಇದು ಭಾರತ ಅಂಕಣ', ೨೫,ಡಿಸೆಂಬರ್, ೨೦೧೬,ಕರ್ನಾಟಕಮಲ್ಲ-ಚಂದ್ರಶೇಖರ ಪಾಲೆತ್ತಾಡಿ.ಶಿವಾಜಿ ಸ್ಮಾರಕದ ರಾಜಕೀಯ[ಶಾಶ್ವತವಾಗಿ ಮಡಿದ ಕೊಂಡಿ],
  3. ನ್ಯೂಸ್,' ಪತ್ರಿಕೆಯ ಮೂಲಕ ಕನ್ನಡದಲ್ಲಿ ಕ್ರೈಂ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದ ಹಿರಿಯ ಪತ್ರಕರ್ತ ಎಂ.ಮಲ್ಲಿಕಾರ್ಜುನಯ್ಯನವರು,೨೦೦೫ ರಲ್ಲಿ, ಬೆಂಗಳೂರಿನಲ್ಲಿ ನಿಧನರಾದರು
  4. [೧]
  5. ಸೆಪ್ಟೆಂಬರ್,೨೦೧೬, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ-8ನೇ ವಾರ್ಷಿಕ ಮಹಾಸಭೆ; ಸದಸ್ಯರ ಮೆಚ್ಚುಗೆಯೇ ಸಂಘದ ಸಾರ್ಥಕತೆ: ಚಂದ್ರಶೇಖರ ಪಾಲೆತ್ತಾಡಿ ಕನ್ನಡ ಲೇಖಕರ ಸಂಘ, ಮಹಾರಾಷ್ಟ್ರ, ೮ನೇ ಅಧಿವೇಶನ[ಶಾಶ್ವತವಾಗಿ ಮಡಿದ ಕೊಂಡಿ]
  6. ನಮ್ಮ ಮುಂಬಯಿ.ಕಾಂ[ಶಾಶ್ವತವಾಗಿ ಮಡಿದ ಕೊಂಡಿ]
  7. udayavani, ಚಂದ್ರಶೇಖರ ಪಾಲೆತ್ತಾಡಿಯವರಿಗೆ ಅಭಿನಂದನ ಸಮಾರಂಭ 14-03-2017[ಶಾಶ್ವತವಾಗಿ ಮಡಿದ ಕೊಂಡಿ]
  8. [http://www.karnatakamalla.com/Details.aspx?id=18796&boxid=15008[ಶಾಶ್ವತವಾಗಿ ಮಡಿದ ಕೊಂಡಿ] ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಸಮಿತಿಯ ಆಶ್ರಯದಲ್ಲಿ "ಮಲ್ಲ"ದ ಸಂಪಾದಕ,ಚಂದ್ರಶೇಖರ ಪಾಲೆತ್ತಾಡಿಯವರಿಗೆ ಅದ್ಧೂರಿಯ ಸನ್ಮಾನ, ಹಾಗೂ ಪತ್ರಿಕೆಯ ಮಾಲಕ, ಪ್ರವೀಣ್ ಶಿಂಗೋಟಿಯವರಿಗೆ ಗೌರವಾರ್ಪಣೆ]
  9. "ಮುಂಬಯಿ ಪತ್ರಕರ್ತ ಪಾಲೆತ್ತಾಡಿ ಅವರಿಗೆ ಮಂಗಳೂರಿನಲ್ಲಿ ಅಭಿನಂದನೆ. ಸುದ್ದಿ Live News Information, ನವೆಂಬರ್,೨೨,೨೦೨೧". Archived from the original on 2021-11-23. Retrieved 2021-11-23.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. ಚಂದ್ರಶೇಖರ ಪಾಲೆತ್ತಾಡಿಯವರ ಜೀವನ ವಿವರಗಳ ಆಕರ : "ನಾನು..ನನ್ನ ಸ್ವಗತ"..(ಚಂದ್ರಶೇಖರ ಪಾಲೆತ್ತಾಡಿ ಆತ್ಮ ಕಥೆ) ಪ್ರಕಟಣೆ : ಪಾಲೆತ್ತಾಡಿ ಅಭಿನಂದನ ಸಮಿತಿ, ಹಾಗೂ ಮುಂಬೈ,ಕನ್ನಡವಿಭಾಗ, ಮುಂಬೈವಿಶ್ವವಿದ್ಯಾಲಯ
  2. [ಶಾಶ್ವತವಾಗಿ ಮಡಿದ ಕೊಂಡಿ] ಕರ್ನಾಟಕ ಮಲ್ಲ ೨೪, ಡಿಸೆಂಬರ್, ೨೦೧೭, ಪು.೯, ಮುಂಬಯಿ ಸಾಂಸ್ಕ್ರುತಿಕ ಲೋಕದ ಚಿಣ್ಣರ ಬಿಂಬ-ಚಂದ್ರಶೇಖರ ಪಾಲೆತ್ತಾಡಿ, 'ಇದು ಭಾರತ ಅಂಕಣ'
  3. ಜನರಲ್ಲಿ ಜಾಗೃತಿ ಮೂಡಿಸುವುದು ಪತ್ರಿಕೆಗಳ ಉದ್ದೇಶವಾಗಿರಬೇಕು. ಚಂದ್ರಶೇಖರ ಪಾಲೆತ್ತಾಡಿ,ಕರ್ನಾಟಕ ಮಲ್ಲ, ೨೭,ಫೆಬ್ರವರಿ, ೨೦೧೯, ಪು.೩