ವಿಷಯಕ್ಕೆ ಹೋಗು

ಚಂದ್ರಮುಕುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hoopoe
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
Upupidae

Leach, 1820
ಕುಲ:
Upupa

Linnaeus, 1758
ಪ್ರಜಾತಿ:
U. epops
Binomial name
Upupa epops
Linnaeus, 1758
Approximate range.
    nesting     resident (all year)     wintering

ಚಂದ್ರಮುಕುಟವನ್ನು ಆಂಗ್ಲ ಭಾಷೆಯಲ್ಲಿ 'ಹೂಪು' ಅಥವಾ 'ಹೂಪೋ' ಎಂದು ಕರೆಯುತ್ತಾರೆ. ಇದು ಉಪುಪಿಡೆ ಕುಟುಂಬದ ಏಕೈಕ ಉಪಲಬ್ಧ ಪ್ರಭೇಧ. ಇದರ ವೈಜ್ಞಾನಿಕ ನಾಮ Upupa epops. ಈ ಪ್ರಭೇದದಲ್ಲಿ ಇನ್ನೂ ಒಂಭತ್ತು ಉಪಪ್ರಭೆದಗಳನ್ನು ಗುರುತಿಸಲಾಗಿದೆ. ಇವು ಆಫ್ರಿಕಾ, ಯುರೋಪ್ ಹಾಗೂ ಏಷ್ಯಾ ಖಂಡಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಇದರ ಕೂಗು “ಉಪೋ" “ಉಪೋ" “ಉಪೋ ತರಹ ಇರುವುದರಿಂದ ಇದಕ್ಕೆ “ಹೂಪೋ” ಎಂದು ಲ್ಯಾಟಿನ್ ಹಾಗೂ ಆಂಗ್ಲ ಭಾಷೆಗಳಲ್ಲಿ ಹೆಸರು ಬಂದಿತು. ಇದರ ಮುಖ್ಯ ವೈಶಿಷ್ಟ್ಯ ಇದರ ತಲೆಯ ಮೇಲೆ ಕಿರೀಟದಂತೆ ಎದ್ದು ಕಾಣುವ ಕಂದು ಹಾಗೂ ಕಪ್ಪು ಮಿಶ್ರಿತ ಗರಿಗಳು.

Upupa epops

ಚಂದ್ರಮುಕುಟ ಒಂದು ಮಧ್ಯಮ ಗಾತ್ರದ ಪಕ್ಷಿ; ಇದು 25-33 ಸೆ.ಮಿ. ವರೆಗೆ ಬೆಳೆಯುತ್ತದೆ. ಇದರ ರೆಕ್ಕೆಗಳು ಸುಮಾರು 44-50 ಸೆ.ಮೀ ವರೆಗೆ ಬೆಳೆಯುತ್ತದೆ. ಇದರ ಕೊಕ್ಕು ತುಸು ಬಗ್ಗಿದಂತೆ ಕಾಣುತ್ತದೆ. ಇದರ ಹಾರಾಟ ಒಂದು ತರಹ ವಿಚಿತ್ರವಾಗಿದ್ದು ನೋಡಲು ಒಂದು ದೊಡ್ಡ ಚಿಟ್ಟೆ ಹಾರುವಂತೆ ಇರುತ್ತದೆ. ಇವು ಋತುವಿಗೆ ಅನುಗುಣವಾಗಿ ಕೆಲವೊಮ್ಮೆ ವಲಸೆ ಹೋಗುತ್ತವೆ. ಸಮುದ್ರ ಮಟ್ಟದಿಂದ 6400 ಮಿ. ಎತ್ತರದ ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಕೂಡ ಇವು ಇದರ ವಲಸೆ ಹೋಗುವ ಕಾಲದಲ್ಲಿ ಹಾರಾಡುವುದು ವರದಿಯಾಗಿವೆ. ಇವು ಬಿಸಿಲಿನಲ್ಲಿ ಹಾಗೂ ಮರಳಿನ ಮೇಲೆ ಉರುಳಾಡುತ್ತಾ ಬಿಸಿಲು ಕಾಯಿಸುವುದನ್ನು ನೋಡಬಹುದು.

ಇದರ ಸಂತಾನೋತ್ಪತ್ತಿಯ ವರ್ತನೆ ನೋಡಲು ರೋಚಕವಾಗಿರುತ್ತದೆ. ಗಂಡು ಹಕ್ಕಿಗಳು ತಮ್ಮನ್ನು ಹೆಣ್ಣು ಹಕ್ಕಿಗಳಿಗೆ ಪ್ರದರ್ಶಿಸಲು ಜಾಹೀರುಪಡಿಸುತ್ತಾ  ಕೂಗುತ್ತಲೇ ಇರುತ್ತವೆ. ಬೇರೆ ಗಂಡು ಹಕ್ಕಿಗಳ ನಡುವೆ ಕದನ ಸಾಮಾನ್ಯ, ಹಾಗೆಯೇ ಅಪಾಯಕಾರಿ ಕೂಡ. ಒಮ್ಮೊಮ್ಮೆ ತಮ್ಮ ಕೊಕ್ಕಿನಲ್ಲಿ ಕಡಿದರೆ ಬೇರೆ ಗಂಡು ಹಕ್ಕಿಗಳ ದೃಷ್ಟಿಹೀನವಾಗಬಹುದು. ಗಂಡು ಹೆಣ್ಣಿನ ಮಿಲನವಾದ ನಂತರ ಹೆಣ್ಣು ಮೊಟ್ಟೆಗಳನ್ನಿಟ್ಟು ಅವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸುತ್ತವೆ.  ಇವು ಸಾಮಾನ್ಯವಾಗಿ ಗೂಡು ಕಟ್ಟುವುದಿಲ್ಲ, ಆದರೆ ಮರಗಳ ಪೊಟರೆಗಳನ್ನು ತಮ್ಮ ಗೂಡುಗಳನ್ನಾಗಿ ಮಾಡಿಕೊಳ್ಳುತ್ತವೆ. ಒಮ್ಮೊಮ್ಮೆ ಪೊಟರೆಗಳನ್ನು ಒಣ ಎಲೆಗಳಿಂದ, ಕಸಕಡ್ಡಿಗಳಿಂದ ಮುಚ್ಚಲೂ ಬಹುದು, ಅಥವಾ ಹಾಗೆಯೇ ಬಿಡಬಹುದು. 18 ದಿವಸಗಳ ಕಾವಿನ ನಂತರ ಮರಿಗಳು ಹೊರಬರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Birdlife International (2008). "Upupa epops". Retrieved 10 Feb 2009.