ಘೂಮರ್

ವಿಕಿಪೀಡಿಯ ಇಂದ
Jump to navigation Jump to search
ಘೂಮರ್ ಪ್ರದರ್ಶಿಸುವ ರಜಪೂತ ಮಹಿಳೆ

ಘೂಮರ್ ರಾಜಸ್ಥಾನದ ಸಾಂಪ್ರದಾಯಿಕ ಜಾನಪದ ನೃತ್ಯವಾಗಿದೆ. ಭಿಲ್ ಬುಡಕಟ್ಟಿನ ಜನರು ಈ ನೃತ್ಯವನ್ನು ಮಾಡುತ್ತಿದ್ದರು, ನಂತರ ರಾಜಸ್ಥಾನದ ಇತರ ಸಮುದಾಯಗಳು ಇದನ್ನು ಅಳವಡಿಸಿಕೊಂಡವು. ಈ ನೃತ್ಯವನ್ನು ಮುಖ್ಯವಾಗಿ ಘಾಗ್ರಾ ಚೋಲಿ ಧರಿಸಿಕೊಂಡು ಮಾಡುತ್ತಾರೆ. ಘೂಮ್ನ ಎಂಬ ಪದವು ನೃತ್ಯಗಾರರು ವೇಗವಾಗಿ ಸುತ್ತುವುದನ್ನು ವಿವರಿಸುತ್ತದೆ ಮತ್ತು ಇದು ಘೂಮರ್ ಪದದ ಆಧಾರವಾಗಿದೆ. ೧೯೮೬ ರಲ್ಲಿ ಘೂಮರ್ ಜಾನಪದ ನೃತ್ಯವನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮಹಾರಾಣಿ ರಾಜ್ಮಾತಾ ಗೋವರ್ಧನ್ ಕುಮಾರಿ ಎಂಬವರು 'ಗಂಗೌರ್ ಘೂಮರ್ ನೃತ್ಯ ಅಕಾಡೆಮಿ'ಯನ್ನು ಸ್ಥಾಪಿಸಿದರು. ೨೦೦೭ರಲ್ಲಿ ಭಾರತ ಸರ್ಕಾರವು ಕಲೆಗಳಿಗೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಪದ್ಮಶ್ರೀ ಗೌರವವನ್ನು ನೀಡಿದೆ.[೧][೨]

ಮೂಲ[ಬದಲಾಯಿಸಿ]

ಘೂಮರ್ ಭಿಲ್ ಬುಡಕಟ್ಟು ಜನಾಂಗದ ಸಾಂಪ್ರದಾಯಕ ನೃತ್ಯವಾಗಿದೆ. ರಜಪೂತ ರಾಜರ ಆಳ್ವಿಕೆಯ ಅವಧಿಯಲ್ಲಿ ರಾಜಸ್ಥಾನದಲ್ಲಿ ಘೂಮರ್ ನೃತ್ಯವು ಜನಪ್ರಿಯವಾಗಿತ್ತು.[೩]

ನೃತ್ಯ[ಬದಲಾಯಿಸಿ]

ಇದು ಸಾಮಾನ್ಯವಾಗಿ ಮಹಿಳೆಯರು ಮಾಡುವ ನೃತ್ಯ. ಘೂಮರ್ ನೃತ್ಯ ವನ್ನು ಸಾಮಾನ್ಯವಾಗಿ ಮದುವೆ, ಉತ್ಸವ ಹಾಗೂ ಧಾರ್ಮಿಕ ಸಂದರ್ಭಗಳಲ್ಲಿ ಮಾಡುತ್ತಾರೆ. ಇದು ಕೆಲವೊಮ್ಮೆ ಗಂಟೆಗಳವರೆಗೆ ಇರುತ್ತದೆ.[೪][೫]

ಘೂಮರ್ ಹಾಡುಗಳು[ಬದಲಾಯಿಸಿ]

ಘೂಮರ್ ಸಾಂಪ್ರದಾಯಿಕ ನೃತ್ಯವಾಗಿರುವುದರಿಂದ 'ಗೊರ್ಬಂಡ್', 'ಪೊಡಿನಾ', 'ರುಮಾಲ್' ಮತ್ತು 'ಮೋರ್ ಬೋಲೆ ರೆ' ಮೊದಲಾದ ಹಾಡುಗಳನ್ನು ಒಳಗೊಂಡಿದೆ.[೬]

 • ಜೈಪುರ ಜಾವೊ ತೊ- ಸಾಂಪ್ರದಾಯಿಕ ರಾಜಸ್ಥಾನಿ ಜಾನಪದ ನೃತ್ಯ
 • ಚಿರ್ಮಿ ಮ‍್ಹಾರಿ ಚಿರ್ಮಾಲಿ
 • ಆವೇ ಹಿಚ್ಕಿ- ಸಾಂಪ್ರದಾಯಿಕ ರಾಜಸ್ಥಾನಿ ಘೂಮರ್ ಹಾಡು
 • ಮ್ಹಾರಿ ಘೂಮರ್ ಚೈ ನಖ‍್ರಲಿ
 • ಜಾವಾಯಿ ಜಿ ಪಾವ್ನಾ- ರಾಜಸ್ಥಾನಿ ಜಾನಪದ ಗೀತೆ
 • ತಾರಾ ರಿ ಚುಂಡಡಿ
 • ಮ್ಹಾರೊ ಗೊರ್ಬಂಡ್ ನಖ್ರಾಲೋ
 • ನೈನಾ ರಾ ಲೋಬಿ
 • ಔರ್ ರಂಗ್ ದೇ

ಜನಪ್ರಿಯ ಸಂಸ್ಕೃತಿ[ಬದಲಾಯಿಸಿ]

ಘೂಮರ್ ನೃತ್ಯವು ೨೦೧೮ರಲ್ಲಿ ರಜಪೂತ ರಾಣಿ ಪದ್ಮಿನಿ (ಪದ್ಮಾವತಿ)ಯವರನ್ನು ಆಧರಿಸಿದ ಪದ್ಮಾವತ್ ಸಿನಿಮಾದ ಮೂಲಕ ಗಮನ ಸೆಳೆಯಿತು. ಈ ಹಾಡನ್ನು ವಿಮರ್ಶಕರು ಮತ್ತು ಅಭಿಮಾನಿಗಳು ಪ್ರಶಂಸಿಸಿದ್ದಾರೆ.[೭]

ಮದುವೆಯಲ್ಲಿ ಘೂಮರ್ ಪ್ರದರ್ಶಿಸುವ ಮಹಿಳೆಯರು
ಘೂಮರ್ ಪ್ರದರ್ಶನ ನೀಡುವ ರಜಪೂತ ಮಹಿಳೆ

ಉಲ್ಲೇಖಗಳು[ಬದಲಾಯಿಸಿ]

 1. https://www.utsavpedia.com/cultural-connections/ghoomar-of-marwar-inspiring-indian-dressing-for-centuries/
 2. https://www.business-standard.com/article/news-ians/ghoomar-in-top-10-list-of-world-s-most-amazing-local-dances-113072300716_1.html
 3. http://indiavivid.com/ghoomar-traditional-folk-dance-rajasthan/
 4. https://web.archive.org/web/20120518082113/http://www.dancesofindia.co.in/folk-dances-india/rajasthan/ghoomer.html
 5. https://www.india9.com/i9show/-Rajasthan/Ghoomar-26321.htm
 6. https://www.gosahin.com/places-to-visit/ghoomar/
 7. https://www.browngirlmagazine.com/2017/12/history-symbolism-ghoomar/
"https://kn.wikipedia.org/w/index.php?title=ಘೂಮರ್&oldid=1018971" ಇಂದ ಪಡೆಯಲ್ಪಟ್ಟಿದೆ