ಗ್ಲೋರಿಯ ಮಾಕಪಾಗಲ್-ಅರ್ರೋಯೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ಲೋರಿಯ ಮಾಕಪಾಗಲ್-ಅರ್ರೋಯೊ

ಗ್ಲೋರಿಯ ಮಾಕಪಾಗಲ್-ಅರ್ರೋಯೊ ೨೦೦೧-೨೦೧೦ರ ಅವಧಿಗೆ ಫಿಲಿಪ್ಪೀನ್ಸ್ ದೇಶದ ಅಧ್ಯಕ್ಷರಾಗಿ ಸೇವೆ ಗೈದವರು. ಈ ಹುದ್ದೆಗೆ ಏರಿದ ೨ ನ ಮಹಿಳೆ ಗ್ಲೋರಿಯ.[೧]

ಜನನ[ಬದಲಾಯಿಸಿ]

೧೯೪೭ರಲ್ಲಿ ಲುಬಯೋದಲ್ಲಿ ಮರಿಯಾ ಗ್ಲೋರಿಯ ಮಸರೇಗ್ ಮಾಕಪಾಗಲ್ ಎಂಬ ಹೆಸರಿನಲ್ಲಿ ಜನಿಸಿದ ಗ್ಲೋರಿಯ, ರಾಜಕಾರಣಿ ತಂದೆ ಡಿಯೋಡಾಡೋ ಮಾಕಪಾಗಲ್ ಮತ್ತು ಇವಾಂಜಲೇನಾ ಮಸರೇಗ್ ಮಾಕಪಾಗಲ್ ದಂಪತಿಗಳಿಗೆ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಗ್ಲೋರಿಯ ಬುದ್ಧಿಶಾಲಿ ಆಗಿ ಹೆಸರು ಮಾಡಿದರು. ಇಂಗ್ಲೀಷ್, ಫ್ರೆಂಚ್, ಸ್ಪಾನಿಷ್, ತಗಲೋಗ್, ಫಿಲಿಪ್ಪೀನ್ಸ್ ದೇಶದ ಹಲವು ನುಡಿಗಳಲ್ಲಿ ಮುಖ್ಯವಾದ ಕಪಂಪಂಗನ್, ಇಲೋಕಾನೋ, ಹೀಗೆ ಹಲವು ಭಾಷೆಗಳನ್ನು ಸ್ಫುಟವಾಗಿ ಮಾತನಾಡಲು ಕಲಿತರು. ಈ ಬಹುಭಾಷಾ ಪ್ರೌಢಿಮೆ ಮುಂದೆ ಗ್ಲೋರಿಯರಿಗೆ ಬಲು ಸಹಕಾರಿ ಆಯಿತು.

ಓದು[ಬದಲಾಯಿಸಿ]

೧೯೬೧ರಲ್ಲಿ ಗ್ಲೋರಿಯರ ತಂದೆ ಫಿಲಿಪ್ಪೀನ್ಸ್ ದೇಶದ ಅಧ್ಯಕ್ಷರಾಗಿ ಆಯ್ಕೆ ಆದರು. ಅದಾಗ ಗ್ಲೋರಿಯಾ ಲುಅಬ್ಯೋದಿಂದ ರಾಜಧಾನಿ ಮನಿಲಾಗೆ ತರಳಿದರು. ೧೯೬೪ರಲ್ಲಿ ಶಾಲಾ ವ್ಯಾಸಂಗ ಮುಗಿಸಿ ಅಮೇರಿಕೆಗೆ ತೆರಳಿದ ಗ್ಲೋರಿಯ, ವಾಷಿಂಗ್ ಟನ್ನಿನ ಜಾರ್ಜ ಟೌನ್ ವಿಶ್ವವಿದ್ಯಾಲಯದಲ್ಲಿ ಕಲಿಕೆ ಮಾಡಿದರು. ಮುಂದೆ ಅಮೇರಿಕೆಯ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಗ್ಲೋರಿಯಾರ ಸಹಪಾಠಿ ಆಗಿ ಅಲ್ಲಿಯೇ ಕಲಿಯುತ್ತಲಿದ್ದರು. ೧೯೬೮ರಲ್ಲಿ ಬಿ.ಎ ಪದವಿ ಪಡೆದ ಗ್ಲೋರಿಯ ಮನಿಲಾಕ್ಕೆ ತೆರಳಿದರು. ಮನಿಲಾದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಗ್ಲೋರಿಯ, ೧೯೭೭-೮೭ರ ಅವಧಿಯಲ್ಲಿ ಮನಿಲಾ ವಿಶವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಕೈಗೊಂಡರು.

ರಾಜಕೀಯ[ಬದಲಾಯಿಸಿ]

೧೯೮೭ರಲ್ಲಿ ಅಂದಿನ ಅಧ್ಯಕ್ಷ ಕೊರಜ಼ೋನ್ ಅಕ್ವಿನೋ ಗ್ಲೋರಿಯಾರನು ವ್ಯಾಪಾರ ಮತ್ತು ಕೈಗಾರಿಕೆ ಖಾತೆಗೆ ಸಹಾಯಕ ಕಾರ್ಯದರ್ಶಿ ಆಗಿ ಸೇರಲು ಆಹ್ವಾನ ಇತ್ತರು. ಅದನ್ನು ಒಪ್ಪಿದ ಗ್ಲೋರಿಯಾ, ೨ ವರ್ಷ ಆ ಹುದ್ದೆಯಲ್ಲಿ ಇದ್ದರು. ೧೯೮೯ರಲ್ಲಿ ಬಡ್ತಿ ಪಡೆದು ಸಿದ್ಧ ಉಡುಪು ಮತ್ತು ರಫ್ತು ಉತ್ತೇಜನಾ ಸಮಿತಿಯ ನಿರ್ದೇಶಕರಾಗಿ ನಿಯುಕ್ತಿಗೊಂಡರು. ಗ್ಲೋರಿಯಾರ ದುಡಿಮೆಯ ಫಲವಾಗಿ ಫಿಲಿಪ್ಪೀನ್ಸ್, ಸಿದ್ಧ ಉಡುಪುಗಳ ರಫ್ತು ಉದ್ದಿಮೆಯ ಹೆಬ್ಬಾಗಿಲು ಆಯಿತು. ೧೯೯೨ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತ ಗ್ಲೋರಿಯ, ಫಿಲಿಪ್ಪೀನ್ಸ್ ದೇಶದ ಸಂಸತ್ತಿಗೆ ಆಯ್ಕೆ ಆದರು. ೧೯೯೫ರಲ್ಲಿ ಮತ್ತೆ ಆಯ್ಕೆ ಆಗಿ ಸರಿ ಸುಮಾರು ೪೦೦ ಮಸೂದೆಗಳನ್ನು ಬರೆದು ಮಂಡಿಸಿದರು. ರಫ್ತು ಉತ್ತೇಜನ, ಲೈಂಗಿಕ ಕಿರುಕುಳ ನಿಯಂತ್ರಣ, ಗಣಿಗಾರಿಕೆ, ಹೀಗೆ ಹತ್ತು ಹಲವು ಪ್ರಗತಿಪರ ನಿಲುವುಗಳನ್ನು ಉತ್ತೇಜನ ಪಡಿಸಿ ಅರ್ಥಕ್ರಾಂತಿ ಉಂಟು ಮಾಡುವ ಸುಧಾರಣಾ ಮಸೂದೆಗಳನ್ನು ಮಂಡಿಸಿ ಜನಮನ್ನಣೆ ಪಡೆದುದ್ದ್ದು ಗ್ಲೋರಿಯಾರ ಹೆಗ್ಗಳಿಕೆ.

ಉಪ ರಾಷ್ಟ್ರಪತಿ[ಬದಲಾಯಿಸಿ]

೧೯೯೮ರಲ್ಲಿ ಜೋಸ್ ವೆನೆಶಿಯಾ ಜೂನಿಯರ್ ಜೊತೆಗೂಡಿ ಚುನಾವಣೆಗೆ ಸ್ಪರ್ಧಿಸಿದ ಗ್ಲೋರಿಯ_ಮಾಕಪಾಗಲ್-ಅರ್ರೋಯೊ, ಉಪ ರಾಷ್ಟ್ರಪತಿ ಹುದ್ದೆಯನ್ನು ಪಡೆದರು. ಆದರೆ, ಜೋಸ್ ವೆನೆಶಿಯಾ ಜೂನಿಯರ್ ಸೋತು ಜೋಸೆಫ್ ಎಸ್ಟ್ರಡಾ ರಾಷ್ಟ್ರಪತಿ ಹುದ್ದೆಗೆ ಏರಿದರು. ಉಪ ರಾಷ್ಟ್ರಪತಿ ಹುದ್ದೆಯ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹೊಣೆಯನ್ನೂ ಗ್ಲೋರಿಯಾ ಪಡೆದರು. ೨೦೦೦ರಲ್ಲಿ ಜೋಸೆಫ್ ಎಸ್ಟ್ರಡಾರ ಮೇಲೆ ಲಂಚದ ಆರೋಪ ಕೇಳಿ ಬಂದಾಗ, ಗ್ಲೋರಿಯಾ ರಾಜಿನಾಮೆ ಇತ್ತು ಸರ್ಕಾರದಿಂದ ಹೊರಬಂದರು.

ರಾಷ್ಟ್ರಪತಿ[ಬದಲಾಯಿಸಿ]

೨೦೦೧ರಲ್ಲಿ ರಾಷ್ಟ್ರಪತಿ ಹುದ್ದೆಗೆ ಎಸ್ಟ್ರಡಾರನ್ನು ಕೆಳಗೆ ಇಳಿಸಿ ನ್ಯಾಯಾಲಯ ತೀರ್ಪು ಇತ್ತಾಗ, ರಾಷ್ಟ್ರಪತಿ ಹುದ್ದೆಗೆ ಗ್ಲೋರಿಯಾ ನೇಮಕಗೊಂಡರು. ೨೦೦೪ರಲ್ಲಿ ಚುನಾವಣೆಗೆ ನಿಂತ ಗ್ಲೋರಿಯಾ ಗೆದ್ದು ಮರು ಆಯ್ಕೆ ಆದರು. ನೋಲಿ_ದ_ಕ್ಯಾಷ್ಟ್ರೊ ಉಪ ಅಧ್ಯಕ್ಷ ಆಗಿ ನೇಮಕ ಆದರು. ಈ ಚುನಾವನೆ ಮೋಸದ್ದು ಎಂಬ ಅಂತರ್ರಾಷ್ಟ್ರೀಯ ಸಂಸ್ಥೆಗಳ ನಿಲುವನ್ನು ಒಪ್ಪದ ಗ್ಲೋರಿಯಾ, ಚುನಾವಣೆಯನ್ನು ಸಮ್ಮತವಾದದ್ದು ಎಂದು ಘೋಷಣೆ ಮಾಡಿದರು.

ತುರ್ತು ಪರಿಸ್ಥಿತಿ[ಬದಲಾಯಿಸಿ]

ಫಿಲಿಪ್ಪೀನ್ಸ್ ಸೇನೆಯ ಅಧಿಪತಿ ಜನರಲ್ ಡಾನಿಲೋ ಲಿಂ ಗ್ಲೋರಿಯಾರನ್ನು ಕೆಲಗೆ ಇಳಿಸಲು ಸಂಚು ಮಾಡಿದ್ದಾರೆ ಎಂದು ಅವರನ್ನು ಬಂಧಿಸಿ, ಗ್ಲೋರಿಯಾ, ಒಂದು ವಾರದ ಮಟ್ಟಿಗೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು.[೨]

ಅಧಿಕಾರ ಅವಧಿ[ಬದಲಾಯಿಸಿ]

ಅರ್ಥಶಾಸ್ತ್ರದ ಪರಿಣತಿ ಇದ್ದ ಗ್ಲೋರಿಯಾ ರಫ್ತು ಉದ್ದಿಮೆ, ಸಣ್ಣ ಕೈಗಾರಿಕೆಗೆ ಉತ್ತೇಜನ, ತೆರಿಗೆ ಸುಧಾರಣೆ ಹೀಗೆ ಹಲವು ಬಗೆಯಿಂದ ವೃದ್ಧಿ ದರವನ್ನು ವೇಗಗೊಳಿಸಿದರು. ಫಿಲಿಪ್ಪೀನ್ಸ್ ಚಲಾವಣೆಯ ನಾಣ್ಯ ಪೆಸೋ ಗ್ಲ್ರೊಯಿಆರ ಕಾಲದಲ್ಲಿ ಬಲು ಸಶಕ್ತ ಕರೆನ್ಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ೨೦೧೦ರಲ್ಲಿ ರಾಷ್ಟ್ರಪತಿ ಹುದ್ದೆಯ ನಂತರ ಸಂಸತ್ ಸಭೆಗೆ ನಿಂತ ಗ್ಲೋರಿಯಾ, ರಾಷ್ಟ್ರಪತಿಯಾದ ನಂತರ ಸಾಧಾರಣ ಸಂಸತ್ ಸದಸ್ಯೆ ಆದರು. ೨೦೧೧ರಲ್ಲಿ ಗ್ಲೋರುಯಾರನ್ನು ಚುನಾವಣಾ ಅಕ್ರಮದ ಕಾರಣ ನೀಡಿ ಆಸ್ಪತ್ರೆಯಲ್ಲಿ ಇದ್ದಾಗ ಬಂಧಿಸಲಾಯಿತು. ಜಾಮೀನು ಪಡೆದು ಹೊರಬಂದ ಗ್ಲೋರಿಯಾ ೨೦೧೩ರ ಚುನಾವಣೆಯಲ್ಲಿ ಸಂಸತ್ತಿಗೆ ಆಯ್ಕೆ ಆದರು.

  1. https://www.rappler.com/nation/253909-arroyo-de-venecia-reunite-lakas-cmd-vow-win-members-back/
  2. https://newsinfo.inquirer.net/599019/arroyo-in-st-lukes-hospital-for-tests