ಗ್ರಾಮೀಣ್ ಬ್ಯಾಂಕ್
ಗೋಚರ
ಗ್ರಾಮೀಣ್ ಬ್ಯಾಂಕ್ (ಬೆಂಗಾಲಿ: গ্রামীণ ব্যাংক), ಬಾಂಗ್ಲಾದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಯಾವುದೇ ಜಾಮಿನಿನ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೋ ಕ್ರೆಡಿಟ್) ನೀಡುವ ಮೂಲಕ ಬಾಂಗ್ಲಾದೇಶದ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ತಂದಿದೆ.ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ಅಭಿವೃದ್ಧಿ ಹಾಗು ಕೃಷಿಗೆ ಸಾಲ ನೀಡುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ ಮೊಹಮ್ಮದ್ ಯೂನುಸ್ ಹಾಗು ಬ್ಯಾಂಕಿಗೆ ಜಂಟಿಯಾಗಿ ೨೦೦೬ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. [೧].