ಗ್ಯಾಸ್ಟ್ರೊಎಂಟೊರಾಲಾಜಿ
Jump to navigation
Jump to search
ಗ್ಯಾಸ್ಟ್ರೊಎಂಟೊರಾಲಾಜಿ ಜೀರ್ಣಕಾರಿ ವ್ಯವಸ್ಥೆ ಮತ್ತು ಅದರ ಅಸ್ವಸ್ಥತೆಗಳ ಮೇಲೆ ಕೇಂದ್ರೀಕರಿಸುವ ವೈದ್ಯಶಾಸ್ತ್ರದ ಒಂದು ಶಾಖೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಗ್ಯಾಸ್ಟ್ರೊಎಂಟೊರಾಲಾಜಿ ಅಮೇರಿಕನ್ ಬೋರ್ಡ್ ಆಫ್ ಇಂಟರ್ನಲ್ ಮೆಡಿಸಿನ್ (ABIM) ಮತ್ತು ಅಮೇರಿಕನ್ ಆಸ್ಟಿಯೋಪ್ಯಾತಿಕ್ ಬೋರ್ಡ್ ಆಫ್ ಇಂಟರ್ನಲ್ ಮೆಡಿಸಿನ್‍ನಿಂದ (AOBIM) ಪ್ರಮಾಣೀಕೃತಗೊಂಡಿರುವ ಆಂತರಿಕ ವೈದ್ಯಶಾಸ್ತ್ರ ಉಪವಿಭಾಗವಾಗಿದೆ. ಅನ್ನನಾಳದ ಉದ್ದಕ್ಕೂ ಬಾಯಿಯಿಂದ ಗುದದ ವರೆಗಿನ ಅಂಗಗಳನ್ನು ಒಳಗೊಂಡಿರುವ ಜೀರ್ಣಾಂಗವ್ಯೂಹವನ್ನು ಬಾಧಿಸುವ ಕಾಯಿಲೆಗಳು ಈ ವಿಭಾಗದ ಕೇಂದ್ರಬಿಂದುವಾಗಿವೆ.